Tag: Mysore

ತಮಟೆ ಸದ್ದಿಗೆ ಹೆಜ್ಜೆ ಹಾಕಿದ ಶಾಸಕ ಜಿಟಿಡಿ
ಮೈಸೂರು

ತಮಟೆ ಸದ್ದಿಗೆ ಹೆಜ್ಜೆ ಹಾಕಿದ ಶಾಸಕ ಜಿಟಿಡಿ

October 14, 2019

ಕಲಾಪ್ರೇಮಿಯೂ ಆಗಿರುವ ಚಾಮುಂ ಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇ ಗೌಡರು ಮೆರವಣಿಗೆಯಲ್ಲಿ ಕೈಯಲ್ಲಿ ಕತ್ತಿ ಹಿಡಿದು ತಮಟೆ ಸದ್ದಿಗೆ ಸರಿ ಯಾಗಿ ವೀರಭದ್ರ ಕುಣಿತದ ಹೆಜ್ಜೆ ಇಟ್ಟು ಕುಣಿದು ಎಲ್ಲರ ಗಮನ ಸೆಳೆದರು. ಯಾವುದೇ ಮಹನೀಯರ ಜಯಂ ತೋತ್ಸವದ ಮೆರವಣಿಗೆ ಸಂದರ್ಭ ದಲ್ಲಿ ಜಿ.ಟಿ.ದೇವೇಗೌಡರು ಹೆಜ್ಜೆ ಹಾಕಿ ಕುಣಿಯುವುದು ವಿಶೇಷ. ಅಂತೆಯೇ ಇಂದೂ ಕೂಡ ಅವರು ಜ್ವರ ಇದ್ದರೂ ಹೆಜ್ಜೆ ಹಾಕಿ ತಮಗಿ ರುವ ಕಲಾಪ್ರೇಮವನ್ನು ಪ್ರದರ್ಶಿಸಿದರು.

ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ
ಮೈಸೂರು

ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ

October 14, 2019

ಮೈಸೂರು, ಅ.13(ಆರ್‍ಕೆಬಿ)- ಮೈಸೂರು ವಿಶ್ವವಿದ್ಯಾನಿಲಯದ ಸಂಜೆ ಕಾಲೇಜು ಆವರಣದಲ್ಲಿ ವಿಶ್ವಮಾನವ ಮೈಸೂರು ವಿಶ್ವವಿದ್ಯಾನಿಲಯ ನೌಕರರ ವೇದಿಕೆ ವತಿಯಿಂದ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ ಪ್ರಯುಕ್ತ ವಾಲ್ಮೀಕಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಲಾಯಿತು. ಮೈಸೂರು ವಿವಿ ಪ್ರಾಚ್ಯ ವಿದ್ಯಾ ಸಂಶೋಧನಾ ಲಯದ ನಿರ್ದೇಶಕ ಪ್ರೊ.ಎಸ್.ಶಿವರಾಜಪ್ಪ, ಮಹಾರಾಜ ಕಾಲೇಜು ಪ್ರಾಂಶು ಪಾಲರಾದ ಪ್ರೊ.ಸಿ.ಪಿ.ಸುನಿತಾ, ಸಂಜೆ ಕಾಲೇಜು ಪ್ರಾಂಶುಪಾಲ ಡಾ.ಆಂಜ ನೇಯ, ಡಾ.ದಿನೇಶ್, ಡಾ.ಸಿ.ಡಿ.ಪರಶುರಾಮ್, ಡಾ.ರಾಜಯ್ಯ, ಎಂ.ಡಿ.ಚೆನ್ನ ಬಸಪ್ಪ, ಪ್ರೊ.ಬಿ.ಎಸ್.ದಿನಮಣಿ, ಚೆಲುವಾಂಬಿಕೆ, ವೇದಿಕೆ ಅಧ್ಯಕ್ಷ ಆರ್.ವಾಸುದೇವ್, ಕಾರ್ಯದರ್ಶಿ ಮಹೇಶ್‍ಬಾಬು ರೆಡ್ಡಿ ಇನ್ನಿತರರು ಉಪಸ್ಥಿತದ್ದರು.

