ಚಾಮುಂಡಿಬೆಟ್ಟಕ್ಕೆ ರಾಜಕೀಯ ನಾಯಕರ ದಂಡು
ಮೈಸೂರು

ಚಾಮುಂಡಿಬೆಟ್ಟಕ್ಕೆ ರಾಜಕೀಯ ನಾಯಕರ ದಂಡು

November 9, 2019

ಮೈಸೂರು, ನ.8(ಆರ್‍ಕೆಬಿ)- ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಇಂದು ರಾಜಕೀಯ ನಾಯಕರು ಮತ್ತು ಅವರ ಅಭಿಮಾನಿಗಳು, ಕಾರ್ಯಕರ್ತರ ದಂಡೇ ತುಂಬಿ ಹೋಗಿತ್ತು.

ಕಾರ್ತಿಕ ಮಾಸದ ವಿಶೇಷ ಶುಕ್ರವಾರದ ಹಿನ್ನೆಲೆ ಯಲ್ಲಿ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡ, ಮಾಜಿ ಸಚಿವ ಡಿ.ಕೆ.ಶಿವಕುಮಾರ್, ಶಾಸಕ ಜಿ.ಟಿ.ದೇವೇಗೌಡ, ಅನರ್ಹ ಶಾಸಕರಾದ ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಳ್ಳಿ ಇನ್ನಿತರರು ಚಾಮುಂಡಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

ಹೀಗಾಗಿ ಈ ನಾಯಕರೆಲ್ಲರೂ ಬಂದು ಹೋಗುವವ ರೆಗೂ ದೇವಾಲಯದ ಪ್ರಾಂಗಣ ಮತ್ತು ಹೊರಾ ವರಣ ಆಯಾ ನಾಯಕರ ಅಭಿಮಾನಿಗಳು, ಪಕ್ಷದ ಕಾರ್ಯಕರ್ತರು, ಮುಖಂಡರಿಂದ ತುಂಬಿಹೋಗಿತ್ತು.

ಮೊದಲಿಗೆ ಅನರ್ಹ ಶಾಸಕರಾದ ಗೋಕಾಕ್‍ನ ರಮೇಶ್ ಜಾರಕಿಹೊಳಿ, ಅಥಣಿಯ ಮಹೇಶ್ ಕುಮ ಟಳ್ಳಿ ಬೆಳಿಗ್ಗೆ 8.30ರ ವೇಳೆಗೆ ದೇವಸ್ಥಾನಕ್ಕೆ ಆಗಮಿಸಿ, ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ನಂತರ 9 ಗಂಟೆಗೆ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಚಾಮುಂ ಡೇಶ್ವರಿ ದೇವಸ್ಥಾನಕ್ಕೆ ತೆರಳಿ ರಾಜ್ಯದ ಜನರ ಪರವಾಗಿ ವಿಶೇಷ ಪೂಜೆ ಸಲ್ಲಿಸಿದರು. ಚಾಮುಂಡಿದೇವಿಯ ಆಶೀರ್ವಾದ ಬೇಡಿದರು. ಅವರೊಂದಿಗೆ ಚಾಮುಂಡೇ ಶ್ವರಿ ಶಾಸಕ ಜಿ.ಟಿ.ದೇವೇಗೌಡ, ಚಾಮರಾಜನಗರ ಮಾಜಿ ಸಂಸದ ಆರ್.ಧ್ರುವನಾರಾಯಣ್, ಕೊಳ್ಳೇ ಗಾಲ ಮಾಜಿ ಶಾಸಕ ಎಸ್.ಬಾಲರಾಜ್, ಮೈಸೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್ ಮೊದಲಾದವರು ಇದ್ದರು. ಡಿ.ಕೆ.ಶಿವಕುಮಾರ್ ಭೇಟಿ ವೇಳೆ ದೇವಾಲಯದ ಹೊರಗೆ ಅವರ ಅಭಿಮಾನಿ ಗಳು ಡಿಕೆ ಪರ ಘೋಷಣೆಗಳನ್ನು ಕೂಗಿದರು. ಬಳಿಕ ಜೆಡಿಎಸ್ ರಾಷ್ಟ್ರೀಯ ನಾಯಕ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ತಮ್ಮ ಧರ್ಮಪತ್ನಿ ಚೆನ್ನಮ್ಮ ದೇವೇಗೌಡ ಅವರೊಂದಿಗೆ ದೇವಸ್ಥಾನಕ್ಕೆ ಭೇಟಿ ನೀಡಿ ಚಾಮುಂಡಿದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.

ಸಿದ್ದರಾಮಯ್ಯ, ನನ್ನ ನಡುವೆ ಹೊಂದಾಣಿಕೆ ಕೊರತೆ ಇಲ್ಲ
ಮೈಸೂರು, ನ.8(ಆರ್‍ಕೆಬಿ)- ತಮ್ಮ ಮತ್ತು ಸಿದ್ದ ರಾಮಯ್ಯ ನಡುವೆ ಹೊಂದಾಣಿಕೆ ಕೊರತೆ ಇರುವ ಬಗ್ಗೆ ಮಾಜಿ ಸಚಿವರೂ ಆದ ಶಾಸಕ ಡಿ.ಕೆ.ಶಿವ ಕುಮಾರ್ ಸ್ಪಷ್ಟವಾಗಿ ತಳ್ಳಿ ಹಾಕಿದರು.

