Tag: Mysore

ಬುಧವಾರ ಅನರ್ಹ ಶಾಸಕರ ಭವಿಷ್ಯ ನಿರ್ಧಾರ
ಮೈಸೂರು

ಬುಧವಾರ ಅನರ್ಹ ಶಾಸಕರ ಭವಿಷ್ಯ ನಿರ್ಧಾರ

November 10, 2019

ನವದೆಹಲಿ, ನ.9- ಸುಪ್ರೀಂಕೋರ್ಟ್ ಬುಧವಾರ (ನವೆಂಬರ್ 13) ಬೆಳಿಗ್ಗೆ 10.30ಕ್ಕೆ ಅನರ್ಹ ಶಾಸಕರ ಪ್ರಕರಣದ ತೀರ್ಪನ್ನು ಪ್ರಕಟಿಸಲಿದೆ. ಸ್ಪೀಕರ್ ಆದೇಶವನ್ನು ಪ್ರಶ್ನಿಸಿ ಅನರ್ಹ ಶಾಸಕರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ನ್ಯಾಯಾ ಧೀಶ ಎನ್.ವಿ.ರಮಣ ಪೀಠ ಪ್ರಕರಣದ ವಾದವನ್ನು ಆಲಿಸಿ ತೀರ್ಪನ್ನು ಕಾಯ್ದರಿ ಸಿತ್ತು. ಈ ನಡುವೆ ಕಾಂಗ್ರೆಸ್ ಸಿಎಂ ಯಡಿಯೂರಪ್ಪನವರ ಹುಬ್ಬಳ್ಳಿಯ ಆಡಿಯೋವನ್ನು ಸಾಕ್ಷ್ಯವಾಗಿ ಪರಿಗಣಿಸಬೇಕೆಂದು ಮನವಿ ಮಾಡಿಕೊಂಡಿತ್ತು. ಕಾಂಗ್ರೆಸ್ ಪರ ವಕೀಲ ವಾದವನ್ನು ಆಲಿಸಿದ ಪೀಠ ತೀರ್ಪು ನೀಡುವ ಸಂದರ್ಭದಲ್ಲಿ ಆಡಿಯೋವನ್ನ ಸಾಕ್ಷ್ಯವನ್ನಾಗಿ ಪರಿಗಣಿಸಲಾಗುತ್ತದೆ…

ಚಾಮುಂಡಿಬೆಟ್ಟಕ್ಕೆ ರಾಜಕೀಯ ನಾಯಕರ ದಂಡು
ಮೈಸೂರು

ಚಾಮುಂಡಿಬೆಟ್ಟಕ್ಕೆ ರಾಜಕೀಯ ನಾಯಕರ ದಂಡು

November 9, 2019

ಮೈಸೂರು, ನ.8(ಆರ್‍ಕೆಬಿ)- ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಇಂದು ರಾಜಕೀಯ ನಾಯಕರು ಮತ್ತು ಅವರ ಅಭಿಮಾನಿಗಳು, ಕಾರ್ಯಕರ್ತರ ದಂಡೇ ತುಂಬಿ ಹೋಗಿತ್ತು. ಕಾರ್ತಿಕ ಮಾಸದ ವಿಶೇಷ ಶುಕ್ರವಾರದ ಹಿನ್ನೆಲೆ ಯಲ್ಲಿ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡ, ಮಾಜಿ ಸಚಿವ ಡಿ.ಕೆ.ಶಿವಕುಮಾರ್, ಶಾಸಕ ಜಿ.ಟಿ.ದೇವೇಗೌಡ, ಅನರ್ಹ ಶಾಸಕರಾದ ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಳ್ಳಿ ಇನ್ನಿತರರು ಚಾಮುಂಡಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಹೀಗಾಗಿ ಈ ನಾಯಕರೆಲ್ಲರೂ ಬಂದು ಹೋಗುವವ ರೆಗೂ ದೇವಾಲಯದ ಪ್ರಾಂಗಣ ಮತ್ತು…

ರಾಷ್ಟ್ರಪತಿ ಭೇಟಿಗೆ ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್  ನೇತೃತ್ವದಲ್ಲಿ ದೆಹಲಿಗೆ ನಿಯೋಗ: ಡಿ.ಕೆ.ಶಿವಕುಮಾರ್
ಮೈಸೂರು

ರಾಷ್ಟ್ರಪತಿ ಭೇಟಿಗೆ ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್  ನೇತೃತ್ವದಲ್ಲಿ ದೆಹಲಿಗೆ ನಿಯೋಗ: ಡಿ.ಕೆ.ಶಿವಕುಮಾರ್

