ಕುಲಭೂಷಣ್ ಪ್ರಕರಣ: ಪಾಕ್ ವಿಯೆನ್ನಾ ಒಪ್ಪಂದ ಉಲ್ಲಂಘಿಸಿದೆ ಎಂದ ಐಸಿಜೆ
ಮೈಸೂರು

ಕುಲಭೂಷಣ್ ಪ್ರಕರಣ: ಪಾಕ್ ವಿಯೆನ್ನಾ ಒಪ್ಪಂದ ಉಲ್ಲಂಘಿಸಿದೆ ಎಂದ ಐಸಿಜೆ

November 1, 2019

ವಿಶ್ವಸಂಸ್ಥೆ,ಅ.31-ಪಾಕಿಸ್ತಾನದ ವಿರುದ್ಧ ಭಾರತಕ್ಕೆ ಮತ್ತೊಂದು ಗೆಲುವು ಸಿಕ್ಕಿದೆ. ಕುಲಭೂಷಣ್ ಜಾದವ್ ಪ್ರಕರಣದಲ್ಲಿ ಪಾಕಿಸ್ತಾನ ವಿಯೆನ್ನಾ ಒಪ್ಪಂದ ವನ್ನು ಉಲ್ಲಂಘಿಸಿದೆ ಎಂದು ಇಂಟರ್‍ನ್ಯಾಷನಲ್ ಕೋರ್ಟ್ ಆಫ್ ಜಸ್ಟೀಸ್ (ಐಸಿಜೆ) ಹೇಳಿದೆ. ಕುಲಭೂಷಣ್ ಪ್ರಕರಣಕ್ಕೆ ಸಂಬಂಧಿಸಿ ಐಸಿಜೆ ಅಧ್ಯಕ್ಷ ನ್ಯಾಯಮೂರ್ತಿ ಎ.ಯೂಸುಫ್, ವಿಯೆನ್ನಾ ಒಪ್ಪಂ ದದ 36ನೇ ಅನು ಚ್ಛೇದದ ಅಂಶವನ್ನು ಪಾಕಿಸ್ತಾನ ಉಲ್ಲಂಘಿಸಿದೆ. ಅದರ ಅಂಶಗಳನ್ನು ತಪ್ಪಾಗಿ ಹೇಳುತ್ತ, ಶಂಕಿತ ರಾಷ್ಟ್ರದ್ರೋಹಿ ಕೈದಿಗಳ ಮೇಲೆ ಅನ್ವಯಿಸಿದೆ ಎಂದರು. ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿಯಲ್ಲಿ ನ್ಯಾಯಮೂರ್ತಿ ಎ. ಯೂಸುಫ್ ಮಾತನಾಡಿದ್ದು, ಜಾಧವ್ ಪ್ರಕರಣದಲ್ಲಿ ರಾಜತಾಂತ್ರಿಕ ಸಂಪರ್ಕವನ್ನೂ ಜಾಧವ್‍ಗೆ ಒದಗಿಸದೆ ವಿಯೆನ್ನಾ ಒಪ್ಪಂದದ ಉಲ್ಲಂಘನೆಯನ್ನು ಪಾಕಿಸ್ತಾನ ಮಾಡಿದೆ ಎಂಬ ಅಭಿಪ್ರಾಯವನ್ನು ಮಂಡಿಸಿ ತನ್ನ ವರದಿಯನ್ನು ಬುಧವಾರ ಅಲ್ಲಿ ಸಲ್ಲಿಸಿದ್ದಾರೆ. ಕುಲಭೂಷಣ್ ಬಂಧನದ ವಿಚಾರವನ್ನು ಬಹಿರಂಗಗೊಳಿಸುವಾಗ ಪಾಕಿಸ್ತಾನ 3 ವಾರ ತೆಗೆದುಕೊಂಡಿತ್ತು. ಇದನ್ನು ಅದು ತಡಮಾಡದೇ ಭಾರತದ ರಾಯಭಾರ ಕಚೇರಿಗೆ ತಿಳಿಸಬೇಕಾಗಿತ್ತು. ಹೀಗಾಗಿ ವಿಯೆನ್ನಾ ಒಪ್ಪಂದದ ಪ್ರಕಾರ ಎಂಬುದರ ವ್ಯಾಖ್ಯೆಯನ್ನು ಪಾಕಿಸ್ತಾನ ಕೊಡಬೇಕು ಎಂದು ನ್ಯಾಯಮೂರ್ತಿ ಎ.ಯೂಸುಫ್ ಹೇಳಿದರು.

Translate »