ಮೈಸೂರಲ್ಲಿ ಅಖಿಲ ಭಾರತೀಯ ಆರೋಗ್ಯ ವೃತ್ತಿಪರರ ಸಮಾವೇಶ ಆರಂಭ
ಮೈಸೂರು

ಮೈಸೂರಲ್ಲಿ ಅಖಿಲ ಭಾರತೀಯ ಆರೋಗ್ಯ ವೃತ್ತಿಪರರ ಸಮಾವೇಶ ಆರಂಭ

October 13, 2019

ಮೈಸೂರು, ಅ. 12(ಆರ್‍ಕೆ)- ಎರಡು ದಿನಗಳ ಅಖಿಲ ಭಾರತೀಯ ಆರೋಗ್ಯ ವೃತ್ತಿಪರರ ಸಮಾವೇಶವು ಇಂದು ಮೈಸೂರಿನ ಮಾನಸಗಂಗೋತ್ರಿಯ ಸೆನೆಟ್ ಭವನದಲ್ಲಿ ಆರಂಭವಾಯಿತು.

ಆರೋಗ್ಯ ಭಾರತಿ ಸಂಘಟನೆ ಆಯೋ ಜಿಸಿರುವ ಅಖಿಲ ಭಾರತೀಯ ಪ್ರತಿನಿಧಿ ಮಂಡಲ್ ಬೈಠಕ್ ಅನ್ನು ಸುತ್ತೂರು ಮಠಾ ಧೀಶ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾ ಸ್ವಾಮಿಗಳು ಉದ್ಘಾಟಿಸಿದರು.

ನಂತರ ಮಾತನಾಡಿದ ಶ್ರೀಗಳು, ಪ್ರತಿ ಯೊಬ್ಬರಿಗೂ ಆರೋಗ್ಯ ಅತೀ ಮುಖ್ಯವಾ ಗಿದ್ದು, ಸಾಮಾಜಿಕ ಮತ್ತು ಆಧ್ಯಾತ್ಮಿಕ ಗುಣಗಳನ್ನು ಮೈಗೂಡಿಸಿಕೊಳ್ಳಲು ಉತ್ತಮ ಆಹಾರ ಮತ್ತು ಜೀವನ ಶೈಲಿ ಅಳವಡಿಸಿ ಕೊಳ್ಳುವಂತೆ ಸಲಹೆ ನೀಡಿದರು.

ಆಹಾರ, ವಿಹಾರ, ವಿಚಾರ, ವ್ಯವ ಹಾರ, ಸಾಧನ, ಸತ್ಸಂಗ ಸೇವೆಯಂತಹ ಅಂಶಗಳ ಬಗ್ಗೆ ಶಾಲಾ ಮಕ್ಕಳು, ಕಾಲೇಜು ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸುವ ಮೂಲಕ ಆರೋಗ್ಯ ಕಾಪಾಡಲು ಪ್ರೇರಣೆ ನೀಡಬೇಕೆಂದು ಶ್ರೀಗಳು ನುಡಿದರು.

ಭಾರತದಲ್ಲಿ ಪುರಾತನ ಕಾಲದಿಂದಲೂ ಆಯುರ್ವೇದ ಪದ್ಧತಿ ಚಿಕಿತ್ಸೆಯನ್ನು ನೀಡುತ್ತಾ ಬಂದಿದ್ದು, ಆರೋಗ್ಯ ಭಾರತಿ ಸಂಸ್ಥೆಯು ಅದನ್ನು ಮುಂದುವರೆಸಿಕೊಂಡು ಜನರ ಆರೋಗ್ಯ ಕಾಪಾಡುತ್ತಿರುವುದು ಶ್ಲಾಘನೀಯ ಎಂದು ವೈದ್ಯರ ಸೇವೆಯನ್ನು ಕೊಂಡಾಡಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕೇಂದ್ರ ಆರೋಗ್ಯ, ವಿಜ್ಞಾನ, ತಂತ್ರಜ್ಞಾನ ಮತ್ತು ಭೂ ವಿಜ್ಞಾನ ಸಚಿವ ಡಾ.ಹರ್ಷ ವರ್ಧನ ಅವರು, ಆರೋಗ್ಯ ಭಾರತಿ ಹೊರ ತಂದಿರುವ ಸ್ಮರಣ ಸಂಚಿಕೆ ಹಾಗೂ ಇಬ್ಬರು ವೈದ್ಯರು ಬರೆದಿರುವ ಪುಸ್ತಕಗಳನ್ನು ಇದೇ ವೇಳೆ ಬಿಡುಗಡೆ ಮಾಡಿದರು.

