ಮೈಸೂರು, ಅ.14(ಎಸ್‍ಬಿಡಿ)- ಮೈಸೂರು ವಿಶ್ವವಿದ್ಯಾ ನಿಲಯದ ಸಂಶೋಧನಾ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಹಾಸ್ಟೆಲ್ ನಿರ್ಮಿಸುವ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಡಿಸೆಂಬರ್‍ನಲ್ಲಿ ಕಟ್ಟಡ ಕಾಮಗಾರಿ ಆರಂಭವಾಗುವ ಸಾಧ್ಯತೆ ಇದೆ. ಪ್ರತಿವರ್ಷ ಸಾವಿರಾರು ವಿದ್ಯಾರ್ಥಿಗಳು ಸಂಶೋಧನಾ ಅಧ್ಯಯನ ನಡೆಸುತ್ತಾರೆ. ಆದರೆ ಅವರಿಗೆ ಪ್ರತ್ಯೇಕ ಹಾಸ್ಟೆಲ್ ವ್ಯವಸ್ಥೆಯಿಲ್ಲ. ಸ್ನಾತಕೋತ್ತರ ವಿದ್ಯಾರ್ಥಿಗಳಿಗಿರುವ ಹಾಸ್ಟೆಲ್ ಗಳಲ್ಲೇ ಪಿಹೆಚ್.ಡಿ ವಿದ್ಯಾರ್ಥಿಗಳಿಗೂ ಅವಕಾಶ ನೀಡಲಾ ಗಿದೆ. ಪರಿಣಾಮ ಕೊಠಡಿಗಳಲ್ಲಿ ನಿಗದಿತ ಸಂಖ್ಯೆಗಿಂತ ಹೆಚ್ಚು ವಿದ್ಯಾರ್ಥಿಗಳು ಉಳಿದುಕೊಳ್ಳುವುದರಿಂದ ಅವರ ಅಧ್ಯಯನಕ್ಕೂ ತೊಂದರೆಯಾಗಿದೆ. ಪ್ರಸ್ತುತ 1300ಕ್ಕೂ ಹೆಚ್ಚು ಪಿಹೆಚ್.ಡಿ ವಿದ್ಯಾರ್ಥಿಗಳಿದ್ದು, ನಾನಾ ವಿಷಯ…
ಮೈಸೂರು ವಿವಿಯಲ್ಲಿ ಶೀಘ್ರ ಬೌದ್ಧ ಅಧ್ಯಯನ ಕೇಂದ್ರ
October 15, 2019ಮೈಸೂರು, ಅ.14(ಎಂಕೆ)- ಪ್ರಸಕ್ತ ಸಾಲಿನಿಂದಲೇ ಬೌದ್ಧ ಅಧ್ಯಯನ ಕೇಂದ್ರ ಪ್ರಾರಂಭಿಸಲಾಗುವುದು ಎಂದು ಮೈಸೂರು ವಿವಿ ಕುಲಪತಿ ಪೆÇ್ರ. ಜಿ. ಹೇಮಂತ್ ಕುಮಾರ್ ಹೇಳಿದರು. ಡಾ.ಬಿ.ಆರ್.ಅಂಬೇಡ್ಕರ್ ಅವರ 63ನೇ ವರ್ಷದ ಧಮ್ಮ ದೀಕ್ಷಾ ದಿನಾಚರಣೆಯ ಅಂಗವಾಗಿ ಮೈಸೂರು ವಿವಿ ಮಾನಸಗಂಗೋತ್ರಿಯ ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದ ವತಿಯಿಂದ ಆಯೋಜಿಸಿದ್ದ ‘ಬುದ್ಧ ಗುರುವಿನತ್ತ ಪಯಣ: ಸಾಂಸ್ಕೃತಿಕ ತಲ್ಲಣಗಳು’ ವಿಶೇಷ ಉಪನ್ಯಾಸ ಕಾರ್ಯ ಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಪ್ರಾರಂಭದ ಹಂತವಾಗಿ ವಿವಿಯಿಂದಲೇ 5 ಲಕ್ಷ ರೂ. ಬಿಡುಗಡೆ ಮಾಡಲಾಗುವುದು. ಸದ್ಯಕ್ಕೆ…
