ಮೈಸೂರು, ಮಾ. 17(ಆರ್‍ಕೆ)- ಪಬ್‍ಗಳನ್ನು ಬಂದ್ ಮಾಡಬೇಕೆಂಬ ಸರ್ಕಾರದ ಆದೇಶ, ಅತೀ ಹೆಚ್ಚು ಜನರು ಸೇರುವ ಬಾರ್ ಅಂಡ್ ರೆಸ್ಟೋರೆಂಟ್‍ಗಳಿ ಗೇಕಿಲ್ಲ ಎಂದು ಬಿಯರ್ ಪ್ರಿಯರು ಪ್ರಶ್ನಿಸುತ್ತಿದ್ದಾರೆ.
ಜಗತ್ತನ್ನೇ ತಲ್ಲಣಗೊಳಿಸಿರುವ ಕೋವಿಡ್-19 (ಕೊರೊನಾ ವೈರಸ್) ತಡೆಗೆ ಎಚ್ಚರ ವಹಿಸಲು ಕೈಗೊಂಡಿರುವ ಕ್ರಮಕ್ಕೆ ಎಲ್ಲರೂ ಸಹಕರಿಸಬೇಕು. ಆದರೆ ಅದರ ಉದ್ದೇಶ ಸಫಲವಾಗಬೇಕಾದರೆ ಹೆಚ್ಚು ಜನರು ಒಂದೆಡೆ ಸೇರುವ ಉದ್ದಿಮೆ, ಸ್ಥಳಗಳ ಚಟುವಟಿಕೆ ಬಂದ್ ಮಾಡಬೇಕು ಎಂಬುದು ಸಾರ್ವಜನಿಕರ ವಾದ.
ರಾಜ್ಯ ಸರ್ಕಾರ ಮುನ್ನೆಚ್ಚರಿಕೆಯಾಗಿ ಕಡಿಮೆ ಸಂಖ್ಯೆಯ ಜನರು ಸೇರುವ ಹಾಗೂ ಕೇವಲ ಬಿಯರ್ ಮಾರಾಟ ಮಾಡುವ ಪಬ್‍ಗಳನ್ನು ಮಾತ್ರ ಬಂದ್ ಮಾಡಿರುವುದು ಸರಿಯೇ? ಆದರೆ ಅತೀ ಹೆಚ್ಚು ಮಂದಿ ಸೇರುವ ಬಾರ್ ಅಂಡ್ ರೆಸ್ಟೋರೆಂಟ್‍ಗಳನ್ನು ತೆರೆಯಲು ಅವಕಾಶ ಮಾಡಿಕೊಟ್ಟಿರುವುದು ಹಾಸ್ಯಾಸ್ಪದ ಎನಿಸುವುದಿಲ್ಲವೇ? ಎಂದು ಮದ್ಯ ಪ್ರಿಯರು ಪ್ರಶ್ನಿಸುತ್ತಿದ್ದಾರೆ.
ಅದರಲ್ಲೂ ಮೈಸೂರು ನಗರದಲ್ಲಿ ಪಬ್ ಸಂಸ್ಕøತಿ ಇನ್ನೂ ಅಷ್ಟೇನು ಪ್ರವರ್ಧಮಾನಕ್ಕೆ ಬಂದಿಲ್ಲ. ಹುಣಸೂರು ರಸ್ತೆ, ಕಾಳಿದಾಸ ರಸ್ತೆ, ಕೆಆರ್‍ಎಸ್ ರಸ್ತೆ ಸೇರಿದಂತೆ ಕೇವಲ ಬೆರಳೆಣಿಕೆಯಷ್ಟು (ಸುಮಾರು 10) ಇರುವ ಪಬ್‍ಗಳನ್ನು ಮುಚ್ಚಿಸಲಾಗಿದೆ. ಆದರೆ ಮೈಸೂರು ನಗರದಾದ್ಯಂತ ಇರುವ ನೂರಾರು ಬಾರ್ ಅಂಡ್ ರೆಸ್ಟೋರೆಂಟ್‍ಗಳಲ್ಲಿ ಪ್ರತಿನಿತ್ಯ ನೂರಾರು ಜನ ಸೇರುತ್ತಾರೆ. ಹಾಗಾದರೆ ಅಲ್ಲಿ ಕೊರೊನಾ ವೈರಸ್ ಹರಡುವುದಿಲ್ಲವೇ? ಎಂದು ಕೆಲ ಜನ ಪ್ರಶ್ನಿಸುತ್ತಿದ್ದಾರೆ.