November 9, 2019

ಮೈಸೂರು, ನ.8(ಆರ್‍ಕೆಬಿ)-  ಅನರ್ಹ ಶಾಸಕರ ಬಗ್ಗೆ ಬಿ.ಎಸ್.ಯಡಿಯೂರಪ್ಪ ಮಾತನಾಡಿರುವ ಆಡಿಯೋ ವಿಚಾರವಾಗಿ ರಾಷ್ಟ್ರಪತಿಗಳಿಗೆ ದೂರು ನೀಡಲು ದೆಹಲಿಗೆ ಹೋಗುವುದಕ್ಕೆ ಹೈಕಮಾಂಡ್‍ನಿಂದ ಮಾಹಿತಿ ಬಂದಿದೆ. ರಾಷ್ಟ್ರಪತಿಗಳು ಸಮಯ ಕೊಟ್ಟ ತಕ್ಷಣ ಭೇಟಿ ಮಾಡುತ್ತೇವೆ ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಶುಕ್ರವಾರ ಮೈಸೂರಿನಲ್ಲಿ ತಿಳಿಸಿದರು. ಸಿದ್ದರಾಮಯ್ಯ ಹಾಗೂ ದಿನೇಶ್ ಗುಂಡೂ ರಾವ್ ನೇತೃತ್ವದಲ್ಲಿ ನಿಯೋಗ ತೆರಳಲಿದ್ದು, ಕುಮಾರಸ್ವಾಮಿ, ದಿನೇಶ್ ಗುಂಡೂರಾವ್, ಸಿದ್ದರಾಮಯ್ಯ ಅವರೆಲ್ಲ ಈ ಪ್ರಕರಣದ ಅರ್ಜಿ ದಾರರಾಗಿದ್ದಾರೆ. ಈ ಬಗ್ಗೆ ಏನಾಗಿದೆ ಎಂಬ ಮಾಹಿತಿ ಇಲ್ಲ. ಮಾಧ್ಯಮಗಳಲ್ಲಿ ಬಂದಿದ್ದು…

ಆದಿಚುಂಚನಗಿರಿ ಶಾಖಾ ಮಠಕ್ಕೆ ಡಿಕೆಶಿ ಭೇಟಿ
ಮೈಸೂರು

ಆದಿಚುಂಚನಗಿರಿ ಶಾಖಾ ಮಠಕ್ಕೆ ಡಿಕೆಶಿ ಭೇಟಿ

November 9, 2019

ಮೈಸೂರು, ನ.8(ಆರ್‍ಕೆಬಿ)- ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಶುಕ್ರವಾರ ಮೈಸೂರಿನ ಬೋಗಾದಿಯಲ್ಲಿರುವ ಆದಿಚುಂಚನಗಿರಿ ಶಾಖಾ ಮಠಕ್ಕೆ ಭೇಟಿ ನೀಡಿ ಸೋಮನಾಥ ಸ್ವಾಮೀಜಿ ಅವರ ಆಶೀರ್ವಾದ ಪಡೆದುಕೊಂಡರು. ಮಠಕ್ಕೆ ಆಗಮಿ ಸಿದ ಡಿ.ಕೆ.ಶಿವಕುಮಾರ್ ಅವರಿಗೆ ಮಾಜಿ ಸಚಿವ, ಕೆ.ಆರ್.ನಗರ ಶಾಸಕ ಸಾ.ರಾ. ಮಹೇಶ್ ಅವರು ಶಾಲು ಹೊದಿಸಿ ಹಾರ ಹಾಕಿ ಸ್ವಾಗತಿಸಿದರು. ನಂತರ ಡಿಕೆಶಿ ಮಠದಲ್ಲಿ ದಿವಂಗತ ಶ್ರೀಗಳಾದ ಬಾಲಗಂಗಾಧರನಾಥ ಶ್ರೀಗಳ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಚಾಮರಾಜ ಕ್ಷೇತ್ರದ ಮಾಜಿ ಶಾಸಕ ವಾಸು, ಮಾಜಿ ಸಂಸದ ಆರ್.ಧ್ರುವನಾರಾಯಣ್ ಮೊದಲಾದವರು ಈ…

