ಕೊಡಗಿನಲ್ಲಿ ಕಾಡಾನೆ ಹಾವಳಿಗೆ ಅರಣ್ಯ ಒತ್ತುವರಿಯೇ ಕಾರಣ
ಕೊಡಗು

ಕೊಡಗಿನಲ್ಲಿ ಕಾಡಾನೆ ಹಾವಳಿಗೆ ಅರಣ್ಯ ಒತ್ತುವರಿಯೇ ಕಾರಣ

March 18, 2020

ಮಡಿಕೇರಿ,ಮಾ.17-ಮಾನವನ ಹಸ್ತ ಕ್ಷೇಪ ಮತ್ತು ಜೈವಿಕ ಅಡೆತಡೆಗಳಿಂದ ಅರಣ್ಯ ಪ್ರದೇಶಗಳು ಕ್ಷೀಣಿಸುತ್ತಿದ್ದು, ಕಾಡಾನೆಗಳ ಆವಾಸ ಸ್ಥಾನಗಳ ಮೇಲೆ ಒತ್ತಡ ಹೆಚ್ಚಾಗು ತ್ತಿರುವುದೇ ಕೊಡಗಿನಲ್ಲಿ ಕಾಡಾನೆಗಳ ದಾಳಿಗೆ ಕಾರಣವೆಂದು ಅರಣ್ಯ, ಪರಿಸರ ಮತ್ತು ಜೀವಶಾಸ್ತ್ರ ಖಾತೆ ಸಚಿವ ಆನಂದ ಸಿಂಗ್ ತಿಳಿಸಿದ್ದಾರೆ.

ವಿಧಾನ ಪರಿಷತ್ ಸದಸ್ಯೆ ಶಾಂತೆ ಯಂಡ ವೀಣಾ ಅಚ್ಚಯ್ಯ ಅವರು ಕಾಡಾನೆ ದಾಳಿ ತಡೆಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ಕೇಳಿರುವ ಪ್ರಶ್ನೆಗಳಿಗೆ ಅರಣ್ಯ ಸಚಿವರು ನೀಡಿದರು. ಇತ್ತೀಚಿನ ವರ್ಷಗಳಲ್ಲಿ ಜನಸಂಖ್ಯೆ ಹೆಚ್ಚಳ, ನಗರೀಕರಣ ಹಾಗೂ ಅನೇಕ ಅಭಿವೃದ್ಧಿ ಕಾರ್ಯಗಳಿಗೆ ಅರಣ್ಯ ಒತ್ತುವರಿ ಯಾಗಿ ಕಾಡಾನೆಗಳು ವಾಸಿಸುವ ನೈಸ ರ್ಗಿಕ ಆವಾಸಸ್ಥಾನ ಪ್ರದೇಶ ಕಡಿಮೆಯಾ ಗುತ್ತಿದೆ. ಅರಣ್ಯ ಪ್ರದೇಶಗಳ ಅಂಚಿನಲ್ಲಿ ರುವ ಖಾಸಗಿ ಜಮೀನುಗಳಲ್ಲಿರುವ ವಾಣಿಜ್ಯ ಬೆಳೆಗಳಾದ ಭತ್ತ, ತೆಂಗು, ಬಾಳೆ, ಹಲಸು ಮತ್ತಿತರ ಬೆಳೆಗಳ ಆಕರ್ಷಣೆಗೆ ಒಳಗಾಗಿ, ಕಾಡಾನೆಗಳು ದಾಳಿ ಮಾಡುತ್ತಿವೆ. ಇದರಿಂದ ಬೆಳೆ ಹಾನಿಯಾಗುತ್ತಿರುವು ದಲ್ಲದೆ ಕೆಲವೊಮ್ಮೆ ಪ್ರಾಣಹಾನಿ, ಆಸ್ತಿ ನಷ್ಟ ಮುಂತಾದ ಪ್ರಕರಣಗಳು ನಡೆಯು ತ್ತಿವೆ ಎಂದು ಸಚಿವ ಆನಂದಸಿಂಗ್ ವಿವರಿಸಿದ್ದಾರೆ.

