ಜಿಲ್ಲೆಯ ಧಾರ್ಮಿಕ ಕೇಂದ್ರಗಳಲ್ಲೂ ಭಕ್ತರ ಸಂಖ್ಯೆ ಕ್ಷೀಣ
ಕೊಡಗು

ಜಿಲ್ಲೆಯ ಧಾರ್ಮಿಕ ಕೇಂದ್ರಗಳಲ್ಲೂ ಭಕ್ತರ ಸಂಖ್ಯೆ ಕ್ಷೀಣ

March 18, 2020

ಮಡಿಕೇರಿ,ಮಾ.17-ಕೊರೊನಾ ವೈರಸ್ ಆತಂಕ ಜಿಲ್ಲೆಯ ದೇವಾಲಯ ಗಳಲ್ಲೂ ಮನೆ ಮಾಡಿರುವುದು ಕಂಡು ಬಂದಿದೆ. ಜಿಲ್ಲೆಯ ಪ್ರಸಿದ್ದ ಮತ್ತು ಪ್ರಮುಖ ದೇವಾಲಯ ಎನಿಸಿರುವ ಕಾವೇರಿ ತವರು ತಲಕಾವೇರಿ ಮತ್ತು ಭಾಗಮಂಡಲ ದಲ್ಲೂ ಬೆರಳೆಣಿಕೆ ಭಕ್ತರು ಕಂಡು ಬರುತ್ತಿ ದ್ದಾರೆ. ಸಾಮಾನ್ಯವಾಗಿ ಈ ತಿಂಗಳಲ್ಲಿ ಕ್ಷೇತ್ರಕ್ಕೆ ಆಗಮಿಸುವ ಭಕ್ತರ ಸಂಖ್ಯೆ ಹೆಚ್ಚಿ ರುತ್ತಿತ್ತು. ಆದರೆ ದೇಶ ಸೇರಿದಂತೆ ರಾಜ್ಯ ದಲ್ಲೂ ಕೊರೊನಾ ಸೋಂಕಿನ ಭೀತಿ ಆವರಿ ಸಿರುವ ಹಿನ್ನಲೆಯಲ್ಲಿ ಜನರು ಕೂಡ ದೇವಾ ಲಯಗಳಿಗೆ ಹೋಗಲು ಮುಂದಾಗುತ್ತಿಲ್ಲ.

ಭಾಗಮಂಡಲ ತಲಕಾವೇರಿಯಲ್ಲಿ ಸ್ಥಳೀಯ ಭಕ್ತರೇ ಅಧಿಕ ಸಂಖ್ಯೆಯಲ್ಲಿ ಬರುತ್ತಿರುವುದು ಒಂದೆಡೆಯಾದರೆ, ಹೊರ ಊರುಗಳಿಂದ ಆಗಮಿಸುವ ಭಕ್ತರ ಸಂಖ್ಯೆಯಲ್ಲಿ ಕುಸಿತ ಕಂಡಿದೆ. ದೇವಾ ಲಯದಲ್ಲಿ ದೈನಂದಿನ ಪೂಜೆ ಕಾರ್ಯ ಗಳು ಎಂದಿನಂತೆ ನಡೆಯುತ್ತಿದ್ದರೆ, ಭಾಗ ಮಂಡಲ ಮತ್ತು ತಲಕಾವೇರಿಯ ದೇವಾ ಲಯ ಆವರಣದಲ್ಲಿರುವ ಅಂಗಡಿ ಮುಂಗಟ್ಟುಗಳನ್ನು ವರ್ತಕರು ಬಂದ್ ಮಾಡಿದ್ದಾರೆ. ಇನ್ನು ಕೊರೊನಾ ಭೀತಿ ಯಿರುವ ಹಿನ್ನಲೆಯಲ್ಲಿ ನಗರದ ಓಂಕಾ ರೇಶ್ವರ ದೇವಾಲಯದಲ್ಲಿ ಕುಂಕುಮ ಮತ್ತು ಗಂಧ ನೀಡುವುದನ್ನು ತಾತ್ಕಾಲಿಕ ವಾಗಿ ಸ್ಥಗಿತ ಮಾಡಲಾಗಿದೆ.

ಕೊರೊನಾ ವೈರಸ್ ಸೋಂಕಿನ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ಕೊಡಗಿನ ಹೆಸರಾಂತ ವಿಕ್ರಂ ಜಾದೂ ಗಾರ್ ನಗರದ ಜಿಲ್ಲಾಸ್ಪತ್ರೆ ಮತ್ತು ವಿವಿಧ ಜನ ನಿಬಿಡ ಪ್ರದೇಶಗಳಲ್ಲಿ ಜಾದೂ ಪ್ರದರ್ಶನ ಮಾಡುವ ಮೂಲಕ ಗಮನ ಸೆಳೆದರು. ಕೊರೋನ ವೈರಸ್ ಹರಡುವ ಬಗೆ, ಅದರಿಂದ ದೂರ ಉಳಿಯುವ ಮೂಲಕ ತಮ್ಮನ್ನು ಸುರಕ್ಷಿತವಾಗಿರಿಸಿ ಕೊಳ್ಳುವ ಬಗ್ಗೆ ಜಾದೂಗಳನ್ನು ಮಾಡುವ ಮೂಲಕ ಜಾಗೃತಿ ಮೂಡಿಸಿದರು. ಈ ಸೋಂಕಿನಿಂದ ದೂರ ಉಳಿಯಲು ಶುಚಿತ್ವಕ್ಕೆ ಹೆಚ್ಚು ಮಹತ್ವ ನೀಡಬೇಕು. ಎಲ್ಲಿ ಶುಚಿತ್ವ ಮನೆ ಮಾಡಿರುತ್ತದೆಯೋ ಅಲ್ಲಿ ಈ ವೈರಸ್ ಹರಡುವುದಿಲ್ಲ ಎಂದು ಸಾರ್ವಜನಿಕರಿಗೆ ಮನವರಿಕೆ ಮಾಡಿ ಕೊಟ್ಟರಲ್ಲದೇ, ಪ್ರತಿಯೊಬ್ಬರು ಕೂಡ ಆರೋಗ್ಯ ಇಲಾಖೆ ನೀಡಿರುವ ಸೂಚನೆಗಳನ್ನು ಪಾಲಿಸುವಂತೆ ಮನವಿ ಮಾಡಿದರು.