ಹೆಚ್.ಡಿ.ದೇವೇಗೌಡರ ಭೇಟಿ ಮಾಡದೇ ತೆರಳಿದ ಜಿಟಿಡಿ
ಮೈಸೂರು

ಹೆಚ್.ಡಿ.ದೇವೇಗೌಡರ ಭೇಟಿ ಮಾಡದೇ ತೆರಳಿದ ಜಿಟಿಡಿ

November 9, 2019

ಚಾಮುಂಡೇಶ್ವರಿ ದೇವಾಲಯಕ್ಕೆ ಡಿ.ಕೆ.ಶಿವಕುಮಾರ್ ಅವರೊಂದಿಗೆ ಬಂದಿದ್ದ ಶಾಸಕ ಜಿ.ಟಿ.ದೇವೇಗೌಡರು ತಮ್ಮ ಪೂಜೆ ಮುಗಿಯುತ್ತಿದ್ದಂತೆ ಬೆಟ್ಟದಿಂದ ನಿರ್ಗ ಮಿಸಿದರು. ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಬರುವ ವಿಚಾರ ತಿಳಿದಿ ದ್ದರೂ ಅವರು ಬರುವ ಕೆಲ ನಿಮಿಷಗಳ ಮೊದಲೇ ಅಲ್ಲಿಂದ ನಿರ್ಗಮಿಸುವ ಮೂಲಕ ಜೆಡಿಎಸ್ ನಾಯಕರ ಬಗೆಗಿನ ತಮ್ಮ ಮುನಿಸು ಇನ್ನೂ ಶಮನವಾಗಿಲ್ಲ ಎಂಬುದನ್ನು ತೋರಿಸಿದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಸೆಣಸಿ, ಭಾರೀ ಅಂತರದಿಂದ ಜಯಗಳಿಸಿದ್ದ ಜಿ.ಟಿ.ದೇವೇಗೌಡರು ಚುನಾವಣಾ ಪೂರ್ವದ ಭರವಸೆಯಂತೆ ಜೆಡಿಎಸ್…

ನ.18ರಿಂದ ರಂಗಪಯಣ: ರಾಜ್ಯದ 9 ಜಿಲ್ಲೆಯ 11 ಕಡೆ ಪ್ರಮುಖ ಮೂರು ನಾಟಕಗಳ ಪ್ರದರ್ಶನ
ಮೈಸೂರು

ನ.18ರಿಂದ ರಂಗಪಯಣ: ರಾಜ್ಯದ 9 ಜಿಲ್ಲೆಯ 11 ಕಡೆ ಪ್ರಮುಖ ಮೂರು ನಾಟಕಗಳ ಪ್ರದರ್ಶನ

November 9, 2019

ಮೈಸೂರು,ನ.8(ಎಂಟಿವೈ)- ರಂಗಾಯಣದ ವತಿ ಯಿಂದ ಸಂಚಾರಿ ರಂಗಘಟಕದ ಕಲಾವಿದರುಗಳಿಂದ ನ.18ರಿಂದ ಡಿ.24ವರೆಗೆ ರಾಜ್ಯದ 9 ಜಿಲ್ಲೆಗಳ 11 ಸ್ಥಳ ಗಳಲ್ಲಿ 3 ನಾಟಕಗಳ ಪ್ರದರ್ಶಿಸುವ `ರಂಗಪಯಣ’ ಹಮ್ಮಿಕೊಳ್ಳಲಾಗಿದೆ ಎಂದು ರಂಗಾಯಣ ಜಂಟಿ ನಿರ್ದೇಶಕ ವಿ.ಎಸ್.ಮಲ್ಲಿಕಾರ್ಜುನ ಸ್ವಾಮಿ ತಿಳಿಸಿದ್ದಾರೆ. ಮೈಸೂರು ರಂಗಾಯಣ ಸಭಾಂಗಣದಲ್ಲಿ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ರಂಗಾಯಣದ ಕಿರಿಯ ಕಲಾವಿದರ ಒಳಗೊಂಡಿರುವ ಸಂಚಾರಿ ರಂಗಘಟಕ, ರಾಜ್ಯದ ಎಲ್ಲೆಡೆ ಪ್ರವಾಸ ಕೈಗೊಂಡು 3 ನಾಟಕಗಳನ್ನು ಪ್ರದರ್ಶಿ ಸಲು ಮುಂದಾಗಿದೆ. ಹಿರಿಯ ರಂಗನಿರ್ದೇಶಕ ಚಿದಂಬರ ರಾವ್ ಜಂಬೆ ನಿರ್ದೇಶನದ…

