ಮೈಸೂರು ಕುಕ್ಕರಹಳ್ಳಿ ಕೆರೆ ಬಳಿ ರೈಲ್ವೆ  ಲೆವೆಲ್ ಕ್ರಾಸಿಂಗ್‍ನಲ್ಲಿ ಮೇಲ್ಸೇತುವೆ ಶೀಘ್ರ ಕಾಮಗಾರಿ ಆರಂಭ
ಮೈಸೂರು

ಮೈಸೂರು ಕುಕ್ಕರಹಳ್ಳಿ ಕೆರೆ ಬಳಿ ರೈಲ್ವೆ ಲೆವೆಲ್ ಕ್ರಾಸಿಂಗ್‍ನಲ್ಲಿ ಮೇಲ್ಸೇತುವೆ ಶೀಘ್ರ ಕಾಮಗಾರಿ ಆರಂಭ

March 17, 2020

ಬೆಂಗಳೂರು,ಮಾ.16-ಮೈಸೂರು ನಗ ರದ ಕ್ರಾಫರ್ಡ್ ಹಾಲ್ ಬಳಿ ಕುಕ್ಕರಹಳ್ಳಿ ಕೆರೆ ರಸ್ತೆ, ಎಸ್.ರಾಧಾಕೃಷ್ಣನ್ ಮಾರ್ಗದಲ್ಲಿ ರುವ, ರೈಲ್ವೆ ಲೆವೆಲ್ ಕ್ರಾಸಿಂಗ್‍ನಲ್ಲಿ, ಮೇಲ್ಸೇ ತುವೆಯನ್ನು ರೈಲ್ವೆ ಇಲಾಖೆಯಿಂದಲೂ, ಕೂಡು ರಸ್ತೆಗಳನ್ನು ಮಹಾ ನಗರಪಾಲಿಕೆ ವತಿಯಿಂದಲೂ ನಿರ್ಮಾಣ ಮಾಡಬೇಕಾ ಗಿದೆ. ಮೇಲ್ಸೇತುವೆ ನಿರ್ಮಾಣ ಕಾಮಗಾರಿಗೆ, ರೈಲ್ವೆ ಇಲಾಖೆಯ ಪಾಲು ರೂ. 792.22 ಲಕ್ಷ ರೂ. ಗಳಾಗಿದ್ದು, ಇದರ ಕಾಮಗಾರಿಗೆ ಈಗಾಗಲೇ ರೈಲ್ವೆ ಇಲಾಖೆ ಟೆಂಡರ್ ಕರೆ ದಿದೆ. ಕೂಡು (ಅಪ್ರೋಚ್) ರಸ್ತೆಗಳ ನಿರ್ಮಾ ಣಕ್ಕೆ ರಾಜ್ಯ ಸರ್ಕಾರದ ಪಾಲಿನ 2675. 31 ಲಕ್ಷ ರೂ. ಅನುದಾನವನ್ನು ಮೈಸೂರು ನಗರಪಾಲಿಕೆಗೆ ಬಿಡುಗಡೆ ಮಾಡಬೇಕಾಗಿದೆ, ಅನುದಾನ ಬಿಡುಗಡೆ ನಂತರ ಪಾಲಿಕೆಯಿಂದ ಕೂಡು ರಸ್ತೆಗಳ ನಿರ್ಮಾಣಕ್ಕೆ ಟೆಂಡರ್ ಕರೆಯಲು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶುಕ್ರವಾರ ವಿಧಾನ ಪರಿಷತ್ತಿಗೆ ತಿಳಿಸಿದರು.

