ನ.5ರಿಂದ ಕೊಲ್ಕತ್ತಾದಲ್ಲಿ ಭಾರತದ ಅಂತಾರಾಷ್ಟ್ರೀಯ ವಿಜ್ಞಾನ ಮೇಳ
ಮೈಸೂರು

ನ.5ರಿಂದ ಕೊಲ್ಕತ್ತಾದಲ್ಲಿ ಭಾರತದ ಅಂತಾರಾಷ್ಟ್ರೀಯ ವಿಜ್ಞಾನ ಮೇಳ

October 13, 2019

ಮೈಸೂರು, ಅ. 12(ಆರ್‍ಕೆ)- ನವೆಂಬರ್ 5ರಿಂದ 8ರವರೆಗೆ ಕೊಲ್ಕತ್ತಾ ದಲ್ಲಿ ಭಾರತದ ಅಂತರ್ರಾಷ್ಟ್ರೀಯ ವಿಜ್ಞಾನ ಮೇಳ (India International Science Festival)ವನ್ನು ಏರ್ಪಡಿಸಲಾ ಗಿದೆ ಎಂದು ಕೇಂದ್ರದ ವಿಜ್ಞಾನ, ತಂತ್ರ ಜ್ಞಾನ ಮತ್ತು ಭೂ ವಿಜ್ಞಾನ ಸಚಿವ ಡಾ. ಹರ್ಷವರ್ಧನ್ ತಿಳಿಸಿದ್ದಾರೆ.

ಮೈಸೂರಿನ ಸಿಎಫ್‍ಟಿಆರ್‍ಐ ಸಭಾಂಗ ಣದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಭಾರತ ಸರ್ಕಾ ರದ ವಿಜ್ಞಾನ ಮತ್ತು ತಂತ್ರಜ್ಞಾನ ಮಂತ್ರಾ ಲಯ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹಾಗೂ ವಿಜ್ಞಾನ ಭಾರತಿ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ಆಯೋಜಿಸಿರುವ ವಿಜ್ಞಾನ ಮೇಳದಲ್ಲಿ ವಿದ್ಯಾರ್ಥಿಗಳು, ಸಂಶೋಧಕರು, ಕುಶಲಕರ್ಮಿಗಳು, ರೈತರು, ವಿಜ್ಞಾನಿಗಳು ಭಾಗವಹಿಸಲಿದ್ದು, ಸಂಶೋಧನೆ, ಅನ್ವೇಷಣೆ ಮತ್ತು ಭಾರತದ ವಿಜ್ಞಾನ ಬಲಗೂಡಿಸುವ ಕಾರ್ಯಕ್ರಮ ಗಳು ನಡೆಯಲಿವೆ ಎಂದು ಅವರು ತಿಳಿಸಿದರು.

