ಮಲಬಾರ್ ಗೋಲ್ಡ್‍ನಿಂದ ಗಿಫ್ಟ್ ಆಫ್ ಗೋಲ್ಡ್
ಮೈಸೂರು

ಮಲಬಾರ್ ಗೋಲ್ಡ್‍ನಿಂದ ಗಿಫ್ಟ್ ಆಫ್ ಗೋಲ್ಡ್

October 15, 2019

ಮೈಸೂರು,ಅ.14- ವಿಶ್ವದ ಅತೀ ದೊಡ್ಡ ಆಭರಣಗಳ ರೀಟೇಲರ್ ಆಗಿರುವ ಮಲ ಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಈ ಬಾರಿಯ ಬೆಳಕಿನ ಹಬ್ಬ ದೀಪಾವಳಿ ಗೆಂದು ಗ್ರಾಹಕರಿಗೆ ಚಿನ್ನದ ಉಡುಗೊರೆ ಮತ್ತು ವಿಶೇಷ ರಿಯಾಯ್ತಿಗಳನ್ನು ಘೋಷಣೆ ಮಾಡಿದೆ. ಭಾರತದಾದ್ಯಂತ ಇರುವ ತನ್ನೆಲ್ಲಾ ಸ್ಟೋರ್‍ಗಳಲ್ಲಿ ಈ ವಿಶೇಷ ರಿಯಾಯ್ತಿ ಲಭ್ಯವಿದೆ

ಅ.4ರಂದು ಆರಂಭವಾಗಿರುವ ಈ ಆಫರ್ ಮತ್ತು ರಿಯಾಯ್ತಿಗಳು ನ.10ರವರೆಗೆ ಲಭ್ಯ ವಿದೆ. 15,000 ರೂ. ಮೌಲ್ಯದ ಚಿನ್ನಾಭರಣ ವನ್ನು ಖರೀದಿಸುವ ಗ್ರಾಹಕರಿಗೆ ಒಂದು ಚಿನ್ನದ ನಾಣ್ಯ ಉಡುಗೊರೆಯಾಗಿ ನೀಡ ಲಾಗುತ್ತದೆ. ಮತ್ತು 15,000 ರೂ. ಮೌಲ್ಯದ ವಜ್ರದ ಆಭರಣವನ್ನು ಖರೀದಿಸಿದರೆ 2 ಚಿನ್ನದ ನಾಣ್ಯಗಳು ಸಿಗಲಿವೆ. ಇದಲ್ಲದೇ, ಗ್ರಾಹಕರು ಮುಂಗಡವಾಗಿ ಬುಕ್ ಮಾಡಬಹುದು. ಬುಕ್ ಮಾಡಿದ ಚಿನ್ನಕ್ಕೆ ಸರಿ ಸಮಾನವಾದ ತೂಕದ ಬೆಳ್ಳಿಯನ್ನು ಉಚಿತವಾಗಿ ಪಡೆಯಬಹುದು.

ಹಬ್ಬದ ಸೀಸನ್‍ಗೆಂದೇ ವಿನ್ಯಾಸಗೊಳಿಸ ಲಾಗಿರುವ ಹೊಸ ಹೊಸ ಶ್ರೇಣಿಯ ಚಿನ್ನಾ ಭರಣಗಳು ಆಕರ್ಷಕ ಬೆಲೆಯಲ್ಲಿ  ಲಭ್ಯ ವಿವೆ. ಚಿನ್ನದ ಬೆಲೆಯಲ್ಲಿನ ಏರಿಳಿತದ ಹಿನ್ನೆಲೆಯಲ್ಲಿ ಗ್ರಾಹಕರ ಹಿತ ಕಾಪಾಡುವ ನಿಟ್ಟಿನಲ್ಲಿ ಶೇ.10ರಷ್ಟು ಮುಂಗಡ ಹಣ ಪಾವ ತಿಸಿ ಮುಂಗಡ ಬುಕಿಂಗ್ ಸೌಲಭ್ಯವನ್ನು ಗ್ರಾಹಕರಿಗೆ ನೀಡಲಾಗುತ್ತಿದೆ.

ಈ ಬಗ್ಗೆ ಮಾತನಾಡಿದ ಮಲಬಾರ್ ಗ್ರೂಪ್‍ನ ಅಧ್ಯಕ್ಷ ಎಂ.ಪಿ.ಅಹ್ಮದ್ ಅವರು, ಗ್ರಾಹಕರೇ ನಮ್ಮ ನಿಜವÁದ ಶಕ್ತಿ. ನಾವು ಹಬ್ಬದ ಸೀಸನ್‍ಗಾಗಿ ಆಕರ್ಷಕ ಮತ್ತು ವಿಶೇಷವಾದ ರಿಯಾಯ್ತಿಗಳು ಮತ್ತು ವಿಶೇಷ ದರಗಳನ್ನು ಪರಿಚಯಿಸಿದ್ದೇವೆ. ಈ ಮೂಲಕ ಸಾಮಾನ್ಯ ಗ್ರಾಹಕನೂ ಸಹ ಬೆಳಕಿನ ಹಬ್ಬ ದೀಪಾವಳಿಯ ಸಂದರ್ಭದಲ್ಲಿ ತಮ್ಮ ನೆಚ್ಚಿನ ಚಿನ್ನಾಭರಣವನ್ನು ಖರೀದಿಸಿ ಕನಸನ್ನು ನನಸು ಮಾಡಿಕೊಳ್ಳಬಹುದಾಗಿದೆ ಎಂದರು.

Translate »