ಸಣ್ಣ ಕೈಗಾರಿಕೆಗಳ ಉಳಿವಿಗೆ ಕೇಂದ್ರ ಸರ್ಕಾರದ `ಉತ್ತೇಜನ’ ಅಗತ್ಯ
ಮೈಸೂರು

ಸಣ್ಣ ಕೈಗಾರಿಕೆಗಳ ಉಳಿವಿಗೆ ಕೇಂದ್ರ ಸರ್ಕಾರದ `ಉತ್ತೇಜನ’ ಅಗತ್ಯ

November 3, 2019

ಮೈಸೂರು, ನ.೨(ಎಂಟಿವೈ)- ಕೇಂದ್ರ ಸರ್ಕಾರದ ಅವೈಜ್ಞಾನಿಕ ನಿಲುವಿನಿಂದಾಗಿ ಆರ್ಥಿಕತೆ ಕುಸಿದಿರುವ ಹಿನ್ನೆಲೆಯಲ್ಲಿ ದೇಶದ ಆಟೋಮೊಬೈಲ್ ಹಾಗೂ ಸಣ್ಣ ಕೈಗಾರಿಕೆಗಳು ಸಂಕಷ್ಟಕ್ಕೆ ಸಿಲುಕಿವೆ. ಇದ ರಿಂದಾಗಿ ಶೇ.೩೦ರಷ್ಟು ಮಂದಿ ಉದ್ಯೋಗ ಕಳೆದುಕೊಳ್ಳು ವಂತಾಗಿದೆ ಎಂದು ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ಆರ್.ರಾಜು ಕಳವಳ ವ್ಯಕ್ತಪಡಿಸಿದ್ದಾರೆ.

ಮೈಸೂರಿನ ಖಾಸಗಿ ಹೋಟೆಲ್‌ನಲ್ಲಿ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ಕಳೆದ ಕೆಲವು ತಿಂಗಳಿAದ ಕುಸಿಯುತ್ತಿರುವ ದೇಶದ ಆರ್ಥಿಕ ಪರಿಸ್ಥಿತಿಯಿಂದಾಗಿ ಸಣ್ಣ ಮತ್ತು ಸೂಕ್ಷ್ಮ ಕೈಗಾರಿಕೆಗಳ ಮೇಲೆ ದುಷ್ಪರಿ ಣಾಮ ಬೀರಿದೆ. ಆಟೋಮೊಬೈಲ್ ಕ್ಷೇತ್ರದ ಮೇಲೆಯೂ ನಕಾರಾತ್ಮಕ ಪ್ರಭಾವ ಬೀರಿದೆ ಎಂದು ಎಲ್ಲರಿಗೂ ತಿಳಿ ದಿದೆ. ಆಟೋಮೊಬೈಲ್ ಹಾಗೂ ಸಣ್ಣ ಕೈಗಾರಿಕೆಗಳ ನಡುವೆ ಸಂಪರ್ಕವಿರುವುದರಿAದ ಸಮಸ್ಯೆ ವ್ಯಾಪಕವಾಗು ತ್ತಿದೆ. ಕೇಂದ್ರ ಸರ್ಕಾರ ಏಕಾಏಕಿ ಬದಲಾವಣೆ ತರಲು ಮುಂದಾಗಿದ್ದೇ ದೇಶದ ಆರ್ಥಿಕ ಪರಿಸ್ಥಿತಿ ಹದಗೆಡಲು ಕಾರಣ. ಕೇಂದ್ರ ಸರ್ಕಾರದ ದುಡುಕಿನ ನಿಲುವಿನಿಂದ ಕಂಗೆಟ್ಟಿರುವ ಆಟೋಮೊಬೈಲ್ ಕ್ಷೇತ್ರ ಉತ್ಪಾದನೆ ಪ್ರಮಾಣ ಕಡಿಮೆ ಮಾಡಿದೆ. ಗ್ರಾಹಕರು ಸಹ ಸರ್ಕಾ ರದ ನಿಯಮ ಬದಲಾಗಬಹುದೆಂಬ ನಿರೀಕ್ಷೆಯಿಂದ ತಮಗೆ ಅವಶ್ಯಕತೆಯಿದ್ದ ವಸ್ತುಗಳನ್ನು ಖರೀದಿಸಲು ಮುಂದಾಗುತ್ತಿಲ್ಲ. ಇದರಿಂದ ದುಡಿಯುವ ಕೈಗಳು ಕೆಲಸ ಕಳೆದುಕೊಳ್ಳುವಂತಾಗಿದೆ ಎಂದು ಆರೋಪಿಸಿದರು.

