ಕಾರಂಜಿಕೆರೆ ಅಂಗಳದಲ್ಲಿ ಮತ್ತೆ `ಚಿಟ್ಟೆ ಪಾರ್ಕ್’
ಮೈಸೂರು

ಕಾರಂಜಿಕೆರೆ ಅಂಗಳದಲ್ಲಿ ಮತ್ತೆ `ಚಿಟ್ಟೆ ಪಾರ್ಕ್’

November 4, 2019

ಮೈಸೂರು,ನ.೩- ಶುದ್ಧ ನೀರಿನಿಂದ ತುಂಬಿ ತುಳು ಕುತ್ತಾ ಸೊಬಗನ್ನು ಹೆಚ್ಚಿಸಿಕೊಂಡಿರುವ ಮೈಸೂರಿನ ಕಾರಂಜಿಕೆರೆ ಅಂಗಳದಲ್ಲಿ ಇದೀಗ ಮತ್ತೇ `ಚಿಟ್ಟೆಗಳ ಉದ್ಯಾನ’ ತಲೆ ಎತ್ತಿದ್ದು, ೨೫ಕ್ಕೂ ಹೆಚ್ಚಿನ ಬಗೆಯ ಚಿಟ್ಟೆಗಳ ಕಲರವ ಆರಂಭವಾಗಿ ಪ್ರವಾಸಿಗರ ಮನಸೂರೆಗೊಳ್ಳುತ್ತಿವೆ.

ಚಿಣ್ಣರೂ ಸೇರಿದಂತೆ ಎಲ್ಲಾ ವಯೋಮಾನದವರ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದ `ಚಿಟ್ಟೆಗಳ ಉದ್ಯಾ ನವನ’ ಮತ್ತೊಮ್ಮೆ ತಲೆಎತ್ತಿದೆ. ೨ ಲಕ್ಷ ರೂ. ವೆಚ್ಚದಲ್ಲಿ ರೂಪುಗೊಂಡಿರುವ ಚಿಟ್ಟೆ ಉದ್ಯಾನದಲ್ಲಿ ಸೆಲ್ಫಿ ಪಾಯಿಂಟ್, ಚಿಟ್ಟೆಯ ಮೈಯುಳ್ಳ ಅಡವಿ ದೇವಿಯ ಮುಖ ಇರುವ ಪ್ರತಿಮೆ, ಸಣ್ಣ ಜಲಪಾತದ ಕಾಮಗಾರಿ ಪೂರ್ಣ ಗೊಂಡಿದ್ದು, ಚಿಟ್ಟೆಗಳ ಆಕರ್ಷಣೆಗೆ ಬೇಕಾದ ಗಿಡ-ಮರ ಬೆಳೆಸಲಾಗಿದೆ. ಈಗಾಗಲೇ ವಿವಿಧ ಬಣ್ಣದ ಸಾವಿರಾರು ಚಿಟ್ಟೆಗಳು ಉದ್ಯಾನವನದಲ್ಲೇ ಬೀಡು ಬಿಟ್ಟಿದ್ದು, ಪ್ರವಾಸಿ ಗರಿಗೆ ಮುದ ನೀಡುತ್ತಿವೆ. ಕಾರಂಜಿ ಕೆರೆಯ ಆವರಣ ದಲ್ಲಿ `ನ್ಯಾಚ್ಯುರಲ್ ಹಿಸ್ಟರಿ ಮ್ಯೂಸಿಯಂ’ ಕಟ್ಟಡಕ್ಕೆ ಹೊಂದಿಕೊAಡAತೆ ಕಳೆದ ೮ ವರ್ಷದ ಹಿಂದೆಯೇ ಚಿಟ್ಟೆಗಳ ಉದ್ಯಾನವನ ನಿರ್ಮಿಸಲಾಗಿತ್ತು. ಈ ಉದ್ಯಾ ನವನದಲ್ಲಿ ಬಣ್ಣಬಣ್ಣದ ಬಗೆ ಬಗೆಯ ಚಿಟ್ಟೆಗಳು ಹೆಚ್ಚಿನ ಸಂಖ್ಯೆಯಲ್ಲಿ ಇದ್ದವು. ಚಿಟ್ಟೆಗಳ ಸೊಬಗನ್ನು ನೋಡು ವುದಕ್ಕಾಗಿಯೇ ವಿವಿಧೆಡೆಯಿಂದ ಪ್ರವಾಸಿಗರು ಆಗಮಿ ಸುತ್ತಿದ್ದರು. ಅಲ್ಲದೇ ಚಿಟ್ಟೆಗಳ ಉದ್ಯಾನ ಪ್ರವಾಸಿಗರ ಆಕರ್ಷ ಣೀಯ ಕೇಂದ್ರ ಬಿಂದುವೂ ಆಗಿತ್ತು. ಆದರೆ ಕಳೆದ ೪ ವರ್ಷದ ಹಿಂದೆ ಕಾರಂಜಿ ಕೆರೆಗೆ ಭೇಟಿ ನೀಡಿದ್ದ ವ್ಯಕ್ತಿ ಯೊಬ್ಬ ಚಿಟ್ಟೆ ಉದ್ಯಾನದ ಬಳಿ ಆತ್ಮಹತ್ಯೆಗೆ ಶರಣಾ ಗಿದ್ದ. ಆ ಘಟನೆಯ ನಂತರ ಪ್ರವಾಸಿಗರನ್ನು ಚಿಟ್ಟೆ ಉದ್ಯಾನದತ್ತ ಹೋಗಲು ನಿರ್ಬಂಧಿಸಲಾಗಿತ್ತು. ಇದ ರಿಂದ ನಿರ್ವಹಣೆ ಕೊರತೆಯಿಂದಾಗಿ ಚಿಟ್ಟೆ ಉದ್ಯಾನವನ ಸಂಪೂರ್ಣವಾಗಿ ನಶಿಸಿಹೋಗಿತ್ತು. ಪ್ರವಾಸಿಗರಿಂದ ಬೇಡಿಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಕೆರೆಯ ವಾತಾವರಣವೂ ಸುಂದರವಾಗಿರುವುದರಿAದ ಮತ್ತೆ ಚಿಟ್ಟೆ ಉದ್ಯಾನವನಕ್ಕೆ ಮರು ಜೀವ ನೀಡಲು ಮೃಗಾಲಯ ಮುಂದಾಗಿತ್ತು. ಕಳೆದ ೨ ತಿಂಗಳಿAದ ಕಾಮಗಾರಿ ನಡೆಸಿ, ಇದೀಗ ಉದ್ಯಾ ನವನ ಪ್ರವಾಸಿಗರ ವೀಕ್ಷಣೆಗೆ ಸಿದ್ಧವಾಗಿರುವುದು ಪರಿಸರ ಪ್ರೇಮಿಗಳಲ್ಲಿ ಹರ್ಷ ತಂದಿದೆ.