ಕನ್ನಡ ಓದಲು ಎಸ್‍ಎಸ್‍ಎಲ್‍ಸಿ, ಪಿಯುಸಿ ವಿದ್ಯಾರ್ಥಿಗಳ ಹಿಂಜರಿಕೆ
October 15, 2019ಮೈಸೂರು, ಅ.14(ಆರ್‍ಕೆಬಿ)-ಎಸ್‍ಎಸ್‍ಎಲ್‍ಸಿ, ಪಿಯುಸಿ ವಿದ್ಯಾರ್ಥಿ ಗಳು ಕನ್ನಡ ಭಾಷೆಯನ್ನು ಓದಲು ಹಿಂಜರಿಯುತ್ತಿದ್ದಾರೆ. ಹೀಗಾದರೆ ಕನ್ನಡದ ಪರಿಸ್ಥಿತಿ ಏನಾಗಬಹುದು ಎಂದು ಮೈಸೂರು ವಿವಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಪ್ರಾಧ್ಯಾ ಪಕಿ ಡಾ.ಎನ್.ಕೆ.ಲೋಲಾಕ್ಷಿ ಆತಂಕ ವ್ಯಕ್ತಪಡಿಸಿದರು. ಮೈಸೂರಿನ ವಿಜಯನಗರ ಮೊದಲ ಹಂತದಲ್ಲಿ ಜಿಲ್ಲಾ ಸಾಹಿತ್ಯ ಭವನದಲ್ಲಿ ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಬಾಲ ಸಾಹಿತ್ಯ ಚಿಂತನ ಬಳಗ ಆಯೋಜಿಸಿದ್ದ ಕೆ.ಎಸ್. ರೇಣುಕಾಪ್ರಸಾದ್ ಅವರ `ಶಬ್ಧಮಣಿದರ್ಪಣ’ದ ಅವಲೋಕನ ಹಾಗೂ `ಛಂದೋಲೋಕ’ ಕೃತಿಗಳನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು. ಹಳೆಗನ್ನಡ…
ನಾಳೆ ಮೃಗಾಲಯದಲ್ಲಿ ಪಕ್ಷಿ ಸಂರಕ್ಷಣೆ, ಕಾಡ್ಗಿಚ್ಚು ಕುರಿತು ಉಪನ್ಯಾಸ
October 15, 2019ಮೈಸೂರು, ಅ.14(ಎಂಟಿವೈ)- ಮೈಸೂರು ಮೃಗಾಲಯದಲ್ಲಿ 22ನೇ ಸಂರಕ್ಷಣಾ ನುಡಿ ಕಾರ್ಯಕ್ರಮದ ಅಂಗವಾಗಿ ಅ.16ರಂದು ಮಧ್ಯಾಹ್ನ 3ಕ್ಕೆ `ಪಕ್ಷಿಗಳ ಸಂರಕ್ಷಣೆ ಮತ್ತು ಕಾಡ್ಗಿಚ್ಚು: ಹಿಂದಿನ ಹಾಗೂ ಪ್ರಸ್ತುತ ಸನ್ನಿವೇಶ’ ಕುರಿತು ಉಪನ್ಯಾಸ ಆಯೋಜಿಸ ಲಾಗಿದೆ ಎಂದು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್ ಎಂ.ಕುಲಕರ್ಣಿ ತಿಳಿಸಿದ್ದಾರೆ. ಅರಣ್ಯ ನಾಶ, ಪರಿಸರದ ಮೇಲೆ ಮಾನವನ ಹಸ್ತಕ್ಷೇಪದಿಂದಾಗಿ ಪಕ್ಷಿಗಳ ಸಂತತಿ ಗಣನೀಯವಾಗಿ ಕ್ಷೀಣಿಸುತ್ತಿದೆ. ಮುಂದಿನ ಪೀಳಿಗೆಗೆ ಪಕ್ಷಿ ಸಂತತಿ ಉಳಿಸಿ, ಕೊಡುಗೆಯಾಗಿ ನೀಡುವ ನಿಟ್ಟಿನಲ್ಲಿ ಅರಿವು ಮೂಡಿಸಲು ಹಲವು ಕಾರ್ಯ ಕ್ರಮ ನಡೆಸಲಾಗುತ್ತಿದೆ….