ನಿಂಬಾಳ್ಕರ್, ಅಜಯ್ ಹಿಲೋರಿ ಸೇರಿ 9 ಮಂದಿಯ ಮೇಲೆ ಸಿಬಿಐ ದಾಳಿ
ಮೈಸೂರು

ನಿಂಬಾಳ್ಕರ್, ಅಜಯ್ ಹಿಲೋರಿ ಸೇರಿ 9 ಮಂದಿಯ ಮೇಲೆ ಸಿಬಿಐ ದಾಳಿ

November 9, 2019

ಬೆಂಗಳೂರು: ಐಎಂಎ ಬಹುಕೋಟಿ ವಂಚನೆ ಪ್ರಕರಣ ಸಂಬಂಧ ಐಪಿಎಸ್ ಅಧಿಕಾರಿಗಳಾದ ಹೇಮಂತ್ ನಿಂಬಾಳ್ಕರ್, ಅಜಯ್ ಹಿಲೋರಿ ಸೇರಿದಂತೆ 9 ಮಂದಿ ಸರ್ಕಾರಿ ಅಧಿಕಾರಿಗಳ ನಿವಾಸದ ಮೇಲೆ ಸಿಬಿಐ ದಾಳಿ ನಡೆಸಿದೆ. ಇಂದು ಬೆಳಿಗ್ಗೆಯೇ ಬೆಂಗಳೂರಿನ 11 ಕಡೆ, ಮಂಡ್ಯ, ರಾಮನಗರ ಮತ್ತು ಉತ್ತರ ಪ್ರದೇಶದ ಮೀರತ್ ನಗರದ ಒಂದೊಂದು ಕಡೆ ದಾಳಿ ನಡೆಸಿದ ಸಿಬಿಐ ಅಧಿಕಾರಿಗಳು ಮಹತ್ವದ ದಾಖಲೆಗಳನ್ನು ಕಲೆ ಹಾಕಿದ್ದಾರೆ. ಯಾರ ಮೇಲೆ ದಾಳಿ: ಸಿಐಡಿ ಆರ್ಥಿಕ ಅಪರಾಧ ವಿಭಾಗದ ಐಜಿ ಹೇಮಂತ್ ನಿಂಬಾಳ್ಕರ್, ಸಿಐಡಿ…

ಈದ್ ಮಿಲಾದ್, ಟಿಪ್ಪು ಜಯಂತಿ ಹಿನ್ನೆಲೆ ಮೈಸೂರಲ್ಲಿ ನಿಷೇಧಾಜ್ಞೆ
ಮೈಸೂರು

ಈದ್ ಮಿಲಾದ್, ಟಿಪ್ಪು ಜಯಂತಿ ಹಿನ್ನೆಲೆ ಮೈಸೂರಲ್ಲಿ ನಿಷೇಧಾಜ್ಞೆ

November 9, 2019

ಮೈಸೂರು, ನ. 8- ಈದ್ ಮಿಲಾದ್ ಮತ್ತು ಟಿಪ್ಪು ಜಯಂತಿ ಹಿನ್ನೆಲೆಯಲ್ಲಿ ಮೈಸೂರು ನಗರದಲ್ಲಿ ನವೆಂಬರ್ 9ರಂದು ಮಧ್ಯರಾತ್ರಿ 12 ಗಂಟೆಯಿಂದ ನವೆಂಬರ್ 10ರಂದು ಮಧ್ಯರಾತ್ರಿ 12 ಗಂಟೆವರೆಗೆ ಕಲಂ 144 ಸಿಆರ್‍ಪಿಸಿ ಕಾಯ್ದೆಯಡಿ ನಿಷೇಧಾಜ್ಞೆ ಹೊರಡಿಸಲಾಗಿದೆ ಎಂದು ಮೈಸೂರು ನಗರ ಪೊಲೀಸ್ ಆಯುಕ್ತ ಕೆ.ಟಿ. ಬಾಲಕೃಷ್ಣ ತಿಳಿಸಿದ್ದಾರೆ. ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಕೋಮು ಸೌಹಾರ್ದತೆ ಕಾಪಾಡುವ ದೃಷ್ಟಿಯಿಂದ ಈದ್ ಮಿಲಾದ್ ಹಬ್ಬದ ಆಚರಣೆ, ಕಾರ್ತಿಕ ಮಾಸ ಹಾಗೂ ದೇವಸ್ಥಾನದ ಕಾರ್ಯಕ್ರಮಗಳನ್ನು ಹೊರತುಪಡಿಸಿ, ಯಾವುದೇ ರೀತಿಯ…