ಎಲ್ಲಿ?: ಈ ಹಿಂದೆ ಇದ್ದ ಸ್ಥಳದಲ್ಲಿಯೇ ಚಿಟ್ಟೆ ಉದ್ಯಾ ನವನವನ್ನು ನಿರ್ಮಿಸಲಾಗಿದೆ. ಸುಮಾರು ಒಂದು ಗುಂಟೆ ವಿಸ್ತೀರ್ಣವಿರುವ ಸಣ್ಣ ದ್ವೀಪದಲ್ಲಿ ಚಿಟ್ಟೆ ಉದ್ಯಾನ ತಲೆ ಎತ್ತಿದೆ. ಈ ಹಿಂದೆ ಇದ್ದ ಚಿಟ್ಟೆ
ಉದ್ಯಾನದಲ್ಲಿ ಪ್ರವಾಸಿಗರು ಕುಳಿತುಕೊಳ್ಳುವುದಕ್ಕೆ ಅವಕಾಶ ಮಾಡಿಕೊಡಲಾಗುತ್ತಿತ್ತು. ಆದರೆ ಈ ಬಾರಿ ಉದ್ಯಾನದಲ್ಲಿ ಕುಳಿತುಕೊಳ್ಳಲು ಅವಕಾಶ ನೀಡದೇ ಕೇವಲ ಚಿಟ್ಟೆಗಳನ್ನು ನೋಡಿಕೊಂಡು ವಾಪಸ್ಸಾಗುವುದಕ್ಕೆ ವ್ಯವಸ್ಥೆ ಮಾಡುವ ಉದ್ದೇಶ ಹೊಂದಲಾಗಿದೆ. ಇದು ಚಿಟ್ಟೆಗಳ ಸಂರಕ್ಷಣೆಯಲ್ಲಿ ಅಗತ್ಯವೂ ಆಗಿದೆ. ಪ್ರವಾಸಿಗರು ಅಲ್ಲಿಯೇ ಕುಳಿತುಕೊಂಡರೆ ಚಿಟ್ಟೆಗಳ ಸ್ವೇಚ್ಛಾಚಾರಕ್ಕೆ ಅಡಚಣೆಯಾಗುತ್ತದೆ. ಇದನ್ನು ಮನಗಂಡು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ.

