ಗೋಣಿಕೊಪ್ಪ, ನ.೩-ಕೊಡಗಿನಲ್ಲಿ ವಿವಿಧ ರಾಜ್ಯಗಳ ಯುವಕ-ಯುವತಿಯರ ರೇವ್ ಪಾರ್ಟಿ ನಡೆಯುತ್ತಿರುವುದು ಬೆಳಕಿಗೆ ಬಂದಿದ್ದು, ವಿರಾಜ ಪೇಟೆ ತಾಲೂಕು ಪೊನ್ನಂಪೇಟೆ ಸಮೀಪದ ನಲ್ಲೂರು ಗ್ರಾಮದ ಹೋಂ ಸ್ಟೇನಲ್ಲಿ ರೇವ್ ಪಾರ್ಟಿ ಆಯೋಜಿಸಿದ್ದ ಹೈದರಾಬಾದ್‌ನ ಇಬ್ಬರು ವಿದ್ಯಾರ್ಥಿಗಳು ಸೇರಿದಂತೆ ಮೂವ ರನ್ನು ಪೊಲೀಸರು ಬಂಧಿಸಿದ್ದಾರೆ. ಪಾರ್ಟಿಯಲ್ಲಿ ಬಳಸುತ್ತಿದ್ದ ಗಾಂಜಾ ಮತ್ತು ಮದ್ಯವನ್ನು ವಶಪಡಿಸಿಕೊಂಡಿ ರುವ ಪೊಲೀಸರು, ಪಾರ್ಟಿ ನಡೆಯುತ್ತಿದ್ದ ವೈಲ್ಡ್ ಹೆವನ್ ಹೋಂ ಸ್ಟೇ ಮಾಲೀಕ ಪುಲ್ಲಂಗಡ ಕೆ.ಮುತ್ತಪ್ಪ ಅಲಿಯಾಸ್ ವಿವೇಕ್ (೨೫), ಹೈದರಾಬಾದ್‌ನ ವಿಜ್ಞಾನ ಭಾರತಿ ಇನ್ಸ್ಟಿಟ್ಯೂಟ್ ಆಫ್…
ಗುಂಪು ಮನೆ ಯೋಜನೆಗಿಲ್ಲ ಸರ್ಕಾರದ ಗ್ರೀನ್ ಸಿಗ್ನಲ್
November 4, 2019ಮೈಸೂರು, ನ. ೩- ಸೂರಿಲ್ಲದ ಸಾಮಾನ್ಯ ಜನರಿಗೆ ಕೈಗೆಟಕುವ ಬೆಲೆಯಲ್ಲಿ ಮನೆ ನಿರ್ಮಿಸಿಕೊಡುವ ವಸತಿ ಯೋಜನೆಗೆ ಸರ್ಕಾರ ಅನುಮೋದನೆ ನೀಡದ ಕಾರಣ ವಿಳಂಬವಾಗುತ್ತಿದೆ. ಮೈಸೂರಿನ ವಿಜಯನಗರ ೨ನೇ ಹಂತ ಬಡಾವಣೆಯಲ್ಲಿ ರಿಂಗ್ ರೋಡ್‌ಗೆ ಹೊಂದಿಕೊಂಡಂತಿರುವ ಮುಡಾದ ಸುಮಾರು ೧೮ ಎಕರೆ ಜಾಗದಲ್ಲಿ ೧೪ ಅಂತ ಸ್ತಿನ ಕಟ್ಟಡವನ್ನು ನಿರ್ಮಿಸಿ ೧,೩೪೮ ಮನೆಗಳನ್ನು ಅರ್ಹ ಫಲಾ ನುಭವಿಗಳಿಗೆ ನಿಯಮಾನುಸಾರ ಹಂಚಿಕೆ ಮಾಡುವ ಮಹತ್ವಾಕಾಂಕ್ಷೆ ಯೋಜನೆಯನ್ನು ೨೦೧೭ರಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಸಿದ್ಧಗೊಳಿಸಿತ್ತು. ಹೈಟೆನ್ಷನ್ ರಸ್ತೆ, ರಿಂಗ್ ರಸ್ತೆ, ಶೇಷಾದ್ರಿಪುರಂ…
ಬಹುತೇಕ ರಾಜಕಾರಣಿಗಳಿಗೆ ಕನ್ನಡದ ಬಗ್ಗೆ ಅಭಿಮಾನವಿಲ್ಲ
