ಸಿಸಿಟಿವಿಯಲ್ಲಿ ಪರಮೇಶ್ವರ್ ಆಪ್ತ ರಮೇಶ್ ಸಾವಿನ ಮುಂಚಿನ ಕ್ಷಣಗಳು ದಾಖಲು
ಮೈಸೂರು

ಸಿಸಿಟಿವಿಯಲ್ಲಿ ಪರಮೇಶ್ವರ್ ಆಪ್ತ ರಮೇಶ್ ಸಾವಿನ ಮುಂಚಿನ ಕ್ಷಣಗಳು ದಾಖಲು

October 13, 2019

ಬೆಂಗಳೂರು, ಅ.12: ಪರಮೇಶ್ವರ್ ಆಪ್ತ ರಮೇಶ್ ಆತ್ಮಹತ್ಯೆ ಸಂಚಲನ ಸೃಷ್ಟಿಸಿದ್ದು, ಸಾವಿನ ಸುತ್ತಾ ಅನುಮಾನದ ಹುತ್ತ ಹುಟ್ಟಿಕೊಳ್ಳುತ್ತಿದೆ. ರಮೇಶ್ ಸಾಯುವ ಸ್ವಲ್ಪ ಸಮಯದ ಮುಂಚೆಯ ಸಿಸಿಟಿವಿ ದೃಶ್ಯಾವಳಿ ಗಳು ಮಾಧ್ಯಮಗಳಿಗೆ ಲಭ್ಯವಾಗಿದ್ದು ಸಾಮಾಜಿಕ ಜಾಲತಾಣ ದಲ್ಲಿಯೂ ಹರಿದಾಡುತ್ತಿವೆ. ಇಂದು ಬೆಳಿಗ್ಗೆ 9 ಗಂಟೆಗೆ ವೇಳೆಗೆ ಉಲ್ಲಾಳದ ತಮ್ಮ ಮನೆಯಿಂದ ರಮೇಶ್ ಚೌಕಳಿ ಶರ್ಟ್ ಧರಿಸಿ ಹೊರ ಹೋಗುತ್ತಿರುವ ದೃಶ್ಯಾವಳಿಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಬೆಳಿಗ್ಗೆ ಸದಾಶಿವನಗರದ ಪರಮೇಶ್ವರ್ ಮನೆಯಿಂದ ಹೊರಬಂದ ರಮೇಶ್ ನೇರವಾಗಿ ತಮ್ಮ ಮನೆಗೆ ಬಂದು ಉಪಾಹಾರ ಸೇವಿಸಿ ಮನೆಯವರಿಗೆ ಟಾ-ಟಾ ಮಾಡುತ್ತಾ ಹೊರಗೆ ಹೋಗು ತ್ತಿರುವ ದೃಶ್ಯ ಮನೆಯ ಬಳಿಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಐಟಿ ದಾಳಿಗೆ ಹೆದರಿ ಆತ್ಮಹತ್ಯೆ: ಕೆಲವೇ ನಿಮಿಷದಲ್ಲಿ ಇನ್ನೋವಾ ಕಾರೊಂದರಲ್ಲಿ ರಮೇಶ್ ಅವರ ಮನೆಗೆ ಕೆಲವು ಐಟಿ ಅಧಿಕಾರಿಗಳು ಬರುವುದು, ಅಧಿಕಾರಿಗಳು ಅವರ ಮನೆಯ ಒಳಕ್ಕೆ ಹೋಗುವುದು ಸಹ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಐಟಿ ದಾಳಿ ಬೆನ್ನಲ್ಲೇ ಪರಮೇಶ್ವರ್ ಆಪ್ತ ಸಹಾಯಕ ಆತ್ಮಹತ್ಯೆ ಅಧಿಕಾರಿಗಳು ತಮ್ಮ ಮನೆಗೆ ಬಂದ ಸುದ್ದಿ ತಿಳಿದ ನಂತರವೇ ರಮೇಶ್ ಸಾಯುವ ನಿರ್ಧಾರ ಮಾಡಿದರೆ ಎಂಬ ಅನುಮಾನ ಈಗ ಕಾಡುತ್ತಿದೆ. ಐಟಿ ಅಧಿಕಾರಿಗಳು ಮನೆಗೆ ಬಂದ ವಿಷಯ ತಿಳಿದ ನಂತರವೇ ರಮೇಶ್ ಸಾಯುವ ನಿರ್ಧಾರ ಮಾಡಿದ್ದಾರೆ ಎನ್ನ ಲಾಗುತ್ತಿದ್ದು, ತಮ್ಮ ಗೆಳೆಯರಿಗೆ ಮಾಹಿತಿ ನೀಡಿ, ಪೆÇಲೀಸರಿಗೂ ಮಾಹಿತಿ ನೀಡಿ ನೇಣು ಹಾಕಿಕೊಂಡಿದ್ದಾರೆ. ‘ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ರಮೇಶ್ ಐಟಿ ಅಧಿಕಾರಿಗಳ ಬಳಿಯೇ ಹೇಳಿದ್ದರು’ ತಮ್ಮ ಡೆತ್ ನೋಟ್‍ನಲ್ಲಿ ಐಟಿ ಅಧಿಕಾರಿಗಳಿಗೆ ಹೆದರಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ, ಐಟಿ ಅಧಿಕಾರಿಗಳು ನಮ್ಮ ಮನೆಯ ಮೇಲೆ ದಾಳಿ ಮಾಡಿದ್ದರಿಂದ ದಿಗ್ಬ್ರಾಂತನಾಗಿದ್ದೇನೆ ಎಂದು ಸಹ ಬರೆದುಕೊಂಡಿದ್ದಾರೆ.

Translate »