ನ.8 ರಂದು ಮುಡಾ ಸಭೆ
ಮೈಸೂರು

ನ.8 ರಂದು ಮುಡಾ ಸಭೆ

November 4, 2019

ಮೈಸೂರು, ನ.೩(ಆರ್‌ಕೆ)- ನವೆಂಬರ್ ೮ರಂದು ಬೆಳಿಗ್ಗೆ ೧೧ ಗಂಟೆಗೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಸಾಮಾನ್ಯ ಸಭೆ ಮುಡಾ ಕಚೇರಿ ಸಭಾಂಗಣದಲ್ಲಿ ನಡೆ ಯಲಿದೆ. ಪ್ರಾಧಿಕಾರದ ಅಧ್ಯಕ್ಷರೂ ಆದ ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್ ಅಧ್ಯಕ್ಷತೆಯಲ್ಲಿ ನಡೆಯುವ ಸಭೆಯಲ್ಲಿ ಭೂಮಿ ನೀಡಲು ರೈತರು ನಿರಾಕರಿಸಿರು ವುದರಿಂದ ನೆನೆಗುದಿಗೆ ಬಿದ್ದಿರುವ ಬಲ್ಲಹಳ್ಳಿ ವಸತಿ ಯೋಜನೆ, ಮೈಸೂರಿನ ವಿವಿಧ ಬಡಾವಣೆಗಳಲ್ಲಿ ಲಭ್ಯವಿರುವ ಸಿಎ ನಿವೇಶನಗಳ ಹಂಚಿಕೆ, ಉದ್ದೇಶಿತ ಗುಂಪು ಮನೆ ನಿರ್ಮಾಣ, ಹೊಸ ಐದು ಬಡಾವಣೆಗೆ ಸರ್ಕಾರದಿಂದ ಅನುಮೋದನೆ ಪಡೆಯು ವುದೂ ಸೇರಿದಂತೆ ೧೫೦ಕ್ಕೂ ಹೆಚ್ಚು ವಿಷಯಗಳು ಸಭೆಯಲ್ಲಿ ಚರ್ಚೆಗೆ ಬರಲಿವೆ ಎಂದು ಮುಡಾ ಮೂಲಗಳು ತಿಳಿಸಿವೆ. ಸಿಎ ನಿವೇಶನ ಹಂಚಿಕೆ ಸಂಬAಧ ರಚನೆಯಾಗಿ ರುವ ಉಪಸಮಿತಿಯಿಂದ ಮುಂದಿನ ಸಭೆ ನಡೆಸುವ ಬಗ್ಗೆಯೂ ಮುಡಾ ಸಭೆ ನಿರ್ಧಾರ ಕೈಗೊಳ್ಳಲಿದೆ ಎಂದು ತಿಳಿದು ಬಂದಿದೆ. ಮುಡಾ ಸದಸ್ಯರಾದ ಜಿ.ಟಿ. ದೇವೇಗೌಡ, ಎಸ್.ಎ.ರಾಮದಾಸ್, ತನ್ವೀರ್ ಸೇಠ್, ಬಿ.ಹರ್ಷವರ್ಧನ್, ರವೀಂದ್ರ ಶ್ರೀಕಂಠಯ್ಯ, ಡಾ.ಯತೀಂದ್ರ ಸೇರಿದಂತೆ ಹಲವರು ಸಭೆಯಲ್ಲಿ ಭಾಗವಹಿಸುವರು.

Translate »