November 4, 2019ಮೈಸೂರು, ನ.೩(ಆರ್‌ಕೆ)- ನಮ್ಮಲ್ಲಿ ಬಹುತೇಕ ರಾಜಕಾರಣಿಗಳಿಗೆ ಕನ್ನಡ ಭಾಷೆ ಬಗ್ಗೆ ಅಭಿ ಮಾನವೇ ಇಲ್ಲ ಎಂದು ಸಾಹಿತಿ ಪ್ರೊ.ಕೆ.ಎಸ್.ಭಗ ವಾನ್ ಅವರು ಇಂದಿಲ್ಲಿ ವಿಷಾದ ವ್ಯಕ್ತಪಡಿಸಿದರು. ಮೈಸೂರಿನ ಕೆ.ಜಿ.ಕೊಪ್ಪಲು ಬಳಿ ಕೋರ್ಟ್ ಮುಂಭಾ ಗದ ನೇಗಿಲಯೋಗಿ ಮರಳೇಶ್ವರ ಸೇವಾ ಭವನದಲ್ಲಿ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಜಿಲ್ಲಾ ಘಟಕ ಉದ್ಘಾಟಿಸಿ ಮಾತನಾಡುತ್ತಿದ್ದ ಅವರು, ವೇದಿಕೆ ಮೇಲೆ ಕನ್ನಡದ ಬಗ್ಗೆ ಉದ್ದುದ್ದ ಭಾಷಣ ಮಾಡುವ ಬಹುತೇಕ ರಾಜಕಾರಣಿಗಳಿಗೆ ಮಾತೃಭಾಷೆ ಮೇಲೆ ಪ್ರೀತಿ, ಅಭಿ ಮಾನವೇ ಇಲ್ಲದಿರುವುದು ವಿಷಾದನೀಯ ಎಂದರು….
ಕೈಗಾರಿಕೆಗಳ ಸುರಕ್ಷತೆಗೆ ಹೆಚ್ಚಿನ ಆದ್ಯತೆ ಅವಶ್ಯ
November 4, 2019ಮೈಸೂರು, ನ.೩(ಎಂಕೆ)- ಕಾರ್ಖಾನೆಗಳ ಸುರಕ್ಷತೆ ಮತ್ತು ಅಭಿವೃದ್ದಿಗೆ ಕೇಂದ್ರ ಶಾಸನ ಕಾಯಿದೆ ಅಳವಡಿಕೆ ಅಗತ್ಯವಾಗಿದೆ ಎಂದು ಕಾರ್ಖಾನೆಗಳು, ಬಾಯ್ಲರ್‌ಗಳು, ಕೈಗಾರಿಕಾ ಆರೋಗ್ಯ ಮತ್ತು ಸುರಕ್ಷತೆಯ ನಿವೃತ್ತ ನಿರ್ದೇಶಕ ಡಿ.ಸಿ.ಜಗದೀಶ್ ಹೇಳಿದರು. ನಗರದ ಖಾಸಗಿ ಹೋಟೆಲ್‌ನಲ್ಲಿ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ(ಕಾಸಿಯಾ)ದ ವತಿಯಿಂದ ಆಯೋ ಜಿಸಿದ್ದ ‘ಕೈಗಾರಿಕಾ ಆರೋಗ್ಯ, ಸುರಕ್ಷತೆಗೆ ಶಿಫಾರಸ್ಸು ಮಾಡಲಾದ ಅಭ್ಯಾಸಗಳು ಮತ್ತು ಕಾರ್ಮಿಕ ವೇತನ ಸಂಹಿತೆ-೨೦೧೯’ರ ಕುರಿತ ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕೈಗಾರಿಕೆಗಳಲ್ಲಿ ಸುರಕ್ಷತೆ ಬಹಳ ಗಂಭೀರವಾದ ವಿಚಾರ ವಾಗಿದೆ. ಕಾರ್ಖಾನೆಗಳಲ್ಲಿ ಉಪಯೋಗಿಸುವ…