ವಿಶೇಷ ಆಹ್ವಾನಿತರಾಗಿ, ಯುವರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆ ಯರ್ ಅವರು ಮಾತನಾಡಿ, ನಾಲ್ವಡಿ ಕೃಷ್ಣ ರಾಜ ಒಡೆಯರ್ ಅವರು ಮೈಸೂರು, ಬೆಂಗಳೂರು ಸೇರಿದಂತೆ ಹಲವೆಡೆ ಆಸ್ಪತ್ರೆ, ಸಂಸ್ಕøತ, ಆಯುರ್ವೇದ ಕಾಲೇಜುಗಳನ್ನು ನಿರ್ಮಿಸಿ ಆರೋಗ್ಯ ಸೇವೆಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರಲ್ಲದೆ, ಯೋಗಕ್ಕೂ ಉತ್ತೇಜನ ನೀಡಿದರು ಎಂದು ಸ್ಮರಿಸಿದರು.

ಆರೋಗ್ಯ ಭಾರತಿ ಅಧ್ಯಕ್ಷ ಡಾ.ಪ್ರವೀಣ್ ಬಾಹುಸಾರ್, ಕಾರ್ಯದರ್ಶಿ ಡಾ.ಸುನಿಲ್ ಜೋಷಿ, ರಮೇಶ್ ಗೌತಮ್, ರಾಘವೇಂದ್ರ ಕುಲಕರ್ಣಿ ಸೇರಿದಂತೆ ಹಲವು ಪ್ರಮುಖರು ಸಮಾವೇಶದಲ್ಲಿ ಭಾಗವಹಿಸಿದ್ದರು. ಕರ್ನಾ ಟಕ, ತಮಿಳುನಾಡು, ಆಂಧ್ರಪ್ರದೇಶ, ಕೇರಳ, ಮಹಾರಾಷ್ಟ್ರ, ಗೋವಾ ಸೇರಿದಂತೆ ದೇಶದ ವಿವಿಧ ರಾಜ್ಯಗಳಿಂದ ಸುಮಾರು 1,000 ಮಂದಿ ಆರೋಗ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿ ಸುತ್ತಿರುವವರು, ವೈದ್ಯರುಗಳು ಪಾಲ್ಗೊಂಡಿ ದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಜಿ. ಹೇಮಂತ್‍ಕುಮಾರ್ ಅವರು ಕಾರ್ಯಕ್ರಮದ ಸ್ವಾಗತ ಸಮಿತಿ ಅಧ್ಯಕ್ಷರಾಗಿ ಪಾಲ್ಗೊಂಡು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಗಣ್ಯರನ್ನು ಸ್ವಾಗತಿಸಿದರು.

ಮೈಸೂರಿನ ಸರ್ಕಾರಿ ಆಯುರ್ವೇದ ಕಾಲೇಜು ಹಾಗೂ ಆರೋಗ್ಯ ಭಾರತಿ ಯಿಂದ ಸ್ಥಳದಲ್ಲಿ ವೈದ್ಯಕೀಯ ವಸ್ತು ಪ್ರದರ್ಶನ ಏರ್ಪಡಿಸಲಾಗಿತ್ತು.

ಒಂದೂವರೆ ಲಕ್ಷ ಆರೋಗ್ಯ ಕೇಂದ್ರಗಳ ಉನ್ನತೀಕರಣ: ಡಾ.ಹರ್ಷವರ್ಧನ್
ಮೈಸೂರು,ಅ.12(ಆರ್‍ಕೆ)- ದೇಶದ ಒಂದೂವರೆ ಲಕ್ಷ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ವೆಲ್‍ನೆಸ್ ಸೆಂಟರ್ ಗಳನ್ನು ಉನ್ನತೀಕರಣಗೊಳಿಸಲಾಗುವುದು ಎಂದು ಕೇಂದ್ರ ಆರೋಗ್ಯ, ವಿಜ್ಞಾನ-ತಂತ್ರಜ್ಞಾನ ಹಾಗೂ ಭೂ ವಿಜ್ಞಾನ ಸಚಿವ ಡಾ. ಹರ್ಷವರ್ಧನ್ ತಿಳಿಸಿದ್ದಾರೆ.

