ಕೇಂದ್ರದಿಂದ ದಮನಕಾರಿ ನೀತಿ: ಮಾಜಿ ಸಂಸದ ಧ್ರುವನಾರಾಯಣ ಆರೋಪ
ಮೈಸೂರು

ಕೇಂದ್ರದಿಂದ ದಮನಕಾರಿ ನೀತಿ: ಮಾಜಿ ಸಂಸದ ಧ್ರುವನಾರಾಯಣ ಆರೋಪ

October 12, 2019

ಮೈಸೂರು,ಅ.11(ಎಂಟಿವೈ)- ಕೇಂದ್ರ ಸರ್ಕಾರ ಪ್ರತಿಪಕ್ಷದವರನ್ನು ಗುರಿಯಾಗಿ ಸಿಕೊಂಡು ಐಟಿ, ಇಡಿ ದಾಳಿ ನಡೆಸುವ ಮೂಲಕ ಅವರನ್ನು ಹತ್ತಿಕ್ಕುವ ಮಾರ್ಗವನ್ನು ದೇಶದಾದ್ಯಂತ ಅನುಸರಿಸುತ್ತಿದ್ದು, ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರ ಶಿಕ್ಷಣ ಸಂಸ್ಥೆ ಮತ್ತು ನಿವಾಸದ ಮೇಲೆ ನಡೆದಿರುವ ಐಟಿ ದಾಳಿ ರಾಜಕೀಯ ದುರು ದ್ದೇಶದಿಂದ ಕೂಡಿದೆ ಎಂದು ಮಾಜಿ ಸಂಸದ ಆರ್.ಧ್ರುವನಾರಾಯಣ ಆರೋಪಿಸಿದ್ದಾರೆ

ಮೈಸೂರಿನ ಜಲದರ್ಶಿನಿ ಅತಿಥಿಗೃಹ ದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಅವರು, ಐಟಿ ದಾಳಿಗೆ ನಮ್ಮ ಯಾವುದೇ ವಿರೋಧವಿಲ್ಲ. ಆದಾಯ ತೆರಿಗೆ ಇಲಾಖೆಗೆ ದಾಳಿ ಮಾಡುವ ಹಕ್ಕಿದೆ. ಆದರೇ ವಿರೋಧ ಪಕ್ಷದ ನಾಯಕರನ್ನೇ ಗುರಿಯಾಗಿ ಸಿಕೊಂಡು ದಾಳಿ ನಡೆಸುವುದು ಸರಿಯಲ್ಲ. ಶಿಕ್ಷಣ ಭೀಷ್ಮರೆಂದೇ ಹೆಸರಾದವರು ಡಾ. ಜಿ.ಪರಮೇಶ್ವರ್ ಅವರ ತಂದೆ ಗಂಗಾಧರಯ್ಯ. 50 ವರ್ಷಗಳಿಂದ ಗ್ರಾಮಾಂತರ ಪ್ರದೇ ಶದ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಶ್ರಮಿಸಿದ್ದರು. ಲಾಭದ ಉದ್ದೇಶದಿಂದ ಅವರು ಶಿಕ್ಷಣ ಸಂಸ್ಥೆ ನಡೆಸಲಿಲ್ಲ. ಈಗ ಇಂತಹ ಶಿಕ್ಷಣ ಸಂಸ್ಥೆ ಮೇಲಿನ ಐಟಿ ದಾಳಿ ರಾಜಕೀಯ ಪ್ರೇರಿತ ಎಂದು ಜನಸಾಮಾನ್ಯರಿಗೂ ಅರ್ಥವಾಗುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮಹಾರಾಷ್ಟ್ರದಲ್ಲಿ ಚುನಾವಣೆ ನಡೆಯು ತ್ತಿರುವಾಗಲೇ ಮಾಜಿ ಸಿಎಂ ಶರದ್ ಪವಾರ್ ಮನೆ ಮೇಲೆ ದಾಳಿ ಮಾಡಬೇಕಿತ್ತೆ? ಉತ್ತರ ಪ್ರದೇಶದಲ್ಲಿ ಮಾಜಿ ಸಿಎಂ ಮಾಯಾವತಿ ಸಂಬಂಧಿಕರ ಮನೆಗಳು, ಪಶ್ಚಿಮ ಬಂಗಾಳ ದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೇರಿ ವಿರೋಧ ಪಕ್ಷಗಳ ನಾಯಕರ ಗುರಿ ಯಾಗಿಟ್ಟುಕೊಂಡು ದಾಳಿ ಮಾಡುತ್ತಿರುವುದು ದಮನಕಾರಿ ನೀತಿಯಾಗಿದೆ ಎಂದರು.