ಶುಕ್ರವಾರ ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿ ಚಾಮುಂಡಿ ದೇವಿಯ ದರ್ಶನ ಪಡೆದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‍ನಲ್ಲಿ ಯಾವುದೇ ಗುಂಪು ಇಲ್ಲ. ಸಿದ್ದ ರಾಮಯ್ಯ ಮತ್ತು ತಮ್ಮ ನಡುವೆ ಹೊಂದಾಣಿಕೆಯ ಕೊರತೆ ಇಲ್ಲ. ಅವರು ಪ್ರತಿಪಕ್ಷದ ನಾಯಕ, ನಾನು ಕಾರ್ಯಕರ್ತ. ನಮ್ಮ ರಾಷ್ಟ್ರೀಯ ಮತ್ತು ರಾಜ್ಯ ನಾಯಕರು ನೀಡುವ ಮಾರ್ಗದರ್ಶನದಂತೆ ಕೆಲಸ ಮಾಡುವುದು ನನ್ನ ಕೆಲಸ ಎಂದು ಸ್ಪಷ್ಟಪಡಿಸಿದರು.

ನನ್ನ ಮುಂದಿನ ನಡೆ ಕುರಿತಂತೆ ಇನ್ನೂ ಕಾಯ ಬೇಕು. ನನ್ನ ದಿನಚರಿ ರಾಜ್ಯದ ಜನರ ಒಳಿತಿಗಾಗಿಯೇ ಇರುತ್ತದೆಯೇ ಹೊರತು, ನಾನು ಯಾರಿಗೂ ಕೆಟ್ಟದ್ದಾಗಲಿ ಎಂದು ಹೇಳುವುದಿಲ್ಲ. ವಿಧಾನಸೌಧದಲ್ಲಿ ರುವ ನ್ಯಾಯದ ತಕ್ಕಡಿ ಸರಿಯಾಗಿ ತೂಗುತ್ತದೆಂಬ ವಿಶ್ವಾಸವಿದೆ ಎಂದರು. ಚಕ್ರ ತಿರುಗಿಸುವುದು ನನಗೂ ಗೊತ್ತಿದೆ ಎಂದು ನಿನ್ನೆ ಕಾಂಗ್ರೆಸ್ ಸಮಾರಂಭದಲ್ಲಿ ಹೇಳಿದುದರ ಮರ್ಮವೇನು? ಎಂಬ ಪ್ರಶ್ನೆಗೆ ಪ್ರತಿ ಕ್ರಿಯಿಸಿದ ಅವರು, ನಾನು ರಾಜಕಾರಣಿ ಅಲ್ಲವೇ? ರಾಜಕಾರಣದಲ್ಲಿ ಸಮಯ ಬರಬೇಕು. ಅದಕ್ಕಾಗಿ ಕಾಯಬೇಕು ಎಂದರು. ಇದು ಬಸವನ ನಾಡು, ನುಡಿದಂತೆ ನಡೆಯುವುದಾಗಿ ಮುಖ್ಯಮಂತ್ರಿ ಹೇಳಿ ದ್ದಾರೆ. ನುಡಿದಂತೆ ನಡೆಯಬೇಕು. ಎಂದ ಅವರು, ಮೈತ್ರಿ ಸರ್ಕಾರದ ಪತನದ ನಂತರದ ಬೆಳವಣಿಗೆ ಗಳ ಬಗ್ಗೆ ಸಮಯ ಬಂದರೆ ಎಲ್ಲವನ್ನೂ ತಿಳಿಸುವು ದಾಗಿ ಹೇಳಿದರು. ಜೈಲು ವಾಸದ ಅನುಭವ ಕುರಿ ತಂತೆಯೂ ದಾಖಲೆ ಮಾಡುವುದು ಖಂಡಿತ ಎಂದರು. ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿದ ಬಗ್ಗೆ ತಿಳಿಸಿದ ಅವರು, ಮೈಸೂರು ಬೆಟ್ಟದ ಚಾಮುಂಡಿ ದೇವಿ ದುಃಖಗಳನ್ನು ದೂರ ಮಾಡುವ ದೇವಿ. ನಮ್ಮ ನಾಡಿಗೆ, ನಮ್ಮ ಪರಿವಾರಕ್ಕೆ, ರಾಜ್ಯದ ಜನ ತೆಗೆ ಎಲ್ಲರಿಗೂ ಒಳ್ಳೆಯದಾಗಲಿ ಎಂದು ಬೇಡಲು ಬಂದೆ. ಅನೇಕ ಸ್ನೇಹಿತರು, ಅಭಿಮಾನಿಗಳೂ, ಸಹಸ್ರಾರು ಜನರು ಪಕ್ಷ ಭೇದ ಬಿಟ್ಟು ನಾನು ಸಂಕಷ್ಟ ದಲ್ಲಿದ್ದ ವೇಳೆ ನನಗಾಗಿ ಪೂಜೆ ಮಾಡಿ, ಹರಿಕೆ ಕಟ್ಟಿ ಕೊಂಡಿದ್ದಾರೆ. ಅಂತಹ ಎಲ್ಲರಿಗೂ ಒಳ್ಳೆಯದಾಗಲಿ ಎಂದು ದೇವಿಯಲ್ಲಿ ಪ್ರಾರ್ಥಿಸಿದ್ದಾಗಿ ತಿಳಿಸಿದರು.

Translate »