ವಾಹನ ತಯಾರಿಕೆ ಸಂದರ್ಭದಲ್ಲಿ ಬಿಎಸ್-೪ ಇಂಜಿನ್ ಬದಲಾಗಿ ಬಿಎಸ್-೬ ಇಂಜಿನ್ ಬಳಸುವಂತೆ, ಬ್ಯಾಟರಿ ಚಾಲಿತ ವಾಹನಗಳ ತಯಾರಿಕೆಗೆ ಆದ್ಯತೆ ನೀಡುವಂತೆ ಕೇಂದ್ರ ಸರ್ಕಾರ ಆದೇಶಿಸಿದ ಪರಿಣಾಮ ವಾಹನ ತಯಾರಿಕಾ ಕಂಪನಿಗಳಾದ ಮಾರುತಿ, ಟೊಯೋಟಾ, ವೋಲ್ವೊ ಸಂಸ್ಥೆಗಳು ತಮ್ಮ ಉತ್ಪಾದನೆ ಯಲ್ಲಿ ಶೇ.೩೦ರಿಂದ ೭೦ರಷ್ಟು ಕಡಿಮೆ ಮಾಡಿವೆ ಎಂದರು.

ಕೇAದ್ರ ಸರ್ಕಾರದ ಕೆಲವು ಆರ್ಥಿಕ ಉತ್ತೇಜನ ಯೋಜನೆಗಳು ಕೇವಲ ಕಾರ್ಪೊರೇಟ್ ವಲಯಗಳಿಗೆ ಅನುಕೂಲಕರವಾಗಿವೆ. ಸಣ್ಣ, ಮಧ್ಯಮ ಕೈಗಾರಿಕೆ ಗಳಿಗೆ ಯಾವ ಪ್ರಯೋಜನವಾಗಿಲ್ಲ. ನೋಟ್‌ಬ್ಯಾನ್, ಜಿಎಸ್‌ಟಿ ಜಾರಿ ಬಳಿಕ ಕುಸಿತ ಕಂಡಿರುವ ಸಣ್ಣ ಕೈಗಾರಿಕಾ ವಲಯ ಇಂದಿಗೂ ಚೇತರಿಸಿಕೊಂಡಿಲ್ಲ. ಈಗ ಆರ್ಥಿಕ ಸ್ಥಿತಿ ಕುಂಠಿತದಿAದ ಮತ್ತಷ್ಟು ಸಮಸ್ಯೆಗೆ ಸಿಲುಕಿವೆ. ರಾಜ್ಯದಲ್ಲಿ ಶೇ.೩೦ರಷ್ಟು ಸಣ್ಣ, ಮಧ್ಯಮ ಕೈಗಾರಿಕೆಗಳು ಮುಚ್ಚಿವೆ. ಅದರಲ್ಲೂ ಗಾರ್ಮೆಂಟ್ಸ್ ವಲಯ ಸಂಕಷ್ಟಕ್ಕೆ ಸಿಲುಕಿದೆ. ಸಣ್ಣ ಕೈಗಾರಿಕೆ, ಆಟೋ ಮೊಬೈಲ್ ಕ್ಷೇತ್ರಕ್ಕೆ ದೊಡ್ಡ ಪೆಟ್ಟು ಬಿದ್ದಿರುವುದರಿಂದ ಹೊರಗುತ್ತಿಗೆ, ಗುತ್ತಿಗೆ ಕಾರ್ಮಿಕರು ಸೇರಿದಂತೆ ೨೦ ಲಕ್ಷ ಕಾರ್ಮಿಕರು ಉದ್ಯೋಗ ಕಳೆದುಕೊಂಡಿದ್ದಾರೆ. ಆರ್ಥಿಕ ಪರಿಸ್ಥಿತಿ ಉತ್ತೇಜಿಸಲು ಕ್ರಮ ಕೈಗೊಳ್ಳುವುದ ರೊಂದಿಗೆ ಕೈಗಾರಿಕೆಗಳ ಅಭಿವೃದ್ಧಿಗೆ ಅಗತ್ಯ ಕ್ರಮ ಜರುಗಿ ಸದಿದ್ದರೆ ಕೈಗಾರಿಕೆಗಳ ಪರಿಸ್ಥಿತಿ ಮತ್ತಷ್ಟು ಹದಗೆಡಲಿದೆ. ದೇಶದ ಆರ್ಥಿಕ ಸ್ಥಿತಿ ಮತ್ತಷ್ಟು ಪಾತಾಳಕ್ಕಿಳಿಯಲಿದೆ. ಕೂಡಲೇ ಪ್ರಧಾನಿ ನರೇಂದ್ರ ಮೋದಿ ಕೈಗಾರಿಕಾ ಕ್ಷೇತ್ರ ಎದುರಿಸುತ್ತಿರುವ ಸಮಸ್ಯೆಗಳ ನಿವಾರಣೆಗೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ಮೈಸೂರಿನಲ್ಲಿ ೩೪,೦೬೩ ಸೂಕ್ಷö್ಮ ಮತ್ತು ಸಣ್ಣ ಕೈಗಾ ರಿಕೆ, ೩೦ ಮಧ್ಯಮ, ೪೫ ಬೃಹತ್ ಮತ್ತು ೫ ಬೃಹತ್ ಉದ್ಯಮಗಳು ಕಾರ್ಯ ನಿರ್ವಹಿಸುತ್ತಿದ್ದು, ೨,೨೨,೦೦೦ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಅದರಲ್ಲಿ ಸೂಕ್ಷö್ಮ ಮತ್ತು ಸಣ್ಣ ಕೈಗಾರಿಕೆಗಳು ೨ ಲಕ್ಷ ಮಂದಿಗೆ ಉದ್ಯೋ ಗಾವಕಾಶ ಕಲ್ಪಿಸಿವೆ. ಜಿಲ್ಲೆಯಲ್ಲಿ ಎಂಟು ಕೈಗಾರಿಕಾ ಪ್ರದೇಶಗಳು ಮತ್ತು ಆರು ಇಂಡಸ್ಟಿçಯಲ್ ಎಸ್ಟೇಟ್ ಗಳಿದ್ದು, ಕೈಗಾರಿಕೀಕರಣದಲ್ಲಿ ಅತಿ ವೇಗದಿಂದ ಬೆಳೆಯು ತ್ತಿದೆ. ಆದರೆ, ಈಗ ಆರ್ಥಿಕ ಹಿಂಜರಿತದಿAದ ಮೈಸೂರಿ ನಲ್ಲಿರುವ ಕೈಗಾರಿಕೆಗಳು ಸಹ ತೀವ್ರ ದುಷ್ಪರಿಣಾಮಕ್ಕೆ ಒಳಗಾಗಿವೆ. ೧೫ ಸಾವಿರ ಮಂದಿ ಕೆಲಸ ಕಳೆದುಕೊಂಡಿ ದ್ದಾರೆ ಎಂದು ಪರಿಸ್ಥಿತಿಯ ಚಿತ್ರಣ ನೀಡಿದರು.