ರಾಷ್ಟ್ರಪತಿಗಳ ಭೇಟಿಯಾದ ಸಿಎಂ ಯಡಿಯೂರಪ್ಪ
ಮೈಸೂರು

ರಾಷ್ಟ್ರಪತಿಗಳ ಭೇಟಿಯಾದ ಸಿಎಂ ಯಡಿಯೂರಪ್ಪ

October 13, 2019

ಬೆಂಗಳೂರು, ಅ.12: ಮುಖ್ಯಮಂತ್ರಿ ಬಿ.ಎಸ್.ಯಡಿ ಯೂರಪ್ಪ ಇಂದು ಬೆಳಿಗ್ಗೆ ರಾಜಭವನದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ವಿವಿಧ ಕಾರ್ಯಕ್ರಮ ಹಿನ್ನೆಲೆ ಯಲ್ಲಿ ಈಗಾಗಲೇ ರಾಜ್ಯ ಪ್ರವಾಸದಲ್ಲಿರುವ ರಾಮನಾಥ ಕೋವಿಂದ್, ನಿನ್ನೆ ಸಂಜೆ ಮೈಸೂರಿನಿಂದ ಬೆಂಗಳೂ ರಿಗೆ ಆಗಮಿಸಿದ್ದರು. ನಿನ್ನೆ ಬೆಂಗಳೂರಿಗೆ ಬಂದಾಗ ಸಿಎಂ, ಅವರ ಸ್ವಾಗತಕ್ಕೆ ಹೋಗಿರಲಿಲ್ಲ. ಹೀಗಾಗಿ ಇಂದು ರಾಜಭವನಕ್ಕೆ ತೆರಳಿ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಉಪಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ ಹಾಗೂ ಡಾ ಸಿ.ಎನ್. ಅಶ್ವಥ ನಾರಾಯಣ ಹಾಗೂ ಸರ್ಕಾರದ…

ನ.5ರಿಂದ ಕೊಲ್ಕತ್ತಾದಲ್ಲಿ ಭಾರತದ ಅಂತಾರಾಷ್ಟ್ರೀಯ ವಿಜ್ಞಾನ ಮೇಳ
ಮೈಸೂರು

ನ.5ರಿಂದ ಕೊಲ್ಕತ್ತಾದಲ್ಲಿ ಭಾರತದ ಅಂತಾರಾಷ್ಟ್ರೀಯ ವಿಜ್ಞಾನ ಮೇಳ

October 13, 2019

ಮೈಸೂರು, ಅ. 12(ಆರ್‍ಕೆ)- ನವೆಂಬರ್ 5ರಿಂದ 8ರವರೆಗೆ ಕೊಲ್ಕತ್ತಾ ದಲ್ಲಿ ಭಾರತದ ಅಂತರ್ರಾಷ್ಟ್ರೀಯ ವಿಜ್ಞಾನ ಮೇಳ (India International Science Festival)ವನ್ನು ಏರ್ಪಡಿಸಲಾ ಗಿದೆ ಎಂದು ಕೇಂದ್ರದ ವಿಜ್ಞಾನ, ತಂತ್ರ ಜ್ಞಾನ ಮತ್ತು ಭೂ ವಿಜ್ಞಾನ ಸಚಿವ ಡಾ. ಹರ್ಷವರ್ಧನ್ ತಿಳಿಸಿದ್ದಾರೆ. ಮೈಸೂರಿನ ಸಿಎಫ್‍ಟಿಆರ್‍ಐ ಸಭಾಂಗ ಣದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಭಾರತ ಸರ್ಕಾ ರದ ವಿಜ್ಞಾನ ಮತ್ತು ತಂತ್ರಜ್ಞಾನ ಮಂತ್ರಾ ಲಯ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹಾಗೂ ವಿಜ್ಞಾನ ಭಾರತಿ…

ನೀವು ನನ್ನನ್ನ ಬಿಜೆಪಿಯಿಂದ ಹೊರಗೆ ಹಾಕಿಸ್ತೀರಾ ಬಿಡಿ: ಸಿದ್ದರಾಮಯ್ಯಗೆ ಯತ್ನಾಳ್ ಟಾಂಗ್
ಮೈಸೂರು

