ಮಡಿಕೇರಿ, ಅ.31-ಕೊಡವರ ಸಂಸ್ಕøತಿಯ ಒಂದು ಭಾಗವೇ ಆಗಿ ರುವ ಕೋವಿ ಹೊಂದುವ ಹಕ್ಕು ವಿನಾಯಿತಿಯನ್ನು ಕೇಂದ್ರ ಸರ್ಕಾರ ಹತ್ತು ವರ್ಷ ಅಂದರೆ 2029ರವರೆಗೆ ವಿಸ್ತರಿಸಿ, ಅಧಿಸೂಚನೆ ಹೊರಡಿಸಿದೆ. ಕೊಡವ ಸಮುದಾಯ ಮತ್ತು ಕೊಡಗಿ ನಲ್ಲಿ ಜಮ್ಮಾ ಭೂಮಿ ಹೊಂದಿರುವ ವರು `ಕೂರ್ಗ್ ಬೈ ರೇಸ್’ ಹಾಗೂ ಜಮ್ಮಾ ಕೋವಿ ಹಕ್ಕು ಹೊಂದುವ ಅವಧಿಯನ್ನು 2029ರ ಅಕ್ಟೋಬರ್ 31ರವರೆಗೆ ವಿಸ್ತರಿಸಿ ಕೇಂದ್ರ ಗೃಹ ಇಲಾ ಖೆಯ ಜಂಟಿ ಕಾರ್ಯದರ್ಶಿ ಎಸ್‍ಸಿಎಲ್ ದಾಸ್ ಆದೇಶ ಹೊರಡಿಸಿದ್ದು, ಗೆಜೆಟ್ ನಲ್ಲಿ ಪ್ರಕಟಿಸಲಾಗಿದೆ….
ನಾಳೆ ಮೈಸೂರಿಗೆ ಉಪರಾಷ್ಟ್ರಪತಿ ಎಂ.ವೆಂಕಯ್ಯನಾಯ್ಡು
November 1, 2019ಮೈಸೂರು,ಅ.31(ಪಿಎಂ)-ಮೈಸೂ ರಿನ ಬನ್ನಿಮಂಟಪದ ಜೆಎಸ್‍ಎಸ್ ವೈದ್ಯಕೀಯ ಕಾಲೇಜು ಆವರಣ ದಲ್ಲಿ ನ.2ರಂದು ನಡೆ ಯಲಿರುವ ಜೆಎಸ್‍ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಯ (ಎSS-ಂಊಇಖ) ದಶಮ ವಾರ್ಷಿಕ ಘಟಿಕೋತ್ಸ ವದಲ್ಲಿ ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಪಾಲ್ಗೊಳ್ಳಲಿದ್ದಾರೆ. ಅಂದು ಸಂಜೆ 4.30ಕ್ಕೆ ನಡೆಯ ಲಿರುವ ಘಟಿಕೋತ್ಸವದಲ್ಲಿ ಉಪ ರಾಷ್ಟ್ರಪತಿಗಳು ಶೈಕ್ಷಣಿಕ ಸಾಧನೆ ಮಾಡಿದ ಪದವೀಧರರಿಗೆ ಚಿನ್ನದ ಪದಕ ಹಾಗೂ ನಗದು ಬಹುಮಾನಗಳನ್ನು ವಿತರಿಸಿ, ಘಟಿಕೋತ್ಸವ ಭಾಷಣ ಮಾಡಲಿದ್ದಾರೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಈ…
ಸೂಯೇಜ್ ಫಾರಂ ದುರ್ವಾಸನೆಯಿಂದ ಸುತ್ತಮುತ್ತಲ ಜನರಿಗೆ ಶೀಘ್ರ ಮುಕ್ತಿ