೨೫ ಬಗೆಯ ಚಿಟ್ಟೆ: ಈಗಾಗಲೇ ಮೈಸೂರು ಭಾಗದಲ್ಲಿ ೧೦ ಬಗೆಯ ಚಿಟ್ಟೆಗಳಿವೆ. ಚಿಟ್ಟೆ ಉದ್ಯಾನದಲ್ಲಿ ಬೇರೆ ಬೇರೆ ಪ್ರದೇಶಗಳಲ್ಲಿ ಇರುವ ಚಿಟ್ಟೆಗಳನ್ನು ತಂದು ಪಾಲನೆ ಮಾಡುವುದಕ್ಕೆ ನಿರ್ಧರಿಸಲಾಗಿದೆ. ಅಲ್ಲದೇ ಚಿಟ್ಟೆಗಳ ಮನೆಯನ್ನು ನಿರ್ಮಿಸಿ ಅದರಲ್ಲಿ ಚಿಟ್ಟೆಗಳನ್ನು ಬೆಳೆಸಿ ಈ ಉದ್ಯಾನದಲ್ಲಿ ಬಿಡಲು ಚಿಂತಿಸಲಾಗಿದೆ. ಬೇರೆ ಬೇರೆ ಸ್ಥಳಗಳಿಂದ ವಿವಿಧ ತಳಿಯ ಚಿಟ್ಟೆಗಳ ಮೊಟ್ಟೆಗಳನ್ನು ತಂದು ಮರಿ ಮಾಡಿಸಿದ ನಂತರ ಚಿಟ್ಟೆ ಪಾರ್ಕ್ನಲ್ಲಿ ಬಿಟ್ಟು, ಅದರ ಅಂದವನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ.

ಚಿಟ್ಟೆಗಳ ಆಕರ್ಷಣೆಗೆ ಕ್ರಮ: ಕಾರಂಜಿ ಕೆರೆಯ ದ್ವೀಪದಲ್ಲಿ ಚಿಟ್ಟೆಗಳನ್ನು ಸೆಳೆಯುವುದ ಕ್ಕಾಗಿ ವಿವಿಧ ಬಗೆಯ ಹೂವಿನ ಗಿಡ ಹಾಗೂ ಹಣ್ಣಿನ ಗಿಡವನ್ನು ಬೆಳೆಸುವುದಕ್ಕೆ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ತಜ್ಞರು ಸಲಹೆ ಪಡೆದು, ವಿವಿಧ ಹೂವು, ಹಣ್ಣುಗಳ ಗಿಡ ಬೆಳೆಸಲಾಗಿದೆ. ಅದರಲ್ಲೂ ಗಸಗಸೆ ಗಿಡವನ್ನೂ ಬೆಳೆಸಲಾಗಿದ್ದು, ವಿವಿಧ ಚಿಟ್ಟೆಗಳ ಆಕರ್ಷಣೆ ಕೇಂದ್ರ ಬಿಂದುವಾಗಿದೆ. ಇದರೊಂದಿಗೆ ಈ ಹಿಂದೆ ಚಿಟ್ಟೆಗಳ ಉದ್ಯಾನದಲ್ಲಿ ಬೆಳೆಸಲಾಗಿದ್ದ ಗಿಡಗಳನ್ನೇ ಮತ್ತೊಮ್ಮೆ ಬೆಳೆಸುವುದಕ್ಕೆ ಕ್ರಮ ಕೈಗೊಳ್ಳಲಾಗಿದೆ. ತ್ವರಿತ ಗತಿಯಲ್ಲಿ ಚಿಟ್ಟೆಗಳ ಆಕರ್ಷಣೆಗೆ ಬೇಕಾದ ಕಾಮಗಾರಿಯನ್ನು ನಡೆಸುವುದಕ್ಕೆ ಮೃಗಾಲಯ ಕ್ರಮ ಕೈಗೊಂಡಿರುವುದರಿAದ ತಿಂಗಳೊಳಗೆ ಚಿಟ್ಟೆ ಉದ್ಯಾನ ವೀಕ್ಷಣೆಗೆ ಲಭ್ಯವಾಗಲಿದೆ.

ಎಂ.ಟಿ.ಯೋಗೇಶ್ ಕುಮಾರ್

Translate »