ವ್ಯಕ್ತಿತ್ವ ವಿಕಾಸಗೊಳಿಸುವುದೇ ನಿಜವಾದ ವಿದ್ಯೆ
November 4, 2019ಮೈಸೂರು,ನ.೩(ವೈಡಿಎಸ್)-ಯಾವುದು ಮನುಷ್ಯನ ವ್ಯಕ್ತಿತ್ವವನ್ನು ವಿಕಾಸ ಮಾಡುತ್ತದೋ ಅದೇ ನಿಜವಾದ ವಿದ್ಯೆ ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅಭಿಪ್ರಾಯಪಟ್ಟರು. ಮಾನಸಗಂಗೋತ್ರಿಯ ಸೆನೆಟ್ ಭವನದಲ್ಲಿ ಮೈಸೂರು ವಿವಿ ಸಮಾಜಕಾರ್ಯ ಅಧ್ಯಯನ ವಿಭಾಗವು ಪ್ರೊ.ವೈ.ಎಸ್.ಸಿದ್ದೇಗೌಡ ಅಭಿನಂದನಾ ಕಾರ್ಯಕ್ರಮದ ಅಂಗವಾಗಿ ಆಯೋಜಿಸಿದ್ದ ವಿಚಾರ ಸಂಕಿರಣದ ಸಮಾರೋಪದಲ್ಲಿ ಮಾತನಾಡಿದ ಅವರು, ಯಾವ ದೇಶದಲ್ಲಿ ಶಿಕ್ಷಣ ಹಾಗೂ ಶಿಕ್ಷಕರು ಆಂತರಿಕವಾಗಿ ಅತ್ಯುನ್ನತ ಜ್ಞಾನ ಹೊಂದಿರುತ್ತಾರೋ ಆ ದೇಶ ಅಭಿವೃದ್ಧಿಯಾಗುತ್ತದೆ ಎಂದು ಹೇಳಿದರು. ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿದರು….
ಜಿಂಕೆ ಮಾಂಸ ಮಾರಲೆತ್ನಿಸಿದ ವ್ಯಕ್ತಿ ಸೆರೆ
November 4, 2019ಮೈಸೂರು, ನ.೩(ಆರ್‌ಕೆ)- ತಿ.ನರಸೀಪುರ ತಾಲೂಕು ಮೂಗೂರು ಬಸ್ ನಿಲ್ದಾಣದ ಬಳಿ ಜಿಂಕೆ ಮಾಂಸ ಮಾರಲು ಹೊಂಚು ಹಾಕುತ್ತಿದ್ದ ವ್ಯಕ್ತಿಯನ್ನು ಅರಣ್ಯ ಸಂಚಾರಿ ದಳದ ಪೊಲೀಸರು ಶನಿವಾರ ಬಂಧಿಸಿದ್ದಾರೆ. ಚಾಮರಾಜನಗರ ಜಿಲ್ಲೆ, ಸಂತೇಮರಳ್ಳಿ ಹೋಬಳಿ ಬಾಗಲಿ ಗ್ರಾಮದ ಮೂಗುಶೆಟ್ಟಿ ಅವರ ಮಗ ಶಂಕರ್ (೨೮) ಬಂಧಿತ ಆರೋಪಿ. ಶನಿವರ ಮೂಗೂರು ಬಸ್ ನಿಲ್ದಾಣದ ಬಳಿ ಪ್ಲಾಸ್ಟಿಕ್ ಚೀಲದಲ್ಲಿ ಜಿಂಕೆ ಮಾಂಸ, ಕೊಂಬು, ತಲೆ-ಕಾಲು ಹಾಗೂ ಚರ್ಮ ತುಂಬಿಕೊAಡು ಮಾರಲು ಹೊಂಚು ಹಾಕುತ್ತಿದ್ದ ಆತನನ್ನು ಬಂಧಿಸಿದ ಪೊಲೀಸರು ವಿಚಾರಣೆ ನಡೆಸಿದಾಗ…
ನ.8 ರಂದು ಮುಡಾ ಸಭೆ