ಇರ್ಪು ಬಂದ್: ದಕ್ಷಿಣ ಕೊಡಗಿನಲ್ಲಿ ಪ್ರವಾಸಿಗರು ಅತೀ ಹೆಚ್ಚು ಭೇಟಿ ನೀಡುವ ಶ್ರೀಮಂಗಲ ಗ್ರಾ.ಪಂ. ವ್ಯಾಪ್ತಿಯ ಇರ್ಪು ಜಲಪಾತ(ಲಕ್ಷ್ಮಣ ತೀರ್ಥ ನದಿ ಉಗಮ ಸ್ಥಾನ)ಕ್ಕೆ ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ. ಕೊರೊನ ವೈರಸ್ ಹರಡುವಿಕೆ ತಡೆಗೆ ಮುಂಜಾ ಗ್ರತಾ ಕ್ರಮವಾಗಿ ಜನ ಸಂದಣಿ ನಿಯಂತ್ರಿ ಸಲು ಈ ಕ್ರಮ ಜರುಗಿಸಲಾಗಿದೆ. ಈ ಪ್ರಸಿದ್ಧ ಜಲಪಾತಕ್ಕೆ ಕೇರಳ ಸೇರಿದಂತೆ ನೆರೆಯ ಜಿಲ್ಲೆ, ಬೆಂಗಳೂರು, ಮೈಸೂರಿ ನಿಂದ ನೂರಾರು ಪ್ರವಾಸಿಗರು, ಅಲ್ಲದೆ ವಿದೇಶಿ ಪ್ರವಾಸಿಗಳು ಸಹ ಇಲ್ಲಿಗೆ ಪ್ರತಿನಿತ್ಯ ಭೇಟಿ ನೀಡುತ್ತಾರೆ. ಪ್ರವೇಶ ನಿರ್ಬಂಧಿಸಿ ತಕ್ಷಣದಿಂದಲೇ ಕ್ರಮ ಕೈಗೊಂಡಿ ರುವುದಾಗಿ ಶ್ರೀಮಂಗಲ ವಲಯ ಅರಣ್ಯಾ ಧಿಕಾರಿ ವೀರೇಂದ್ರ ಮರಿ ಬಸಣ್ಣವರ್ ತಿಳಿಸಿದ್ದಾರೆ.

ಹೋಂಸ್ಟೇಗೆ ನೋಟಿಸ್: ಕೊರೋನ ವೈರಸ್ ಹರಡುವಿಕೆ ತಡೆಗೆ ಮುಂಜಾ ಗ್ರತೆ ಕ್ರಮ ವಹಿಸಿರುವ ದಕ್ಷಿಣ ಕೊಡಗಿನ ಟಿ.ಶೆಟ್ಟಿಗೇರಿ ಗ್ರಾ.ಪಂ. ವ್ಯಾಪ್ತಿಗೆ ಒಳ ಪಡುವ ಎಲ್ಲಾ ಹೋಂ ಸ್ಟೇಗಳಿಗೆ ಬಂದ್ ಮಾಡುವಂತೆ ನೋಟಿಸ್ ಜಾರಿ ಮಾಡ ಲಾಗಿದೆ. ಹೋಂ ಸ್ಟೇಗಳಿಗೆ ಪ್ರವಾಸಿಗರು ಬಂದು ಉಳಿಯುವುದರಿಂದ ಮಾರಕ ಕೊರೊನಾ ವೈರಸ್ ಸ್ಥಳೀಯವಾಗಿ ಹರಡುವ ಭೀತಿ ಇದೆ. ಆದ್ದರಿಂದ ಮುಂದಿನ ಅದೇಶದವರೆಗೆ ಮುಚ್ಚುವಂತೆ ನೋಟಿಸ್ ಜಾರಿ ಮಾಡಲಾಗಿದೆ. ಈ ವ್ಯಾಪ್ತಿಯಲ್ಲಿರುವ 6 ಹೋಂಸ್ಟೇ ಮಾಲೀಕರಿಗೆ ಖುದ್ದಾಗಿ ಪಿಡಿಓ ಕವಿತ ಮತ್ತು ಸಿಬ್ಬಂದಿ ವರ್ಗ ನೋಟಿಸ್ ನೀಡಿದೆ ಎಂದು ಅಲ್ಲಿನ ಗ್ರಾಮ ಪಂಚಾ ಯಿತಿ ಮೂಲಗಳು ಮಾಹಿತಿ ನೀಡಿವೆ. ಟಿ.ಶೆಟ್ಟಿಗೇರಿ ಗ್ರಾ.ಪಂ. ಕೊಡಗು ಜಿಲ್ಲೆ ಯಲ್ಲಿ ಕೊರೊನಾ ವೈರಸ್ ಸೋಂಕು ತಡೆಗೆ ತನ್ನ ವ್ಯಾಪ್ತಿಯ ಹೋಂ ಸ್ಟೇ ಮುಚ್ಚಿಸಲು ನೋಟಿಸ್ ನೀಡಿದ ಮೊದಲ ಗ್ರಾಮ ಪಂಚಾಯ್ತಿಯಾಗಿದೆ.

Translate »