ಮೇಳದಲ್ಲಿ 12 ಸಾವಿರ ಭಾರತೀಯ ಮತ್ತು ವಿದೇಶಿ ಪ್ರತಿನಿಧಿಗಳು ಪಾಲ್ಗೊಳ್ಳ ಲಿದ್ದು, ಕೊಲ್ಕತ್ತಾದ ಬಿಶ್ವ ಬಾಂಗ್ಲಾ ಕನ್ ವೆನ್ಷನ್ ಸೆಂಟರ್ ಹಾಗೂ ಸೈನ್ಸ್ ಸಿಟಿ ಯಲ್ಲಿ ಸಿದ್ಧತೆ ನಡೆಯುತ್ತಿದ್ದು, ಸತ್ಯಜಿತ್ ರೇ ಫಿಲಂ ಅಂಡ್ ಟೆಲಿವಿಷನ್ ಇನ್ಸ್‍ಟಿ ಟ್ಯೂಟ್, ಬೋಸ್ ಇನ್ಸ್‍ಟಿಟ್ಯೂಟ್, ಇಂಡಿ ಯನ್ ಇನ್ಸ್‍ಟಿಟ್ಯೂಟ್ ಆಫ್ ಕೆಮಿಕಲ್ ಬಯಾಲಜಿಗಳಲ್ಲೂ ಮೇಳದ ವೇದಿಕೆ ಗಳನ್ನು ಸಿದ್ಧಪಡಿಸಲಾಗುತ್ತಿದೆ. ವಿದ್ಯಾರ್ಥಿ ಗಳ ವಿಜ್ಞಾನ ಗ್ರಾಮವನ್ನು ಆಯೋಜಿಸಲಾ ಗಿದ್ದು, ದೇಶಾದ್ಯಂತ 2,500 ಶಾಲಾ ಮಕ್ಕಳನ್ನು ಆಹ್ವಾನಿಸಲಾಗಿದೆ. ಪ್ರತಿಯೊಬ್ಬ ಸಂಸದನೂ ತನ್ನ ಕ್ಷೇತ್ರಗಳಿಂದ ಐದೈದು ಶಾಲಾ ಮಕ್ಕಳು ಹಾಗೂ ಓರ್ವ ಶಿಕ್ಷಕರನ್ನು ಕರೆತರುವಂತೆ ತಿಳಿಸಲಾಗಿದೆ. ವಿಜ್ಞಾನ ಪ್ರದ ರ್ಶನ, ವಿಜ್ಞಾನ ಸಾಹಿತ್ಯ ಮೇಳ, ವಿಜ್ಞಾನ ಮತ್ತು ತಂತ್ರಜ್ಞಾನ ಮಾಧ್ಯಮ ಮೇಳ ವನ್ನೂ ಆಯೋಜಿಸಲಾಗಿದ್ದು, ಕೃಷಿ, ಆರೋಗ್ಯ ಸಂಶೋಧನೆ, ಕೈಗಾರಿಕೆ, ನವಭಾರತ ನಿರ್ಮಾಣ, ಪಾರಂಪರಿಕ ಕರಕುಶಲ ಕೈಗಾ ರಿಕೆ, ಮಹಿಳಾ ವಿಜ್ಞಾನಿಗಳ ಸಮಾವೇಶ, ಯುವ ವಿಜ್ಞಾನಿಗಳ ಕಾಂಗ್ರೆಸ್‍ನಂತಹ ಹಲವು ಸಮಾವೇಶಗಳು ಮೇಳದಲ್ಲಿ ನಡೆ ಯಲಿವೆ. ದೇಶದಲ್ಲಿ ಆರೋಗ್ಯ ವ್ಯವಸ್ಥೆ ಗಾಗಿ ಕೇಂದ್ರ ಸರ್ಕಾರವು ಬಜೆಟ್‍ನ ಶೇ. 8ರಷ್ಟು ಅನುದಾನ ಮೀಸಲಿರಿಸಿದ್ದು, ವೈಜ್ಞಾನಿಕ ಸಂಶೋಧನೆ ಹಾಗೂ ಅಭಿ ವೃದ್ಧಿಗಾಗಿ ಸಿಎಸ್‍ಐಆರ್ ಮತ್ತು ಸಿಎಫ್ ಟಿಆರ್‍ಐನಂತಹ ಸಂಸ್ಥೆಗಳಿಗೂ ಹೆಚ್ಚು ವರಿ ಹಣ ನೀಡಲಾಗುತ್ತಿದೆ ಎಂದು ಡಾ. ಹರ್ಷವರ್ಧನ್ ಅವರು ತಿಳಿಸಿದರು.

ಸಂಸ್ಥೆಗಳಲ್ಲಿ ಅಭಿವೃದ್ಧಿಪಡಿಸಿದ ವಿಜ್ಞಾನ ಸಂಶೋಧನೆಗಳು ಜನಸ್ನೇಹಿಯಾಗ ಬೇಕು, ಹೊಸ ಆರೋಗ್ಯ ಯೋಜನೆಗಳಿಗೆ ಬಳಸ ಬೇಕೆಂಬ ಉದ್ದೇಶದಿಂದ ಸರ್ಕಾರ ಸಿಎಫ್ ಟಿಆರ್‍ಐನಂತಹ ಸಂಶೋಧನಾ ಸಂಸ್ಥೆಗ ಳಿಗೆ ಉತ್ತೇಜನ ನೀಡಿದೆ ಎಂದ ಅವರು, ಕಮ್ಯುನಿಕೇಬಲ್ ಡಿಸೀಸ್ ಹಾಗೂ ಅಪೌಷ್ಟಿ ಕತೆ ನಿವಾರಣೆಗೆ ಕ್ರಮ ವಹಿಸಲಾಗಿದೆ ಎಂದರು. ಮಲೇರಿಯಾ, ಅನೀಮಿಯಾ ದಂತಹ ಹಲವು ರೋಗಗಳನ್ನು ತೊಡೆದು ಹಾಕಲು ವಿವಿಧ ಯೋಜನೆಗಳನ್ನು ಕೇಂದ್ರ ಸರ್ಕಾರವು ಜಾರಿಗೆ ತಂದಿದ್ದು, ದೇಶದಾ ದ್ಯಂತ ಜನರ ಆರೋಗ್ಯ ಉತ್ತಮಪಡಿಸಲು ಮುಂದಾಗಿದೆ ಎಂದರು. ಸಿಎಫ್‍ಟಿಆರ್‍ಐ ನಿರ್ದೇಶಕ ಡಾ.ಕೆಎಸ್‍ಎಂಎಸ್. ರಾಘವೇಂದ್ರ ಹಾಗೂ ವಿಜ್ಞಾನ ಭಾರತಿ ಸಂಸ್ಥೆಯ ಕಾರ್ಯ ದರ್ಶಿ ಪ್ರವೀಣ್ ಗೋಷ್ಠಿಯಲ್ಲಿ ಉಪಸ್ಥಿತ ರಿದ್ದರು. ಈ ವೇಳೆ ಸಚಿವರು ವಿಜ್ಞಾನ ಮೇಳದ ಬ್ರೋಚರ್‍ಗಳನ್ನು ಬಿಡುಗಡೆ ಮಾಡಿದರು.

Translate »