ಬೆಂಗಳೂರು, ಅ. 11(ಕೆಎಂಶಿ)- ಅತಿವೃಷ್ಟಿ ಹಾಗೂ ಅನಾ ವೃಷ್ಟಿಯಿಂದ ಕಂಗಾಲಾಗಿರುವ ರಾಜ್ಯ ಮತ್ತೊಂದು ಅತಿವೃಷ್ಟಿಗೆ ಒಳಗಾಗುವ ಆತಂಕ ಎದುರಾಗಿದ್ದು, ಹಾಲು ಮತ್ತಿತರ ಡೈರಿ ಪದಾರ್ಥಗಳನ್ನು ತೆರಿಗೆಯಿಲ್ಲದೆ ದೇಶದೊಳಗೆ ಬಿಟ್ಟುಕೊಳ್ಳಲು ಮುಂದಾಗಿರುವ ಕೇಂದ್ರ ಸರ್ಕಾರದ ಧೋರಣೆ ರೈತರ ಪಾಲಿಗೆ ಗಂಡಾಂತರಕಾರಿ ಯಾಗುವುದು ನಿಶ್ಚಿತವಾಗಿದೆ. ಹನ್ನೆರಡು ದೇಶಗಳಿಂದ ತೆರಿಗೆ ರಹಿತವಾಗಿ ಹಾಲು ಮತ್ತಿತರ ಡೈರಿ ಪದಾರ್ಥಗಳನ್ನು ತರಿಸಲು ಕೇಂದ್ರ ಸರ್ಕಾರ ಈಗಾಗಲೇ ಪ್ರಾಥಮಿಕ ಸುತ್ತಿನ ಮಾತುಕತೆ ನಡೆಸಿದ್ದು ಮುಂದಿನ ತಿಂಗಳ ವೇಳೆಗೆ ಅಂತಿಮ ಒಪ್ಪಂದ ಮಾಡಿಕೊಳ್ಳಲು ಸಜ್ಜಾಗಿದೆ. ಕೇಂದ್ರ ಸರ್ಕಾರದ…
ಆರೋಗ್ಯ ಭಾರತ ನಿರ್ಮಾಣ ಇಂದಿನ ಸವಾಲು
October 12, 2019ಮೈಸೂರು, ಅ. 11(ಆರ್‍ಕೆ)- ಆರೋಗ್ಯ ಭಾರತ ನಿರ್ಮಾಣ ಮಾಡುವುದು ನಮ್ಮ ಇಂದಿನ ಸವಾಲಾಗಿದೆ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಇಂದಿಲ್ಲಿ ತಿಳಿಸಿದ್ದಾರೆ. ಮೈಸೂರು ತಾಲೂಕಿನ ವರುಣಾ ಗ್ರಾಮದ ಬಳಿ, ಚಿಕ್ಕಳ್ಳಿ-ಆಯರಹಳ್ಳಿ ರಸ್ತೆಯಲ್ಲಿ ಜೆಎಸ್‍ಎಸ್ ವಿದ್ಯಾಪೀಠದ ವತಿಯಿಂದ ನಿರ್ಮಿಸಲುದ್ದೇಶಿಸಿರುವ ಜೆಎಸ್‍ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಯ ನೂತನ ಸಮುಚ್ಚಯಕ್ಕೆ ಶಿಲಾನ್ಯಾಸ ಹಾಗೂ ಜಗದ್ಗುರು ಡಾ. ಶಿವರಾತ್ರಿ ರಾಜೇಂದ್ರ ಮಹಾಸ್ವಾಮೀಜಿಗಳ 104ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತ ನಾಡುತ್ತಿದ್ದರು. ಪ್ರತಿಯೊಬ್ಬರಿಗೂ ಆರೋಗ್ಯ ಭದ್ರತೆ ಒದಗಿಸುವ ಸಲುವಾಗಿ ಈಗಾ…
ವಿಶ್ವ ವಿಖ್ಯಾತ ಸ್ಯಾಕ್ಸೋಫೋನ್ ವಾದಕ ಕದ್ರಿ ಗೋಪಾಲನಾಥ್ ನಿಧನ
