ರಾಷ್ಟ್ರಪತಿಗಳ ಭೇಟಿಯಾದ ಸಿಎಂ ಯಡಿಯೂರಪ್ಪ
ಮೈಸೂರು

ರಾಷ್ಟ್ರಪತಿಗಳ ಭೇಟಿಯಾದ ಸಿಎಂ ಯಡಿಯೂರಪ್ಪ

October 13, 2019

ಬೆಂಗಳೂರು, ಅ.12: ಮುಖ್ಯಮಂತ್ರಿ ಬಿ.ಎಸ್.ಯಡಿ ಯೂರಪ್ಪ ಇಂದು ಬೆಳಿಗ್ಗೆ ರಾಜಭವನದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ವಿವಿಧ ಕಾರ್ಯಕ್ರಮ ಹಿನ್ನೆಲೆ ಯಲ್ಲಿ ಈಗಾಗಲೇ ರಾಜ್ಯ ಪ್ರವಾಸದಲ್ಲಿರುವ ರಾಮನಾಥ ಕೋವಿಂದ್, ನಿನ್ನೆ ಸಂಜೆ ಮೈಸೂರಿನಿಂದ ಬೆಂಗಳೂ ರಿಗೆ ಆಗಮಿಸಿದ್ದರು. ನಿನ್ನೆ ಬೆಂಗಳೂರಿಗೆ ಬಂದಾಗ ಸಿಎಂ, ಅವರ ಸ್ವಾಗತಕ್ಕೆ ಹೋಗಿರಲಿಲ್ಲ. ಹೀಗಾಗಿ ಇಂದು ರಾಜಭವನಕ್ಕೆ ತೆರಳಿ ಮಾತುಕತೆ ನಡೆಸಿದರು.

ಈ ಸಂದರ್ಭದಲ್ಲಿ ಉಪಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ ಹಾಗೂ ಡಾ ಸಿ.ಎನ್. ಅಶ್ವಥ ನಾರಾಯಣ ಹಾಗೂ ಸರ್ಕಾರದ ಮುಖ್ಯ ಕಾರ್ಯ ದರ್ಶಿ ಟಿ.ಎಂ.ವಿಜಯಭಾಸ್ಕರ್ ಉಪಸ್ಥಿತರಿದ್ದರು.

Translate »