ನೀವು ನನ್ನನ್ನ ಬಿಜೆಪಿಯಿಂದ ಹೊರಗೆ ಹಾಕಿಸ್ತೀರಾ ಬಿಡಿ: ಸಿದ್ದರಾಮಯ್ಯಗೆ ಯತ್ನಾಳ್ ಟಾಂಗ್

October 13, 2019

ಬೆಂಗಳೂರು, ಅ.12- ನೀವು ನನ್ನನ್ನ ಬಿಜೆಪಿಯಿಂದ ಹೊರಗೆ ಹಾಕಿಸುತ್ತಿರಾ ಬಿಡಿ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಟಾಂಗ್ ಕೊಟ್ಟಿದ್ದಾರೆ. ಮಾಧ್ಯಮಗಳಿಗೆ ವಿಧಾನಸಭೆ ಕಲಾಪಕ್ಕೆ ವಿಧಿಸಲಾಗಿರುವ ನಿರ್ಬಂಧದ ಬಗ್ಗೆ ಸಿದ್ದ ರಾಮಯ್ಯ ಮಾತನಾಡುತ್ತಿದ್ದರು. ಈ ವೇಳೆ ಈ ವಿಷಯದಲ್ಲಿ ನಿಮ್ಮ ಪರ ನಾನು ಇದ್ದೇನೆ ಅಂತ ಶಾಸಕ ಯತ್ನಾಳ್ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಸಿಎಂ ಯಡಿ ಯೂರಪ್ಪ ಪರ ಬ್ಯಾಟಿಂಗ್ ಮಾಡ್ತಾ ಇದ್ದೀರಿ ಎಂದರು. ರೀ ಯತ್ನಾಳ್ ನಿಮ್ಮ ಬಗ್ಗೆ…

ಕೇಂದ್ರದ ಆರ್ಥಿಕ ನೀತಿ ಖಂಡಿಸಿ ನಾಳೆ ಎಡಪಕ್ಷಗಳಿಂದ ಪ್ರತಿಭಟನೆ
ಮೈಸೂರು

ಕೇಂದ್ರದ ಆರ್ಥಿಕ ನೀತಿ ಖಂಡಿಸಿ ನಾಳೆ ಎಡಪಕ್ಷಗಳಿಂದ ಪ್ರತಿಭಟನೆ

October 13, 2019

ಮೈಸೂರು,ಅ.12(ಎಂಟಿವೈ)- ದೇಶದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾ ರದ ಅವೈಜ್ಞಾನಿಕ ನಿಲುವನ್ನು ಖಂಡಿಸಿ ಅ.14ರಂದು ಬೆಳಿಗ್ಗೆ 11ಕ್ಕೆ ಮೈಸೂರಿನ ಚಿಕ್ಕ ಗಡಿಯಾರ ವೃತ್ತದಲ್ಲಿ ಎಡ ಪಕ್ಷಗಳ ಜಂಟಿ ಸಮಿತಿ ವತಿಯಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಸಿಪಿಐ(ಎಂ) ಕಾಯದರ್ಶಿ ಕೆ.ಬಸವರಾಜು ತಿಳಿಸಿದ್ದಾರೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅವೈಜ್ಞಾನಿಕ ನಡೆಯಿಂದಾಗಿ ದೇಶದ ಜನರು ಸಂಕಷ್ಟಕ್ಕೆ ಸಿಲುಕು ವಂತಾಗಿದೆ. ದೇಶದ ಆರ್ಥಿಕ…

