ಐಷಾರಾಮಿ ಬಡಾವಣೆಗೆ ಹೊಂದಿಕೊಂಡಿದ್ದರೂ 25 ವರ್ಷದಿಂದ ಮೂಲಸೌಕರ್ಯ ವಂಚಿತರ ಅಳಲು!
ಮೈಸೂರು

ಐಷಾರಾಮಿ ಬಡಾವಣೆಗೆ ಹೊಂದಿಕೊಂಡಿದ್ದರೂ 25 ವರ್ಷದಿಂದ ಮೂಲಸೌಕರ್ಯ ವಂಚಿತರ ಅಳಲು!

March 17, 2020

ಮೈಸೂರು, ಮಾ.16(ಎಂಕೆ)- ಕುಡಿಯುವ ನೀರು, ಶೌಚಾಲಯ, ಬೆಳಕು, ಒಳಚರಂಡಿ ಸೇರಿದಂತೆ ಕನಿಷ್ಠ ಮೂಲ ಸೌಕರ್ಯಗಳಿ ಲ್ಲದೆ 31 ಕುಟುಂಬಗಳು 25 ವರ್ಷಗಳಿಂದ ಶೋಚನೀಯ ಸ್ಥಿತಿಯಲ್ಲಿ ಬದುಕುತ್ತಿವೆ.

ಮೈಸೂರಿನ ದಟ್ಟಗಳ್ಳಿ 3ನೇ ಹಂತ, 2ನೇ ಘಟ್ಟ ‘ಹೆಚ್’ ಬಡಾವಣೆಯಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ 15×30 ವಿಸ್ತೀ ರ್ಣದ 26 ಇಡಬ್ಲ್ಯೂಎಸ್ ಮತ್ತು 5 ಇತರೆ ಮನೆಗಳು ಸೇರಿ 31 ಕುಟುಂಬಗಳ 150ಕ್ಕೂ ಹೆಚ್ಚು ಜನರು 25 ವರ್ಷಗಳಿಂದ ವಾಸ ವಿದ್ದು, ಕತ್ತಲೆಯಲ್ಲೇ ಜೀವನ ಸಾಗಿಸುತ್ತಿ ದ್ದಾರೆ. ಅಲ್ಲದೆ 20 ಕುಟುಂಬಗಳಲ್ಲಿ 5ಕ್ಕೂ ಹೆಚ್ಚು ಮಂದಿ ಇದ್ದು, ಕಡಿಮೆ ವಿಸ್ತೀರ್ಣದ ಒಂದು ಹಾಲ್ ಮತ್ತು ಒಂದು ಅಡುಗೆ ಕೋಣೆಯಿರುವ ಮನೆಯಲ್ಲಿ ದಿನಕಳೆಯು ವುದೇ ಸವಾಲಾಗಿದೆ. ಒಂದೆಡೆ ಮೂಲ ಸೌಕರ್ಯಗಳ ಕೊರತೆಯಾದರೆ ಮತ್ತೊಂ ದೆಡೆ ಇರುವ ಸಣ್ಣ ಮನೆಗಳು ಎಲ್ಲಿ ಬಿದ್ದು ಹೋಗುತ್ತವೋ ಎಂಬ ಭಯದಲ್ಲಿ ಬದುಕು ವಂತಾಗಿದೆ. ಮುರ್ನಾಲ್ಕು ಮನೆಗಳ ಹೊರತು ಪಡಿಸಿ, ಉಳಿದೆಲ್ಲಾ ಮನೆಗಳಲ್ಲಿ ಛಾವಣಿ ಕುಸಿದು ಬೀಳುತ್ತಿದೆ. ಕೆಲವು ಮನೆಗಳಿಗೆ ಬಾಗಿಲುಗಳೇ ಇಲ್ಲದೆ ಬಟ್ಟೆಯಿಂದ (ಕರ್ಟನ್) ಮುಚ್ಚಿಕೊಳ್ಳಲಾಗಿದೆ.

