Tag: Mysore

ಖಾಸಗಿ ದೃಶ್ಯ ಮಾಧ್ಯಮಗಳಿಗೆ ನಿರ್ಬಂಧ
ಮೈಸೂರು

ಖಾಸಗಿ ದೃಶ್ಯ ಮಾಧ್ಯಮಗಳಿಗೆ ನಿರ್ಬಂಧ

October 10, 2019

ಬೆಂಗಳೂರು, ಅ.9- ವಿಧಾನಸಭೆ ಅಧಿವೇಶನಕ್ಕೆ ಖಾಸಗಿ ದೃಶ್ಯ ಮಾಧ್ಯಮಗಳಿಗೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ನಿರ್ಬಂಧ ಹೇರಿದ್ದಾರೆ. ವಿಧಾನ ಸೌಧದಲ್ಲಿ ಗುರುವಾರದಿಂದ 3 ದಿನ ಅಧಿವೇಶನ ನಡೆಯಲಿದೆ. ಅಧಿವೇಶನಕ್ಕೆ ಕೇವಲ ಒಂದು ದಿನ ಬಾಕಿ ಇರುವಾಗಲೇ ಖಾಸಗಿ ದೃಶ್ಯ ಮಾಧ್ಯಮಗಳ ಮೇಲೆ ನಿರ್ಬಂಧ ಹೇರಿ ಸ್ಪೀಕರ್ ಕಾಗೇರಿ ಆದೇಶ ಹೊರಡಿಸಿದ್ದಾರೆ. ಸ್ಪೀಕರ್ ಅವರ ಈ ನಿರ್ಧಾರಕ್ಕೆ ಭಾರೀ ಆಕ್ರೋಶ ವ್ಯಕ್ತವಾಗಿದೆ. ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಪತನಗೊಂಡ ಬಳಿಕ ಇದೇ ಮೊದಲ ಬಾರಿಗೆ ಬಿಜೆಪಿ ಅಧಿವೇಶನ ನಡೆಸುತ್ತಿದೆ. ಬೆಳಗಾವಿಯಲ್ಲಿ…

ಆಯುಧಪೂಜೆ ಆಸೆಯಲ್ಲಿ ಮೈಸೂರಿಗೆ ಬಂದು ಮಾರಾಟವಾಗದೆ ಬೀದಿಪಾಲಾದ ಕುಂಬಳ!
ಮೈಸೂರು

ಆಯುಧಪೂಜೆ ಆಸೆಯಲ್ಲಿ ಮೈಸೂರಿಗೆ ಬಂದು ಮಾರಾಟವಾಗದೆ ಬೀದಿಪಾಲಾದ ಕುಂಬಳ!

October 10, 2019

ಮೈಸೂರು,ಅ.9(ಆರ್‍ಕೆ)- ವಿಜಯ ದಶಮಿ ಮೆರವಣಿಗೆ ಮಾರನೇ ದಿನ ಸ್ವಚ್ಛತೆ ಪೌರಕಾರ್ಮಿಕರಿಗೆ ಒಂದು ಸವಾಲಾಗಿ ಪರಿಣಮಿಸಿದೆ. ನಿನ್ನೆ ಲಕ್ಷಾಂತರ ಮಂದಿ ಮೈಸೂರಲ್ಲಿ ಜಂಬೂಸವಾರಿ ವೀಕ್ಷಣೆಗೆ ಜಮಾಯಿಸಿದ್ದರು. ಸಹಜವಾಗಿಯೇ ಮಾಮೂಲಿಗಿಂತ ನೂರು ಪಟ್ಟು ಕಸ ಸಂಗ್ರಹ ವಾಗಿದ್ದು, ಹಾಗಾಗಿ ಸ್ವಚ್ಛತಾ ಕಾರ್ಯ ಇಂದು ಬೆಳಿಗ್ಗೆಯಿಂದ ಸಂಜೆವರೆಗೂ ಸಮರೋಪಾದಿಯಲ್ಲಿ ನಡೆಯಿತು. ಅರಮನೆ ಆವರಣ, ಮುಂಭಾಗ, ಬಲ ರಾಮ ದ್ವಾರ, ಕೆ.ಆರ್.ಸರ್ಕಲ್‍ನಿಂದ ಬನ್ನಿ ಮಂಟಪದವರೆಗೂ ಜಂಬೂ ಸವಾರಿ ಸಾಗಿದ ಮಾರ್ಗದಲ್ಲಿ ಎಲ್ಲಿ ನೋಡಿದರಲ್ಲಿ ನೀರಿನ ಬಾಟಲಿ, ಫ್ರೂಟ್ ಜ್ಯೂಸ್ ಸ್ಯಾಚೆಟ್, ಕಾಫಿ-ಟೀ ಕುಡಿದ…