ರಾಜ್ಯದಲ್ಲಿ ಆಪರೇಷನ್ ಕಮಲದ ಮೂಲಕ ಶಾಸಕರನ್ನು ಖರೀದಿಸಲು ಕೋಟ್ಯಾಂತರ ರೂ. ಬಳಕೆ ಮಾಡಲಾಗಿದೆ. ಬಿಜೆಪಿ ಮುಖಂಡ, ಮಾಜಿ ಸಚಿವ ಜನಾರ್ಧನರೆಡ್ಡಿ ಮಗಳ ಮದುವೆಗೆ ನೂರಾರು ಕೋಟ್ಯಾಂತರ ರೂ. ಖರ್ಚು ಮಾಡಿದರು. ಇವರ ಮೇಲೆ ಐಟಿ ಇಲಾಖೆ ಯಾವುದೇ ದಾಳಿ ಮಾಡಲಿಲ್ಲ. ಪ್ರಧಾನಿ ಮೋದಿ ಮುಖ್ಯಮಂತ್ರಿಯಾಗಿದ್ದ ವೇಳೆ ಗುಜರಾತಿನಲ್ಲಿ ವಿರೋಧ ಪಕ್ಷಗಳ ನಾಯಕ ರನ್ನು ದಮನ ಮಾಡಿದ ರೀತಿಯನ್ನೇ ಅನು ಸರಿಸಲಾಗುತ್ತಿದೆ. ಕಾಂಗ್ರೆಸ್ ನಾಯಕರ ಮೇಲೆ ಐಟಿ ದಾಳಿ ಮಾಡಿದ್ದು ಬಿಟ್ಟರೆ ಇದುವರೆಗೂ ಒಬ್ಬ ಬಿಜೆಪಿ ನಾಯಕರ ಮನೆಯ ಮೇಲೂ ದಾಳಿ ನಡೆಸಿಲ್ಲ. ಇದನ್ನು ಗಮನಿಸಿದರೆ ಕಾಂಗ್ರೆಸ್ ನಾಯಕರಿಗೆ ಭಯ ಹುಟ್ಟಿಸುವ ತಂತ್ರಗಾರಿಕೆ ಅನುಸರಿಸುತ್ತಿರುವುದು ಮೇಲ್ನೋ ಟಕ್ಕೆ ಕಂಡು ಬರುತ್ತಿದೆ ಎಂದರು.

