ಮೈಸೂರು, ಅ.13(ಆರ್‍ಕೆಬಿ)- ಮೈಸೂರು ವಿಶ್ವವಿದ್ಯಾನಿಲಯದ ಸಂಜೆ ಕಾಲೇಜು ಆವರಣದಲ್ಲಿ ವಿಶ್ವಮಾನವ ಮೈಸೂರು ವಿಶ್ವವಿದ್ಯಾನಿಲಯ ನೌಕರರ ವೇದಿಕೆ ವತಿಯಿಂದ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ ಪ್ರಯುಕ್ತ ವಾಲ್ಮೀಕಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಲಾಯಿತು. ಮೈಸೂರು ವಿವಿ ಪ್ರಾಚ್ಯ ವಿದ್ಯಾ ಸಂಶೋಧನಾ ಲಯದ ನಿರ್ದೇಶಕ ಪ್ರೊ.ಎಸ್.ಶಿವರಾಜಪ್ಪ, ಮಹಾರಾಜ ಕಾಲೇಜು ಪ್ರಾಂಶು ಪಾಲರಾದ ಪ್ರೊ.ಸಿ.ಪಿ.ಸುನಿತಾ, ಸಂಜೆ ಕಾಲೇಜು ಪ್ರಾಂಶುಪಾಲ ಡಾ.ಆಂಜ ನೇಯ, ಡಾ.ದಿನೇಶ್, ಡಾ.ಸಿ.ಡಿ.ಪರಶುರಾಮ್, ಡಾ.ರಾಜಯ್ಯ, ಎಂ.ಡಿ.ಚೆನ್ನ ಬಸಪ್ಪ, ಪ್ರೊ.ಬಿ.ಎಸ್.ದಿನಮಣಿ, ಚೆಲುವಾಂಬಿಕೆ, ವೇದಿಕೆ ಅಧ್ಯಕ್ಷ ಆರ್.ವಾಸುದೇವ್, ಕಾರ್ಯದರ್ಶಿ ಮಹೇಶ್‍ಬಾಬು ರೆಡ್ಡಿ ಇನ್ನಿತರರು ಉಪಸ್ಥಿತದ್ದರು.
