ನಮಗೆ ನೀಡಿರುವುದು ಅಧಿಕಾರವಲ್ಲ, ಜವಾಬ್ದಾರಿ
News

ನಮಗೆ ನೀಡಿರುವುದು ಅಧಿಕಾರವಲ್ಲ, ಜವಾಬ್ದಾರಿ

March 17, 2020

ಬೆಂಗಳೂರು,ಮಾ.16(ಕೆಎಂಶಿ)- ಪಕ್ಷದ ವರಿಷ್ಠರು ನಮ್ಮನ್ನು ಅಧ್ಯಕ್ಷರನ್ನಾಗಿ ಹಾಗೂ ಮೂವರನ್ನು ಕಾರ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿದ್ದಾರೆ. ಇದು ನಮಗೆ ಕೊಟ್ಟಿರುವ ಅಧಿಕಾರ ಅಲ್ಲ, ಜವಾ ಬ್ದಾರಿ ಎಂದು ಪ್ರದೇಶ ಕಾಂಗ್ರೆಸ್ ನೂತನ ಅಧ್ಯಕ್ಷ ಡಿ.ಕೆ.ಶಿವ ಕುಮಾರ್ ತಿಳಿಸಿದ್ದಾರೆ. ಕಾಂಗ್ರೆಸ್ ಭವನದಲ್ಲಿ ಮೂವರು ಕಾರ್ಯಾ ಧ್ಯಕ್ಷರ ಜತೆ ಸಮಾಲೋಚನೆ ನಡೆಸಿದ ನಂತರ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ನನ್ನ ಮೇಲೆ ವಿಶ್ವಾಸ ಇಟ್ಟು, ಮೂವರು ಕಾರ್ಯಾಧ್ಯಕ್ಷರನ್ನು ನೇಮಕ ಮಾಡಿದ್ದಾರೆ. ಹೊಸ ತಂಡವನ್ನು ರಚಿಸಿ ಎಐಸಿಸಿ, ಜವಾಬ್ದಾರಿ ಕೊಟ್ಟಿದೆ. ನಮಗೆ ಕೊಟ್ಟಿ ರೋದು ಅಧಿಕಾರ ಅಲ್ಲ, ಅದು ಜವಾಬ್ದಾರಿ.

ಕಾಂಗ್ರೆಸ್ ಪಕ್ಷದ ಬಲವರ್ಧನೆ ಮಾಡಲು ನಮಗೆ ಅವಕಾಶ ಕೊಟ್ಟಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ನಮ್ಮ ಕಾರ್ಯಕರ್ತರಿಗೆ ಉತ್ಸಾಹ ಬರುವ ರೀತಿ ಕೆಲಸ ಮಾಡಬೇಕಿದೆ. ತಳಮಟ್ಟದಿಂದ ಪಕ್ಷ ಕಟ್ಟಲು ನಾವು ತೀರ್ಮಾನ ಮಾಡಿದ್ದೇವೆ. ಹೀಗಾಗಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದು ಕೊಂಡು ಮುಂದೆ ಹೋಗುತ್ತೇವೆ. ಕಾರ್ಯಕರ್ತರು ಹಾಗೂ ನಾಯಕರು ನಮ್ಮ ಮೇಲೆ ನಂಬಿಕೆ ಇಟ್ಟಿದ್ದಾರೆ. ಈ ನಂಬಿಕೆ ಉಳಿಸಿ ಕೊಳ್ಳುವುದು ನಮ್ಮ ಜವಾಬ್ದಾರಿ. ದೇಶದ ಎಲ್ಲ ಕಡೆ ಬಿಜೆಪಿಗೆ ಅಧಿಕಾರ ಕೊಟ್ಟಿದ್ದರೂ ಅವರಿಗೆ ಅದು ಸಾಲುತ್ತಿಲ್ಲ.

ಬೇರೆ ರಾಜ್ಯ ಗಳಲ್ಲೂ ಕಾಂಗ್ರೆಸ್ ಪಕ್ಷದ ನಾಯಕರನ್ನು ಸೆಳೆಯುತ್ತಿದೆ. ಜಾತಿ, ನೀತಿ ಮೇಲೆ ನಾನು ಮಾತನಾಡಲ್ಲ. ಎಲ್ಲ ಸಮುದಾಯಗಳ ಬಗ್ಗೆಯೂ ಒತ್ತು ನೀಡುತ್ತೇವೆ. ನಮಗೆ ಕ್ವಾಂಟಿಟಿ ಬೇಕಿಲ್ಲ, ಕ್ವಾಲಿಟಿ ಬೇಕಿದೆ. ಶಿಸ್ತು ಪಾಲನೆಗೆ ಮೊದಲ ಆದ್ಯತೆ. ಪಕ್ಷಕ್ಕೆ ನಿಷ್ಠೆ ತೋರುವ ವರಿಗೆ ಸೂಕ್ತ ಸ್ಥಾನಮಾನ ನೀಡಲಾಗುವುದು. ವಿಧಾನಸಭೆ ಕಲಾಪ ಹಾಗೂ ಸಂಸತ್ ಅಧಿವೇಶನ ಮುಗಿದ ನಂತರ ಮೂವರು ಕಾರ್ಯಾ ಧ್ಯಕ್ಷರ ಜೊತೆ ಪಕ್ಷದ ಪ್ರಮುಖ ನಾಯಕರ ಜೊತೆ ದೆಹಲಿಗೆ ಹೋಗುತ್ತೇವೆ. ಅಲ್ಲಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಇತರೆ ಮುಖಂಡರನ್ನ ಭೇಟಿ ಮಾಡುತ್ತೇವೆ ಎಂದರು.

Translate »