ಕೊಡಗು ಜಿಲ್ಲೆಯಲ್ಲಿ ಕಾಡಾನೆ-ಮಾನವ ಸಂಘರ್ಷದಿಂದಾಗಿ ಸಾವುನೋವುಗಳು ಸಂಭವಿಸಿರುವುದು ಸರಕಾರದ ಗಮನಕ್ಕೆ ಬಂದಿದೆ. ಕಾಡಾನೆ-ಮಾನವ ಸಂಘರ್ಷ ಪ್ರಕರಣಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಅರಣ್ಯ ಇಲಾಖೆಯು ಸೋಲಾರ್ ತಂತಿ ಬೇಲಿ, ಆನೆ ತಡೆ ಕಂದಕ, ರೈಲ್ವೆ ಹಳಿ ಬ್ಯಾರಿ ಕೇಡ್ ನಿರ್ಮಾಣ ಸೇರಿದಂತೆ ವಿವಿಧ ಯೋಜನೆಗಳನ್ನು ಕಾರ್ಯಗತಗೊಳಿಸು ತ್ತಿದೆ. ನಿಯಂತ್ರಿಸುವ ನಿಟ್ಟಿನಲ್ಲಿ ಪ್ರಸಕ್ತ ಸಾಲಿನಲ್ಲಿ 51.37 ಕಿ.ಮೀ. ಸೋಲಾರ್ ತಂತಿ ಬೇಲಿ ನಿರ್ಮಾಣ ಕಾಮಗಾರಿ ಕೈಗೊಂಡಿದ್ದು, ಕಾಮ ಗಾರಿ ಪ್ರಗತಿಯಲ್ಲಿದೆ. ಅದೇ ರೀತಿ ಅರಣ್ಯದ ಅಂಚಿನಲ್ಲಿರುವ ಗ್ರಾಮಗಳಲ್ಲಿ ಆನೆಗಳು ಕಾಡಿನಿಂದ ನಾಡಿಗೆ ಬಾರದಂತೆ 45.41 ಕಿ.ಮೀ ಆನೆ ತಡೆ ಕಂದಕ ನಿರ್ಮಾಣ ಕಾಮಗಾರಿ ಕೈಗೊಂಡು ಕಾಮಗಾರಿ ಪ್ರಗತಿಯಲ್ಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಅರಣ್ಯ ಅಂಚಿನ ಗ್ರಾಮಗಳ ರೈತರು ಸೋಲಾರ್ ಬೇಲಿ ನಿರ್ಮಿಸಲು ಮುಂದಾ ದಲ್ಲಿ ಅರಣ್ಯ ಇಲಾಖೆಯಿಂದ ಶೇ.50 ರಷ್ಟು ಧನಸಹಾಯ ನೀಡಲಾಗುತ್ತದೆ. ಅದರಂತೆ 2019-20ನೇ ಸಾಲಿನಲ್ಲಿ 4.754 ಕಿ.ಮೀ ಕಾಮಗಾರಿ ಪ್ರಗತಿಯಲ್ಲಿದೆ. ಕಾಡಾನೆ ಹಾವಳಿಯನ್ನು ಪರಿಣಾಮಕಾರಿ ಯಾಗಿ ನಿಯಂತ್ರಿಸಲು 2019-20ನೇ ಸಾಲಿನಲ್ಲಿ 13.42 ಕಿ.ಮೀ. ರೈಲ್ವೆ ಹಳಿಗಳ ಬ್ಯಾರಿಕೇಡ್ ನಿರ್ಮಿಸಲು ಉದ್ದೇಶಿಸಿರುವು ದಾಗಿ ತಿಳಿಸಿರುವ ಸಚಿವರು, ಕೊಡಗು ಜಿಲ್ಲೆಯ ಅರಣ್ಯ ವೃತ್ತದ ವ್ಯಾಪ್ತಿಯ ವಲಯಗಳಲ್ಲಿ ಕಾಡಾನೆ ಹಾವಳಿಯನ್ನು ತುರ್ತಾಗಿ ನಿರ್ವಹಣೆ ಮಾಡಲು 22 ರ್ಯಾಪಿಡ್ ರೆಸ್ಪಾನ್ಸ್ ತಂಡ (ಆರ್‍ಆರ್‍ಟಿ)ಗಳನ್ನು ರಚಿಸಿ ಕಾರ್ಯ ನಿರ್ವಹಿಸಲಾಗುತ್ತಿದೆ ಎಂದು ಹೇಳಿದ್ದಾರೆ.

