ಕೊರೊನಾ ಎಫೆಕ್ಟ್: 10 ರೂ. ಇದ್ದ ರೈಲ್ವೆ ಪ್ಲಾಟ್ ಫಾರಂ ಟಿಕೆಟ್ ಬೆಲೆ 50 ರೂ.ಗೆ ಏರಿಕೆ!
ಮೈಸೂರು

ಕೊರೊನಾ ಎಫೆಕ್ಟ್: 10 ರೂ. ಇದ್ದ ರೈಲ್ವೆ ಪ್ಲಾಟ್ ಫಾರಂ ಟಿಕೆಟ್ ಬೆಲೆ 50 ರೂ.ಗೆ ಏರಿಕೆ!

March 18, 2020

ನವದೆಹಲಿ, ಮಾ.17- ದೇಶಾದ್ಯಂತ ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ರೈಲು ನಿಲ್ದಾಣಗಳಲ್ಲಿ ಜನ ಸಂದಣಿ ಕಡಿಮೆ ಮಾಡುವುದಕ್ಕಾಗಿ ರೈಲ್ವೆ ಇಲಾಖೆ 10 ರೂಪಾಯಿ ಇದ್ದ ಪ್ಲಾಟ್ ಟಿಕೆಟ್ ದರವನ್ನು 50 ರೂಪಾಯಿಗೆ ಹೆಚ್ಚಳ ಮಾಡಿದೆ.

ಆರು ರೈಲ್ವೆ ವಲಯಗಳಲ್ಲಿ ಮಾತ್ರ ಪ್ಲಾಟ್ ಫಾರಂ ಟಿಕೆಟ್ ದರ ಏರಿಕೆ ಮಾಡಲಾಗಿದ್ದು, ಪಶ್ಚಿಮ ರೈಲ್ವೆ, ಮುಂಬೈ, ವಡೋದ್ರಾ, ಅಹಮದಾಬಾದ್, ರತ್ನಂ, ರಾಜ್‍ಕೋಟ್, ಭಾವನಗರ ರೈಲ್ವೆ ವಲಯದ ಸುಮಾರು 250 ರೈಲ್ವೆ ನಿಲ್ದಾಣಗಳಲ್ಲಿ ಪ್ರಯಾಣಿಕರ ಜೊತೆಗೆ ನಿಲ್ದಾಣಕ್ಕೆ ಬರುವ ಜನರಿಗೆ ನೀಡಲಾಗುವ ಪ್ಲಾಟ್ ಫಾರಂ ಟಿಕೆಟ್ ದರದಲ್ಲಿ ಗಣನೀಯ ಏರಿಕೆ ಮಾಡಲಾಗಿದೆ. ಪ್ರಯಾಣಿಕರನ್ನು ಹೊರತು ಪಡಿಸಿ ಇತರರು ರೈಲು ನಿಲ್ದಾಣಕ್ಕೆ ಬಾರದಂತೆ ತಡೆಯಲು ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಎಲ್ಲಾ ಹವಾ ನಿಯಂತ್ರಿತ ರೈಲುಗಳಲ್ಲಿ ಕಿಟಕಿ ಪರದೆ ಹಾಗೂ ಬೆಡ್‍ಶೀಟ್ ಗಳನ್ನು ತೆಗೆದುಹಾಕಲು ಮತ್ತು ಭಾರತೀಯ ರೈಲ್ವೆ ಇಲಾಖೆಯಲ್ಲಿ ಅಡುಗೆ ತಯಾರಿಸುವವರಲ್ಲಿ ಜ್ವರ, ಕೆಮ್ಮು, ನೆಗಡಿ ಇದ್ದರೆ ಅಂತಹ ಸಿಬ್ಬಂದಿ ಅಡುಗೆ ಮಾಡುವ ಕೆಲಸದಲ್ಲಿ ಭಾಗಿ ಯಾಗಬಾರದು ಎಂದು ರೈಲ್ವೆ ಇಲಾಖೆಯ ಹಾಗೂ ಅದರ ಅಡುಗೆ ವಿಭಾಗ ಐಆರ್‍ಸಿಟಿಸಿಗೆ ಸಲಹೆ ನೀಡಿದೆ.

Translate »