November 1, 2019ಮೈಸೂರು, ಅ.31-ಮೈಸೂರಿನ ಸೂಯೇಜ್ ಫಾರಂ ಸುತ್ತಮುತ್ತಲ ಬಡಾ ವಣೆ ನಿವಾಸಿಗಳಿಗೆ ದುರ್ವಾಸನೆಯಿಂದ ಮುಕ್ತಿ ದೊರಕುವ ಕಾಲ ಸನ್ನಿಹಿತವಾಗಿದೆ. ಇದೇ ಪ್ರಥಮ ಬಾರಿಗೆ ಪಾಲಿಕೆ ಕೌನ್ಸಿಲ್ ಸಭೆಯಲ್ಲಿ ಪಾಲ್ಗೊಂಡ ಸಂಸದ ಪ್ರತಾಪ್ ಸಿಂಹ, ಸೂಯೇಜ್ ಫಾರಂ ಕಸದ ಸಮಸ್ಯೆ ಯನ್ನು ಶಾಶ್ವತವಾಗಿ ಪರಿಹರಿಸುವ ಭರವಸೆ ನೀಡಿ, ಅಗತ್ಯ ಕ್ರಮಕ್ಕೂ ಮುಂದಾಗಿದ್ದಾರೆ. ಸೂಯೇಜ್ ಫಾರಂನಲ್ಲಿ ಈಗಾಗಲೇ 1.50 ಲಕ್ಷ ಟನ್ ತ್ಯಾಜ್ಯ ಸಂಗ್ರಹವಾಗಿದ್ದು, ಇದರ ದುರ್ವಾಸನೆಯಿಂದ ಸುತ್ತಮುತ್ತಲ ನಿವಾಸಿಗಳು ನರಕಯಾತನೆ ಅನುಭವಿ ಸುತ್ತಿದ್ದಾರೆ. ಈ ತ್ಯಾಜ್ಯವನ್ನು ಶಾಶ್ವತವಾಗಿ ತೆರವುಗೊಳಿಸಲು ಅಗತ್ಯವಿರುವ…
ಡಾ. ಕದ್ರಿ ಗೋಪಾಲನಾಥರಿಗೆ ಮೈಸೂರಲ್ಲಿ ನುಡಿ-ನಾದ ನಮನ
November 1, 2019ಮೈಸೂರು, ಅ.31(ಎಂಕೆ)- ಮಹಾನ್ ಹಠವಾದಿಯಾದ ಡಾ. ಕದ್ರಿ ಗೋಪಾಲನಾಥ್ ಅವರು ಸಂಗೀತ ಕ್ಷೇತ್ರದಲ್ಲಿ ಕರ್ನಾಟಕ ಹಿರಿಮೆಯನ್ನು ಜಗತ್ತಿಗೆ ಸಾರಿದ್ದಾರೆ ಎಂದು ಡೋಲು ವಿದ್ವಾನ್ ಎಸ್.ಪುಟ್ಟರಾಜು ಬಣ್ಣಿಸಿದರು. ಮೈಸೂರಿನ ಜೆಎಲ್‍ಬಿ ರಸ್ತೆಯಲ್ಲಿರುವ ನಾದಬ್ರಹ್ಮ ಸಂಗೀತ ಸಭಾಂಗಣದಲ್ಲಿ ಮೈಸೂರಿನ ಎಲ್ಲಾ ಸಂಗೀತ ಸಭೆಗಳ ಒಕ್ಕೂಟದ ವತಿಯಿಂದ ಆಯೋಜಿಸಿದ್ದ ಖ್ಯಾತ ಸ್ಯಾಕ್ಸೋಫೋನ್ ವಿದ್ವಾಂಸ ‘ಪದ್ಮಶ್ರೀ ಡಾ.ಕದ್ರಿ ಗೋಪಾಲನಾಥ್’ ಅವರ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿದೇಶಿ ಸ್ಯಾಕ್ಸೋ ಫೋನ್ ವಾದನದ ಘನತೆಯನ್ನು ಹೆಚ್ಚಿಸಿದ ಕೀರ್ತಿ ಕದ್ರಿ ಗೋಪಾಲನಾಥ್ ಅವರಿಗೆ ಸಲ್ಲುತ್ತದೆ ಎಂದರು….
ಟಿಪ್ಪು ಕಾಲದಲ್ಲಿ ಸಿದ್ದರಾಮಯ್ಯ ಇದ್ದಿದ್ದರೆ ಅಬ್ದುಲ್ ಸಿದ್ದರಾಮಯ್ಯ ಆಗುತ್ತಿದ್ದರು!
