ಜಿಂಕೆ ಮಾಂಸ ಮಾರಲೆತ್ನಿಸಿದ ವ್ಯಕ್ತಿ ಸೆರೆ
ಮೈಸೂರು

ಜಿಂಕೆ ಮಾಂಸ ಮಾರಲೆತ್ನಿಸಿದ ವ್ಯಕ್ತಿ ಸೆರೆ

November 4, 2019

ಮೈಸೂರು, ನ.೩(ಆರ್‌ಕೆ)- ತಿ.ನರಸೀಪುರ ತಾಲೂಕು ಮೂಗೂರು ಬಸ್ ನಿಲ್ದಾಣದ ಬಳಿ ಜಿಂಕೆ ಮಾಂಸ ಮಾರಲು ಹೊಂಚು ಹಾಕುತ್ತಿದ್ದ ವ್ಯಕ್ತಿಯನ್ನು ಅರಣ್ಯ ಸಂಚಾರಿ ದಳದ ಪೊಲೀಸರು ಶನಿವಾರ ಬಂಧಿಸಿದ್ದಾರೆ. ಚಾಮರಾಜನಗರ ಜಿಲ್ಲೆ, ಸಂತೇಮರಳ್ಳಿ ಹೋಬಳಿ ಬಾಗಲಿ ಗ್ರಾಮದ ಮೂಗುಶೆಟ್ಟಿ ಅವರ ಮಗ ಶಂಕರ್ (೨೮) ಬಂಧಿತ ಆರೋಪಿ. ಶನಿವರ ಮೂಗೂರು ಬಸ್ ನಿಲ್ದಾಣದ ಬಳಿ ಪ್ಲಾಸ್ಟಿಕ್ ಚೀಲದಲ್ಲಿ ಜಿಂಕೆ ಮಾಂಸ, ಕೊಂಬು, ತಲೆ-ಕಾಲು ಹಾಗೂ ಚರ್ಮ ತುಂಬಿಕೊAಡು ಮಾರಲು ಹೊಂಚು ಹಾಕುತ್ತಿದ್ದ ಆತನನ್ನು ಬಂಧಿಸಿದ ಪೊಲೀಸರು ವಿಚಾರಣೆ ನಡೆಸಿದಾಗ ಕಾಡಿನಲ್ಲಿ ಭೇಟೆಯಾಡಿ ಜಿಂಕೆ ಮಾಂಸ ಮಾರಲು ತಂದಿರುವುದಾಗಿ ಆರೋಪಿ ಒಪ್ಪಿಕೊಂಡನು.

ಪ್ರಕರಣ ದಾಖಲಿಸಿಕೊಂಡಿರುವ ಮೈಸೂರು ಜಿಲ್ಲಾ ಅರಣ್ಯ ಸಂಚಾರಿ ದಳದ ಸಬ್ ಇನ್‌ಸ್ಪೆಕ್ಟರ್ ರವಿಶಂಕರ್ ತನಿಖೆ ನಡೆಸುತ್ತಿದ್ದಾರೆ. ಪತ್ತೆ ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳಾದ ಎಂ.ಬಿ.ರಮೇಶ್, ವೆಂಕಟಾಚಲಯ್ಯ, ರಘು, ನರಸಿಂಹಮೂರ್ತಿ, ಮಂಜುನಾಥ, ಚೆಲುವರಾಜ್, ಪ್ರದೀಪ್ ಪಾಲ್ಗೊಂಡಿದ್ದರು.

Translate »