ಕೊರೊನಾ: ಎಲ್ಲಾ ಆಧಾರ್ ಕೇಂದ್ರ ಇಂದಿನಿಂದ ಸ್ಥಗಿತ
ಮೈಸೂರು

ಕೊರೊನಾ: ಎಲ್ಲಾ ಆಧಾರ್ ಕೇಂದ್ರ ಇಂದಿನಿಂದ ಸ್ಥಗಿತ

March 18, 2020
  • ಮೈಸೂರಿನಲ್ಲಿ 76 ಕಿಟ್‍ಗಳಿಂದ ನೋಂದಣಿ ನಡೆಯುತ್ತಿತ್ತು
  • ನೋಂದಾಯಿಸಿಕೊಂಡಿದ್ದ 7 ಸಾವಿರ ಮಂದಿಗೆ ತಪ್ಪಿದ ಅವಕಾಶ

ಮೈಸೂರು, ಮಾ.17(ಎಂಟಿವೈ)- ಕೊರೊನಾ ಹರಡುವ ಭೀತಿಯಿಂದ ಮೈಸೂರಿನ ವಿವಿಧೆಡೆಯ ಆಧಾರ್ ಕಾರ್ಡ್ ನೋಂದಣಿ ಕೇಂದ್ರಗಳ ಸೇವೆ ಯನ್ನು ಮಾ.18ರಿಂದ ಜಾರಿಗೆ ಬರು ವಂತೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸು ವಂತೆ ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್ ಆದೇಶಿಸಿದ್ದಾರೆ.

ಮೈಸೂರಿನ ವಿಜಯನಗರ 1ನೇ ಹಂತದ ಆಧಾರ ಕೇಂದ್ರ, ಕರ್ನಾಟಕ ಒನ್ ಕೇಂದ್ರ, ಬ್ಯಾಂಕ್, ಅಂಚೆ ಕಚೇರಿ, ನಾಡಕಚೇರಿ, ಅಟಲ್ ಜೀ ಜನಸ್ನೇಹಿ ಕೇಂದ್ರ ಸೇರಿದಂತೆ ವಿವಿಧೆಡೆ ಕಾರ್ಯಾ ಚರಿಸುತ್ತಿದ್ದ ಆಧಾರ್ ನೋಂದಣಿ ಕೇಂದ್ರ ಸುರಕ್ಷತೆ ಹಾಗೂ ಮುಂಜಾಗ್ರತಾ ದೃಷ್ಟಿ ಯಿಂದ ಬುಧವಾರದಿಂದಲೇ ಸ್ಥಗಿತಗೊ ಳಿಸಲಾಗಿದೆ. ಕೊರೊನಾ ವೈರಸ್ ಕಳೆದ 15 ದಿನದಿಂದಲೇ ವ್ಯಾಪಕವಾಗುತ್ತಿದ್ದು, ರಾಜ್ಯ ದಲ್ಲಿ 2ನೇ ಹಂತ ತಲುಪಿದೆ. 3 ಅಥವಾ 4ನೇ ಹಂತ ತಲುಪಿದರೆ ಸಮಸ್ಯೆ ಗಂಭೀರ ವಾಗಲಿದೆ. ಇದನ್ನು ಅರಿತ ಜಿಲ್ಲಾಡಳಿತ ಸರ್ಕಾರದ ನಿರ್ದೇಶನದ ಮೇರೆಗೆ ಆಧಾರ್ ನೋಂದಣಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವಂತೆ ಸೂಚನೆ ನೀಡಿದೆ.

