ಮೈಸೂರು, ಅ.14 (ಎಂಟಿವೈ)- ಜಂಬೂಸವಾರಿ ಯಲ್ಲಿ ಸಾಗಿದ 39 ಸ್ತಬ್ಧಚಿತ್ರಗಳಲ್ಲಿ ಅತ್ಯುತ್ತಮ ಸ್ತಬ್ಧಚಿತ್ರ ಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.ಮೈಸೂರು ಜಿ.ಪಂ ಸಭಾಂಗಣದಲ್ಲಿ ಸೋಮವಾರ ಬೆಳಿಗ್ಗೆ ನಡೆದ ಕಾರ್ಯಕ್ರಮದಲ್ಲಿ ಜಿ.ಪಂ ಸಿಇಓ ಕೆ.ಜ್ಯೋತಿ ಬಹುಮಾನ ಪಡೆದ ಸ್ತಬ್ಧ ಚಿತ್ರಗಳ ಜಿಲ್ಲಾ ಪ್ರತಿನಿಧಿಗಳಿಗೆ ಬಹುಮಾನ ವಿತರಿಸಿದರು.
ಚಾಮರಾಜನಗರ ಜಿಲ್ಲೆಯ `ಸಂವೃದ್ಧಿ ಸಂಪತ್ತಿನ ನಡುವೆ ಹುಲಿಯ ಸಂತೃಪ್ತ ತಾಣ’ ಸ್ತಬ್ಧ ಚಿತ್ರಕ್ಕೆ ಪ್ರಥಮ, ಉತ್ತರ ಕನ್ನಡ ಜಿಲ್ಲೆಯ ಕದಂಬ, ಬನವಾಸಿ ಕಲ್ಪನೆಯ ಸ್ತಬ್ಧಚಿತ್ರ ದ್ವಿತೀಯ, ತುಮಕೂರು ಜಿಲ್ಲೆಯ ವತಿಯಿಂದ ನಿರ್ಮಿಸಲಾಗಿದ್ದ `ನಡೆದಾಡುವ ದೇವರು ಸಿದ್ದಗಂಗಾ ಶ್ರೀ’ ಸ್ತಬ್ಧಚಿತ್ರÀಕ್ಕೆ ತೃತೀಯ ಬಹುಮಾನ ದೊರೆಯಿತು. ಚಿಕ್ಕಮಗ ಳೂರು ಜಿಲ್ಲೆಯ ಶಿಶಿಲ ಬೆಟ್ಟ, ವಾರ್ತಾ ಇಲಾಖೆಯ ಸರ್ಕಾರದ ಸೌಲಭ್ಯಗಳ ಮಾಹಿತಿ, ಶಿವಮೊಗ್ಗ ಜಿಲ್ಲೆಯ ಫಿಟ್ ಇಂಡಿಯಾ ಸ್ತಬ್ಧ ಚಿತ್ರÀ್ರಕ್ಕೆ ಸಮಾಧಾನಕರ ಬಹು ಮಾನ ನೀಡÀಲಾಯಿತು. ಪ್ರಶಸ್ತಿ ಪಡೆದ ಸ್ತಬ್ಧಚಿತ್ರ ನಿರ್ಮಿ ಸಿದ ಕಲಾವಿದರು ಹಾಗೂ ಜಿ.ಪಂ ಸ್ಥಾಯಿಸಮಿತಿ ಅಧ್ಯಕ್ಷರು ಪ್ರಮಾಣ ಪತ್ರ, ಪ್ರಶಸ್ತಿ ಫಲಕವನ್ನು ಸ್ವೀಕರಿಸಿದರು.
ಸಿಇಓ ಕೆ.ಜ್ಯೋತಿ ಮಾತನಾಡಿ, ಸ್ತಬ್ಧ ಚಿತ್ರ ಉಪ ಸಮಿತಿ ಪದಾಧಿಕಾರಿಗಳು, ಆಯಾ ಜಿಲ್ಲಾ ಪಂಚಾಯತ್ ಅಧಿಕಾರಿಗಳು ಕಡಿಮೆ ಸಮಯದಲ್ಲಿ ಅತ್ಯುತ್ತಮ, ಜನರ ಗಮನ ಸೆಳೆಯುವ ಸ್ತಬ್ಧ ಚಿತ್ರÀ್ರವನ್ನು ನಿರ್ಮಿಸಿಕೊಟ್ಟು ಜಂಬೂಸವಾರಿಯನ್ನು ಯಶಸ್ವಿಗೊಳಿಸಲು ಸಹಕಾರ ನೀಡಿದ್ದಾರೆ. ಮುಂದಿನ ದಿನಗಳಲ್ಲೂ ನಿಮ್ಮೆಲ್ಲರ ಸಹಕಾರ ದಿಂದ ವಿವಿಧ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗುವುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಲೀಡ್ ಬ್ಯಾಂಕ್ ಮ್ಯಾನೇಜರ್ ವೆಂಕಟಾ ಚಲಪತಿ, ಸಹಾಯಕ ನಿರ್ದೇಶಕ ರಾಜು, ಸ್ತಬ್ಧಚಿತ್ರ ಉಪ ಸಮಿತಿ ಪದಾಧಿಕಾರಿಗಳಾದ ಅರುಣ್ ಕುಮಾರ್ ಗೌಡ, ಸು. ಮುರುಳಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.