ಬುದ್ಧಿಮಾಂದ್ಯ ಮಹಿಳೆಯರ ಸಹಾಯಾರ್ಥ ಇಂದು `ವಾಲಿ ವಧೆ’ ನಾಟಕ ಪ್ರದರ್ಶನ
ಮೈಸೂರು

ಬುದ್ಧಿಮಾಂದ್ಯ ಮಹಿಳೆಯರ ಸಹಾಯಾರ್ಥ ಇಂದು `ವಾಲಿ ವಧೆ’ ನಾಟಕ ಪ್ರದರ್ಶನ

October 13, 2019

ಮೈಸೂರು,ಅ.12(ಆರ್‍ಕೆಬಿ)-ಮೈಸೂರಿನ ಬುದ್ಧಿಮಾಂದ್ಯ ಮಹಿಳೆಯರ ಸಹಾ ಯಾರ್ಥ ಹಾವೇರಿ ಹಾನಗಲ್ ತಾಲೂಕು ಶೇಷಗಿರಿಯ ಗಜಾನನ ಯುವಕ ಮಂಡಳಿ ವತಿಯಿಂದ ಅ.13ರಂದು ಸಂಜೆ 7 ಗಂಟೆಗೆ ಕಲಾಮಂದಿರದಲ್ಲಿ `ವಾಲಿ ವಧೆ’ ನಾಟಕ ಪ್ರದರ್ಶನ ಆಯೋಜಿಸಲಾಗಿದೆ ಎಂದು ಆಯೋಜಕಿ ವಾತ್ಸಲ್ಯ ತಿಳಿಸಿದರು.

ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕುವೆಂಪು ಅವರ `ಶ್ರೀರಾಮಾಯಣ ದರ್ಶನಂ’ ಮಹಾಕಾವ್ಯ ಆಧಾರಿತ ಈ ನಾಟಕವನ್ನು ಗಣೇಶ್ ಎಂ.ಉಡುಪಿ ನಿರ್ದೇಶಿಸಿದ್ದಾರೆ. 5 ವರ್ಷಗಳಿಂದ ಚಿಗುರು ಆಶ್ರಮ ನಡೆಸುತ್ತ್ತಿರುವ ಸುಷ್ಮಾ ಎಂಬುವವರು ಬೀದಿ ಬದಿಗಳಲ್ಲಿರುವ ಬುದ್ಧಿಮಾಂದ್ಯ ಮಹಿಳೆಯರನ್ನು ಕರೆದೊಯ್ದು ಸೂಕ್ತ ಚಿಕಿತ್ಸೆ ನೀಡುವ ಜೊತೆಗೆ ಪಾಲನೆ, ಪೋಷಣೆ ಮಾಡುತ್ತಿದ್ದಾರೆ. ಈ ಆಶ್ರಮಕ್ಕೆ ನೆರವಾಗುವ ದೃಷ್ಟಿಯಿಂದ ಈ ನಾಟಕ ಆಯೋಜಿಸಲಾಗಿದೆ ಎಂದರು.

ಚಿಗುರು ಸಂಸ್ಥೆಯ ಸುಷ್ಮಾ ಮಾತನಾಡಿ, ರಾಜ್ಯ ಮತ್ತು ವಿವಿಧ ರಾಜ್ಯಗಳ ಮಹಿಳೆಯ ರಿಗೆ ನಮ್ಮ ಆಶ್ರಮದಲ್ಲಿ ಆಶ್ರಯದ ಜೊತೆಗೆ ಆರೈಕೆ ಮಾಡಲಾಗುತ್ತದೆ ಎಂದರು. ಮಾಹಿತಿಗೆ ಮೊ. 9743153156 ಸಂಪರ್ಕಿಸಬಹುದು. ಸುದ್ದಿಗೋಷ್ಠಿಯಲ್ಲಿ ಸ್ವಯಂ ಸೇವಕರಾದ ಕೃಷ್ಣಮೂರ್ತಿ, ದೀಪಕ್, ಮಹೇಂದ್ರ ಇನ್ನಿತರರು ಉಪಸ್ಥಿತರಿದ್ದರು.

Translate »