October 12, 2019ಮಂಗಳೂರು, ಅ.11-ವಿಶ್ವವಿಖ್ಯಾತ ಸ್ಯಾಕ್ಸೋಫೋನ್ ವಾದಕ ಕದ್ರಿ ಗೋಪಾಲ ನಾಥ್ (70) ವಯೋಸಹಜ ಅನಾ ರೋಗ್ಯದಿಂದ ಇಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. 1949ರ ಡಿಸೆಂಬರ್ 11ರಂದು ಜನಿ ಸಿದ ಗೋಪಾಲನಾಥ್ ಅವರು ಸ್ಯಾಕ್ಸೋ ಫೆÇೀನ್ ವಾದನದಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತದ ಅಳವಡಿಕೆ ಯಿಂದ ವಿಶ್ವಪ್ರಸಿದ್ಧಿ ಪಡೆದಿದ್ದರು. ಕೆಲವು ದಿನಗಳಿಂದ ಅನಾರೋಗ್ಯ ದಿಂದ ಬಳಲುತ್ತಿದ್ದ ಗೋಪಾಲನಾಥ್ ಅವರು ಮಂಗಳೂರು ಎ.ಜೆ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಪತ್ನಿ ಸರೋಜಿನಿ, ಪುತ್ರರಾದ ಸಂಗೀತ ನಿರ್ದೇಶಕ ಮಣಿಕಾಂತ ಕದ್ರಿ, ಗುರು ಪ್ರಸಾದ್…
ಅಪ್ಪಟ ದೇಶೀ ವೇಷ ಪಂಚೆ, ಶರ್ಟ್ ಧರಿಸಿ ಚೀನಾ ಅಧ್ಯಕ್ಷರನ್ನು ಸ್ವಾಗತಿಸಿದ ಪ್ರಧಾನಿ ಮೋದಿ
October 12, 2019ಚೆನ್ನೈ: ಎರಡು ದಿನ ಭಾರತ ಪ್ರವಾಸ ದಲ್ಲಿರುವ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರು ಶುಕ್ರವಾರ ಸಂಜೆ ಮಹಾಬಲಿಪುರಂಗೆ ಆಗಮಿಸಿದ್ದು, ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ, ತಮಿಳು ನಾಡು ರಾಜ್ಯಪಾಲ ಬನ್ವರಿಲಾಲ್ ಪುರೋ ಹಿತ್, ಮುಖ್ಯಮಂತ್ರಿ ಎಡಪ್ಪಾಡಿ ಕೆ. ಪಳನಿ ಸ್ವಾಮಿ ಹಾಗೂ ಉಪ ಮುಖ್ಯಮಂತ್ರಿ ಪನ್ನೀರ್ ಸೆಲ್ವಂ ಅದ್ಧೂರಿ ಸ್ವಾಗತ ನೀಡಿದರು. ಇಂದು ಮಧ್ಯಾಹ್ನ ಚೆನ್ನೈ ವಿಮಾನ ನಿಲ್ದಾಣಕ್ಕೆ ಬಂದಿಳಿದ ಚೀನಾ ಅಧ್ಯಕ್ಷರಿಗೆ ಸಾಂಪ್ರದಾಯಿಕ ನೃತ್ಯದ ಮೂಲಕ ತಮಿಳು ನಾಡು ಸರ್ಕಾರ ಅಭೂತಪೂರ್ವ…
ಫೋರ್ಜರಿ ಸಹಿ ಮಾಡಿ ಸಿಎಂ ಬಿಎಸ್‍ವೈ ಯಾಮಾರಿಸಿದ ಅಧಿಕಾರಿ..!