November 1, 2019ಬೆಂಗಳೂರು,ಅ.31(ಕೆಎಂಶಿ)-ಟಿಪ್ಪು ಸುಲ್ತಾನ್ ಆಡಳಿತದ ಸಂದರ್ಭದಲ್ಲಿ ಸಿದ್ದರಾಮಯ್ಯ ಇದ್ದಿದ್ದರೆ ಇವರನ್ನು ಮತಾಂತರಗೊಳಿಸಿ ಇವರಿಗೆ ಅಬ್ದುಲ್ ಸಿದ್ದರಾಮಯ್ಯ ಎಂಬ ಹೆಸರು ನಾಮಕರಣವಾಗುತ್ತಿತ್ತೆಂದು ಕಂದಾಯ ಸಚಿವ ಆರ್.ಅಶೋಕ್ ವ್ಯಂಗ್ಯ ವಾಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಟಿಪ್ಪು ಸುಲ್ತಾನ್ ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ್ದ ಎಂಬುದನ್ನು ಹೊರತುಪಡಿಸಿದರೆ ಉಳಿದ ಎಲ್ಲವೂ ಅಕ್ರಮ. ಅಂಥವರನ್ನು ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನಾಯಕರು ಏಕೆ ಸಮರ್ಥಿಸಿಕೊಳ್ಳುತ್ತಿದ್ದಾರೆ ಎಂದು ಪ್ರಶ್ನಿಸಿದರು. ಮೈಸೂರು ಭಾಗ ಇಂದು ಎಲ್ಲ ಕ್ಷೇತ್ರಗಳಲ್ಲಿ ಅಭಿವೃದ್ದಿಯಾಗಿದ್ದರೆ ಅದಕ್ಕೆ ಮೈಸೂರು ಮಹಾರಾಜರ ಕೊಡುಗೆ ಅಪಾರ. ಅಂತಹ ಮನೆತನದ…
12 ಸಾವಿರ ಉದ್ಯೋಗಿಗಳಿಗೆ ಗೇಟ್‍ಪಾಸ್ ನೀಡಲಿದೆ ಕಾಗ್ನಿಜೆಂಟ್
November 1, 2019ಬೆಂಗಳೂರು,ಅ.31- ಮಾಹಿತಿ ತಂತ್ರಜ್ಞಾನ ಕ್ಷೇತ್ರದ ದಿಗ್ಗಜ ಕಂಪನಿ ಕಾಗ್ನಿಜೆಂಟ್ ತನ್ನ 12 ಸಾವಿರ ಉದ್ಯೋಗಿಗಳಿಗೆ ಗೇಟ್ ಪಾಸ್ ನೀಡಲಿದೆ. ಮಧ್ಯಮ ಶ್ರೇಣಿಯಿಂದ ಆರಂಭಿಸಿ ಹಿರಿಯ ಶ್ರೇಣಿವರೆಗಿನ 10 ಸಾವಿರದಿಂದ 12 ಸಾವಿರ ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಲಿದ್ದೇವೆ ಎಂದು ಕಾಗ್ನಿಜೆಂಟ್ ಕಂಪನಿ ಪ್ರಕಟಿಸಿದೆ. ಕಾಗ್ನಿಜೆಂಟ್‍ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯರೇ ಉದ್ಯೋಗದಲ್ಲಿದ್ದಾರೆ. 2 ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಭಾರ ತೀಯ ಉದ್ಯೋಗಿಗಳನ್ನು ಹೊಂದಿರುವ ಕಾಂಗ್ನಿಜೆಂಟ್ ದೇಶದ 2ನೇ ಅತಿ ಹೆಚ್ಚು ಉದ್ಯೋಗಿಗಳನ್ನು ಹೊಂದಿದೆ. ಕಂಟೆಂಟ್ ಹೆಚ್ಚಿಸುವ ಸಂಬಂಧ ಫೇಸ್‍ಬುಕ್…