November 4, 2019ಮೈಸೂರು, ನ.೩(ಆರ್‌ಕೆ)- ನವೆಂಬರ್ ೮ರಂದು ಬೆಳಿಗ್ಗೆ ೧೧ ಗಂಟೆಗೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಸಾಮಾನ್ಯ ಸಭೆ ಮುಡಾ ಕಚೇರಿ ಸಭಾಂಗಣದಲ್ಲಿ ನಡೆ ಯಲಿದೆ. ಪ್ರಾಧಿಕಾರದ ಅಧ್ಯಕ್ಷರೂ ಆದ ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್ ಅಧ್ಯಕ್ಷತೆಯಲ್ಲಿ ನಡೆಯುವ ಸಭೆಯಲ್ಲಿ ಭೂಮಿ ನೀಡಲು ರೈತರು ನಿರಾಕರಿಸಿರು ವುದರಿಂದ ನೆನೆಗುದಿಗೆ ಬಿದ್ದಿರುವ ಬಲ್ಲಹಳ್ಳಿ ವಸತಿ ಯೋಜನೆ, ಮೈಸೂರಿನ ವಿವಿಧ ಬಡಾವಣೆಗಳಲ್ಲಿ ಲಭ್ಯವಿರುವ ಸಿಎ ನಿವೇಶನಗಳ ಹಂಚಿಕೆ, ಉದ್ದೇಶಿತ ಗುಂಪು ಮನೆ ನಿರ್ಮಾಣ, ಹೊಸ ಐದು ಬಡಾವಣೆಗೆ ಸರ್ಕಾರದಿಂದ ಅನುಮೋದನೆ ಪಡೆಯು ವುದೂ…
ಮೈಸೂರಿನ ರೇಷ್ಮೋದ್ಯಮಕ್ಕೆ ಸಚಿವ ಸೋಮಣ್ಣ ಭೇಟಿ
November 3, 2019ಮೈಸೂರು, ನ.೨(ಆರ್‌ಕೆ)-ವಸತಿ, ರೇಷ್ಮೆ ಸಚಿವರಾದ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಇಂದು ಮೈಸೂರಿನ ಮಾನಂದವಾಡಿ ರಸ್ತೆಯಲ್ಲಿರುವ ರೇಷ್ಮೋ ದ್ಯಮಕ್ಕೆ ಭೇಟಿ ನೀಡಿ, ಅದರ ಕಾರ್ಯ ವೈಖರಿ ಬಗ್ಗೆ ಪರಿಶೀಲನೆ ನಡೆಸಿದರು. ಕೆಎಸ್‌ಐಸಿ ಆವರಣದಲ್ಲಿರುವ ಕಾರ್ಖಾನೆ ಯಲ್ಲಿ ರೇಷ್ಮೆ ಸೀರೆ, ವಸ್ತç ತಯಾರಿಕೆ ವೀಕ್ಷಿ ಸಿದ ಸಚಿವರು, ಮೈಸೂರು ರೇಷ್ಮೆ ಸೀರೆಗೆ ಜನರಿಂದ ಭಾರೀ ಬೇಡಿಕೆ ಹೆಚ್ಚಾಗಿರುವು ದರಿಂದ ಅದಕ್ಕೆ ತಕ್ಕಂತೆ ಗುಣಮಟ್ಟದ ಸೀರೆ ಗಳನ್ನು ಉತ್ಪಾದಿಸಬೇಕು ಎಂದು ಸಂಸ್ಥೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು. ಜನಸಾಮಾನ್ಯರು, ಮಧ್ಯಮ ವರ್ಗದವ…
ಸಣ್ಣ ಕೈಗಾರಿಕೆಗಳ ಉಳಿವಿಗೆ ಕೇಂದ್ರ ಸರ್ಕಾರದ `ಉತ್ತೇಜನ’ ಅಗತ್ಯ