ಕುಕ್ಕರಹಳ್ಳಿ ಕೆರೆ ರಸ್ತೆಯ ರೈಲ್ವೆ ಲೆವೆಲ್ ಕ್ರಾಸಿಂಗ್‍ನಲ್ಲಿ ಪ್ರತಿನಿತ್ಯ ಹಲವಾರು ಬಾರಿ ರೈಲ್ವೆ ಗೇಟ್‍ನ್ನು ಹಾಕಲಾಗುತ್ತಿದೆ. ಎಷ್ಟೋ ಬಾರಿ ಲೆವೆಲ್ ಕ್ರಾಸಿಂಗ್ ಮೇಲೆಯೇ ರೈಲು ಗಳು ಬಹಳ ಕಾಲ ನಿಲ್ಲುತ್ತಿರುವುದರಿಂದ, ವಾಹನ ಸಂಚಾರಕ್ಕೆ ಬಹಳ ತೊಂದರೆ ಯಾಗಿದ್ದು, ಜನರಿಗೆ ಬಹಳ ಅನಾನುಕೂಲ ವಾಗಿದೆ. ಕೂಡಲೇ ಇಲ್ಲಿ ರೈಲ್ವೆ ಮೇಲ್ಸೇ ತುವೆ ನಿರ್ಮಿಸಬೇಕೆಂಬ ಬಗ್ಗೆ ಸಂದೇಶ್ ನಾಗರಾಜ್ ಮಾಡಿದ ಮನವಿಗೆ ಮುಖ್ಯ ಮಂತ್ರಿಗಳು ಪ್ರತಿಕ್ರಿಯೆ ನೀಡಿದರು. ಈ ಯೋಜ ನೆಗೆ ಒಟ್ಟು 3467 ಲಕ್ಷ ರೂ.ಗಳ ಅಂದಾಜು ಪಟ್ಟಿಯನ್ನು ರೈಲ್ವೆ ಇಲಾಖೆ ಸಿದ್ಧಪಡಿಸಿದೆ. ಇದರಲ್ಲಿ ರೈಲ್ವೆ ಇಲಾಖೆಯ ಪಾಲು 792.22 ಲಕ್ಷ ರೂ. ಮತ್ತು ರಾಜ್ಯ ಸರ್ಕಾ ರದ ಪಾಲು 2675.31 ಲಕ್ಷ ರೂ. ಗಳಾಗಿದೆ. ಈ ಕಾಮಗಾರಿಯಲ್ಲಿ ಸೇತುವೆಯನ್ನು ಮಾತ್ರ ರೈಲ್ವೆ ಇಲಾಖೆ ನಿರ್ಮಿಸಲಿದ್ದು, ಕೂಡು ರಸ್ತೆಗಳನ್ನು ಮೈಸೂರು ಮಹಾ ನಗರ ಪಾಲಿಕೆ ವತಿಯಿಂದ, ಮೇಲ್ಸೇತುವೆ ಕಾಮಗಾರಿಯ ಜೊತೆಗೇ ನಿರ್ಮಿ ಸಬೇಕೆಂದು ರೈಲ್ವೆ ಇಲಾಖೆ ಷರತ್ತು ಹಾಕಿದೆ ಎಂದು ಸಿಎಂ ವಿವರಿಸಿದರು. ಮೈಸೂರು ರೈಲ್ವೆ ನಿಲ್ದಾಣದಲ್ಲಿ ಬೆಳಿಗ್ಗೆ ಮತ್ತು ಸಂಜೆ ರೈಲುಗಳ ಆಗಮನ ಮತ್ತು ನಿರ್ಗಮನ ಹೆಚ್ಚಿದ್ದು, ಈ ಸಮಯದಲ್ಲಿ ರೈಲು ಗಳನ್ನು ನಿಲ್ಲಿಸಲು ಮೈಸೂರು ರೈಲ್ವೆ ನಿಲ್ದಾಣದಲ್ಲಿ ಸ್ಥಳಾವಕಾಶ ಇಲ್ಲದಿರುವುದರಿಂದ, ನಂಜನ ಗೂಡು, ಚಾಮರಾಜನಗರ ಕಡೆಯಿಂದ ಬರುವ ರೈಲುಗಳು ಹಲವು ನಿಮಿಷಗಳ ಕಾಲ ಈ ರೈಲ್ವೆ ಲೆವೆಲ್ ಕ್ರಾಸಿಂಗ್ ಮೇಲೆಯೇ ನಿಲ್ಲುವುದು ಅನಿವಾರ್ಯವಾಗಿದೆ ಎಂದು ಮುಖ್ಯಮಂತ್ರಿಯವರು ಸದನಕ್ಕೆ ತಿಳಿಸಿದರು.

Translate »