ಕುಲಭೂಷಣ್ ಪ್ರಕರಣ: ಪಾಕ್ ವಿಯೆನ್ನಾ ಒಪ್ಪಂದ ಉಲ್ಲಂಘಿಸಿದೆ ಎಂದ ಐಸಿಜೆ
November 1, 2019ವಿಶ್ವಸಂಸ್ಥೆ,ಅ.31-ಪಾಕಿಸ್ತಾನದ ವಿರುದ್ಧ ಭಾರತಕ್ಕೆ ಮತ್ತೊಂದು ಗೆಲುವು ಸಿಕ್ಕಿದೆ. ಕುಲಭೂಷಣ್ ಜಾದವ್ ಪ್ರಕರಣದಲ್ಲಿ ಪಾಕಿಸ್ತಾನ ವಿಯೆನ್ನಾ ಒಪ್ಪಂದ ವನ್ನು ಉಲ್ಲಂಘಿಸಿದೆ ಎಂದು ಇಂಟರ್‍ನ್ಯಾಷನಲ್ ಕೋರ್ಟ್ ಆಫ್ ಜಸ್ಟೀಸ್ (ಐಸಿಜೆ) ಹೇಳಿದೆ. ಕುಲಭೂಷಣ್ ಪ್ರಕರಣಕ್ಕೆ ಸಂಬಂಧಿಸಿ ಐಸಿಜೆ ಅಧ್ಯಕ್ಷ ನ್ಯಾಯಮೂರ್ತಿ ಎ.ಯೂಸುಫ್, ವಿಯೆನ್ನಾ ಒಪ್ಪಂ ದದ 36ನೇ ಅನು ಚ್ಛೇದದ ಅಂಶವನ್ನು ಪಾಕಿಸ್ತಾನ ಉಲ್ಲಂಘಿಸಿದೆ. ಅದರ ಅಂಶಗಳನ್ನು ತಪ್ಪಾಗಿ ಹೇಳುತ್ತ, ಶಂಕಿತ ರಾಷ್ಟ್ರದ್ರೋಹಿ ಕೈದಿಗಳ ಮೇಲೆ ಅನ್ವಯಿಸಿದೆ ಎಂದರು. ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿಯಲ್ಲಿ ನ್ಯಾಯಮೂರ್ತಿ ಎ. ಯೂಸುಫ್ ಮಾತನಾಡಿದ್ದು, ಜಾಧವ್…
ಟೀ ಹಣ ಕೇಳಿದ್ದಕ್ಕೆ ಅಂಗಡಿಯವರ ಮೇಲೆ ಹಲ್ಲೆ
October 31, 2019ಮೈಸೂರು,ಅ.30(ಆರ್‍ಕೆ)-ಕುಡಿದ ಟೀ ಹಣ ಕೇಳಿದ ಅಂಗಡಿಯವರ ಮೇಲೆರಗಿ ಹಲ್ಲೆ ಮಾಡಿದ್ದಲ್ಲದೆ, ವ್ಯಕ್ತಿ ಯೋರ್ವ ಬಿಸ್ಕೆಟ್ ಕಂಟೇನರ್, ಗಾಜಿನ ಬಾಟಲಿಗಳು, ಟೇಬಲ್ ಅನ್ನು ಕಿತ್ತು ಬಿಸಾಡಿ ರಂಪಾಟ ಮಾಡಿದ ಘಟನೆ ಮೈಸೂರಿನ ಎಂಜಿ ರಸ್ತೆಯಲ್ಲಿ ನಡೆಯಿತು. ಮೈಸೂರಿನ ಕಾಕರವಾಡಿ ನಿವಾಸಿ ಕಲೀಂ(35) ಟೀ ಅಂಗಡಿ ವಸ್ತುಗಳನ್ನೆಲ್ಲಾ ಧ್ವಂಸ ಮಾಡಿ ಹೈಡ್ರಾಮ ನಡೆಸಿದ ವ್ಯಕ್ತಿಯಾಗಿದ್ದು, ನಂತರ ಸಾರ್ವಜನಿಕ ರಿಂದ ಗೂಸಾ ತಿಂದು ಪೊಲೀಸರ ಅತಿಥಿಯಾಗಿ ದ್ದಾನೆ. ಇಂದು ಬೆಳಿಗ್ಗೆ ಸುಮಾರು 7.30 ಗಂಟೆ ವೇಳೆ ಎಂಜಿ ರಸ್ತೆಯ ಡಬಲ್ ಟ್ಯಾಂಕ್…
