ಕೊರೊನಾ ವೈರಸ್ ಭೀತಿ ಮೈಸೂರು ವಿವಿ ಶತಮಾನೋತ್ಸವದ  ಘಟಿಕೋತ್ಸವ ಕಾರ್ಯಕ್ರಮ ಮುಂದೂಡಿಕೆ
ಮೈಸೂರು

ಕೊರೊನಾ ವೈರಸ್ ಭೀತಿ ಮೈಸೂರು ವಿವಿ ಶತಮಾನೋತ್ಸವದ ಘಟಿಕೋತ್ಸವ ಕಾರ್ಯಕ್ರಮ ಮುಂದೂಡಿಕೆ

March 17, 2020

ಮೈಸೂರು, ಮಾ.16(ಆರ್‍ಕೆ)- ವಿಶ್ವವನ್ನೇ ಕಾಡುತ್ತಿರುವ ಕೋವಿಡ್-19 (ಕೊರೊನಾ ವೈರಸ್) ಭೀತಿಯಿಂದಾಗಿ ಮಾರ್ಚ್ ಮಾಹೆಯಲ್ಲಿ ನಡೆಯಬೇಕಿದ್ದ ಮೈಸೂರು ವಿಶ್ವವಿದ್ಯಾನಿಲಯದ ಶತಮಾನೋ ತ್ಸವ ಘಟಿಕೋತ್ಸವ ಸಮಾರಂಭ ವನ್ನು ಮೇ ಮಾಹೆಗೆ ಮುಂದೂಡ ಲಾಗಿದೆ. ಈ ಕುರಿತು ‘ಮೈಸೂರು ಮಿತ್ರ’ ನೊಂದಿಗೆ ಮಾತನಾಡಿದ ಕುಲಪತಿ ಪ್ರೊ. ಜಿ.ಹೇಮಂತ್‍ಕುಮಾರ್, ದಿನದಿಂದ ದಿನಕ್ಕೆ ಮಾರಣಾಂತಿಕ ಖಾಯಿಲೆ ಭೀತಿ ಹೆಚ್ಚಾಗುತ್ತಿದ್ದು, ಸರ್ಕಾರ ಮುಂಜಾಗೃತೆ ಕ್ರಮ ಕೈಗೊಳ್ಳುತ್ತಿರುವುದರಿಂದ ವಿವಿ 100ನೇ ವಾರ್ಷಿಕ ಘಟಿಕೋತ್ಸವವನ್ನು ಅನಿವಾರ್ಯವಾಗಿ ಮುಂದೂಡಬೇಕಾಗಿದೆ ಎಂದರು.

ಈಗಾಗಲೇ ಮಾರ್ಚ್ ಮಾಹೆಯಲ್ಲಿ ನಡೆಸಲುದ್ದೇಶಿಸಿದ್ದ ಸೆಂಟೆನರಿ ಕಾನ್ವೊಕೇಷನ್ ಗಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆಹ್ವಾನ ನೀಡಲಾಗಿತ್ತು, ಅವರು ದಿನಾಂಕ ನೀಡುವುದರೊಳಗಾಗಿ ಜಗತ್ತಿನಾದ್ಯಂತ ಕೊರೊನಾ ವೈರಸ್ ಹರಡಿರುವು ದರಿಂದ ಕಾರ್ಯಕ್ರಮ ನಡೆಸಲು ಅಡ್ಡಿಯಾಗಿದೆ ಎಂದು ಅವರು ತಿಳಿಸಿದರು.

ಸರ್ಕಾರವೇ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಪಡಿಸಿರುವುದರಿಂದ ಹಾಗೂ ಪ್ರಧಾನಮಂತ್ರಿಗಳು ದಿನಾಂಕ ನೀಡದಿರುವ ಕಾರಣ ಘಟಿಕೋತ್ಸವ ಕಾರ್ಯಕ್ರಮವನ್ನು ಮೇ ತಿಂಗಳಿಗೆ ಮುಂದೂಡಿದ್ದೇವೆ ಎಂದು ಅವರು ತಿಳಿಸಿದರು.

Translate »