ಕೇಂದ್ರದ ಆರ್ಥಿಕ ನೀತಿ ಖಂಡಿಸಿ ನಾಳೆ ಎಡಪಕ್ಷಗಳಿಂದ ಪ್ರತಿಭಟನೆ
ಮೈಸೂರು

ಕೇಂದ್ರದ ಆರ್ಥಿಕ ನೀತಿ ಖಂಡಿಸಿ ನಾಳೆ ಎಡಪಕ್ಷಗಳಿಂದ ಪ್ರತಿಭಟನೆ

October 13, 2019

ಮೈಸೂರು,ಅ.12(ಎಂಟಿವೈ)- ದೇಶದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾ ರದ ಅವೈಜ್ಞಾನಿಕ ನಿಲುವನ್ನು ಖಂಡಿಸಿ ಅ.14ರಂದು ಬೆಳಿಗ್ಗೆ 11ಕ್ಕೆ ಮೈಸೂರಿನ ಚಿಕ್ಕ ಗಡಿಯಾರ ವೃತ್ತದಲ್ಲಿ ಎಡ ಪಕ್ಷಗಳ ಜಂಟಿ ಸಮಿತಿ ವತಿಯಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಸಿಪಿಐ(ಎಂ) ಕಾಯದರ್ಶಿ ಕೆ.ಬಸವರಾಜು ತಿಳಿಸಿದ್ದಾರೆ.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅವೈಜ್ಞಾನಿಕ ನಡೆಯಿಂದಾಗಿ ದೇಶದ ಜನರು ಸಂಕಷ್ಟಕ್ಕೆ ಸಿಲುಕು ವಂತಾಗಿದೆ. ದೇಶದ ಆರ್ಥಿಕ ನೀತಿ ಅಧೋಗತಿಗಿಳಿ ದಿದೆ. ಕೈಗಾರಿಕೆಗಳು ಮುಚ್ಚುತ್ತಿವೆ. ಲಕ್ಷಾಂತರ ಮಂದಿ ಕೆಲಸ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಆದರೆ ತೊಂದರೆಗೆ ಸಿಲುಕಿರುವ ಜನರ ಹಿತಾಸಕ್ತಿ ಕಾಪಾಡು ವಲ್ಲಿ ಯಾವುದೇ ಕ್ರಮ ಕೈಗೊಳ್ಳದೆ, ಪರಿಸ್ಥಿತಿ ಇನ್ನಷ್ಟು ಹದಗೆಡಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ನಿಲುವನ್ನು ವಿರೋಧಿಸಿ ಸಿಪಿಐ, ಸಿಪಿಐ(ಎಂ), ಸಿಪಿಐ (ಎಂಎಲ್) ಲಿಬರೇಷನ್ ಸಂಯುಕ್ತಾಶ್ರಯದಲ್ಲಿ ಎಡ ಪಕ್ಷಗಳ ಜಂಟಿ ಸಮಿತಿ ಕಾರ್ಯಕರ್ತರು ಅ.14 ರಂದು ಬೆಳಿಗ್ಗೆ 11ಕ್ಕೆ ಚಿಕ್ಕಗಡಿಯಾರ ವೃತ್ತದ ಬಳಿ ಬೃಹತ್ ಪ್ರತಿಭಟನೆ ನಡೆಸಲಿದ್ದಾರೆ ಎಂದರು.

ದೇಶದಲ್ಲಿ ಹಿಂದೆಂದೂ ಕಂಡರಿಯದಂತಹ ಆರ್ಥಿಕ ಕುಸಿತ ಉಂಟಾಗಿದೆ. ಇದರಿಂದ ಜನ ಸಾಮಾನ್ಯರು, ಬಡ ಹಾಗೂ ಮದ್ಯಮ ವರ್ಗದ ಜನರ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ. ತೀವ್ರಗೊಳ್ಳುತ್ತಿರುವ ಸಮಸ್ಯೆಯನ್ನು ಮರೆಮಾಚಲು ಸಂಚು ನಡೆಸಲಾಗು ತ್ತಿದೆ. ಕಳೆದ 5 ವರ್ಷದಿಂದಲೂ ಕೇಂದ್ರ ಸರ್ಕಾರ ತನ್ನ ಎಡವಟ್ಟನ್ನು ಮರೆ ಮಾಚಲು ಭಾವನಾತ್ಮಕ ವಿಷಯ ಗಳಿಗೆ ಮಣೆ ಹಾಕುತ್ತಿದೆ. ಇದುವರೆಗೂ ದೇಶದ ಅಭಿವೃದ್ದಿಗಾಗಿ ಒಂದೇ ಒಂದು ಹೊಸ ಯೋಜನೆ ಜಾರಿಗೆ ತರುವಲ್ಲಿ ಮೋದಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದರು.