ಜಿಲ್ಲೆಯಲ್ಲಿ ಬೆಳೆ ಸಾಲ ಯೋಜನೆ ಪ್ರಗತಿ ಸಾಲದು
October 31, 2019ಮೈಸೂರು, ಅ.30(ಪಿಎಂ)-ರೈತರಿಗೆ ನೀಡುವ ಬೆಳೆ ಸಾಲ ಯೋಜನೆಯಲ್ಲಿ ಕೇವಲ ಶೇ.60ರಷ್ಟು ಪ್ರಗತಿ ಸಾಧಿಸಿದ್ದು, ಮೈಸೂರು ಜಿಲ್ಲೆಯಲ್ಲಿ ನೀರಾವರಿ ಅಷ್ಟಕ್ಕಷ್ಟೆ ಇರುವ ಹಿನ್ನೆಲೆಯಲ್ಲಿ ಎರಡನೇ ಬೆಳೆ ಬರುವುದಿಲ್ಲ. ಹೀಗಾದರೆ ಶೇ.100ರಷ್ಟು ಪ್ರಗತಿ ಸಾಧಿಸ ಲಾಗದು ಎಂದು ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ಕಾರ್ಯವೈಖರಿ ಬಗ್ಗೆ ಸಂಸದ ಪ್ರತಾಪ್ ಸಿಂಹ ಅಸಮಾಧಾನ ವ್ಯಕ್ತಪಡಿಸಿದರು. ಮೈಸೂರಿನ ಜಿಲ್ಲಾ ಪಂಚಾಯಿತಿ ಸಭಾಂ ಗಣದಲ್ಲಿ ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಜಿಲ್ಲಾ ಬ್ಯಾಂಕುಗಳ ಸಮಾಲೋಚನಾ ಮತ್ತು ಪ್ರಗತಿ ಪರಿಶೀಲನಾ ಸಮಿತಿ ತ್ರೈಮಾಸಿಕ ಸಭೆಯಲ್ಲಿ…
15 ವಿಧದ 10 ರೂಪಾಯಿ ನಾಣ್ಯಕ್ಕಿದೆ ಮೌಲ್ಯ, ಚಲಾವಣೆಗೆ ಯಾವುದೇ ಆತಂಕ ಬೇಡ
October 31, 2019ಮೈಸೂರು, ಅ.30(ಪಿಎಂ)- ಹತ್ತು ರೂ. ಮೌಲ್ಯದ 15 ವಿಧದ ನಾಣ್ಯಗಳು ಇದ್ದು, ಈ ಎಲ್ಲವನ್ನೂ ಚಲಾವಣೆ ಮಾಡಲು ಅವಕಾಶವಿದೆ. ಈ ಬಗ್ಗೆ ಬ್ಯಾಂಕುಗಳು ಗ್ರಾಹಕರಿಗೆ ಅರಿವು ಮೂಡಿಸಬೇಕು ಎಂದು ಬ್ಯಾಂಕುಗಳ ಅಧಿಕಾರಿಗಳಿಗೆ ಆರ್‍ಬಿಐ ಎಜಿಎಂ ಎನ್.ದತ್ತಾತ್ರೇಯ ನಿರ್ದೇಶನ ನೀಡಿದರು. ಜಿಪಂ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಸಾಮಾನ್ಯ ಜನತೆ ಹಾಗೂ ವ್ಯಾಪಾರ-ವಹಿವಾಟು ನಡೆಸುವವರು ಸೇರಿದಂತೆ ಬಹುತೇಕರಲ್ಲಿ 10 ರೂ. ನಾಣ್ಯ ಹಿಡಿಯುವುದಿಲ್ಲ ಎಂಬ ತಪ್ಪು ಕಲ್ಪನೆ ಇದೆ. ಇದನ್ನು ಬ್ಯಾಂಕ್‍ಗಳು ನಿವಾರಿಸಬೇಕು ಎಂದರು. ಇತ್ತೀಚೆಗೆ ಈ…