ಕೇಂದ್ರವು ಸಾಲ ವಸೂಲಾತಿಯಲ್ಲಿ ವಿಳಂಬ ಮಾಡುವಂತೆ ಬ್ಯಾಂಕ್‌ಗಳಿಗೆ ನಿರ್ದೇಶನ ನೀಡಿದೆ. ಎನ್‌ಪಿಎ ನಿಯಮಗಳ ಜಾರಿ ಹಾಗೂ ಸಣ್ಣ ಸೂಕ್ಷö್ಮ ಮತ್ತು ಸಣ್ಣ ಉದ್ಯಮಗಳಿಗೆ ಸಾಲ ಸುಲಭವಾಗಿ ದೊರೆಯು ವಂತೆ ಮಾಡಲು ಅನೇಕ ಕ್ರಮಗಳನ್ನು ಕೈಗೊಂಡಿ ರುವುದನ್ನು ಸ್ವಾಗತಿಸುತ್ತೇವೆ. ಇದರೊಂದಿಗೆ ಭಾರತೀಯ ರಿಸರ್ವ್ ಬ್ಯಾಂಕ್ ರೆಪೋ ದರವನ್ನು ಇಳಿಸಿದ್ದು, ಸಾಲದ ಬಡ್ಡಿ ದರವನ್ನು ಕಡಿಮೆ ಮಾಡುವಂತೆ ಬ್ಯಾಂಕ್‌ಗಳಿಗೆ ಸ್ಪಷ್ಟ ನಿರ್ದೇಶನ ನೀಡಿದೆ. ಕೇಂದ್ರ ಸರ್ಕಾರವು ಅಸ್ತಿತ್ವ ದಲ್ಲಿರುವ ಮತ್ತು ಹೊಸ ಘಟಕಗಳಿಗೆ ಕಾರ್ಪೊರೇಟ್ ತೆರಿಗೆಗಳನ್ನು ಇಳಿಸಿದೆ. ಇದರಿಂದ ಹೊಸ ಘಟಕಗಳು ಕಡಿಮೆ ತೆರಿಗೆಯ ಸೌಲಭ್ಯ ಪಡೆಯಲು ಅವಕಾಶ ವಾಗಿದೆ ಎಂದರು. ಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಕೆ.ಬಿ. ಅರಸಪ್ಪ, ಪ್ರಧಾನ ಕಾರ್ಯದರ್ಶಿ ಎಂ.ಜಿ.ರಾಜಗೋಪಾಲ, ವ್ಯವಸ್ಥಾಪಕ ಪ್ಯಾನಲ್ ಛೇರ್ಮನ್ ಎನ್.ಸತೀಶ್, ಜಂಟಿ ಕಾರ್ಯದರ್ಶಿ ವಿಶ್ವನಾಥ್ ಗೌಡರ್ ಇದ್ದರು.

Translate »