October 12, 2019ಬೆಂಗಳೂರು: ಫೋರ್ಜರಿ ಸಹಿ ಮಾಡಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವ ರನ್ನೇ ಯಾಮಾರಿಸಿದ ಆರೋಪ ಕೇಳಿ ಬಂದಿದೆ. ಚಂದ್ರಕಾಂತ್ ಬಿ.ಕೆ. ಫೋರ್ಜರಿ ಸಹಿ ಮಾಡಿ ಸಿಎಂ ಯಡಿಯೂರಪ್ಪ ಅವ ರನ್ನೇ ಯಾಮಾರಿಸಿದ ವಂಚಕ ಅಧಿಕಾರಿ ಎನ್ನ ಲಾಗಿದೆ. ಚಂದ್ರಕಾಂತ್ ಬಿ.ಕೆ ಚಿಕ್ಕಬಳ್ಳಾ ಪುರ ಜಿಲ್ಲಾ ಪಂಚಾಯತ್ ಸಹಾಯಕ ಕಾರ್ಯದರ್ಶಿ. ಇದೀಗ ಚಂದ್ರಕಾಂತ್ ವರ್ಗಾವಣೆ ವಿಚಾರದಲ್ಲಿ ಸಿಎಂ ರಾಜಕೀಯ ಕಾರ್ಯದರ್ಶಿ ಎಸ್.ಆರ್.ವಿಶ್ವನಾಥ್ ಸಹಿಯನ್ನು ಫೋರ್ಜರಿ ಮಾಡಿದ್ದಾರೆ. ಅಲ್ಲದೆ ವಿಶ್ವನಾಥ್ ಹೆಸರಿನ ಲೆಟರ್ ಹೆಡ್ ಬಳಸಿ ಸಿಎಂಗೆ ಪತ್ರ ನೀಡಿದ್ದಾರೆ. ಈ…
ದ್ವಿತೀಯ ಟೆಸ್ಟ್: ಭಾರತ 601ಕ್ಕೆ ಡಿಕ್ಲೇರ್
October 12, 2019ಪುಣೆ, ಅ.11- ನಾಯಕ ವಿರಾಟ್ ಕೊಹ್ಲಿ ಅವರ ಭರ್ಜರಿ ದ್ವಿಶತಕದ ನೆರವಿನಿಂದ ಭಾರತ ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ತನ್ನ ಮೊದಲ ಇನ್ನಿಂಗ್ಸ್‍ನಲ್ಲಿ 5 ವಿಕೆಟ್ ನಷ್ಟಕ್ಕೆ 601ರನ್ ಗಳ ಬೃಹತ್ ಮೊತ್ತ ದಾಖಲಿಸಿ ಡಿಕ್ಲೇರ್ ಮಾಡಿಕೊಂಡಿದೆ. 2ನೇ ದಿನವಾದ ಶುಕ್ರವಾರ 3 ವಿಕೆಟ್‍ಗೆ 273 ರನ್‍ಗಳಿಂದ ಆಟ ಮುಂದುವರಿಸಿದ ನಾಯಕ ವಿರಾಟ್ ಕೊಹ್ಲಿ ಹಾಗೂ ಅಜಿಂಕ್ಯಾ ರಹಾನೆ ಮೊದಲ ಅವಧಿಯಲ್ಲಿ ಎಚ್ಚರಿಕೆಯ ಆಟವಾಡಿದರು. ಈ ಜೋಡಿ 4ನೇ ವಿಕೆಟ್‍ಗೆ 178ರನ್‍ಗಳ ಜೊತೆಯಾಟವಾಡುವ ಮೂಲಕ…
ಯುವಕರಿಗೆ ಮುಂದಿನ ಜೀವನ ರೂಪಿಸಿಕೊಳ್ಳಲು ಅಧ್ಯಯನ ಕೊರತೆಯಿದೆ
