ಮೈಸೂರಿನ ರೇಷ್ಮೋದ್ಯಮಕ್ಕೆ ಸಚಿವ ಸೋಮಣ್ಣ ಭೇಟಿ
ಮೈಸೂರು

ಮೈಸೂರಿನ ರೇಷ್ಮೋದ್ಯಮಕ್ಕೆ ಸಚಿವ ಸೋಮಣ್ಣ ಭೇಟಿ

November 3, 2019

ಮೈಸೂರು, ನ.೨(ಆರ್‌ಕೆ)-ವಸತಿ, ರೇಷ್ಮೆ ಸಚಿವರಾದ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಇಂದು ಮೈಸೂರಿನ ಮಾನಂದವಾಡಿ ರಸ್ತೆಯಲ್ಲಿರುವ ರೇಷ್ಮೋ ದ್ಯಮಕ್ಕೆ ಭೇಟಿ ನೀಡಿ, ಅದರ ಕಾರ್ಯ ವೈಖರಿ ಬಗ್ಗೆ ಪರಿಶೀಲನೆ ನಡೆಸಿದರು.

ಕೆಎಸ್‌ಐಸಿ ಆವರಣದಲ್ಲಿರುವ ಕಾರ್ಖಾನೆ ಯಲ್ಲಿ ರೇಷ್ಮೆ ಸೀರೆ, ವಸ್ತç ತಯಾರಿಕೆ ವೀಕ್ಷಿ ಸಿದ ಸಚಿವರು, ಮೈಸೂರು ರೇಷ್ಮೆ ಸೀರೆಗೆ ಜನರಿಂದ ಭಾರೀ ಬೇಡಿಕೆ ಹೆಚ್ಚಾಗಿರುವು ದರಿಂದ ಅದಕ್ಕೆ ತಕ್ಕಂತೆ ಗುಣಮಟ್ಟದ ಸೀರೆ ಗಳನ್ನು ಉತ್ಪಾದಿಸಬೇಕು ಎಂದು ಸಂಸ್ಥೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜನಸಾಮಾನ್ಯರು, ಮಧ್ಯಮ ವರ್ಗದವ ರಿಗೆ ಕೈಗೆಟಕುವ ಬೆಲೆಯಲ್ಲಿ ಮೈಸೂರು ರೇಷ್ಮೆ ಸೀರೆ ಪೂರೈಸಬೇಕು, ಎಲ್ಲಾ ಕೆಎಸ್ ಐಸಿ ಶೋ ರೂಂಗಳಲ್ಲಿ ಲಭ್ಯವಾಗುವಂತೆ ಮಾಡಿ, ಆ ಮೂಲಕ ಸಂಸ್ಥೆಯ ಅಭಿ ವೃದ್ಧಿ ಹಾಗೂ ಉದ್ಯೋಗ ಸೃಷ್ಟಿಗೆ ಅವಕಾಶ ಕಲ್ಪಿಸಿ ಎಂದು ಅವರು ನುಡಿದರು.

ಬೇಡಿಕೆಗೆ ತಕ್ಕಂತೆ ಉತ್ಪನ್ನ ಹೆಚ್ಚಿಸಲು ಕೆಎಸ್‌ಐಸಿ ಆವರಣದಲ್ಲೇ ೩೫ ಕೋಟಿ ರೂ. ವೆಚ್ಚದಲ್ಲಿ ಉಪ ಘಟಕ ನಿರ್ಮಿಸಲು ನಿಗಮವು ಕಾಮಗಾರಿ ಆರಂಭಿಸಿದೆ. ಉತ್ಪಾ ದನಾ ಸಾಮರ್ಥ್ಯ ಹೆಚ್ಚಿಸಲು ಕ್ರಮ ವಹಿಸ ಲಾಗಿದೆ ಎಂದು ಸೋಮಣ್ಣ ಇದೇ ವೇಳೆ ಸುದ್ದಿಗಾರರಿಗೆ ತಿಳಿಸಿದರು. ಉದ್ಯೋಗ ಸೃಷ್ಟಿ ಸುವ ಸದುದ್ದೇಶದಿಂದ ಸರ್ ಎಂ.ವಿಶ್ವೇ ಶ್ವರಯ್ಯ ಅವರು ಆರಂಭಿಸಿದ ರೇಷ್ಮೆ ಕಾರ್ಖಾನೆ ಯಲ್ಲಿ ಉತ್ತಮ ಗುಣಮಟ್ಟದ ರೇಷ್ಮೆ ಸೀರೆ ಗಳನ್ನು ಉತ್ಪಾದನೆ ಮಾಡುತ್ತಾ ಬಂದಿದ್ದು, ಅದನ್ನು ವಿಸ್ತರಿಸಲು ೨ನೇ ಹಂತದ ಘಟಕ ಸ್ಥಾಪಿಸಲಾಗುತ್ತಿದೆ ಎಂದು ಹೇಳಿದರು.