ಮೈಸೂರಲ್ಲಿ ಅಖಿಲ ಭಾರತೀಯ ಆರೋಗ್ಯ ವೃತ್ತಿಪರರ ಸಮಾವೇಶ ಆರಂಭ
ಮೈಸೂರು

ಮೈಸೂರಲ್ಲಿ ಅಖಿಲ ಭಾರತೀಯ ಆರೋಗ್ಯ ವೃತ್ತಿಪರರ ಸಮಾವೇಶ ಆರಂಭ

October 13, 2019

ಮೈಸೂರು, ಅ. 12(ಆರ್‍ಕೆ)- ಎರಡು ದಿನಗಳ ಅಖಿಲ ಭಾರತೀಯ ಆರೋಗ್ಯ ವೃತ್ತಿಪರರ ಸಮಾವೇಶವು ಇಂದು ಮೈಸೂರಿನ ಮಾನಸಗಂಗೋತ್ರಿಯ ಸೆನೆಟ್ ಭವನದಲ್ಲಿ ಆರಂಭವಾಯಿತು. ಆರೋಗ್ಯ ಭಾರತಿ ಸಂಘಟನೆ ಆಯೋ ಜಿಸಿರುವ ಅಖಿಲ ಭಾರತೀಯ ಪ್ರತಿನಿಧಿ ಮಂಡಲ್ ಬೈಠಕ್ ಅನ್ನು ಸುತ್ತೂರು ಮಠಾ ಧೀಶ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾ ಸ್ವಾಮಿಗಳು ಉದ್ಘಾಟಿಸಿದರು. ನಂತರ ಮಾತನಾಡಿದ ಶ್ರೀಗಳು, ಪ್ರತಿ ಯೊಬ್ಬರಿಗೂ ಆರೋಗ್ಯ ಅತೀ ಮುಖ್ಯವಾ ಗಿದ್ದು, ಸಾಮಾಜಿಕ ಮತ್ತು ಆಧ್ಯಾತ್ಮಿಕ ಗುಣಗಳನ್ನು ಮೈಗೂಡಿಸಿಕೊಳ್ಳಲು ಉತ್ತಮ ಆಹಾರ ಮತ್ತು ಜೀವನ ಶೈಲಿ…

ಇಂದು ದಸರಾ ಗ್ರಾವೆಲ್ ಫೆಸ್ಟ್
ಮೈಸೂರು

ಇಂದು ದಸರಾ ಗ್ರಾವೆಲ್ ಫೆಸ್ಟ್

October 13, 2019

ಮೈಸೂರು,ಅ.12-ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ಹಾಗೂ ದಸರಾ ಪ್ರವಾಸೋದ್ಯಮ ಉಪಸಮಿತಿ ಹಾಗೂ ಆಟೋಮೋಟಿವ್ ಸ್ಪೋಟ್ರ್ಸ್ ಕ್ಲಬ್ ಆಫ್ ಮೈಸೂರು ವತಿಯಿಂದ ಮೈಸೂರನ್ನು ಸಾಹಸ ಪ್ರವಾಸೋದ್ಯಮ ತಾಣ ಹಾಗೂ ಮೋಟಾರ್ ಕ್ರೀಡೆಯ ತಾಣವಾಗಿ ಅಭಿ ವೃದ್ಧಿಪಡಿಸಲು ಅ.13ರಂದು ಬೆಳಿಗ್ಗೆ 8.30ರಿಂದ ಸಂಜೆ 5.30ರವರೆಗೆ ಲಲಿತ ಮಹಲ್ ಹೆಲಿಪ್ಯಾಡ್‍ನಲ್ಲಿ ದಸರಾ ಗ್ರಾವೆಲ್ ಫೆಸ್ಟ್ ಆಯೋಜಿಸಲಾಗಿದೆ. ರ್ಯಾಲಿಯಲ್ಲಿ ದೆಹಲಿ, ಮಹಾರಾಷ್ಟ್ರ, ಗೋವಾ, ತಮಿಳುನಾಡು, ಕೇರಳ, ಆಂಧ್ರ ಪ್ರದೇಶ, ತೆಲಂಗಾಣಗಳಿಂದ 100 ಬೆಸ್ಟ್ ಡ್ರೈವರ್‍ಗಳು ಭಾಗವಹಿಸಲಿದ್ದಾರೆ. 1100ಸಿಸಿ, 1400 ಸಿಸಿ, 1650ಸಿಸಿ ಇಂಜಿನ್ ಸಾಮಥ್ರ್ಯದ…