ಎರಡು ದಿನಗಳ ಕಾರ್ಯಕ್ರಮಕ್ಕೆ ಇಂದು ಮೈಸೂರಿಗೆ ರಾಷ್ಟ್ರಪತಿ
ಮೈಸೂರು

ಎರಡು ದಿನಗಳ ಕಾರ್ಯಕ್ರಮಕ್ಕೆ ಇಂದು ಮೈಸೂರಿಗೆ ರಾಷ್ಟ್ರಪತಿ

October 10, 2019

ಮೈಸೂರು, ಅ. 9(ಆರ್‍ಕೆ)- ಭಾರತದ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಎರಡು ದಿನಗಳ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ನಾಳೆ (ಅ. 10) ಮೈಸೂರಿಗೆ ಆಗಮಿಸುವರು. ಗುರುವಾರ ಸಂಜೆ 5.25ಕ್ಕೆ ವಿಶೇಷ ವಿಮಾನದಲ್ಲಿ ಮೈಸೂರಿಗೆ ಆಗಮಿಸುವ ರಾಷ್ಟ್ರಪತಿಗಳನ್ನು ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಬರ ಮಾಡಿಕೊಂಡು, ಕಾರಿನಲ್ಲಿ ನಜರ್‍ಬಾದಿನ ಸರ್ಕಾರಿ ಅತಿಥಿ ಗೃಹಕ್ಕೆ ಕರೆತರಲಾಗುವುದು. ಎರಡು ಗಂಟೆ ವಿಶ್ರಾಂತಿ ಬಳಿಕ ರಾತ್ರಿ 7.30 ಗಂಟೆಗೆ ಮೈಸೂರು ಅರಮನೆಯಲ್ಲಿ ನಡೆಯಲಿರುವ ಜಯ ಚಾಮರಾಜ ಒಡೆಯರ್ ಜನ್ಮಶತಮಾನೋತ್ಸವ ಸಮಾರಂಭದಲ್ಲಿ ಪಾಲ್ಗೊಳ್ಳುವರು. ನಂತರ ಸರ್ಕಾರಿ ಅತಿಥಿಗೃಹದಲ್ಲಿ…

ಯಶಸ್ವಿ ದಸರಾ ಆಚರಣೆ: ಮೈಸೂರು ಉಸ್ತುವಾರಿ ಸಚಿವ ವಿ.ಸೋಮಣ್ಣ ದಿಲ್‍ಖುಷ್
ಮೈಸೂರು

ಯಶಸ್ವಿ ದಸರಾ ಆಚರಣೆ: ಮೈಸೂರು ಉಸ್ತುವಾರಿ ಸಚಿವ ವಿ.ಸೋಮಣ್ಣ ದಿಲ್‍ಖುಷ್

October 10, 2019

ಮೈಸೂರು,ಅ.9(ಆರ್‍ಕೆ)- ಈ ಬಾರಿ ದಸರಾ ಉತ್ಸವ ಯಶಸ್ವಿಯಾಗಿ ನೆರವೇರಿದ್ದರಿಂದ ನಿಟ್ಟುಸಿರು ಬಿಟ್ಟಿರುವ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ, ನಿರೀಕ್ಷೆಗೂ ಮೀರಿ ಯಶಸ್ವಿ ಉತ್ಸವ ಆಚರಣೆಗೆ ಸಹಕರಿಸಿದ ಸರ್ವರಿಗೂ ಧನ್ಯವಾದ ಅರ್ಪಿಸಿದ್ದಾರೆ. ಮೈಸೂರಿನ ಜಲದರ್ಶಿನಿ ಅತಿಥಿಗೃಹದ ಸಭಾಂ ಗಣದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿದ ಅವರು, ನಿಗದಿತ ವೇಳೆಗೆ ಎಲ್ಲಾ ಕಾರ್ಯಕ್ರಮಗಳೂ ನಡೆದು, ಯಾವುದೇ ಸಣ್ಣಪುಟ್ಟ ಅಹಿತಕರ ಘಟನೆಗಳೂ ಸಂಭವಿಸದೆ ವಿಶ್ವ ಖ್ಯಾತಿಯ ವಿಜಯದಶಮಿ ಮೆರವಣಿಗೆ ಯಶಸ್ವಿಯಾಗಿ ನಡೆದಿದೆ ಎಂದರು. ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರು, ಕಾರ್ಪೊರೇಟರ್‍ಗಳು…