ಕೊರೊನಾ ವೈರಸ್ ಹರಡುವುದನ್ನು ತಪ್ಪಿಸಲು ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳಲ್ಲಿ ಬಯೋಮೆಟ್ರಿಕ್ ಬಳಸದಂತೆ ಆದೇಶಿಸಲಾಗಿದೆ. ಆದರೆ ಆಧಾರ್ ಕೇಂದ್ರಗಳಲ್ಲಿ ಮಾತ್ರ ಆಧಾರ್ ಕಾರ್ಡ್ ನೋಂದಣಿ, ತಿದ್ದುಪಡಿ, ಅಪ್ಡೇಟ್ ಮಾಡಿಸಿ ಕೊಳ್ಳಲು ದಿನಕ್ಕೆ ನೂರಾರು ಮಂದಿ ಒಂದೇ ಬಯೋಮೆಟ್ರಿಕ್‍ನಲ್ಲಿ ಬೆರಳಚ್ಚು ನೀಡುತ್ತಿದ್ದರು. ಇದರಿಂದ ವೈರಸ್ ಹರಡುವ ಕೇಂದ್ರವಾಗಲಿದೆ ಎಂಬ ಟೀಕೆ ವ್ಯಕ್ತವಾಗಿತ್ತು. ಜನರ ಆರೋಗ್ಯ ರಕ್ಷಣೆ ದಿಶೆಯಲ್ಲಿ ಮುಂದಿನ ಆದೇಶದವರೆಗೂ ಆಧಾರ್ ನೋಂದಣಿ ಸೇವೆ ಸ್ಥಗಿತಗೊಳಿ ಸಲಾಗಿದೆ. ಸಾರ್ವಜನಿಕರು ಸಹಕರಿಸಿ ಎಂದು ಜಿಲ್ಲಾಡಳಿತ ಮನವಿ ಮಾಡಿದೆ.

ದಿನಕ್ಕೆ 4 ಸಾವಿರ ನೋಂದಣಿ: ಮೈಸೂರಿನ ವಿಜಯನಗರದಲ್ಲಿರುವ ಆಧಾರ್ ಕೇಂದ್ರ ದಲ್ಲಿ 16 ಕಿಟ್‍ಗಳಿವೆ. ಉಳಿದ ಎಲ್ಲಾ ಕೇಂದ್ರ ಸೇರಿದಂತೆ ಒಟ್ಟು 76 ಕಿಟ್ ಮೂಲಕ ದಿನಕ್ಕೆ 3-4 ಸಾವಿರ ಮಂದಿ ಆಧಾರ್ ಕಾರ್ಡ್ ನೋಂದಣಿ, ತಿದ್ದುಪಡಿ ಹಾಗೂ ಇನ್ನಿತರ ಮಾಹಿತಿ ಬದಲಾವಣೆ ಮಾಡಲು ನೋಂದಣಿ ಮಾಡಿಕೊಳ್ಳುತ್ತಿ ದ್ದರು. ಆನ್‍ಲೈನ್ ಹಾಗೂ ಆಫ್‍ಲೈನ್ ಮೂಲಕವೂ ನೋಂದಣಿ ಮಾಡಿಸಿಕೊಳ್ಳು ತ್ತಿದ್ದರು. ಆದರೆ ಕೊರೊನಾ ಭೀತಿಯಲ್ಲಿ ಈ ಸೇವಾ ಕೇಂದ್ರಗಳು ನಾಳೆಯಿಂದ ಕೆಲ ದಿನ ಸ್ಥಬ್ಧವಾಗಲಿವೆ.

ವಿಜಯನಗರದ ಆಧಾರ್ ಕೇಂದ್ರದಲ್ಲಿ ಆಧಾರ್ ಕಾರ್ಡ್‍ಗಾಗಿ ಮುಂದಿನ 10 ದಿನದವರೆಗೆ 7 ಸಾವಿರ ಮಂದಿ ನೋಂದಾ ಯಿಸಿಕೊಂಡಿದ್ದಾರೆ. ನಾಳೆಯಿಂದ ಈ ಕೇಂದ್ರ ಪುನರಾರಂಭವಾಗುವ ದಿನದ ವರೆಗೂ ಹೆಸರು ನೋಂದಾಯಿಸಿದವರು ಮತ್ತೆ ನೋಂದಣಿ ಮಾಡಿಕೊಳ್ಳಬೇಕು. ಹಳೆ ನೋಂದಣಿ ಸಂಖ್ಯೆಯುಳ್ಳ ಚೀಟಿ ತಂದರೆ ಮಾನ್ಯ ಮಾಡುವುದಿಲ್ಲ. ಕೇಂದ್ರ ಪುನಾರಂಭವಾಗುವ ದಿನ ನೋಡಿ ಕೊಂಡು ಮತ್ತೆ ಆನ್‍ಲೈನ್ ಅಥವಾ ಆಫ್‍ಲೈನ್‍ನಲ್ಲಿ ಹೆಸರು ನೋಂದಾಯಿಸಿ ಕೊಳ್ಳಿ ಎಂದು ಆಧಾರ್ ಕೇಂದ್ರದ ಸಿಬ್ಬಂದಿ ಮನವಿ ಮಾಡಿದ್ದಾರೆ.

Translate »