ಮೈಸೂರಿನಲ್ಲಿ ಕೌಶಲವರ್ಧನೆ ಕೇಂದ್ರ ಉದ್ಘಾಟನೆ
ಮೈಸೂರು

ಮೈಸೂರಿನಲ್ಲಿ ಕೌಶಲವರ್ಧನೆ ಕೇಂದ್ರ ಉದ್ಘಾಟನೆ

October 13, 2019

ಮೈಸೂರು, ಅ. 12- ಸ್ಕಿಲ್ ಇಂಡಿಯಾ ಮಿಷನ್‍ಗೆ ಬದ್ಧವಾಗಿರುವ ಹೋಂಡಾ ಮೋಟರ್ ಸೈಕಲ್ ಅಂಡ್ ಸ್ಕೂಟರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ತನ್ನ 2ನೇ ಕೌಶಲ ವರ್ಧನೆ ಕೇಂದ್ರವನ್ನು, ರಾಷ್ಟ್ರೀಯ ಕೌಶಲ ಅಭಿವೃದ್ಧಿ ನಿಗಮ (ಎನ್‍ಎಸ್‍ಡಿಸಿ) ಸಹಯೋಗದಲ್ಲಿ ಎನ್.ಆರ್.ಮೊಹಲ್ಲಾದ ಸರ್ಕಾರಿ ಐಟಿಐ ಸಂಸ್ಥೆಯಲ್ಲಿ ಆರಂಭಿಸಿದೆ. ಸ್ಥಳೀಯ ಯುವಕರಿಗೆ ಉದ್ಯೋಗ ಕೇಂದ್ರಿತ ತಾಂತ್ರಿಕ ಕೌಶಲ ತರಬೇತಿಯನ್ನು ಮೈಸೂರು ನಗರದಲ್ಲಿ ನೀಡಲಿದೆ.

ಕೌಶಲವರ್ಧನ ಕೇಂದ್ರವನ್ನು ಮೈಸೂರು ವಿಭಾಗದ ತರಬೇತಿ ಇಲಾಖೆ ಜಂಟಿ ನಿರ್ದೇಶಕ ಕೆ.ಸಿ.ರವಿಶಂಕರ್, ಮೈಸೂರು ಐಟಿಐ ಸಂಸ್ಥೆಯ ನಿರ್ವಹಣೆ ಸಮಿತಿ ಅಧ್ಯಕ್ಷ ಎಸ್.ಶ್ರೀನಿವಾಸನ್, ಮೈಸೂರು ಐಟಿಐ ಪ್ರಾಚಾರ್ಯ ಕೆ.ನಾರಾಯಣ ಮೂರ್ತಿ, ಹೋಂಡಾ ಟೂವ್ಹೀಲರ್ ಮಾರಾಟ ಮತ್ತು ಮಾರುಕಟ್ಟೆ ವಿಭಾಗದ ದಕ್ಷಿಣ ಪ್ರಾದೇಶಿಕ ವ್ಯವಸ್ಥಾಪಕ ಯೋಗೇಶ್ ಮಾಥುರ್, ಹೋಂಡಾ 2ವ್ಹೀಲರ್ಸ್ ಇಂಡಿಯಾದ ಗ್ರಾಹಕ ಸೇವಾ ವಿಭಾಗದ ದಕ್ಷಿಣ ಪ್ರಾದೇಶಿಕ ಕಚೇರಿ ಸಹಾಯಕ ಪ್ರಧಾನ ವ್ಯವಸ್ಥಾಪಕ ಎಂ.ಶ್ರೀವತ್ಸ ಮತ್ತು ಇತರ ಗಣ್ಯರ ಸಮ್ಮುಖದಲ್ಲಿ ಉದ್ಘಾಟಿಸಲಾಯಿತು.ಮೈಸೂರಿನಲ್ಲಿ ಕೌಶಲವರ್ಧನೆ ಕೇಂದ್ರ ಉದ್ಘಾಟನೆ

ಕೌಶಲ ವರ್ಧನ ಕೇಂದ್ರವು ಎನ್.ಆರ್.ಮೊಹಲ್ಲಾದಲ್ಲಿರುವ ಸರ್ಕಾರಿ ಐಟಿಐ ಸಂಸ್ಥೆ ಯಲ್ಲಿದ್ದು, ದ್ವಿಚಕ್ರ ವಾಹನಗಳೊಂದಿಗೆ ಸಂಪೂರ್ಣವಾಗಿ ಕಾರ್ಯನಿರ್ವಹಿಸುವ ಕಾರ್ಯಾಗಾರ ಹಾಗೂ ಸರ್ವೀಸ್ ಮೂಲಸೌಕರ್ಯವನ್ನು ಹೊಂದಿದೆ. ಈ ಕೇಂದ್ರವು ದ್ವಿಚಕ್ರ ವಾಹನ ನಿರ್ವಹಣೆ ಮತ್ತು ದುರಸ್ತಿಯ ತಾಂತ್ರಿಕ ಆಯಾಮಗಳ ಬಗ್ಗೆ ವಿದ್ಯಾರ್ಥಿ ಗಳಿಗೆ ಪ್ರಾಯೋಗಿಕ ತರಬೇತಿ ನೀಡಲಿದೆ ಎಂದು ಪ್ರದೀಪ್ ಪಾಂಡೆ ತಿಳಿಸಿದ್ದಾರೆ.

 

 

 

Translate »