ಕರ್ನಾಟಕದಲ್ಲಿ ತೀವ್ರ ಬರ, ಅತಿ ವೃಷ್ಟಿ ಹಾಗೂ ಪ್ರವಾಹಕ್ಕೆ ಸಿಲುಕಿ ಲಕ್ಷಾಂತರ ಮಂದಿ ಸಂತ್ರಸ್ತರಾಗಿ ದ್ದಾರೆ. ನೆರೆ ಸಂತ್ರಸ್ತರಿಗೆ ಹೆಚ್ಚಿನ ಪರಿಹಾರ ನೀಡಲು ಕೇಂದ್ರ ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಕೂಡಲೇ ನೆರೆ ಸಂತ್ರಸ್ತರಿಗೆ ಪರಿಹಾರ ನೀಡಲು ಇನ್ನಷ್ಟು ಅನುದಾನ ಬಿಡುಗಡೆ ಮಾಡಬೇಕು. ಉದ್ಯೋಗ ಸೃಷ್ಟಿಸಲು ಸಾರ್ವ ಜನಿಕ ಹೂಡಿಕೆ ಹೆಚ್ಚಿಸಬೇಕು. ಅಲ್ಲಿಯವರೆಗೆ ಕೇಂದ್ರ ಸರ್ಕಾರವು ನಿರುದ್ಯೋಗಿ ಯುವಜನರಿಗೆ ಭತ್ಯೆ ನೀಡ ಬೇಕು. ಕನಿಷ್ಠ ವೇತನವನ್ನು 18 ಸಾವಿರ ರೂ.ಗೆ ಹೆಚ್ಚಿಸ ಬೇಕು. ದೊಡ್ಡ ಪ್ರಮಾಣದಲ್ಲಿ ಉದ್ಯೋಗದಿಂದ ಹೊರದೂಡಲ್ಪಟ ನಿರುದ್ಯೋಗಿ ಕಾರ್ಮಿಕರಿಗೆ ಜೀವನ ಭದ್ರತೆ ನೀಡಬೇಕು, ಖಾಸಗೀಕರಣ ನಿಲ್ಲಿಸಿ, ರಕ್ಷಣಾ ಮತ್ತು ಕಲ್ಲಿದ್ದಲು ವಲಯದಲ್ಲಿ ಶೇ. 11ರಷ್ಟು ವಿದೇಶಿ ನೇರ ಬಂಡವಾಳ ಹೂಡಿಕೆ ನೀತಿಯನ್ನು ಹಿಂಪಡೆಯ ಬೇಕು, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಉದ್ಯೋಗವನ್ನು ಕನಿಷ್ಠ ವೇತನದೊಂದಿಗೆ ಕನಿಷ್ಠ 200 ದಿನಗಳಿಗೆ ವಿಸ್ತರಿ ಸಬೇಕು. ಸಾಲಬಾಧಿತ ರೈತರ ಸಾಲ ಮನ್ನಾ ಮಾಡ ಬೇಕು. ಕೃಷಿ ಉತ್ಪನ್ನಗಳಿಗೆ ಉತ್ಪಾದನಾ ವೆಚ್ಚದ ಒಂದೂ ವರೆ ಪಟ್ಟು ಬೆಂಬಲ ಬೆಲೆ ನೀಡಬೇಕು. ವೃದ್ದಾಪ್ಯ ಹಾಗೂ ವಿಧವಾ ವೇತನಗಳನ್ನು ಕನಿಷ್ಠ 3 ಸಾವಿರ ರೂ.ಗೆ ಹೆಚ್ಚಿಸಬೇಕು ಎಂದು ಹಕ್ಕೊತ್ತಾಯ ಮಾಡುವುದಾಗಿ ವಿವರಿಸಿದರು. ಸುದ್ದಿಗೋಷ್ಠಿಯಲ್ಲಿ ಎಡ ಪಕ್ಷಗಳ ಜಂಟಿ ಸಮಿತಿ ಮುಖಂಡರಾದ ಚೌಡಳ್ಳಿ ಜವರಯ್ಯ, ರಾಜೇಂದ್ರ, ಎಲ್.ಜಗನ್ನಾಥ್ ಇದ್ದರು.

Translate »