ಅತ್ಯುತ್ತಮ ದಸರಾ ಸ್ತಬ್ಧಚಿತ್ರಗಳಿಗೆ ಮೈಸೂರು ಜಿಪಂ ಸಿಇಓ ಪ್ರಶಸ್ತಿ ಪ್ರದಾನ
October 15, 2019ಮೈಸೂರು, ಅ.14 (ಎಂಟಿವೈ)- ಜಂಬೂಸವಾರಿ ಯಲ್ಲಿ ಸಾಗಿದ 39 ಸ್ತಬ್ಧಚಿತ್ರಗಳಲ್ಲಿ ಅತ್ಯುತ್ತಮ ಸ್ತಬ್ಧಚಿತ್ರ ಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.ಮೈಸೂರು ಜಿ.ಪಂ ಸಭಾಂಗಣದಲ್ಲಿ ಸೋಮವಾರ ಬೆಳಿಗ್ಗೆ ನಡೆದ ಕಾರ್ಯಕ್ರಮದಲ್ಲಿ ಜಿ.ಪಂ ಸಿಇಓ ಕೆ.ಜ್ಯೋತಿ ಬಹುಮಾನ ಪಡೆದ ಸ್ತಬ್ಧ ಚಿತ್ರಗಳ ಜಿಲ್ಲಾ ಪ್ರತಿನಿಧಿಗಳಿಗೆ ಬಹುಮಾನ ವಿತರಿಸಿದರು. ಚಾಮರಾಜನಗರ ಜಿಲ್ಲೆಯ `ಸಂವೃದ್ಧಿ ಸಂಪತ್ತಿನ ನಡುವೆ ಹುಲಿಯ ಸಂತೃಪ್ತ ತಾಣ’ ಸ್ತಬ್ಧ ಚಿತ್ರಕ್ಕೆ ಪ್ರಥಮ, ಉತ್ತರ ಕನ್ನಡ ಜಿಲ್ಲೆಯ ಕದಂಬ, ಬನವಾಸಿ ಕಲ್ಪನೆಯ ಸ್ತಬ್ಧಚಿತ್ರ ದ್ವಿತೀಯ, ತುಮಕೂರು ಜಿಲ್ಲೆಯ ವತಿಯಿಂದ ನಿರ್ಮಿಸಲಾಗಿದ್ದ `ನಡೆದಾಡುವ…
ಕೇಂದ್ರದ ಆರ್ಥಿಕ ನೀತಿ ಖಂಡಿಸಿ ಎಡಪಕ್ಷಗಳಿಂದ ಪ್ರತಿಭಟನೆ
October 15, 2019ಮೈಸೂರು,ಅ.14(ಎಂಟಿವೈ)- ಕೇಂದ್ರ ಸರ್ಕಾರದ ಅವೈಜ್ಞಾನಿಕ ಧೋರಣೆ ಯಿಂದಾಗಿ ದೇಶದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ ಎಂದು ಆರೋಪಿಸಿ ಎಡ ಪಕ್ಷಗಳ ಜಂಟಿ ಸಮಿತಿ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು. ಮೈಸೂರಿನ ಮಹಾತ್ಮಗಾಂಧಿ ವೃತ್ತದ ಗಾಂಧಿ ಪ್ರತಿಮೆ ಮುಂದೆ ಧರಣಿ ನಡೆಸಿ, ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದರು. ಪ್ರಧಾನಿ ನರೇಂದ್ರ ಮೋದಿ ಕಳೆದ ಐದೂವರೆ ವರ್ಷದಿಂದ ಜನಪರ ಯೋಜನೆಯನ್ನು ಜಾರಿಗೊಳಿಸುವಲ್ಲಿ ವಿಫಲರಾಗಿದ್ದಾರೆ. ಏಕ ಚಕ್ರಾಧಿಪತಿಯಂತೆ ಅವೈಜ್ಞಾನಿಕ ನಿಲುವು ತಾಳುವ ಮೂಲಕ ದೇಶದ ಮಧÀ್ಯಮ ಹಾಗೂ ಬಡ ಜನರನ್ನು…