October 12, 2019ಮೈಸೂರು,ಅ.11(ಎಸ್‍ಪಿಎನ್)-ಇಂದಿನ ಯುವಕ ರಲ್ಲಿ ತಮ್ಮ ಮುಂದಿನ ಜೀವನ ರೂಪಿಸಿಕೊಳ್ಳಲು ಅಧ್ಯಯನ ಕೊರತೆಯಿದೆ. ಆದ್ದರಿಂದಲ್ಲೇ ಅವರಿಗೆ ಭವಿಷ್ಯದ ಸಾಧನೆ ಬೆಳಕು ಕಾಣುತ್ತಿಲ್ಲ ಎಂದು ಮೈಸೂರು ವಿವಿ ತತ್ವಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ.ವಿ.ಎನ್.ಶೇಷಗಿರಿರಾವ್ ಅಭಿಪ್ರಾಯಪಟ್ಟರು. ಮೈಸೂರು ವಿವಿ ಸಂಜೆ ಕಾಲೇಜು ಆವರಣದಲ್ಲಿ ಮಹಾತ್ಮ ಗಾಂಧಿ ಅಧ್ಯಯನ ಕೇಂದ್ರ, ವಿವಿ ಸಂಜೆ ಕಾಲೇಜು ಸಹಯೋಗದೊಂದಿಗೆ ಆಯೋಜಿಸಿದ್ದ ಗಾಂಧಿ 150ರ ವರ್ಷಾಚರಣೆಯ ವಿಶೇಷ ಉಪ ನ್ಯಾಸ ಕಾರ್ಯಕ್ರಮದಲ್ಲಿ `ಯುವ ಜನತೆಯೆಡೆಗೆ ಗಾಂಧಿ’ ಕುರಿತು ಮಾತನಾಡಿದರು. ವಿದ್ಯಾರ್ಥಿ ದಿಸೆಯಲ್ಲಿ ಗಾಂಧೀಜಿ ಎಲ್ಲರಂತೆ ಅವರೂ ಬದುಕು…
ಅಂತಾರಾಷ್ಟ್ರೀಯ ಮುಕ್ತ ವ್ಯಾಪಾರ ಒಪ್ಪಂದದಲ್ಲಿ ಹಾಲು ಆಮದು ಸಲ್ಲ
October 12, 2019ಮೈಸೂರು,ಅ.11(ಎಂಟಿವೈ)- ಕೇಂದ್ರ ಸರ್ಕಾರ ಏಷ್ಯಾ-ಫೆಸಿಫಿಕ್ ರಾಷ್ಟ್ರಗಳೊಂ ದಿಗೆ ಮಾಡಿಕೊಳ್ಳಲು ಮುಂದಾಗಿರುವ ಅಂತಾರಾಷ್ಟ್ರೀಯ ಮುಕ್ತ ವ್ಯಾಪಾರ ಒಪ್ಪಂದ ದಲ್ಲಿ ಹಾಲಿನ ಆಮದು ಸೇರಿಸದಂತೆ ಒತ್ತಾಯಿಸಿ ಮೈಸೂರು ಜಿಲ್ಲಾಧಿಕಾರಿ ಕಚೇರಿ ಬಳಿ ಮೈಸೂರು ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಪದಾಧಿಕಾರಿಗಳ ನೇತೃತ್ವದಲ್ಲಿ ಹಾಲು ಉತ್ಪಾದಕರ ಸಂಘಗಳ ಸದಸ್ಯರು ಶುಕ್ರವಾರ ಪ್ರತಿಭಟನೆ ನಡೆಸಿದರು. ಮೈಸೂರು ಜಿಲ್ಲೆಯಾದ್ಯಂತ ಇರುವ ಹಾಲು ಉತ್ಪಾದಕರ ಸಹಕಾರ ಸಂಘಗಳ ಕಾರ್ಯದರ್ಶಿಗಳು, ಹಾಲು ಉತ್ಪಾದಕರು ನಡೆಸಿದ ಪ್ರತಿಭಟನೆಯಲ್ಲಿ ಹಾಲು ಒಕ್ಕೂ ಟದ ಅಧಿಕಾರಿಗಳು, ಪದಾಧಿಕಾರಿಗಳು ಪಾಲ್ಗೊಂಡು,…
ಕೇಂದ್ರದಿಂದ ದಮನಕಾರಿ ನೀತಿ: ಮಾಜಿ ಸಂಸದ ಧ್ರುವನಾರಾಯಣ ಆರೋಪ
