ಇಂದು ದಸರಾ ಗ್ರಾವೆಲ್ ಫೆಸ್ಟ್
ಮೈಸೂರು

ಇಂದು ದಸರಾ ಗ್ರಾವೆಲ್ ಫೆಸ್ಟ್

October 13, 2019

ಮೈಸೂರು,ಅ.12-ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ಹಾಗೂ ದಸರಾ ಪ್ರವಾಸೋದ್ಯಮ ಉಪಸಮಿತಿ ಹಾಗೂ ಆಟೋಮೋಟಿವ್ ಸ್ಪೋಟ್ರ್ಸ್ ಕ್ಲಬ್ ಆಫ್ ಮೈಸೂರು ವತಿಯಿಂದ ಮೈಸೂರನ್ನು ಸಾಹಸ ಪ್ರವಾಸೋದ್ಯಮ ತಾಣ ಹಾಗೂ ಮೋಟಾರ್ ಕ್ರೀಡೆಯ ತಾಣವಾಗಿ ಅಭಿ ವೃದ್ಧಿಪಡಿಸಲು ಅ.13ರಂದು ಬೆಳಿಗ್ಗೆ 8.30ರಿಂದ ಸಂಜೆ 5.30ರವರೆಗೆ ಲಲಿತ ಮಹಲ್ ಹೆಲಿಪ್ಯಾಡ್‍ನಲ್ಲಿ ದಸರಾ ಗ್ರಾವೆಲ್ ಫೆಸ್ಟ್ ಆಯೋಜಿಸಲಾಗಿದೆ. ರ್ಯಾಲಿಯಲ್ಲಿ ದೆಹಲಿ, ಮಹಾರಾಷ್ಟ್ರ, ಗೋವಾ, ತಮಿಳುನಾಡು, ಕೇರಳ, ಆಂಧ್ರ ಪ್ರದೇಶ, ತೆಲಂಗಾಣಗಳಿಂದ 100 ಬೆಸ್ಟ್ ಡ್ರೈವರ್‍ಗಳು ಭಾಗವಹಿಸಲಿದ್ದಾರೆ. 1100ಸಿಸಿ, 1400 ಸಿಸಿ, 1650ಸಿಸಿ ಇಂಜಿನ್ ಸಾಮಥ್ರ್ಯದ ಇಂಡಿಯನ್ ಓಪನ್ ಕ್ಲಾಸ್ ಅನ್‍ರಿಸ್ಟ್ರಿಕ್ಟೆಡ್ ಕ್ಲಾಸ್, ಲೇಡಿಸ್ ಕ್ಲಾಸ್ ಮತ್ತು ಎಸ್‍ಯುವಿ ಕ್ಲಾಸ್ ಇವೆ. ಮೈಸೂರಿನ 16 ಪ್ರತಿಭೆಗಳು ತಮ್ಮ ಚಾಲನ ಕೌಶಲ್ಯವನ್ನು ತೋರಿಸಲಿದ್ದಾರೆ. ಲೇಡಿಸ್ ಕ್ಲಾಸ್ ವಿಭಾಗದಲ್ಲಿ 10 ಮಹಿಳೆಯರು ತಮ್ಮ ಚಾಲನಾ ಕೌಶಲ್ಯವನ್ನು ತೋರಲಿದ್ದಾರೆ. ಇದು ನಮ್ಮ ದೇಶದ ದೊಡ್ಡ ರ್ಯಾಲಿಯಾಗಿದ್ದು, ಅದ್ಭುತ ರೇಸ್‍ಗಳನ್ನು ಹಾಗೂ ರ್ಯಾಲಿ ಚಾಲಕರುಗಳ ಕೌಶಲ್ಯಗಳನ್ನು ನೋಡಲು ಸಾರ್ವಜನಿ ಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

Translate »