ಮೈಸೂರಿನಲ್ಲಿ ನಾಳೆಯಿಂದ 13ರವರೆಗೆ ಶಸ್ತ್ರಚಿಕಿತ್ಸಕರ ಸಮ್ಮೇಳನ
ಮೈಸೂರು

ಮೈಸೂರಿನಲ್ಲಿ ನಾಳೆಯಿಂದ 13ರವರೆಗೆ ಶಸ್ತ್ರಚಿಕಿತ್ಸಕರ ಸಮ್ಮೇಳನ

October 10, 2019

ಮೈಸೂರು, ಅ.9(ಪಿಎಂ)- ವೈದ್ಯ ವಿಜ್ಞಾನದ ಶಸ್ತ್ರಚಿಕಿತ್ಸೆಗೆ ಸಂಬಂಧಿಸಿದಂತೆ ಸಾಧನೆ ಹಾಗೂ ಸಂಶೋಧನೆಗಳನ್ನು ವಿನಿಮಯ ಮಾಡಿಕೊಳ್ಳುವ ಅಂತಾರಾಷ್ಟ್ರೀಯ ಶಸ್ತ್ರ ಚಿಕಿತ್ಸಕರ ಕಾಲೇಜಿನ (ಜಾಗತಿಕ ಸಂಘಟನೆ) ಭಾರತ ವಿಭಾಗದ 65ನೇ ವಾರ್ಷಿಕ ಸಮ್ಮೇಳನ ಮೈಸೂರಿನಲ್ಲಿ ಅ.11ರಿಂದ 13ರವ ರೆಗೆ 3 ದಿನಗಳು ನಡೆಯಲಿದೆ ಎಂದು ಸಮ್ಮೇಳನದ ಸಂಘಟನಾ ಕಾರ್ಯದರ್ಶಿ ಡಾ.ಎಸ್.ಬಿ.ವಸಂತಕುಮಾರ್ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಅವರು, ಅಂತಾರಾಷ್ಟ್ರೀಯ ಶಸ್ತ್ರಚಿಕಿತ್ಸಕರ ಕಾಲೇಜು (ಇಂಟರ್‍ನ್ಯಾಷನಲ್ ಕಾಲೇಜ್ ಆಫ್ ಸರ್ಜನ್ಸ್) 112 ದೇಶಗಳಲ್ಲಿ ತನ್ನ ಕಾರ್ಯ ವ್ಯಾಪ್ತಿ…

ಅದ್ಧೂರಿ ಜಂಬೂಸವಾರಿ
ಮೈಸೂರು

ಅದ್ಧೂರಿ ಜಂಬೂಸವಾರಿ

October 9, 2019

ಮೈಸೂರು, ಅ. 8(ಆರ್‍ಕೆ)- ನವರಾತ್ರಿ ಉತ್ಸವದ ಅಂತಿಮ ಘಟ್ಟವೂ ಆದ ವಿಶ್ವ ಪ್ರಸಿದ್ಧ ವಿಜಯದಶಮಿ ಮೆರವಣಿಗೆ ಇಂದು ವಿಜೃಂಭಣೆ ಹಾಗೂ ಯಶಸ್ವಿಯಾಗಿ ನೆರವೇರಿತು. ಮಳೆಯ ಚಿಂತೆ ಇಲ್ಲ, ಬಿಸಿಲು ಹೆಚ್ಚಿರದೇ ಹಿತಕರ ವಾತಾವರಣದಲ್ಲಿ ಜಗದ್ವಿಖ್ಯಾತ ದಸರಾ ಜಂಬೂ ಸವಾರಿ ಮೆರ ವಣಿಗೆಯನ್ನು ಲಕ್ಷಾಂತರ ಮಂದಿ ಕಣ್ತುಂಬಿಕೊಂಡರು. 750 ಕೆಜಿ ತೂಕದ ಚಿನ್ನದ ಅಂಬಾರಿಯಲ್ಲಿ ವಿರಾಜಮಾನಳಾಗಿದ್ದ ತಾಯಿ ಶ್ರೀ ಚಾಮುಂಡೇಶ್ವರಿ ದೇವಿಯ ಉತ್ಸವಮೂರ್ತಿಯನ್ನು ಹೊತ್ತ ಅರ್ಜುನನ ರಾಜಗಾಂಭೀರ್ಯ ನಡಿಗೆಯಿಂದ ಸಾಗುತ್ತಿದ್ದರೆ ಪುಳಕಿತರಾದ ಜನಸ್ತೋಮ ಭಕ್ತಿಪರವಶರಾಗಿ ರಾಜಮಾರ್ಗ ದುದ್ದಕ್ಕೂ ಕೈಮುಗಿದು…