October 12, 2019ಮೈಸೂರು,ಅ.11(ಎಂಟಿವೈ)- ಕೇಂದ್ರ ಸರ್ಕಾರ ಪ್ರತಿಪಕ್ಷದವರನ್ನು ಗುರಿಯಾಗಿ ಸಿಕೊಂಡು ಐಟಿ, ಇಡಿ ದಾಳಿ ನಡೆಸುವ ಮೂಲಕ ಅವರನ್ನು ಹತ್ತಿಕ್ಕುವ ಮಾರ್ಗವನ್ನು ದೇಶದಾದ್ಯಂತ ಅನುಸರಿಸುತ್ತಿದ್ದು, ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರ ಶಿಕ್ಷಣ ಸಂಸ್ಥೆ ಮತ್ತು ನಿವಾಸದ ಮೇಲೆ ನಡೆದಿರುವ ಐಟಿ ದಾಳಿ ರಾಜಕೀಯ ದುರು ದ್ದೇಶದಿಂದ ಕೂಡಿದೆ ಎಂದು ಮಾಜಿ ಸಂಸದ ಆರ್.ಧ್ರುವನಾರಾಯಣ ಆರೋಪಿಸಿದ್ದಾರೆ ಮೈಸೂರಿನ ಜಲದರ್ಶಿನಿ ಅತಿಥಿಗೃಹ ದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಅವರು, ಐಟಿ ದಾಳಿಗೆ ನಮ್ಮ ಯಾವುದೇ ವಿರೋಧವಿಲ್ಲ. ಆದಾಯ ತೆರಿಗೆ ಇಲಾಖೆಗೆ…
ನಾಳೆ ಮಹರ್ಷಿ ವಾಲ್ಮೀಕಿ ಭಾವಚಿತ್ರ ಮೆರವಣಿಗೆ
October 12, 2019ಮೈಸೂರು, ಅ.11(ಆರ್‍ಕೆಬಿ)- ಮಹರ್ಷಿ ವಾಲ್ಮೀಕಿ ಜಯಂತಿ ಅಂಗವಾಗಿ ಅ.13ರಂದು ಬೆಳಿಗ್ಗೆ 10 ಗಂಟೆಗೆ ಮೈಸೂರಿನ ಅರಮನೆ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿಯಿಂದ ಕಲಾಮಂದಿರದವರೆಗೆ ಮಹರ್ಷಿ ವಾಲ್ಮೀಕಿ ಭಾವಚಿತ್ರದ ಮೆರವಣಿಗೆ ನಡೆಸಲಾಗು ವುದು ಎಂದು ವಾಲ್ಮೀಕಿ ಜಯಂತ್ಯೋತ್ಸವ ಸಮಿತಿ ಮುಖಂಡ ಕ್ಯಾತಮಾರನಹಳ್ಳಿ ವೆಂಕಟೇಶ್ ತಿಳಿಸಿದರು. ಮೈಸೂರು ಜಿಲ್ಲಾಪತ್ರಕರ್ತರ ಭವನದಲ್ಲಿ ಶುಕ್ರವಾರ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿ, ಮೆರವಣಿಗೆಯು ಕೆ.ಆರ್.ವೃತ್ತ, ಡಿ.ದೇವರಾಜ ಅರಸು ರಸ್ತೆ, ಜೆಎಲ್‍ಬಿ ರಸ್ತೆ, ಮೆಟ್ರೊಪೋಲ್ ವೃತ್ತ, ಹುಣಸೂರು ರಸ್ತೆ ಮೂಲಕ ಕಲಾಮಂದಿರ ತಲುಪಲಿದೆ. ಬಳಿಕ ಮಧ್ಯಾಹ್ನ…