November 3, 2019ಮೈಸೂರು, ನ.೨(ಎಂಟಿವೈ)- ಕೇಂದ್ರ ಸರ್ಕಾರದ ಅವೈಜ್ಞಾನಿಕ ನಿಲುವಿನಿಂದಾಗಿ ಆರ್ಥಿಕತೆ ಕುಸಿದಿರುವ ಹಿನ್ನೆಲೆಯಲ್ಲಿ ದೇಶದ ಆಟೋಮೊಬೈಲ್ ಹಾಗೂ ಸಣ್ಣ ಕೈಗಾರಿಕೆಗಳು ಸಂಕಷ್ಟಕ್ಕೆ ಸಿಲುಕಿವೆ. ಇದ ರಿಂದಾಗಿ ಶೇ.೩೦ರಷ್ಟು ಮಂದಿ ಉದ್ಯೋಗ ಕಳೆದುಕೊಳ್ಳು ವಂತಾಗಿದೆ ಎಂದು ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ಆರ್.ರಾಜು ಕಳವಳ ವ್ಯಕ್ತಪಡಿಸಿದ್ದಾರೆ. ಮೈಸೂರಿನ ಖಾಸಗಿ ಹೋಟೆಲ್‌ನಲ್ಲಿ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ಕಳೆದ ಕೆಲವು ತಿಂಗಳಿAದ ಕುಸಿಯುತ್ತಿರುವ ದೇಶದ ಆರ್ಥಿಕ ಪರಿಸ್ಥಿತಿಯಿಂದಾಗಿ ಸಣ್ಣ ಮತ್ತು ಸೂಕ್ಷ್ಮ ಕೈಗಾರಿಕೆಗಳ ಮೇಲೆ ದುಷ್ಪರಿ ಣಾಮ ಬೀರಿದೆ. ಆಟೋಮೊಬೈಲ್…
ಕನ್ನಡ ನಮ್ಮ ಜೀವನದ ಭಾಗವಾಗಬೇಕಾದರೆ ಎಲ್ಲರ ಸಹಕಾರ ಅಗತ್ಯ
November 3, 2019ಮೈಸೂರು,ನ.೨-ಕನ್ನಡವನ್ನು ನಮ್ಮ ಜೀವ ನದ ಭಾಗವಾಗಿಸಲು ಮತ್ತು ನಾಡಿನ ಸರ್ವಾಂಗೀಣ ಅಭಿವೃದ್ಧಿಗೆ ಎಲ್ಲರ ಸಹಕಾರ ಅಗತ್ಯ ಎಂದು ಮೈಸೂರು ಜಿಲ್ಲಾ ಉಸ್ತು ವಾರಿ ಸಚಿವ ವಿ.ಸೋಮಣ್ಣ ಹೇಳಿದರು. ಜಿಲ್ಲಾಡಳಿತದ ವತಿಯಿಂದ ಶುಕ್ರವಾರ ಮೈಸೂರಿನ ಅರಮನೆ ಉತ್ತರ ದ್ವಾರ, ಕೋಟೆ ಆಂಜನೇಯಸ್ವಾಮಿ ದೇವ ಸ್ಥಾನದ ಎದುರು ಕನ್ನಡ ರಾಜ್ಯೋತ್ಸವ ಆಚರಣೆಯನ್ನು ತಾಯಿ ಭುವನೇಶ್ವರಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ಅಲ್ಲದೆ ಸಚಿವರು ಕನ್ನಡ ಧ್ವಜಾರೋ ಹಣ ನೆರವೇರಿಸಿ, ಪೊಲೀಸರಿಂದ ಗೌರವ ವಂದನೆ ಸ್ವೀಕರಿಸಿದರು. ಸ್ವಾತಂತ್ರಾö್ಯನAತರ ಮೈಸೂರು…










