ಕಕ್ಷಿದಾರರಿಗೆ ನ್ಯಾಯಾಲಯದಲ್ಲಿ ಥರ್ಮಲ್ ಸ್ಕ್ರೀನಿಂಗ್
ಮೈಸೂರು

ಕಕ್ಷಿದಾರರಿಗೆ ನ್ಯಾಯಾಲಯದಲ್ಲಿ ಥರ್ಮಲ್ ಸ್ಕ್ರೀನಿಂಗ್

March 18, 2020

ಮೈಸೂರು,ಮಾ.17(ಎಂಟಿವೈ)- ಕೊರೊನಾ ವೈರಸ್ ಭೀತಿಯಿಂದ ತುರ್ತು ಪ್ರಕರಣಗಳನ್ನಷ್ಟೇ ನಡೆಸಲು ತೀರ್ಮಾನಿಸಿದ್ದ ಜಿಲ್ಲಾ ನ್ಯಾಯಾಲಯದಲ್ಲಿ ಇಂದಿನಿಂದ ಕಕ್ಷಿದಾರರಿಗೆ ಥರ್ಮಲ್ ಸ್ಕ್ರೀನಿಂಗ್ ನಡೆಸಲಾಗುತ್ತಿದೆ.

ಮೈಸೂರು ನಗರದ ಜಿಲ್ಲಾ ನ್ಯಾಯಾಲಯ ಸಂಕೀರ್ಣದಲ್ಲಿ 34 ನ್ಯಾಯಾಲಯಗಳಿದ್ದರೆ, ತಾಲೂಕು ಕೇಂದ್ರಗಳಲ್ಲಿ ಒಟ್ಟು 16 ನ್ಯಾಯಾಲಯಗಳಿವೆ. ಎಲ್ಲಾ ಕಡೆ ತುರ್ತು ಪ್ರಕರಣಗಳ ವಿಚಾರಣೆಗಷ್ಟೇ ಆದ್ಯತೆ ನೀಡಲಾಗುವುದು. ನ್ಯಾಯಾಲಯದ ಆವರಣದಲ್ಲಿ ಜನಜಂಗುಳಿ ತಡೆ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಆದರೆ ಇಂದು ನ್ಯಾಯಾಲಯಕ್ಕೆ ಆಗಮಿಸಿದ ವಕೀಲರು, ಕಕ್ಷಿದಾರರಿಗೆ, ಪೊಲೀಸ್ ಸಿಬ್ಬಂದಿ, ಸಾರ್ವಜನಿಕರಿಗೆ ಆರೋಗ್ಯ ಇಲಾಖೆಯ ನಾಲ್ವರು ಸಿಬ್ಬಂದಿ ಸೋಂಕು ಪತ್ತೆ ಉಪಕರಣದಿಂದ ತಪಾಸಣೆ ನಡೆಸಿದರು. ಆನಂತರವಷ್ಟೇ ನ್ಯಾಯಾಲಯ ಆವರಣಕ್ಕೆ ಪ್ರವೇಶ ನೀಡಲಾಯಿತು. ಸಂಜೆವರೆಗೂ ನೂರಾರು ಮಂದಿಗೆ ತಪಾಸಣೆ ಮಾಡಲಾಯಿ ತಾದರೂ ಸೋಂಕಿತರು ಕಂಡು ಬರಲಿಲ್ಲ.

ಕೋವಿಡ್-19 ವೈರಸ್ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಜನನಿಬಿಡ ಸ್ಥಳದಲ್ಲಿ ತಪಾಸಣೆ ಮಾಡುವುದು ಅನಿವಾರ್ಯ ವಾಗಿದ್ದು, ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ವತಿಯಿಂದ ಸಿಬ್ಬಂದಿಯನ್ನು ನಿಯೋಜಿಸಿ, ಅಗತ್ಯ ಉಪಕರಣ ನೀಡಲಾಗಿದೆ.

Translate »