ಮಡಿಕೇರಿ, ಅ.31-ಕೊಡವರ ಸಂಸ್ಕøತಿಯ ಒಂದು ಭಾಗವೇ ಆಗಿ ರುವ ಕೋವಿ ಹೊಂದುವ ಹಕ್ಕು ವಿನಾಯಿತಿಯನ್ನು ಕೇಂದ್ರ ಸರ್ಕಾರ ಹತ್ತು ವರ್ಷ ಅಂದರೆ 2029ರವರೆಗೆ ವಿಸ್ತರಿಸಿ, ಅಧಿಸೂಚನೆ ಹೊರಡಿಸಿದೆ.
ಕೊಡವ ಸಮುದಾಯ ಮತ್ತು ಕೊಡಗಿ ನಲ್ಲಿ ಜಮ್ಮಾ ಭೂಮಿ ಹೊಂದಿರುವ ವರು `ಕೂರ್ಗ್ ಬೈ ರೇಸ್’ ಹಾಗೂ ಜಮ್ಮಾ ಕೋವಿ ಹಕ್ಕು ಹೊಂದುವ ಅವಧಿಯನ್ನು 2029ರ ಅಕ್ಟೋಬರ್ 31ರವರೆಗೆ ವಿಸ್ತರಿಸಿ ಕೇಂದ್ರ ಗೃಹ ಇಲಾ ಖೆಯ ಜಂಟಿ ಕಾರ್ಯದರ್ಶಿ ಎಸ್‍ಸಿಎಲ್ ದಾಸ್ ಆದೇಶ ಹೊರಡಿಸಿದ್ದು, ಗೆಜೆಟ್ ನಲ್ಲಿ ಪ್ರಕಟಿಸಲಾಗಿದೆ. ಕೊಡವರು ಬಂದೂಕು ಹೊಂದುವ ವಿನಾಯ್ತಿಗೆ 158 ವರ್ಷಗಳ ಇತಿಹಾಸವಿದೆ. ಮಗು ಜನಿಸಿದಾಗ ಬಂದೂಕಿ ನಿಂದ ಗಾಳಿಯಲ್ಲಿ ಗುಂಡು ಹಾರಿಸಿ ಹರ್ಷ ವ್ಯಕ್ತಪಡಿಸುವುದು, ಅದೇ ರೀತಿ ಯಾರಾ ದರೂ ನಿಧನರಾದಾಗಲೂ ಗಾಳಿಯಲ್ಲಿ ಗುಂಡು ಹಾರಿಸಿ ಗೌರವ ಸೂಚಿಸಲಾಗು ತ್ತದೆ. ಅದು ಮಾತ್ರವಲ್ಲದೆ ಕೊಡವರ ಹಬ್ಬ-ಹರಿ ದಿನಗಳಲ್ಲಿ ಬಂದೂಕಿನಿಂದ ತೆಂಗಿನ ಕಾಯಿಗೆ ಗುಂಡು ಹೊಡೆಯುವುದು ಹಾಗೂ ಗಾಳಿಯಲ್ಲಿ ಗುಂಡು ಹಾರಿಸುವುದರ ಮೂಲಕ ಕೊಡ ವರು ಬಂದೂಕನ್ನು ತಮ್ಮ ಸಂಪ್ರದಾಯ-ಸಂಸ್ಕøತಿಯ ಒಂದು ಭಾಗವಾಗಿಯೇ ಪರಿಗಣಿಸಿದ್ದಾರೆ. ಕೊಡವ ಸಮುದಾಯದವರಿಗೆ ಬಂದೂಕು ಹೊಂದಲು ಲೈಸೆನ್ಸ್ ಪಡೆಯುವುದರಿಂದ ವಿನಾಯಿತಿ ನೀಡಲಾಗಿದೆ. ಈ ವಿನಾಯಿತಿಯು ಬ್ರಿಟಿಷರ ಕಾಲದಿಂದಲೂ ಚಾಲ್ತಿಯಲ್ಲಿದ್ದು, ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರವೂ ಕೇಂದ್ರ ಸರ್ಕಾರ ಕೊಡವರಿಗೆ ಕೋವಿ ಹೊಂದಲು ವಿನಾಯಿತಿ ನೀಡುತ್ತಾ ಬಂದಿದೆ. ಆದರೆ ಕೊಡಗು ಮೂಲದ ವರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿರುವ ನಿವೃತ್ತ ಕ್ಯಾಪ್ಟನ್ ವೈ.ಕೆ.ಚೇತನ್ ಎಂಬುವರು, ಕೊಡವರಿಗೆ ಕೋವಿ ಹಕ್ಕು ವಿನಾಯಿತಿ ನೀಡುವುದನ್ನು ಪ್ರಶ್ನಿಸಿ 2015ರಲ್ಲಿ ರಾಜ್ಯ ಹೈಕೋರ್ಟ್ ಮೆಟ್ಟಿಲೇರಿದ್ದರು. ಆನಂತರ ಮತ್ತೆ 2018ರಲ್ಲೂ ವಿನಾಯಿತಿಯನ್ನು ಹೈಕೋರ್ಟ್‍ನಲ್ಲಿ ಪ್ರಶ್ನಿಸಿದ್ದರು.
ಎಲ್ಲಿ ತಮ್ಮ ಸಂಸ್ಕøತಿಯ ಭಾಗವಾಗಿರುವ ಕೋವಿ ಹಕ್ಕು ವಿನಾಯಿತಿಗೆ ಕಂಟಕ ಬರುತ್ತದೋ ಎಂದು ಕೊಡವರು ಆತಂಕಕ್ಕೊಳಗಾಗಿದ್ದರು. ಬೆಂಗಳೂರು ಕೊಡವ ಸಮಾಜ ಮತ್ತಿತರ ಕೊಡವ ಸಂಘಟನೆಗಳು ಕಾನೂನು ಹೋರಾಟದ ಜೊತೆಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಕೋವಿ ಹಕ್ಕು ವಿನಾಯಿತಿ ಉಳಿವಿಗೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಕೂರ್ಗ್ ಬೈ ರೇಸ್ ಹಾಗೂ ಜಮ್ಮಾ ಕೋವಿ ವಿನಾಯ್ತಿ ಯನ್ನು 10 ವರ್ಷಗಳ ಕಾಲ ವಿಸ್ತರಿಸಿ ಅಧಿಸೂಚನೆ ಹೊರಡಿಸಿದೆ.
ಕೋವಿ ಹೊಂದುವುದು ತಮ್ಮ ಸಮುದಾಯದ ಜನ್ಮಸಿದ್ಧ ಹಕ್ಕಾಗಿದ್ದು, ಬಂದೂಕು ತಮ್ಮ ಸಂಸ್ಕøತಿಯ ಒಂದು ಭಾಗವಾಗಿದೆ. ಅದಕ್ಕೆ ಕಾಲ ಮಿತಿ ಸರಿಯಲ್ಲ. ಕೋವಿ ಹಕ್ಕು ವಿನಾಯಿತಿಗೆ ಈಗ ನಿಗದಿಪಡಿಸಿರುವ 2029ರ ಮಿತಿಯನ್ನು ತೆಗೆದು ಹಾಕಬೇಕು. ಅಲ್ಲದೇ ಕೋವಿ ಹಕ್ಕು ವಿನಾಯಿತಿ ಕೊಡವರ ಹಕ್ಕು ಎಂಬುದನ್ನು ಶಾಶ್ವತಪಡಿಸಬೇಕು ಎಂಬುದು ಕೊಡವ ಸಮುದಾಯದ ಒಕ್ಕೊರಲ ಆಗ್ರಹವಾಗಿದೆ.