12 ಸಾವಿರ ಉದ್ಯೋಗಿಗಳಿಗೆ ಗೇಟ್‍ಪಾಸ್ ನೀಡಲಿದೆ ಕಾಗ್ನಿಜೆಂಟ್
ಮೈಸೂರು

12 ಸಾವಿರ ಉದ್ಯೋಗಿಗಳಿಗೆ ಗೇಟ್‍ಪಾಸ್ ನೀಡಲಿದೆ ಕಾಗ್ನಿಜೆಂಟ್

November 1, 2019

ಬೆಂಗಳೂರು,ಅ.31- ಮಾಹಿತಿ ತಂತ್ರಜ್ಞಾನ ಕ್ಷೇತ್ರದ ದಿಗ್ಗಜ ಕಂಪನಿ ಕಾಗ್ನಿಜೆಂಟ್ ತನ್ನ 12 ಸಾವಿರ ಉದ್ಯೋಗಿಗಳಿಗೆ ಗೇಟ್ ಪಾಸ್ ನೀಡಲಿದೆ. ಮಧ್ಯಮ ಶ್ರೇಣಿಯಿಂದ ಆರಂಭಿಸಿ ಹಿರಿಯ ಶ್ರೇಣಿವರೆಗಿನ 10 ಸಾವಿರದಿಂದ 12 ಸಾವಿರ ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಲಿದ್ದೇವೆ ಎಂದು ಕಾಗ್ನಿಜೆಂಟ್ ಕಂಪನಿ ಪ್ರಕಟಿಸಿದೆ.

ಕಾಗ್ನಿಜೆಂಟ್‍ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯರೇ ಉದ್ಯೋಗದಲ್ಲಿದ್ದಾರೆ. 2 ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಭಾರ ತೀಯ ಉದ್ಯೋಗಿಗಳನ್ನು ಹೊಂದಿರುವ ಕಾಂಗ್ನಿಜೆಂಟ್ ದೇಶದ 2ನೇ ಅತಿ ಹೆಚ್ಚು ಉದ್ಯೋಗಿಗಳನ್ನು ಹೊಂದಿದೆ. ಕಂಟೆಂಟ್ ಹೆಚ್ಚಿಸುವ ಸಂಬಂಧ ಫೇಸ್‍ಬುಕ್ ಕಾಗ್ನಿಜೆಂಟ್ ಜೊತೆ ಒಪ್ಪಂದ ಮಾಡಿಕೊಂಡಿತ್ತು. ಫೇಸ್‍ಬುಕ್ ಕೆಲಸಕ್ಕೆ ನಿಯೋ ಜನೆಗೊಂಡಿದ್ದ ಉದ್ಯೋಗಿಗಳು ಒತ್ತಡಕ್ಕೆ ಒಳಗಾಗಿದ್ದರು. ಅಲ್ಲದೇ ಓರ್ವ ಉದ್ಯೋಗಿ ಮೃತಪಟ್ಟ ಹಿನ್ನೆಲೆಯಲ್ಲಿ ಫೇಸ್‍ಬುಕ್ ಈ ಒಪ್ಪಂದದಿಂದ ಹಿಂದಕ್ಕೆ ಸರಿದಿದೆ. ಸೆಪ್ಟೆಂಬರ್‍ನಲ್ಲಿ ಅಂತ್ಯ ಗೊಂಡ 3ನೇ ತ್ರೈಮಾಸಿಕದಲ್ಲಿ 352 ಕೋಟಿ ನಿವ್ವಳ ಲಾಭ ಗಳಿಸಿತ್ತು. ಆದಾಯದಲ್ಲಿ ಶೇ.4.5 ರಷ್ಟು ಏರಿಕೆ ಕಂಡು 30 ಸಾವಿರ ಕೋಟಿ ಗಳಿಸಿತ್ತು. ಆದಾಯವನ್ನು ಹೆಚ್ಚಿಸಿ ವೆಚ್ಚವನ್ನು ತಗ್ಗಿಸಲು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಕಾಗ್ನಿಜೆಂಟ್ ಸಮರ್ಥಿಸಿಕೊಂಡಿದೆ.ಕೊಲ್ಲಿ ಎಂದು ಟಿಪ್ಪು ಸುಲ್ತಾನ್ ಖಡ್ಗದಲ್ಲಿ ಬರೆದಿರುವುದು ಸುಳ್ಳೇ ಎಂದು ಪ್ರಶ್ನಿಸಿದರು.

Translate »