15 ವಿಧದ 10 ರೂಪಾಯಿ ನಾಣ್ಯಕ್ಕಿದೆ ಮೌಲ್ಯ, ಚಲಾವಣೆಗೆ ಯಾವುದೇ ಆತಂಕ ಬೇಡ
ಮೈಸೂರು

15 ವಿಧದ 10 ರೂಪಾಯಿ ನಾಣ್ಯಕ್ಕಿದೆ ಮೌಲ್ಯ, ಚಲಾವಣೆಗೆ ಯಾವುದೇ ಆತಂಕ ಬೇಡ

October 31, 2019

ಮೈಸೂರು, ಅ.30(ಪಿಎಂ)- ಹತ್ತು ರೂ. ಮೌಲ್ಯದ 15 ವಿಧದ ನಾಣ್ಯಗಳು ಇದ್ದು, ಈ ಎಲ್ಲವನ್ನೂ ಚಲಾವಣೆ ಮಾಡಲು ಅವಕಾಶವಿದೆ. ಈ ಬಗ್ಗೆ ಬ್ಯಾಂಕುಗಳು ಗ್ರಾಹಕರಿಗೆ ಅರಿವು ಮೂಡಿಸಬೇಕು ಎಂದು ಬ್ಯಾಂಕುಗಳ ಅಧಿಕಾರಿಗಳಿಗೆ ಆರ್‍ಬಿಐ ಎಜಿಎಂ ಎನ್.ದತ್ತಾತ್ರೇಯ ನಿರ್ದೇಶನ ನೀಡಿದರು. ಜಿಪಂ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಸಾಮಾನ್ಯ ಜನತೆ ಹಾಗೂ ವ್ಯಾಪಾರ-ವಹಿವಾಟು ನಡೆಸುವವರು ಸೇರಿದಂತೆ ಬಹುತೇಕರಲ್ಲಿ 10 ರೂ. ನಾಣ್ಯ ಹಿಡಿಯುವುದಿಲ್ಲ ಎಂಬ ತಪ್ಪು ಕಲ್ಪನೆ ಇದೆ. ಇದನ್ನು ಬ್ಯಾಂಕ್‍ಗಳು ನಿವಾರಿಸಬೇಕು ಎಂದರು. ಇತ್ತೀಚೆಗೆ ಈ ಸಂಬಂಧ ಆರ್‍ಬಿಐನಿಂದ ರಾಜ್ಯದ 100 ಬ್ಯಾಂಕ್‍ಗಳ ಸಮೀಕ್ಷೆ ನಡೆಸಲಾಯಿತು. ಈ ಪೈಕಿ 40 ಬ್ಯಾಂಕುಗಳು 10 ರೂ. ನಾಣ್ಯ ಸ್ವೀಕರಿಸದೇ ಇರುವುದು ಗಮನಕ್ಕೆ ಬಂತು. ಅಂತಹ ಬ್ಯಾಂಕುಗಳಿಗೆ ದಂಡ ವಿಧಿಸಲಾ ಗಿದೆ. ಬ್ಯಾಂಕುಗಳೇ 10 ರೂ. ನಾಣ್ಯ ಸ್ವೀಕರಿ ಸಲು ಹಿಂದೇಟು ಹಾಕಿದರೆ ಸಾಮಾನ್ಯ ಜನರೂ ಈ ನಾಣ್ಯಕ್ಕೆ ಮೌಲ್ಯವಿಲ್ಲ ಎಂದು ಭಾವಿಸುತ್ತಾರೆ. ಹೀಗಾಗಿ ಬ್ಯಾಂಕುಗಳು ಇದನ್ನು ಗಂಭೀರವಾಗಿ ಪರಿಗಣಿಸಿ ಜಾಗೃತಿ ಮೂಡಿಸಬೇಕು. ಜೊತೆಗೆ ಈ ನಾಣ್ಯವನ್ನು ಗ್ರಾಹಕರು ನೀಡಿದರೆ ಸ್ವೀಕರಿಸಬೇಕು ಎಂದರು.

ಅನೇಕ ವಿಶೇಷ ಸಂದರ್ಭಗಳಲ್ಲಿ 15 ವಿಧದ 10 ರೂ. ನಾಣ್ಯ ಬಿಡುಗಡೆ ಮಾಡ ಲಾಗಿದೆ. ಈ ಎಲ್ಲವೂ ಮೌಲ್ಯ ಹೊಂದಿವೆ. ಈ ಬಗ್ಗೆ ಯಾವುದೇ ಆತಂಕ ಬೇಡವೆಂದು ಗ್ರಾಹಕರಿಗೆ ಅರಿವು ಮೂಡಿಸಬೇಕು. ಕೆಎಸ್‍ಆರ್‍ಟಿಸಿ ಬಸ್‍ಗಳಲ್ಲಿ ಸೇರಿದಂತೆ ಸರ್ಕಾರಿ ಇಲಾಖೆಗಳಲ್ಲಿ ಈ ನಾಣ್ಯ ಸ್ವೀಕ ರಿಸಲಾಗುತ್ತಿದೆ. ಆದರೆ ಖಾಸಗಿ ವಲಯ ಸೇರಿದಂತೆ ವಿವಿಧ ವ್ಯಾಪಾರಸ್ಥರು 10 ರೂ. ನಾಣ್ಯ ಎಂದರೆ ಸ್ವೀಕರಿಸಲು ಹಿಂದೇಟು ಹಾಕುತ್ತಿದ್ದಾರೆ. ಇಂತಹ ಸಮಸ್ಯೆ ನಿವಾರಿಸಲು ಬ್ಯಾಂಕುಗಳು ಪ್ರಮುಖ ಪಾತ್ರ ವಹಿಸಬೇಕು ಎಂದರು.

Translate »