ಬಿಎಸ್‌ವೈ ವೀಡಿಯೋ ವೈರಲ್‌ಗೆ ಸಚಿವ ವಿ.ಸೋಮಣ್ಣ ಬೇಸರ
ಮೈಸೂರು, ನ.೨(ಆರ್‌ಕೆ)- ೧೭ ಅನರ್ಹ ಶಾಸಕರ ಬಗ್ಗೆ ಯಡಿಯೂರಪ್ಪ ಮಾತನಾಡಿರುವ ವೀಡಿಯೋ ವೈರಲ್ ಆಗಿರುವುದು ದುರದೃಷ್ಟಕರ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಇಂದು ಬೇಸರ ವ್ಯಕ್ತಪಡಿಸಿದ್ದಾರೆ.

ಮೈಸೂರಿನ ಜಲದರ್ಶಿನಿ ಅತಿಥಿಗೃಹದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಅವರು, ಯಡಿಯೂರಪ್ಪ ಅವರು ಭಾವನಾತ್ಮಕವಾಗಿ ವಾಸ್ತವ ವಿಚಾರವನ್ನೇ ತಿಳಿಸಿದ್ದಾರೆ. ಆದರೆ ಆ ವೀಡಿಯೋ ವೈರಲ್ ಆಗಬಾರದಿತ್ತು ಎಂದರು.

ಅನರ್ಹರಿAದಲೇ ಯಡಿಯೂರಪ್ಪ ಸಿಎಂ ಆಗಿದ್ದಾರೆ. ಆದರೆ ಅನರ್ಹ ಶಾಸಕರು ಬಿಜೆಪಿ ಸೇರುತ್ತಾರೆಂದು ಹೇಳಿಲ್ಲ. ಅವರ ಪಕ್ಷದ ಅವ್ಯವಸ್ಥೆಯಿಂದ ರಾಜೀನಾಮೆ ನೀಡಿದ್ದಾರೆ. ಆದ್ದರಿಂದ ನಮ್ಮ ಸರ್ಕಾರ ಬಂದಿದೆ. ಅದನ್ನೇ ಯಡಿಯೂರಪ್ಪನವರು ಹೇಳಿದ್ದಾರೆ. ಅದನ್ನು ರೆಕಾರ್ಡ್ ಮಾಡಿ ವೈರಲ್ ಮಾಡಿರುವುದು ನೋವು ತಂದಿದೆ. ಶಿಸ್ತಿನ ಪಕ್ಷವಾದ ಬಿಜೆಪಿ ವರಿಷ್ಠರು ಆ ಬಗ್ಗೆ ಕ್ರಮಕೈಗೊಳ್ಳುತ್ತಾರೆ ಎಂದು ಸಚಿವರು ನುಡಿದರು. ಕೈಲಾಗದವರು ಮೈ ಪರಚಿಕೊಂಡAತೆ ಸಿದ್ದರಾಮಯ್ಯ ಅವರು ನಮ್ಮ ಸರ್ಕಾರದ ನೂರು ದಿನದ ಸಾಧನೆ ಬಗ್ಗೆ ಟೀಕೆ ಮಾಡಿದ್ದಾರೆ. ಅವರ ಸರ್ಕಾರದ ನೂರು ದಿನದಲ್ಲಿ ಏನು ಮಾಡಿದ್ದರೆಂಬುದನ್ನು ತಿಳಿಸಲಿ ಎಂದು ಸಚಿವ ಸೋಮಣ್ಣ ಟಾಂಗ್ ನೀಡಿದರು. ಅವರ ಕಾಲದಲ್ಲಿ ಬರಗಾಲವಿತ್ತು. ನಮ್ಮ ಸರ್ಕಾರ ಬಂದ ಮೇಲೆ ಮಳೆ ಬಂದು ರಾಜ್ಯ ಸುಭಿಕ್ಷವಾಗಿದೆ. ಅವರ ಅವಧಿಯಲ್ಲಿ ಏನು ಸಾಧನೆಯಾಗಿತ್ತೆಂಬುದರ ಬಗ್ಗೆ ಚರ್ಚೆಯಾಗಲಿ ಎಂದ ಅವರು, ನಾನು ಈವರೆಗೆ ಒಂದೇ ಒಂದು ವರ್ಗಾವಣೆ ಪತ್ರಕ್ಕೆ ಸಹಿ ಹಾಕಿಲ್ಲ ಎಂದು ಸಿದ್ದರಾಮಯ್ಯ ಅವರು ಮಾಡಿರುವ ವರ್ಗಾವಣೆ ದಂಧೆ ಆರೋಪಕ್ಕೆ ಪ್ರತಿಕ್ರಿಯೆ ನೀಡಿದರು.

Translate »