ಮಲಬಾರ್ ಗೋಲ್ಡ್‍ನಿಂದ ಗಿಫ್ಟ್ ಆಫ್ ಗೋಲ್ಡ್
October 15, 2019ಮೈಸೂರು,ಅ.14- ವಿಶ್ವದ ಅತೀ ದೊಡ್ಡ ಆಭರಣಗಳ ರೀಟೇಲರ್ ಆಗಿರುವ ಮಲ ಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಈ ಬಾರಿಯ ಬೆಳಕಿನ ಹಬ್ಬ ದೀಪಾವಳಿ ಗೆಂದು ಗ್ರಾಹಕರಿಗೆ ಚಿನ್ನದ ಉಡುಗೊರೆ ಮತ್ತು ವಿಶೇಷ ರಿಯಾಯ್ತಿಗಳನ್ನು ಘೋಷಣೆ ಮಾಡಿದೆ. ಭಾರತದಾದ್ಯಂತ ಇರುವ ತನ್ನೆಲ್ಲಾ ಸ್ಟೋರ್‍ಗಳಲ್ಲಿ ಈ ವಿಶೇಷ ರಿಯಾಯ್ತಿ ಲಭ್ಯವಿದೆ ಅ.4ರಂದು ಆರಂಭವಾಗಿರುವ ಈ ಆಫರ್ ಮತ್ತು ರಿಯಾಯ್ತಿಗಳು ನ.10ರವರೆಗೆ ಲಭ್ಯ ವಿದೆ. 15,000 ರೂ. ಮೌಲ್ಯದ ಚಿನ್ನಾಭರಣ ವನ್ನು ಖರೀದಿಸುವ ಗ್ರಾಹಕರಿಗೆ ಒಂದು ಚಿನ್ನದ ನಾಣ್ಯ ಉಡುಗೊರೆಯಾಗಿ ನೀಡ…
ಭಕ್ತಿ ಭಾವದ ಚಾಮುಂಡೇಶ್ವರಿ ರಥೋತ್ಸವ
October 14, 2019ಮೈಸೂರು, ಅ.13(ಆರ್‍ಕೆಬಿ)- ವಿಜಯದಶಮಿ ಮೆರವಣಿಗೆ ನಂತರ ಮೈಸೂರಿನ ಚಾಮುಂಡೇಶ್ವರಿ ರಥೋತ್ಸವ ಭಾನುವಾರ ಅಪಾರ ಭಕ್ತ ಸಮೂಹದ ನಡುವೆ ಭಕ್ತಿ ಭಾವದಿಂದ ಅದ್ಧೂರಿಯಾಗಿ ನೆರವೇರಿತು. ಮೈಸೂರಿನ ಚಾಮುಂಡಿಬೆಟ್ಟದಲ್ಲಿ ನಡೆದ ಧಾರ್ಮಿಕ ಕೈಂಕರ್ಯವನ್ನು ಕಣ್ತುಂಬಿಕೊಂಡ ಸಾವಿರಾರು ಭಕ್ತರು ತಾಯಿ ಚಾಮುಂಡೇಶ್ವರಿ ಕೃಪೆಗೆ ಪಾತ್ರರಾದರು. ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಬೆಳಿಗ್ಗೆ 6.48ರಿಂದ 7.18 ಗಂಟೆಯೊಳಗೆ ಶುಭ ತುಲಾ ಲಗ್ನದಲ್ಲಿ ವೈಭ ವದ ಚಾಮುಂಡೇಶ್ವರಿ ಮಹಾರಥೋತ್ಸವಕ್ಕೆ ಚಾಲನೆ ನೀಡಿದರು. ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇ ಗೌಡ, ಮೇಯರ್ ಪುಷ್ಪಲತಾ…
