ಕೊರೊನಾ ಭೀತಿ: ಆಧಾರ್ ಕೇಂದ್ರಕ್ಕಿಲ್ಲವೇ ನಿರ್ಬಂಧ?
ಮೈಸೂರು

ಕೊರೊನಾ ಭೀತಿ: ಆಧಾರ್ ಕೇಂದ್ರಕ್ಕಿಲ್ಲವೇ ನಿರ್ಬಂಧ?

March 17, 2020

ಮೈಸೂರು,ಮಾ,16(ಅರ್‍ಕೆಬಿ)- ಕೊರೊನಾ ವೈರಸ್ ಭೀತಿಯಿಂದಾಗಿ ಇಡೀ ರಾಜ್ಯದಲ್ಲಿ ನಿರ್ಬಂಧವಿದ್ದರೂ ಮೈಸೂ ರಿನ ವಿಜಯನಗರದಲ್ಲಿರುವ ಆಧಾರ್ ಕೇಂದ್ರಕ್ಕೆ ಯಾವುದೇ ನಿರ್ಬಂಧ ಇಲ್ಲದೆ ನೂರಾರು ಜನ ಒಂದೆಡೆ ಸೇರುತ್ತಿದ್ದಾರೆ.

ಕೊರೊನಾ ಹರಡುವುದನ್ನು ತಪ್ಪಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ರಾಜ್ಯದೆಲ್ಲೆಡೆ ಒಂದು ವಾರ ಕಾಲ ಶಾಲಾ-ಕಾಲೇಜು, ಚಿತ್ರಮಂದಿರ, ಮಾಲ್‍ಗಳು, ಮದುವೆ, ಸಭೆ ಸಮಾರಂಭಗಳನ್ನು ಬಂದ್ ಮಾಡಿ ನಿರ್ಬಂಧ ಹೇರಿದೆ. ಅಲ್ಲದೆ ಮೈಸೂರು ಜಿಲ್ಲಾಡಳಿತ ಸಹ ಸಭೆ-ಸಮಾರಂಭ, ಕಾರ್ಯ ಕ್ರಮಗಳಿಗೆ ಬ್ರೇಕ್ ಹಾಕಿದೆ. ಜಿಲ್ಲೆಯ ಎಲ್ಲಾ ಧಾರ್ಮಿಕ ಸಂಸ್ಥೆಗಳಿಗೆ ಸೇರಿದ ಜಾತ್ರೆ, ಸಭೆ ಸಮಾರಂಭ, ಸಾಂಸ್ಕøತಿಕ ಕಾರ್ಯ ಕ್ರಮ, ಆಹಾರ ಮತ್ತು ಪ್ರಸಾದ ವಿತರಣೆಗೆ ನಿರ್ಬಂಧ ಹೇರಿದೆ. ದೇಶಾದ್ಯಂತ ಕೊರೊನಾ ಶಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆ ಯಲ್ಲಿ ಮೈಸೂರು ಜಿಲ್ಲೆಯಲ್ಲಿ ಸಿಆರ್‍ಪಿಸಿ ಅಡಿ 144ನೇ ಸೆಕ್ಷನ್ ಜಾರಿ ಮಾಡಲಾಗಿದೆ.

ಹೀಗಿದ್ದೂ ಇದು ವಿಜಯನಗರದ ಆಧಾರ್ ಕೇಂದ್ರಕ್ಕೆ ಅನ್ವಯಿಸುವುದಿಲ್ಲವೇ ಎಂಬ ಪ್ರಶ್ನೆ ಸಾರ್ವಜನಿಕರಿಂದ ಕೇಳಿ ಬರುತ್ತಿದೆ. ತಮ್ಮ ಆಧಾರ್ ಕಾರ್ಡ್‍ನಲ್ಲಿನ ತಿದ್ದುಪಡಿ ಇನ್ನಿ ತರ ಕೆಲಸಗಳಿಗೆ ಸಾರ್ವಜನಿಕರು ನೂರಾರು ಸಂಖ್ಯೆಯಲ್ಲಿ ಆಧಾರ್ ಕೇಂದ್ರದಲ್ಲಿ ಪ್ರತಿ ನಿತ್ಯ ಸೇರುತ್ತಿದ್ದಾರೆ. ಹೆಚ್ಚು ಜನರು ಸೇರುವ ಎಲ್ಲಾ ಕಾರ್ಯಕ್ರಮಗಳಿಗೂ ರಾಜ್ಯ ಸರ್ಕಾರ ನಿರ್ಬಂಧ ಹೇರಿದ್ದರೂ ಆಧಾರ್ ಕೇಂದ್ರ ಎಂದಿನಂತೆ ಕಾರ್ಯನಿರ್ವಹಿಸುತ್ತಿದೆ. ಆಧಾರ್ ಕೇಂದ್ರಕ್ಕೆ ಆಗಮಿಸುತ್ತಿರುವ ಜನರಿಗೆ ಅಲ್ಲಿನ ಸಿಬ್ಬಂದಿ ಹ್ಯಾಂಡ್ ಸ್ಯಾನಿಟೈಜûರ್ ಸಿಂಪಡಿಸಿ ಒಳಬಿಡುತ್ತಿದ್ದಾರೆ. ಕೆಲವೇ ಜನರು ಮಾತ್ರ ಮಾಸ್ಕ್ ಧರಿಸಿ ಸರತಿ ಸಾಲಿನಲ್ಲಿ ನಿಂತಿದ್ದಾರೆ.

Translate »