ಆಯ್ದ ಅರಣ್ಯ ವಲಯಗಳಲ್ಲಿ 21 ಕಾಡಾನೆಗಳನ್ನು ಮರಳಿ ಕಾಡಿಗೆ ಓಡಿಸುವ ತಂಡ ರಚಿಸಲಾಗಿದ್ದು, ಕಾಡಾನೆ ಇರುವಿಕೆ, ಅವುಗಳ ಚಲನವಲನಗಳ ಬಗ್ಗೆ ಸಾರ್ವ ಜನಿಕರಿಗೆ, ರೈತರಿಗೆ ಮಾಹಿತಿ ನೀಡುವ ಎಸ್‍ಎಂಎಸ್ ಅಲರ್ಟ್ ಸಿಸ್ಟಂ ಕಾರ್ಯ ನಿರ್ವಹಿಸುತ್ತಿದೆ. ವನ್ಯಪ್ರಾಣಿಗಳ ದಾಳಿ ಯಿಂದ ಬಾಧಿತ ಗ್ರಾಮಗಳ ಜನರೊಂದಿಗೆ ಸಂಪರ್ಕ ಸಭೆ ನಡೆಸಲಾಗುತ್ತಿದ್ದು, 2014 ರಿಂದ ಇರುವರೆಗೆ ಸಾರ್ವಜನಿಕರಿಗೆ ಉಪಟಳ ನೀಡುತ್ತಿದ್ದ 11 ಕಾಡಾನೆಗಳನ್ನು ಸೆರೆಹಿಡಿದು ಸ್ಥಳಾಂತರ ಮಾಡಲಾಗಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

ರೇಡಿಯೋ ಕಾಲರ್: ಕೊಡಗು ಜಿಲ್ಲೆ ಯಲ್ಲಿ 9 ಆನೆಗಳಿಗೆ ರೇಡಿಯೋ ಕಾಲರ್ ಅಳವಡಿಸಿ ಅವುಗಳ ಚಲನ ವಲನಗಳ ಬಗ್ಗೆ ನಿಗಾ ವಹಿಸಲಾಗುತ್ತಿದ್ದು, ನಾಗರಹೊಳೆ ವ್ಯಾಪ್ತಿಯಲ್ಲಿ ರಕ್ಷಣಾ ಕೆಲಸಗಳಿಗಾಗಿ ಎಸ್‍ಟಿ ಪಿಎಫ್ ತಂಡ ನೇಮಕ ಮಾಡಿ ರಕ್ಷಣಾ ಕಾರ್ಯ ಕೈಗೊಳ್ಳಲಾಗುತ್ತಿದೆ ಎಂದು ಸಚಿವ ಆನಂದ್ ಸಿಂಗ್ ವಿವರಿಸಿದ್ದಾರೆ.

ಪ್ರತಿಷ್ಠಾನ ಸ್ಥಾಪನೆ: ಕೊಡಗು ಜಿಲ್ಲೆಯಲ್ಲಿ ಮಾನವ-ವನ್ಯಜೀವಿ ಸಂಘರ್ಷದಿಂದ ಬಾಧಿತರಾದ ವ್ಯಕ್ತಿಗಳಿಗೆ ಸಾಮಾಜಿಕ ಮತ್ತು ಆರ್ಥಿಕ ಬೆಂಬಲ ನೀಡುವುದರ ಜೊತೆಗೆ ಆ ಉದ್ದೇಶವನ್ನು ಈಡೇರಿಸಲು ಅಗತ್ಯವಿರುವ ಮೂಲ ಸೌಕರ್ಯಗಳನ್ನು ಒದಗಿಸುವ ಉದ್ದೇಶದಿಂದ ‘ಕೊಡಗು ಮಾನವ -ವನ್ಯಪ್ರಾಣಿ ಸಂಘರ್ಷ ಉಪಶಮನ ಪ್ರತಿಷ್ಠಾನವನ್ನು ವೃತ್ತ ಮಟ್ಟದಲ್ಲಿ ಸ್ಥಾಪಿಸ ಲಾಗಿದೆ ಎಂದು ತಿಳಿಸಿದ್ದಾರೆ.

Translate »