ಯುವ ದಸರಾಗೆ ವರ್ಣರಂಜಿತ ತೆರೆ
ಮೈಸೂರು

ಯುವ ದಸರಾಗೆ ವರ್ಣರಂಜಿತ ತೆರೆ

October 7, 2019

ಮೈಸೂರು, ಅ.6(ಎಸ್‍ಬಿಡಿ)- ಆರು ದಿನಗಳಿಂದ ಯುವ ಜನತೆ ಯನ್ನು ಸೂಜಿಗಲ್ಲಿನಂತೆ ಸೆಳೆದು ಮನರಂಜಿಸಿದ ಯುವ ದಸರಾಗೆ ಯಶಸ್ವಿ ತೆರೆ ಬಿದ್ದಿತು. ಮೈಸೂರು ದಸರಾ ಅಂಗವಾಗಿ ಮಹಾ ರಾಜ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿದ್ದ ಯುವ ದಸರಾದ ಕಡೆಯ ದಿನವಾದ ಇಂದು ಬಾಲಿವುಡ್‍ನ ಖ್ಯಾತ ಸಂಗೀತ ನಿರ್ದೇಶಕ ಪ್ರೀತಮ್ ಚಕ್ರವರ್ತಿ, ಹಲವು ಜನಪ್ರಿಯ ಗೀತೆ ಗಳನ್ನು ಪ್ರಸ್ತುತಪಡಿಸಿ, ಪ್ರೇಕ್ಷಕರ ರಂಜಿಸಿದರು. ಕಿಕ್ಕಿರಿದಿದ್ದ ಯುವ ಜನತೆ ಕೇಕೆ, ಶಿಳ್ಳೆಯೊಂದಿಗೆ ಕಾರ್ಯಕ್ರಮವನ್ನು ಆಸ್ವಾದಿಸಿದರು. ಮೈಸೂರಿನ ಯುವ ಡ್ಯಾನ್ಸ್ ಅಕಾಡೆಮಿ ಕಲಾವಿದರು ಕ್ರೇಜಿ ಸ್ಟಾರ್…

ಮೈಸೂರು ಮೆಡಿಕಲ್ ಕಾಲೇಜು ಗ್ರಂಥಾಲಯ, ಹಾಸ್ಟೆಲ್ ಕಟ್ಟಡಕ್ಕೆ ಡಿಸಿಎಂ ಡಾ.ಅಶ್ವಥ್‍ನಾರಾಯಣ್ ಶಂಕುಸ್ಥಾಪನೆ
ಮೈಸೂರು

ಮೈಸೂರು ಮೆಡಿಕಲ್ ಕಾಲೇಜು ಗ್ರಂಥಾಲಯ, ಹಾಸ್ಟೆಲ್ ಕಟ್ಟಡಕ್ಕೆ ಡಿಸಿಎಂ ಡಾ.ಅಶ್ವಥ್‍ನಾರಾಯಣ್ ಶಂಕುಸ್ಥಾಪನೆ

October 6, 2019

ಮೈಸೂರು, ಅ.5(ಎಂಕೆ)- ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋ ಧನಾ ಸಂಸ್ಥೆ ಆವರಣದಲ್ಲಿ 70 ಕೋಟಿ ರೂ. ವೆಚ್ಚದ ಗ್ರಂಥಾಲಯ ಮತ್ತು ಬಾಲ ಕರ ಹಾಸ್ಟೆಲ್ ಕಟ್ಟಡ ನಿರ್ಮಾಣ ಕಾಮ ಗಾರಿಗಳಿಗೆ ಉಪಮುಖ್ಯಮಂತಿಗಳೂ ಆದ ವೈದ್ಯಕೀಯ ಶಿಕ್ಷಣ ಸಚಿವ ಡಾ. ಸಿ.ಎನ್.ಅಶ್ವಥ್‍ನಾರಾಯಣ್ ಶಂಕು ಸ್ಥಾಪನೆ ನೆರವೇರಿಸಿದರು. ಇದಕ್ಕೂ ಮುನ್ನಾ ನಗರದ ಜೆಕೆ ಮೈದಾನ ದಲ್ಲಿರುವ ಮೈಸೂರು ಮೆಡಿಕಲ್ ಕಾಲೇಜು ಸಭಾಂಗಣದಲ್ಲಿ ಆಯೋಜಿಸಿದ್ದ ಶಂಕು ಸ್ಥಾಪನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳವಾಗಬೇಕಾದರೆ ಅಗತ್ಯ ಮೂಲ…

