ಕುಟ್ಟ-ತೋಲ್ಪಟ್ಟಿ ಚೆಕ್‍ಪೆÇೀಸ್ಟ್‍ಗಳಿಗೆ ಜಿಲ್ಲಾಧಿಕಾರಿ ಭೇಟಿ, ಪರಿಶೀಲನೆ
ಕೊಡಗು

ಕುಟ್ಟ-ತೋಲ್ಪಟ್ಟಿ ಚೆಕ್‍ಪೆÇೀಸ್ಟ್‍ಗಳಿಗೆ ಜಿಲ್ಲಾಧಿಕಾರಿ ಭೇಟಿ, ಪರಿಶೀಲನೆ

March 18, 2020

ಮಡಿಕೇರಿ,ಮಾ.17-ಜಿಲ್ಲೆಯ ಗಡಿ ಭಾಗ ಕುಟ್ಟ ಮತ್ತು ತೋಲ್ಪಟ್ಟಿ ಚೆಕ್‍ಪೆÇೀಸ್ಟ್ ಹಾಗೂ ಕುಟ್ಟ ಸಮುದಾಯ ಆರೋಗ್ಯ ಕೇಂದ್ರಕ್ಕೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಮಂಗಳವಾರ ಭೇಟಿ ನೀಡಿ ಪರಿಶೀಲಿಸಿದರು.

ಹಾಗೆಯೇ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ವತಿಯಿಂದ ತೆರೆಯಲಾಗಿರುವ ಚೆಕ್ ಪೆÇೀಸ್ಟ್‍ಗಳನ್ನು ಪರಿಶೀಲಿಸಿದರು.

ಕೊರೊನ ವೈರಸ್ ಹರಡದಂತೆ ಕರ್ನಾಟಕ ಸರ್ಕಾರವು ಮುನ್ನೆಚ್ಚರಿಕಾ ಕ್ರಮ ಗಳನ್ನು ಕೈಗೊಂಡು ಹೂರಡಿಸಿರುವ ಆದೇಶಗಳನ್ನು ಆಧರಿಸಿ ಜಿಲ್ಲಾಡಳಿತದಿಂದ ಮಾರ್ಚ್ 13 ರಂದು ಮರು ಆದೇಶವನ್ನು ಹೊರಡಿಸಿ, ಅನುಷ್ಠಾನಗೊಳಿಸಲಾಗಿದೆ.

ಅಲ್ಲದೆ ಜಿಲ್ಲಾಡಳಿತದಿಂದ ಮಾರ್ಚ್ 14 ರಂದು ಆದೇಶವನ್ನು ಹೊರಡಿಸಿ ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲೆಯ ವಿವಿಧ ಇಲಾಖೆಗಳ ಅಧೀನದಲ್ಲಿ ಬರುವ ಎಲ್ಲಾ ಪ್ರವಾಸಿ ಸ್ಥಳಗಳಿಗೆ ಪ್ರವಾಸಿಗರ/ ಸಾರ್ವ ಜನಿಕರ ಭೇಟಿಯನ್ನು ಮಾರ್ಚ್ 21 ರ ವರೆಗೆ ನಿಷೇಧಿಸಿ ಆದೇಶಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಜಿಲ್ಲೆಯಿಂದ ವಿದೇಶಗಳಿಗೆ ಹೋಗಿ ಬಂದಿರುವವರನ್ನು ಪತ್ತೆ ಹಚ್ಟಿ ತಪಾಸಣೆ ಮಾಡುವ ಕಾರ್ಯವನ್ನು ಕೈಗೊಳ್ಳಲಾಗಿದೆ. ಅದರಂತೆ ಮಾರ್ಚ್ 17 ರ ಮಂಗಳವಾರ ಸಂಜೆವರೆಗೆ ಮಡಿಕೇರಿ ತಾಲ್ಲೂಕಿನಲ್ಲಿ 72, ವಿರಾಜಪೇಟೆ ತಾಲೂಕಿನಲ್ಲಿ 41 ಮತ್ತು ಸೋಮವಾರಪೇಟೆ ತಾಲೂಕಿನಲ್ಲಿ 52 ಜನರನ್ನು ಪತ್ತೆ ಹಚ್ಚಲಾಗಿದೆ. ಈ ಪೈಕಿ 159 ಜನರನ್ನು ಮುನ್ನೆಚ್ಚರಿಕಾ ಕ್ರಮವಾಗಿ ಅವರವರ ಮನೆಗಳಲ್ಲಿಯೇ ಸಂಪರ್ಕ ತಡೆ (ಊome ಕಿuಚಿಡಿಚಿಟಿಣiಟಿe) ಮಾಡಲಾಗಿದೆ. ಅಲ್ಲದೆ 03 ಜನ ಪ್ರವಾಸಿಗರನ್ನು ರೆಸಾರ್ಟ್/ ಹೋಂ ಸ್ಟೇಗಳಲ್ಲಿ ಸಂಪರ್ಕ ತಡೆ ಮಾಡಲಾ ಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಈವರೆಗೆ ವಿದೇಶದಿಂದ ಬಂದ 03 ವ್ಯಕ್ತಿಗಳಿಗೆ ಸೋಂಕು ತಗುಲಿರುವ ಶಂಕೆ ಇದ್ದು, ಅವರನ್ನು ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ ಕೊಠಡಿಯಲ್ಲಿಟ್ಟು ಉಪಚರಿಸಲಾಗುತ್ತಿದೆ.