ಪಬ್‍ಗಳಲ್ಲಿ ಕೇವಲ ಬಿಯರ್ ಮಾರಾಟ ಮಾಡುವುದರಿಂದ ಅಲ್ಲಿ ಕೇವಲ ಬಿಯರ್ ಪ್ರಿಯರು ಮಾತ್ರ ಸೇರುತ್ತಾರೆ. ಆದರೆ ಬಿಯರ್, ಹಾಟ್ ಡ್ರಿಂಕ್ಸ್ (Iಒಐ), ಜೊತೆಗೆ ಮಾಂಸಾಹಾರಿ ಖಾದ್ಯಗಳನ್ನು ಮಾರಾಟ ಮಾಡುವ ಬಾರ್ ಅಂಡ್ ರೆಸ್ಟೋ ರೆಂಟ್‍ಗಳಿಗೆ ಅತೀ ಹೆಚ್ಚಿನ ಸಂಖ್ಯೆಯ ಗ್ರಾಹಕರು ಹೋಗು ತ್ತಾರೆ ಎಂದು ಹಲವರು ವಾದಿಸುತ್ತಿದ್ದಾರೆ. ನೈಟ್ ಕ್ಲಬ್‍ಗಳನ್ನು ಬಂದ್ ಮಾಡಿರುವಾಗ ಬೆಳಿಗ್ಗೆಯಿಂದ ಮಧ್ಯರಾತ್ರಿವರೆಗೂ ತೆರೆಯುವ ಬಾರ್ ಅಂಡ್ ರೆಸ್ಟೋರೆಂಟ್‍ಗಳಿಗೇಕೆ ವಿನಾಯಿತಿ ನೀಡಲಾಗಿದೆ ಎನ್ನುವ ನಾಗರಿಕರು, ಸದಾ ಜನಜಂಗುಳಿ ಯಿಂದಿರುವ ರೆಸ್ಟೋರೆಂಟ್‍ಗಳನ್ನು ಮುಚ್ಚುವುದು ಸೂಕ್ತ ಎಂದು ಸರ್ಕಾರಕ್ಕೆ ಅನಿಸಲಿಲ್ಲವೆ? ಎಂದು ಪ್ರಶ್ನಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ಪಡೆಯಲು ‘ಮೈಸೂರು ಮಿತ್ರ’ ಪ್ರಯತ್ನಿಸಿತಾದರೂ, ಅಬಕಾರಿ ಇಲಾಖೆ ಉಪ ಆಯುಕ್ತ ಮುರಳಿ ಸಂಪರ್ಕಕ್ಕೆ ಸಿಗಲಿಲ್ಲ. ಮೈಸೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಹಾಗೂ ಕಾಸ್ಮೋಪಾಲಿಟನ್ ಕ್ಲಬ್ ಅಧ್ಯಕ್ಷರಾದ ಸಿ. ನಾರಾಯಣಗೌಡರು, ಬೆಂಗಳೂರಿ ನಲ್ಲಿ ಪಬ್‍ಗಳು ಜಾಸ್ತಿ ಇರುವುದರಿಂದ ಅದನ್ನು ಗಮನದಲ್ಲಿರಿ ಸಿಕೊಂಡು ಸರ್ಕಾರ ಈ ನಿರ್ಧಾರಕ್ಕೆ ಬಂದಿರಬಹುದು. ಆದರೆ ಮೈಸೂರಲ್ಲಿರುವುದೇ 10 ಪಬ್‍ಗಳು. ಇಲ್ಲಿ ಅವುಗಳಿಗೆ ವಿನಾಯಿತಿ ನೀಡಬಹುದಿತ್ತು ಎಂದು ಅಭಿಪ್ರಾಯಪಟ್ಟರು.