ದಸರಾ ಆಹಾರ ಮೇಳದಲ್ಲಿ ನಾಟಿ ವೈದ್ಯೆ ನಾಗಮ್ಮನಿಗೆ ಫುಲ್ ಡಿಮ್ಯಾಂಡ್
ಮೈಸೂರು

ದಸರಾ ಆಹಾರ ಮೇಳದಲ್ಲಿ ನಾಟಿ ವೈದ್ಯೆ ನಾಗಮ್ಮನಿಗೆ ಫುಲ್ ಡಿಮ್ಯಾಂಡ್

October 6, 2019

ಮೈಸೂರು, ಅ.5- ಮೈಸೂರಿನ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನದಲ್ಲಿ ಏರ್ಪಡಿಸಿರುವ ದಸರಾ ಆಹಾರ ಮೇಳದಲ್ಲಿ ಆದಿವಾಸಿಗಳ ಆಹಾರ ವಿಭಾಗ ದಲ್ಲಿ ಕೊಡಗಿನ ನಾಟಿ ವೈದ್ಯೆ ನಾಗಮ್ಮ ಅವರ ಔಷಧಿಗೆ ಭಾರೀ ಡಿಮ್ಯಾಂಡ್. ಈ ಹಿಂದೆ ಇಲ್ಲಿಯೇ ಔಷಧಿ ಪಡೆದಿದ್ದವರೂ ಸೇರಿದಂತೆ ವಿವಿಧೆಡೆಯಿಂದ ದಿನ ನಿತ್ಯ ನೂರಾರು ಮಂದಿ ಭೇಟಿಯಾಗಿ ನಾಟಿ ಔಷಧಿ ಪಡೆಯುತ್ತಿದ್ದಾರೆ. ಕೊಡಗು ಜಿಲ್ಲೆಯ ಕುಶಾಲನಗರದ ದುಬಾರೆ ರಸ್ತೆಯ ದೊಡ್ಡ ಬೆಟಗೇರಿ ಗ್ರಾಮದ ನಿವಾಸಿ ನಾಗಮ್ಮ ಔಷಧೀಯ ಸಸ್ಯ, ಬೇರು, ಗಂಟು ಸೇರಿದಂತೆ ನಾನಾ ಗಿಡಮೂಲಿಕೆಗಳ…

ನಾಲ್ವಡಿ ಆಪ್ತ ಕೆ.ಹೆಚ್.ರಾಮಯ್ಯರ ಸಂಸ್ಮರಣೆ
ಮೈಸೂರು

ನಾಲ್ವಡಿ ಆಪ್ತ ಕೆ.ಹೆಚ್.ರಾಮಯ್ಯರ ಸಂಸ್ಮರಣೆ

October 6, 2019

ಮೈಸೂರು,ಅ.5-ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಅತ್ಯಾಪ್ತರು, ಹಿಂದುಳಿದ ವರ್ಗಗಳ ನೇತಾರರು ಹಾಗೂ ನೊಂದವರ ಪರ ಹೋರಾಟಗಾರರೂ ಆಗಿದ್ದ ಕೆ.ಹೆಚ್.ರಾಮಯ್ಯ ನವರ 86ನೇ ಸಂಸ್ಮರಣೋತ್ಸವದ ದಿನವಾದ ಇಂದು ಕೆ.ಹೆಚ್. ರಾಮಯ್ಯನವರ ಅಭಿಮಾನಿಗಳ ಬಳಗದ ವತಿಯಿಂದ ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಲ್ಲಿರುವ ರಾಮಯ್ಯನವರ ಸಮಾಧಿ ಬಳಿ ಅವರ ಸಾಧನೆಗಳನ್ನು ಸ್ಮರಿಸುವ ಸಾತ್ವಿಕ ಕಾರ್ಯಕ್ರಮ ನಡೆಯಿತು. ರಾಮಯ್ಯನವರ ಸಮಾಧಿ ಮೇಲೆ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಬರೆಸಿರುವ ಶಿಲಾಶಾಸನವಿದ್ದು, ಅದರಲ್ಲಿ `ನಿಜವಾಗಿ ನಮ್ಮ ದೇಶದ ಸುಪುತ್ರನಿವನು. ಮಿತ್ರನೋರ್ವನಿರುವನೆಂದರೆ ಅವನಿಲ್ಲಿ ಮಲಗಿಹನು. ಮಿತ್ರನೆಂಬ…

1 156 157 158 159 160 330
Translate »