ಸಾಲು ಸಾಲು ಮನವಿ: ಕುಡಿಯಲು ನೀರು, ವಿದ್ಯುತ್, ಶೌಚಾಲಯ, ಮನೆಯ ಹಕ್ಕು ಪತ್ರ ನೀಡುವಂತೆ 2 ವರ್ಷಗಳಿಂದ ಜನಪ್ರತಿನಿಧಿಗಳಿಗೆ ಸಾಲು ಸಾಲು ಮನವಿ ಮಾಡಿದರೂ ಯಾವುದೇ ಪ್ರಯೋಜನವಿಲ್ಲ ದಂತಾಗಿದೆ. ಯಾರ ಬಳಿಗೆ ಹೋದರೂ ಮನೆಗಳನ್ನು ನಿಮ್ಮ ಹೆಸರಿಗೆ ಮಾಡಿಕೊಡು ವಂತೆ ಅಧಿಕಾರಿಗಳಿಗೆ ತಿಳಿಸಿದ್ದೇನೆ. ಮೂಲ ಸೌಕರ್ಯಗಳನ್ನು ನೀಡುವಂತೆ ಸೂಚಿಸಿ ದ್ದೇನೆ ಎನ್ನುತ್ತಾರೆ. ಆದರೆ ಅದಾವುಗಳು ಇಂದಿಗೂ ದೊರೆತಿಲ್ಲ. ಹಿರಿಯ ಅಧಿಕಾರಿ ಗಳಿಗೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಎಂದು ನಿವಾಸಿ ಗಳು ‘ಮೈಸೂರು ಮಿತ್ರ’ನಲ್ಲಿ ದೂರಿದರು.

ಕಂದಾಯ ಕಟ್ಟುತ್ತೇವೆ: ಕಳೆದ 25 ವರ್ಷ ಗಳಿಂದ ಇಲ್ಲಿಯೇ ವಾಸವಾಗಿದ್ದೇವೆ. ಮನೆ ಗಳನ್ನು ನಮ್ಮ ಹೆಸರಿಗೆ ಮಾಡಿ, ಹಕ್ಕು ಪತ್ರ ನೀಡಿದರೆ ಸರ್ಕಾರ ನಿಗದಿಪಡಿಸುವ ಕಂದಾಯವನ್ನು ಕಟ್ಟಲು ಸಿದ್ಧರಿದ್ದೇವೆ. ಯಾವುದೇ ಕಾರಣಕ್ಕೂ ಮನೆಗಳನ್ನು ಬಿಡು ವುದಿಲ್ಲ. ಇಷ್ಟು ದಿನ ಏನೂ ಇಲ್ಲದೆ ಜೀವನ ಮಾಡಿದ್ದೇವೆ. ಮುಂದಾದರೂ ನಮಗೆ ಒಳ್ಳೆಯ ದಿನಗಳು ಬರಬಹುದೇನೋ ಎಂಬ ಆಶಾಭಾವನೆ ಇದೆ ಎಂದು ತಿಳಿಸಿದರು.

ಅಧಾರ್ ಕಾರ್ಡ್, ಪಡಿತರ ಚೀಟಿ, ಮತ ದಾನ ಚೀಟಿ, ಗ್ಯಾಸ್ ಬಿಲ್ ಮತ್ತಿತರ ದಾಖ ಲಾತಿಗಳನ್ನು ಇದೇ ಮನೆಗಳ ವಿಳಾಸಕ್ಕೆ ನೀಡಿದ್ದರೂ ಮನೆಗಳ ಹಕ್ಕು ಪತ್ರ ವಿತರಣೆ ಮಾಡುವಲ್ಲಿ ಮಾತ್ರ ಮೀನಾಮೇಷ ಎಣಿಸ ಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಇದೇ ಮನೆಯಲ್ಲಿ ನನ್ನ ಮಕ್ಕಳ, ಮೊಮ್ಮಕ್ಕಳ ಮದುವೆ ಮಾಡಿದ್ದೇನೆ. ಮನೆಯಲ್ಲಿ 8 ಮಂದಿ ಯಿದ್ದು, ರಾತ್ರಿ ವೇಳೆ ಮನೆಯ ಹೊರಗಡೆ ಮಲಗುತ್ತೇವೆ. ಗಾರೆ ಕೆಲಸ ಮಾಡಿಕೊಂಡು ಜೀವನ ನಡೆಸುವ ನಮಗೆ ಯಾರು ದಿಕ್ಕು ಎಂಬುದೇ ಗೊತ್ತಿಲ್ಲ. ಒಂದು ದಿನ, ಒಂದು ತಿಂಗಳು ಕಳೆದಂತೆ ಭಾಸವಾಗುತ್ತದೆ ಎಂದು ನಿವಾಸಿ ಜಯಮ್ಮ ಅಳಲು ತೋಡಿಕೊಂಡರು.

Translate »