ಕೇಂದ್ರದ ಆರ್ಥಿಕ ನೀತಿ ಖಂಡಿಸಿ ಎಡಪಕ್ಷಗಳಿಂದ ಪ್ರತಿಭಟನೆ
ಮೈಸೂರು

ಕೇಂದ್ರದ ಆರ್ಥಿಕ ನೀತಿ ಖಂಡಿಸಿ ಎಡಪಕ್ಷಗಳಿಂದ ಪ್ರತಿಭಟನೆ

October 15, 2019

ಮೈಸೂರು,ಅ.14(ಎಂಟಿವೈ)- ಕೇಂದ್ರ ಸರ್ಕಾರದ ಅವೈಜ್ಞಾನಿಕ ಧೋರಣೆ ಯಿಂದಾಗಿ ದೇಶದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ ಎಂದು ಆರೋಪಿಸಿ ಎಡ ಪಕ್ಷಗಳ ಜಂಟಿ ಸಮಿತಿ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು.

ಮೈಸೂರಿನ ಮಹಾತ್ಮಗಾಂಧಿ ವೃತ್ತದ ಗಾಂಧಿ ಪ್ರತಿಮೆ ಮುಂದೆ ಧರಣಿ ನಡೆಸಿ, ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದರು. ಪ್ರಧಾನಿ ನರೇಂದ್ರ ಮೋದಿ ಕಳೆದ ಐದೂವರೆ ವರ್ಷದಿಂದ ಜನಪರ ಯೋಜನೆಯನ್ನು ಜಾರಿಗೊಳಿಸುವಲ್ಲಿ ವಿಫಲರಾಗಿದ್ದಾರೆ. ಏಕ ಚಕ್ರಾಧಿಪತಿಯಂತೆ ಅವೈಜ್ಞಾನಿಕ ನಿಲುವು ತಾಳುವ ಮೂಲಕ ದೇಶದ ಮಧÀ್ಯಮ ಹಾಗೂ ಬಡ ಜನರನ್ನು ಸಂಕಷ್ಟಕ್ಕೆ ದೂಡಿದ್ದಾರೆ. ಅಭಿವೃದ್ಧಿಯ ಭ್ರಮಾ ಲೋಕ ಸೃಷ್ಟಿಸಿ, ದೇಶದಾದ್ಯಂತ ಪುಲ್ವಾಮಾ, ಬಾಲಕೋಟ್ ದಾಳಿಗಳನ್ನು ಬಳಸಿಕೊಂಡು ಅಧಿಕಾರಕ್ಕೆ ಬಂದಿರುವ ಬಿಜೆಪಿ ದೇಶದ ಆರ್ಥಿಕತೆ ರಕ್ಷಿಸುವಲ್ಲಿ ಎಡವಿದೆ. ಸ್ವಾತಂ ತ್ರ್ಯೋತ್ತರ ಭಾರತ ಕಂಡರಿಯದ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿದೆ. ದೇಶದ ಆರ್ಥಿಕ ಪ್ರಗತಿ ಕೇವಲ ಶೇ.5, ಕೃಷಿ ಕ್ಷೇತ್ರ ಶೇ.2 ಮತ್ತು ಉತ್ಪಾದನಾ ಕ್ಷೇತ್ರ ಕೇವಲ ಶೇ.0.6ರಷ್ಟು ಪ್ರಗತಿ ದಾಖಲಿಸಿದೆ. ವಾಹನ, ಗಣಿಗಾ ರಿಕೆ, ಉಕ್ಕು, ಜವಳಿ, ಸಾರಿಗೆ, ರತ್ನಾಭರಣ ಗಳು ಸೇರಿದಂತೆ ಅನೇಕ ಉದ್ದಿಮೆಗಳು ಬಾಗಿಲು ಮುಚ್ಚಿವೆ. ಈಗಾಗಲೇ 10 ಲಕ್ಷ ಉದ್ಯೋಗ ನಷ್ಟವಾಗಿದೆ. ಇಷ್ಟಾದರೂ ಕೇಂದ್ರ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದೇ ಮೌನವಾಗಿದೆ ಎಂದು ಆರೋಪಿಸಿದರು

ಕರ್ನಾಟಕ ಕಂಡು ಕೇಳರಿಯದ ಪ್ರವಾ ಹಕ್ಕೆ ಸಿಲುಕಿ ನಲುಗಿ ಹೋಗಿದ್ದರೂ ಕೇಂದ್ರ ಸರ್ಕಾರ ಸರಿಯಾಗಿ ಸ್ಪಂದಿಸುತ್ತಿಲ್ಲ. ಕೇವಲ 1200 ಕೋಟಿ ಪರಿಹಾರ ನೀಡಿ ಕೈ ತೊಳೆದು ಕೊಂಡಿದೆ. ಸಿಎಂ ಯಡಿಯೂರಪ್ಪ ಖಜಾನೆ ಯಲ್ಲಿ ಹಣವಿಲ್ಲ ಎಂದು ಹೇಳಿದ್ದಾರೆ. ನೆರೆ ಸಂತ್ರಸ್ತರಿಗೆ ಪರಿಹಾರ ಹಾಗೂ ಮನೆ ನಿರ್ಮಾಣ ಕಾರ್ಯ ತ್ವರಿತಗತಿಯಲ್ಲಿ ನಡೆಸÀ ಬೇಕು. ರೈತರ ಆತ್ಮಹತ್ಯೆ ತಡೆಗಟ್ಟಲು ಎಲ್ಲಾ ಸಾಲ ಮನ್ನಾ ಮಾಡಬೇಕು. ಕಾರ್ಮಿಕ ರಿಗೆ ಕನಿಷ್ಠ 18,000 ರೂ. ವೇತನ ನಿಗದಿ ಮಾಡಬೇಕು. ರೈತರ ಕೃಷಿ ಉತ್ಪನ್ನಗಳಿಗೆ ಒಂದೂವರೆ ಪಟ್ಟು ಬೆಂಬಲ ಬೆಲೆ ಖಾತರಿ ಮಾಡಬೇಕು. ಸಾರ್ವಜನಿಕ ವಲಯದ ಖಾಸಗೀಕರಣ ಮತ್ತು ವಿದೇಶಿ ಬಂಡ ವಾಳ ನಿಲ್ಲಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಸಿಪಿಐ(ಎಂ) ಕಾರ್ಯ ದರ್ಶಿ ಕೆ.ಬಸವರಾಜ್, ಸಿಪಿಐ ಕಾರ್ಯ ದರ್ಶಿ ಹೆಚ್.ಆರ್.ಶೇಷಾದ್ರಿ, ಸಿಪಿಐ (ಎಂಎಲ್) ಕಾರ್ಯದರ್ಶಿ ಚೌಡಳ್ಳಿ ಜವ ರಯ್ಯ, ಜಿ.ರಾಜೇಂದ್ರ, ಸೋಮರಾಜೇ ಅರಸ್, ಡಾ.ಲಕ್ಷ್ಮಿನಾರಾಯಣ, ಜಿ.ಜಯ ರಾಮ್, ಲ.ಜಗನ್ನಾಥ್, ಚಂದ್ರಶೇಖರ್, ಅಣ್ಣಪ್ಪ, ಬಸವಯ್ಯ, ರತೀರಾವ್, ರಾಮು ಸೇರಿದಂತೆ ಹಲವರು ಭಾಗವಹಿಸಿದ್ದರು.

Translate »