ಅದ್ಧೂರಿ ಮಹರ್ಷಿ ವಾಲ್ಮೀಕಿ ಜಯಂತಿ
October 14, 2019ಮೈಸೂರು,ಅ.13(ಆರ್‍ಕೆಬಿ)- ವಿಶ್ವಕ್ಕೆ `ವಾಲ್ಮೀಕಿ ರಾಮಾಯಣ’ ಪವಿತ್ರ ಗ್ರಂಥ ನೀಡಿದ ಮಹಾನ್ ಚೇತನ ಮಹರ್ಷಿ ವಾಲ್ಮೀಕಿ. ರಾಮರಾಜ್ಯದ ಕನಸು ಹೊಂದಿದ್ದ ಅವರ ಪ್ರತಿಮೆ ಮೈಸೂರಿನಲ್ಲಿ ಇಲ್ಲದಿರುವುದು ತಲೆ ತಗ್ಗಿಸುವ ವಿಚಾರ ಎಂದು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಬೇಸರ ವ್ಯಕ್ತಪಡಿಸಿದರು. ಮೈಸೂರಿನ ಕಲಾಮಂದಿರದಲ್ಲಿ ಜಿಲ್ಲಾಡಳಿತ ಮತ್ತು ನಾಯಕ ಸಂಘಟನೆಗಳು ಏರ್ಪಡಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಮಿನಿ ವಿಧಾನ ಸೌಧದ ಮುಂದಿನ ಆವರಣದಲ್ಲಿ ಮಹರ್ಷಿ ವಾಲ್ಮೀಕಿ ಪ್ರತಿಮೆ ಸ್ಥಾಪಿಸುವಂತೆ ಒತ್ತಾಯಗಳಿದ್ದು, ಇದಕ್ಕಾಗಿ ಸಮುದಾಯದ ಕೆಲ ಮುಖಂಡರು…
ನಂಜನಗೂಡು ಮಹರ್ಷಿ ವಾಲ್ಮೀಕಿ ಜಯಂತಿಯಲ್ಲಿ ಹಿಂಸಾಚಾರ
October 14, 2019ನಂಜನಗೂಡು, ಅ.13(ರವಿ)- ನಂಜನಗೂಡು ಪಟ್ಟಣದಲ್ಲಿ ಇಂದು ನಡೆದ ಮಹರ್ಷಿ ವಾಲ್ಮೀಕಿ ಜಯಂತಿ ಮೆರವಣಿಗೆ ಹಿಂಸಾಚಾರಕ್ಕೆ ತಿರುಗಿತು. ಡಿಜೆ ವಾಹನಕ್ಕೆ ಅವಕಾಶ ನೀಡದ ಕಾರಣಕ್ಕಾಗಿ ಯುವಕರ ಗುಂಪೊಂದು ಕಲ್ಲು ತೂರಾಟ ನಡೆಸಿದ ಪರಿಣಾಮ ಹಲವಾರು ವಾಹನಗಳು ಜಖಂ ಗೊಂಡವು. ಪೊಲೀಸರು ಲಾಠಿ ಪ್ರಹಾರ ನಡೆಸಿ ಗುಂಪನ್ನು ಚದುರಿಸಿದ್ದು, ಈ ಸಂಬಂಧ 50 ಮಂದಿ ಯನ್ನು ಬಂಧಿಸಿದ್ದಾರೆ. ತಾಲೂಕು ರಾಷ್ಟ್ರೀಯ ಹಬ್ಬ ಗಳ ಆಚರಣಾ ಸಮಿತಿ ಮತ್ತು ನಾಯಕ ಸಮು ದಾಯದ ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಇಂದು ಹಮ್ಮಿಕೊಂಡಿದ್ದ…