ಮಾರ್ಚ್ 17 ರ ಮಂಗಳವಾರದಿಂದ ಕೇರಳ ರಾಜ್ಯದ ಗಡಿ ಭಾಗವಾದ ಕರಿಕೆ, ಕುಟ್ಟ ಮತ್ತು ಮಾಕುಟ್ಟ ಗಡಿಭಾಗಗಳಲ್ಲಿ ಕೇರಳ ರಾಜ್ಯದಿಂದ ಜಿಲ್ಲೆಗೆ ಬರುವವರನ್ನು 24*7 ತಪಾಸಣೆ ನಡೆಸಲು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಆರೋಗ್ಯ ಸಿಬ್ಬಂದಿಗಳನ್ನು ನೇಮಿಸಲಾಗಿದೆ.

ಜೊತೆಗೆ ಪಶು ವೈದ್ಯಕೀಯ ಸೇವಾ ಇಲಾಖೆಯಿಂದಲೂ ಹಕ್ಕಿ ಜ್ವರದ ಸಂಬಂಧ ಕೇರಳದಿಂದ ಜಿಲ್ಲೆಗೆ ಬರುವ ಕೋಳಿ ಮತ್ತು ಕೋಳಿ ಉತ್ಪನ್ನಗಳನ್ನು ತಡೆಯಲು ಈ ಮೂರು ಗಡಿ ಭಾಗಗಳಲ್ಲಿ ಚೆಕ್‍ಪೆÇೀಸ್ಟ್ ಗಳನ್ನು ತೆರೆಯಲಾಗಿದೆ ಮತ್ತು ಈ ಎರಡೂ ಇಲಾಖೆಯ ಚೆಕ್‍ಪೆÇೀಸ್ಟ್ ಕಾರ್ಯನಿರ್ವ ಹಿಸುತ್ತಿವೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಔಷಧಿ ಅಂಗಡಿಗಳಿಗೆ ದಿಢೀರ್ ದಾಳಿ: ಪರಿಶೀಲನೆ
ಮಡಿಕೇರಿ,ಮಾ.17-ಕೊವಿಡ್ 19 ಸಂಬಂಧಿಸಿದಂತೆ 2 ಪ್ಲೇ, 3 ಪ್ಲೇ ಸರ್ಜಿ ಕಲ್ ಮಾಸ್ಕ್, ಎನ್ 95 ಮಾಸ್ಕ್, ಸ್ಯಾನಿಟೈಸರ್ ಇವುಗಳನ್ನು ಅಗತ್ಯ ವಸ್ತುಗಳ ಕಾಯ್ದೆ 1955 ಅಡಿ ತರಲಾಗಿದೆ.

ಈ ಸಂಬಂಧ ಕೋವಿಡ್-19 ಸೋಂಕು ಮಾಸ್ಕ್ ಮತ್ತು ಸ್ಯಾನಿಟೈಸರ್‍ಗಳ ತಪಾಸಣೆಯನ್ನು ಕೈಗೊಳ್ಳಲಾಗುತ್ತಿದೆ. ಕಾನೂನು ಮಾಪನಶಾಸ್ತ್ರ ಇಲಾಖೆ ಹಾಗೂ ಆಹಾರ ಇಲಾಖೆ ಜಂಟಿ ಯಾಗಿ ತಂಡ ರಚಿಸಲಾಗಿದೆ.

ಆ ನಿಟ್ಟಿನಲ್ಲಿ ಕಾನೂನು ಮಾಪನ ಶಾಸ್ತ್ರ ಇಲಾಖೆಯ ಸಹಾಯಕ ನಿಯಂ ತ್ರಕ ವಿ.ಗಜೇಂದ್ರ 9845154263 ಮತ್ತು ಆಹಾರ ಇಲಾಖೆಯ ಉಪ ನಿರ್ದೇಶಕ ಗೌರವ ಕುಮಾರ್ ಶೆಟ್ಟಿ-9886680624 ಇವರನ್ನು ನಿಯೋಜಿಸಲಾಗಿದೆ.

ಈಗಾಗಲೇ ಜಂಟಿಯಾಗಿ ಔಷಧಿ ಅಂಗಡಿಗಳಿಗೆ ದಿಢೀರ್ ದಾಳಿ ಮಾಡಿ ಮಾಸ್ಕ್‍ಗಳ ಮೇಲೆ ಕಾನೂನು ಲೀಗಲ್ ಮೆಟ್ರಲಾಜಿ ಪೊಟ್ಟಣ ಸಾಮಗ್ರಿ ನಿಯಮ 2011 ರ ಅಡಿಯಲ್ಲಿ 2 ಮೊಕದ್ದಮೆ ದಾಖಲಿಸ ಲಾಗಿದೆ. ಹಾಗೂ ಕೊರೊನಾ ವೈರಸ್ ಹರಡುತ್ತಿರುವ ಹಿನ್ನೆಲೆ ಮಾಸ್ಕ್, ಸ್ಯಾನಿ ಟೈಸರ್ ಹಾಗೂ ಗ್ಲೌಸ್‍ಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಿದರೆ ಅಂತವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾ ಗುವುದು ಎಂದು ಕಾನೂನು ಮಾಪನ ಶಾಸ್ತ್ರ ಇಲಾಖೆಯ ಸಹಾಯಕ ನಿಯಂತ್ರಕ ವಿ.ಗಜೇಂದ್ರ ಎಚ್ಚರಿಕೆ ನೀಡಿದ್ದಾರೆ.

Translate »