ಫೋರ್ಜರಿ ಸಹಿ ಮಾಡಿ ಸಿಎಂ ಬಿಎಸ್‍ವೈ ಯಾಮಾರಿಸಿದ ಅಧಿಕಾರಿ..!
ಮೈಸೂರು

ಫೋರ್ಜರಿ ಸಹಿ ಮಾಡಿ ಸಿಎಂ ಬಿಎಸ್‍ವೈ ಯಾಮಾರಿಸಿದ ಅಧಿಕಾರಿ..!

October 12, 2019

ಬೆಂಗಳೂರು: ಫೋರ್ಜರಿ ಸಹಿ ಮಾಡಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವ ರನ್ನೇ ಯಾಮಾರಿಸಿದ ಆರೋಪ ಕೇಳಿ ಬಂದಿದೆ.
ಚಂದ್ರಕಾಂತ್ ಬಿ.ಕೆ. ಫೋರ್ಜರಿ ಸಹಿ ಮಾಡಿ ಸಿಎಂ ಯಡಿಯೂರಪ್ಪ ಅವ ರನ್ನೇ ಯಾಮಾರಿಸಿದ ವಂಚಕ ಅಧಿಕಾರಿ ಎನ್ನ ಲಾಗಿದೆ. ಚಂದ್ರಕಾಂತ್ ಬಿ.ಕೆ ಚಿಕ್ಕಬಳ್ಳಾ ಪುರ ಜಿಲ್ಲಾ ಪಂಚಾಯತ್ ಸಹಾಯಕ ಕಾರ್ಯದರ್ಶಿ. ಇದೀಗ ಚಂದ್ರಕಾಂತ್ ವರ್ಗಾವಣೆ ವಿಚಾರದಲ್ಲಿ ಸಿಎಂ ರಾಜಕೀಯ ಕಾರ್ಯದರ್ಶಿ ಎಸ್.ಆರ್.ವಿಶ್ವನಾಥ್ ಸಹಿಯನ್ನು ಫೋರ್ಜರಿ ಮಾಡಿದ್ದಾರೆ. ಅಲ್ಲದೆ ವಿಶ್ವನಾಥ್ ಹೆಸರಿನ ಲೆಟರ್ ಹೆಡ್ ಬಳಸಿ ಸಿಎಂಗೆ ಪತ್ರ ನೀಡಿದ್ದಾರೆ.

ಈ ನಕಲಿ ವರ್ಗಾವಣೆ ಆದೇಶ ಪತ್ರಕ್ಕೆ ಸಿಎಂ ಯಡಿಯೂರಪ್ಪ ಸಹಿ ಮಾಡಿ ದ್ದಾರೆ. ನಂತರ ಆರ್‍ಡಿಪಿಆರ್ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ಸಿಎಂ ಸಚಿ ವಾಲಯ ಪತ್ರ ರವಾನೆ ಆಗಿದೆ.

ನಕಲಿ ಲೆಟರ್ ಹೆಡ್‍ನಲ್ಲಿ ಏನಿತ್ತು..?: ಚಂದ್ರಶೇಖರ್ ಬಿ.ಕೆ. ಸಹಾಯಕ ಕಾರ್ಯ ದರ್ಶಿಯಾಗಿ ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯತ್‍ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ನನಗೆ ಪರಿಚಿತರಿದ್ದಾರೆ. ಇವರ ತಂದೆ ತಾಯಿಗೆ ವಯಸ್ಸಾಗಿದ್ದು, ವಯೋ ವೃದ್ಧರನ್ನು ಆರೈಕೆ ಮಾಡುವ ಅಗತ್ಯ ಇದೆ. ಹೀಗಾಗಿ ಬೆಂಗಳೂರು ಜಿಲ್ಲಾ ಪಂಚಾಯತಿ ಸಹಾಯಕ ಯೋಜನಾ ಅಧಿಕಾರಿ 01 ಆಗಿ ಕಾರ್ಯನಿರ್ವಹಿಸು ತ್ತಿರುವ ವಿಠಲ್ ಕಾವಳೆ ಜಾಗಕ್ಕೆ ವರ್ಗಾ ವಣೆ ಮಾಡುವಂತೆ ಸಂಬಂಧಪಟ್ಟವರಿಗೆ ಸೂಕ್ತ ಆದೇಶ ನೀಡಬೇಕು ಎಂದು ಕೋರುತ್ತೇನೆ ಅಂತಾ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ್ಪ ಅವರಿಗೆ ಎಸ್ ಆರ್ ವಿಶ್ವನಾಥ್ ಬರೆದಿರುವಂತೆ ಲೆಟರ್ ಹೆಡ್ ಮಾಡಿ ಯಾಮಾರಿಸಿದ್ದಾರೆ ಎನ್ನಲಾಗಿದೆ

Translate »