ಮೈಸೂರಿನಲ್ಲಿ ಕೌಶಲವರ್ಧನೆ ಕೇಂದ್ರ ಉದ್ಘಾಟನೆ
ಮೈಸೂರು

ಮೈಸೂರಿನಲ್ಲಿ ಕೌಶಲವರ್ಧನೆ ಕೇಂದ್ರ ಉದ್ಘಾಟನೆ

October 13, 2019

ಮೈಸೂರು, ಅ. 12- ಸ್ಕಿಲ್ ಇಂಡಿಯಾ ಮಿಷನ್‍ಗೆ ಬದ್ಧವಾಗಿರುವ ಹೋಂಡಾ ಮೋಟರ್ ಸೈಕಲ್ ಅಂಡ್ ಸ್ಕೂಟರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ತನ್ನ 2ನೇ ಕೌಶಲ ವರ್ಧನೆ ಕೇಂದ್ರವನ್ನು, ರಾಷ್ಟ್ರೀಯ ಕೌಶಲ ಅಭಿವೃದ್ಧಿ ನಿಗಮ (ಎನ್‍ಎಸ್‍ಡಿಸಿ) ಸಹಯೋಗದಲ್ಲಿ ಎನ್.ಆರ್.ಮೊಹಲ್ಲಾದ ಸರ್ಕಾರಿ ಐಟಿಐ ಸಂಸ್ಥೆಯಲ್ಲಿ ಆರಂಭಿಸಿದೆ. ಸ್ಥಳೀಯ ಯುವಕರಿಗೆ ಉದ್ಯೋಗ ಕೇಂದ್ರಿತ ತಾಂತ್ರಿಕ ಕೌಶಲ ತರಬೇತಿಯನ್ನು ಮೈಸೂರು ನಗರದಲ್ಲಿ ನೀಡಲಿದೆ. ಕೌಶಲವರ್ಧನ ಕೇಂದ್ರವನ್ನು ಮೈಸೂರು ವಿಭಾಗದ ತರಬೇತಿ ಇಲಾಖೆ ಜಂಟಿ ನಿರ್ದೇಶಕ ಕೆ.ಸಿ.ರವಿಶಂಕರ್, ಮೈಸೂರು ಐಟಿಐ ಸಂಸ್ಥೆಯ ನಿರ್ವಹಣೆ ಸಮಿತಿ…

ಬುದ್ಧಿಮಾಂದ್ಯ ಮಹಿಳೆಯರ ಸಹಾಯಾರ್ಥ ಇಂದು `ವಾಲಿ ವಧೆ’ ನಾಟಕ ಪ್ರದರ್ಶನ
ಮೈಸೂರು

ಬುದ್ಧಿಮಾಂದ್ಯ ಮಹಿಳೆಯರ ಸಹಾಯಾರ್ಥ ಇಂದು `ವಾಲಿ ವಧೆ’ ನಾಟಕ ಪ್ರದರ್ಶನ

October 13, 2019

ಮೈಸೂರು,ಅ.12(ಆರ್‍ಕೆಬಿ)-ಮೈಸೂರಿನ ಬುದ್ಧಿಮಾಂದ್ಯ ಮಹಿಳೆಯರ ಸಹಾ ಯಾರ್ಥ ಹಾವೇರಿ ಹಾನಗಲ್ ತಾಲೂಕು ಶೇಷಗಿರಿಯ ಗಜಾನನ ಯುವಕ ಮಂಡಳಿ ವತಿಯಿಂದ ಅ.13ರಂದು ಸಂಜೆ 7 ಗಂಟೆಗೆ ಕಲಾಮಂದಿರದಲ್ಲಿ `ವಾಲಿ ವಧೆ’ ನಾಟಕ ಪ್ರದರ್ಶನ ಆಯೋಜಿಸಲಾಗಿದೆ ಎಂದು ಆಯೋಜಕಿ ವಾತ್ಸಲ್ಯ ತಿಳಿಸಿದರು. ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕುವೆಂಪು ಅವರ `ಶ್ರೀರಾಮಾಯಣ ದರ್ಶನಂ’ ಮಹಾಕಾವ್ಯ ಆಧಾರಿತ ಈ ನಾಟಕವನ್ನು ಗಣೇಶ್ ಎಂ.ಉಡುಪಿ ನಿರ್ದೇಶಿಸಿದ್ದಾರೆ. 5 ವರ್ಷಗಳಿಂದ ಚಿಗುರು ಆಶ್ರಮ ನಡೆಸುತ್ತ್ತಿರುವ ಸುಷ್ಮಾ ಎಂಬುವವರು ಬೀದಿ ಬದಿಗಳಲ್ಲಿರುವ ಬುದ್ಧಿಮಾಂದ್ಯ ಮಹಿಳೆಯರನ್ನು ಕರೆದೊಯ್ದು…

1 153 154 155 156 157 330
Translate »