ಅಭಿವೃದ್ಧಿ ಕುಂಠಿತ: 1 ಡಾಲರ್ ಬೆಲೆ 72 ರೂ. ಆಗಿದೆ. ಯಾವ ಕಾಲದಲ್ಲೂ ಇಷ್ಟು ಪ್ರಮಾ ಣದ ಏರಿಕೆಯಾಗಿರಲಿಲ್ಲ. ಜಿಡಿಪಿ ಕುಸಿಯು ತ್ತಿದೆ. ಉತ್ತಮ ಆಡಳಿತ ಕೊಡಲು ಕೇಂದ್ರ ಸರಕಾರ ವಿಫಲವಾಗಿದೆ. ಕೇಂದ್ರದಲ್ಲಿ ಬಿಜೆಪಿ ಸರಕಾರÀ ಅಸ್ತಿತ್ವದಲ್ಲಿದೆ ಎಂದು ಹೇಳಲಾಗು ವುದಿಲ್ಲ. ಪ್ರಧಾನಿ ನರೇಂದ್ರಮೋದಿ-ಅಮಿತ್ ಷಾ ಇಬ್ಬರೇ ಆಡಳಿತ ನಡೆಸುತ್ತ ವಿರೋಧ ಪಕ್ಷಗಳ ನಾಯಕರ ದಮನ ಮಾಡುತ್ತಿ ದ್ದಾರೆ ಎಂದರು.  ವಿಧಾನಸಭೆ ಅಧಿವೇಶನ ಕಲಾಪ ಚಿತ್ರೀಕರಣಕ್ಕೆ ವಿದ್ಯುನ್ಮಾನ ಮಾಧ್ಯಮ ಗಳಿಗೆ ನಿಷೇಧಿಸಿ ಪತ್ರಿಕಾ ಸ್ವಾತಂತ್ರ್ಯ ಮೊಟಕು ಗೊಳಿಸಿದಂತಾಗಿದೆ. ಇದು ದುರದುಷ್ಟಕರ ಬೆಳವಣಿಗೆ. ಮಾಜಿ ಪ್ರಧಾನಿ ಮನಮೋಹನ ಸಿಂಗ್ ಅವರು ಪ್ರತಿ ವರ್ಷ ಮಾಧ್ಯಮದವ ರೊಂದಿಗೆ ಸಂವಾದ ನಡೆಸುತ್ತಿದ್ದರು. ಮೋದಿ ತಮ್ಮ ಆಡಳಿತಾವಧಿಯ ಐದೂವರೆ ವರ್ಷದಲ್ಲಿ ಒಂದು ಬಾರಿಯೂ ಸಂವಾದ ನಡೆಸಿಲ್ಲ. ಇವೆಲ್ಲವೂ ಏಕಮುಖ ಮನಸ್ಸಿನ ಚಿಂತನೆಯ ಕ್ರಮವಾಗಿದೆ ಎಂದು ಟೀಕಿಸಿದರು.

19 ಜಿಲ್ಲೆಗಳಲ್ಲಿ ಬರ ಆವರಿಸಿದ್ದು ಜನರ ತೀವ್ರ ಸಂಕಷ್ಟದಲ್ಲಿದ್ದಾರೆ. ಜನರ ಸಂಕಷ್ಟ ಗಳಿಗೆ ಪರಿಹಾರ ಕಂಡುಕೊಳ್ಳಲು ವಿಶೇಷ ಅಧಿವೇಶನ ಕರೆಯಬೇಕಿತ್ತು. ಬೆಂಗಳೂರಿ ನಲ್ಲಿ ಮೂರು ದಿನಗಳ ಅಧಿವೇಶನ ಕೆಲವು ಬಿಲ್ ಪಾಸ್ ಮಾಡಲಷ್ಟೇ ಕರೆಯಲಾಗಿದೆ. ಈ ಅಧಿವೇಶನವನ್ನು ಬೆಳಗಾವಿಯಲ್ಲಿ ನಡೆಸಬೇಕಿತ್ತು ಎಂದರು.

ಸುದ್ದಿಗೋಷ್ಠಿಯಲ್ಲಿ ನಿಗಮ ಮಂಡಳಿ ಮಾಜಿ ಅಧ್ಯಕ್ಷರಾದ ಹೆಚ್.ಎ.ವೆಂಕ ಟೇಶ್, ಸೀತಾರಾಂ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯ್‍ಕುಮಾರ್, ಉಪಾಧ್ಯಕ್ಷ ಪ್ರಕಾಶ್ ಕುಮಾರ್, ವಕ್ತಾರ ಮಹೇಶ್ ಉಪಸ್ಥಿತರಿದ್ದರು.

 

Translate »