ಸುಲಭವಾಗಿ ಉದ್ಯಮ ನಡೆಸಲು ಭಾರತಕ್ಕೆ ಬನ್ನಿ
ಮೈಸೂರು

ಸುಲಭವಾಗಿ ಉದ್ಯಮ ನಡೆಸಲು ಭಾರತಕ್ಕೆ ಬನ್ನಿ

November 4, 2019

ಬ್ಯಾಂಕಾಕ್,ನ.೩-ಭಾರತದಲ್ಲಿ ಸುಲಭವಾಗಿ ಉದ್ಯಮ ನಡೆಸಲು ಇದು ಸೂಕ್ತ ಸಮಯ. ಹೂಡಿಕೆದಾರರು ಭಾರತದಲ್ಲಿ ಹೂಡಿಕೆ ಮಾಡಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ವಿದೇಶಿ ಹೂಡಿಕೆದಾರರಿಗೆ ಕರೆ ನೀಡಿದರು. ಆದಿತ್ಯ ಬಿರ್ಲಾ ಗ್ರೂಪ್‌ನ ಸುವರ್ಣ ವರ್ಷಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕ್ರಿಯಾತ್ಮಕ ವಾಗಿ ಉದ್ಯಮ ಆರಂಭಿಸಲು ಭಾರತಕ್ಕೆ ಬನ್ನಿ. ಉತ್ತಮ ಪ್ರವಾಸಿ ಸ್ಥಳಗಳು ಹಾಗೂ ಉತ್ತಮ ಆತಿಥ್ಯ ಭಾರತದಲ್ಲಿ ಸಿಗುತ್ತದೆ. ಭಾರತವು ನಿಮ್ಮನ್ನು ಮುಕ್ತ ಬಾಹುಗಳಿಂದ ಅಪ್ಪಿಕೊಳ್ಳಲು ಕಾಯುತ್ತಿದೆ ಎಂದು ಮೋದಿ ವಿದೇಶಿ ಹೂಡಿಕೆದಾರರನ್ನು ಆಹ್ವಾನಿಸಿದರು. ಭಾರತ ಸರ್ಕಾರದ…

ಕಾರಂಜಿಕೆರೆ ಅಂಗಳದಲ್ಲಿ ಮತ್ತೆ `ಚಿಟ್ಟೆ ಪಾರ್ಕ್’
ಮೈಸೂರು

ಕಾರಂಜಿಕೆರೆ ಅಂಗಳದಲ್ಲಿ ಮತ್ತೆ `ಚಿಟ್ಟೆ ಪಾರ್ಕ್’

November 4, 2019

ಮೈಸೂರು,ನ.೩- ಶುದ್ಧ ನೀರಿನಿಂದ ತುಂಬಿ ತುಳು ಕುತ್ತಾ ಸೊಬಗನ್ನು ಹೆಚ್ಚಿಸಿಕೊಂಡಿರುವ ಮೈಸೂರಿನ ಕಾರಂಜಿಕೆರೆ ಅಂಗಳದಲ್ಲಿ ಇದೀಗ ಮತ್ತೇ `ಚಿಟ್ಟೆಗಳ ಉದ್ಯಾನ’ ತಲೆ ಎತ್ತಿದ್ದು, ೨೫ಕ್ಕೂ ಹೆಚ್ಚಿನ ಬಗೆಯ ಚಿಟ್ಟೆಗಳ ಕಲರವ ಆರಂಭವಾಗಿ ಪ್ರವಾಸಿಗರ ಮನಸೂರೆಗೊಳ್ಳುತ್ತಿವೆ. ಚಿಣ್ಣರೂ ಸೇರಿದಂತೆ ಎಲ್ಲಾ ವಯೋಮಾನದವರ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದ `ಚಿಟ್ಟೆಗಳ ಉದ್ಯಾ ನವನ’ ಮತ್ತೊಮ್ಮೆ ತಲೆಎತ್ತಿದೆ. ೨ ಲಕ್ಷ ರೂ. ವೆಚ್ಚದಲ್ಲಿ ರೂಪುಗೊಂಡಿರುವ ಚಿಟ್ಟೆ ಉದ್ಯಾನದಲ್ಲಿ ಸೆಲ್ಫಿ ಪಾಯಿಂಟ್, ಚಿಟ್ಟೆಯ ಮೈಯುಳ್ಳ ಅಡವಿ ದೇವಿಯ ಮುಖ ಇರುವ ಪ್ರತಿಮೆ, ಸಣ್ಣ ಜಲಪಾತದ…

1 138 139 140 141 142 330
Translate »