ಆರೋಗ್ಯ ಭಾರತಿ ವತಿಯಿಂದ ಮೈಸೂರಿನ ಮಾನಸ ಗಂಗೋತ್ರಿಯಲ್ಲಿರುವ ಸೆನೆಟ್ ಭವನದಲ್ಲಿ ಇಂದಿನಿಂದ ಆರಂಭವಾದ ಎರಡು ದಿನಗಳ ಅಖಿಲ ಭಾರತೀಯ ಪ್ರತಿನಿಧಿ ಮಂಡಲ್ ಬೈಠಕ್ ಕಾರ್ಯಕ್ರಮದಲ್ಲಿ ಪಾಲ್ಗೊಂ ಡಿದ್ದ ಅವರು ಸ್ಮರಣ ಸಂಚಿಕೆ ಬಿಡುಗಡೆ ಮಾಡಿ ಮಾತ ನಾಡುತ್ತಿದ್ದರು. ಜನರಿಗೆ ಉತ್ತಮ ಆರೋಗ್ಯ ಸೇವೆ ನೀಡುವ ದೃಷ್ಟಿಯಿಂದ ಆರೋಗ್ಯ ಕೇಂದ್ರಗಳಿಗೆ ಅತ್ಯಾಧುನಿಕ ಉಪಕರಣಗಳನ್ನು ಒದಗಿಸಿ ನುರಿತ ವೈದ್ಯಕೀಯ ಸಿಬ್ಬಂದಿ ಗಳೊಂದಿಗೆ ಉತ್ಕøಷ್ಟ ಆರೋಗ್ಯ ಸೌಲಭ್ಯ ಕಲ್ಪಿಸಲು ಕೇಂದ್ರ ಸರ್ಕಾರ ಮುಂದಾಗಿದೆ ಎಂದು ಅವರು ತಿಳಿಸಿದರು.

ಮೊದಲ ಹಂತದಲ್ಲಿ ನಲವತ್ತು ಸಾವಿರ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಉನ್ನತೀಕರಣಗೊಳಿಸಲಿದ್ದು, ದೇಶದ ಒಟ್ಟು ಒಂದೂವರೆ ಲಕ್ಷ ಆರೋಗ್ಯ ಕೇಂದ್ರಗಳ ಚಿಕಿತ್ಸಾ ಸೌಲಭ್ಯ ಮೇಲ್ದರ್ಜೆಗೇರಿಸಲು ಹಂತ-ಹಂತವಾಗಿ ಕ್ರಮ ವಹಿಸಲಾಗುವುದು ಎಂದ ಅವರು, ಆಯುಷ್ಮಾನ್ ಭಾರತ್ ಯೋಜನೆ ಮೂಲಕ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆ ಗಳಲ್ಲೂ ಮಾರಣಾಂತಿಕ ಖಾಯಿಲೆಗಳಿಗೆ ಚಿಕಿತ್ಸೆ ಪಡೆಯಲು ಅನುವು ಮಾಡಿಕೊಡಲಾಗಿದೆ ಎಂದರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನೆರವಿನಿಂದ ದೇಶವನ್ನು ಪೋಲಿಯೋ ಮುಕ್ತ ಭಾರತವಾಗಿಸಲು ಸರ್ಕಾರ ಕಾರ್ಯಕ್ರಮ ರೂಪಿಸಿದ್ದು, ಆ ಬಗ್ಗೆ ಮುಂಜಾಗ್ರತಾ ಕ್ರಮಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕಾಗಿದೆ ಎಂದರು.

ದೇಶಾದ್ಯಂತ ಆರೋಗ್ಯ ಭದ್ರತೆ ಬಗ್ಗೆ ಕಳೆದ ಹಲವು ವರ್ಷಗಳಿಂದ ಆರೋಗ್ಯ ಭಾರತಿ ಸಂಘಟನೆಯು ಹಲವು ಕಾರ್ಯಕ್ರಮಗಳ ಮೂಲಕ ಜನರಿಗೆ ಜಾಗೃತಿ ಮೂಡಿಸುತ್ತಾ ಬಂದಿದ್ದು, ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವವರು ಸಹಾಯ ಮಾಡುತ್ತಿರುವ ಬಗ್ಗೆ ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು.

Translate »