ಮೈಸೂರು ಮೆಡಿಕಲ್ ಕಾಲೇಜು ಗ್ರಂಥಾಲಯ, ಹಾಸ್ಟೆಲ್ ಕಟ್ಟಡಕ್ಕೆ ಡಿಸಿಎಂ ಡಾ.ಅಶ್ವಥ್‍ನಾರಾಯಣ್ ಶಂಕುಸ್ಥಾಪನೆ
ಮೈಸೂರು

ಮೈಸೂರು ಮೆಡಿಕಲ್ ಕಾಲೇಜು ಗ್ರಂಥಾಲಯ, ಹಾಸ್ಟೆಲ್ ಕಟ್ಟಡಕ್ಕೆ ಡಿಸಿಎಂ ಡಾ.ಅಶ್ವಥ್‍ನಾರಾಯಣ್ ಶಂಕುಸ್ಥಾಪನೆ

October 6, 2019

ಮೈಸೂರು, ಅ.5(ಎಂಕೆ)- ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋ ಧನಾ ಸಂಸ್ಥೆ ಆವರಣದಲ್ಲಿ 70 ಕೋಟಿ ರೂ. ವೆಚ್ಚದ ಗ್ರಂಥಾಲಯ ಮತ್ತು ಬಾಲ ಕರ ಹಾಸ್ಟೆಲ್ ಕಟ್ಟಡ ನಿರ್ಮಾಣ ಕಾಮ ಗಾರಿಗಳಿಗೆ ಉಪಮುಖ್ಯಮಂತಿಗಳೂ ಆದ ವೈದ್ಯಕೀಯ ಶಿಕ್ಷಣ ಸಚಿವ ಡಾ. ಸಿ.ಎನ್.ಅಶ್ವಥ್‍ನಾರಾಯಣ್ ಶಂಕು ಸ್ಥಾಪನೆ ನೆರವೇರಿಸಿದರು.

ಇದಕ್ಕೂ ಮುನ್ನಾ ನಗರದ ಜೆಕೆ ಮೈದಾನ ದಲ್ಲಿರುವ ಮೈಸೂರು ಮೆಡಿಕಲ್ ಕಾಲೇಜು ಸಭಾಂಗಣದಲ್ಲಿ ಆಯೋಜಿಸಿದ್ದ ಶಂಕು ಸ್ಥಾಪನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳವಾಗಬೇಕಾದರೆ ಅಗತ್ಯ ಮೂಲ ಭೂತ ಸೌಕರ್ಯಗಳನ್ನು ನೀಡಬೇಕು. ಈ ನಿಟ್ಟಿನಲ್ಲಿ 70 ಕೋಟಿ ರೂ. ವೆಚ್ಚದ ಕಟ್ಟಡ ನಿರ್ಮಾಣ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ ಎಂದರು.

ಕರ್ನಾಟಕ ರಾಜ್ಯದಲ್ಲಿಯೇ ಮೈಸೂರು ಮೆಡಿಕಲ್ ಕಾಲೇಜು ಮೊದಲ ಸ್ಥಾನದಲ್ಲಿದೆ. ದೇಶದಲ್ಲಿ ವೈದ್ಯಕೀಯ ಕಾಲೇಜುಗಳು ಅತೀ ವಿರಳವಾಗಿದ್ದ ಕಾಲದಲ್ಲಿ ಮೈಸೂರು ಮಹಾ ರಾಜರ ಮುಂದಾಲೋಚನೆಯಿಂದ ಮೆಡಿ ಕಲ್ ಕಾಲೇಜು ಮತ್ತು ಕೆ.ಆರ್.ಆಸ್ಪತ್ರೆಗಳು ನಿರ್ಮಾಣವಾದವು. ಮೈಸೂರು ಮಹಾ ರಾಜರ ಕೊಡುಗೆಯನ್ನು ಎಷ್ಟು ಸ್ಮರಿಸಿದರೂ ಕಡಿಮೆ. ಜನಸಂಖ್ಯೆ ಹೆಚ್ಚಳದ ಹಿನ್ನೆಲೆ ಯಲ್ಲಿ ಆಸ್ಪತ್ರೆಗಳಲ್ಲಿ ಉಂಟಾಗುತ್ತಿರುವ ಒತ್ತಡವನ್ನು ಕಡಿಮೆಗೊಳಿಸಬೇಕಾಗಿದೆ ಎಂದು ಹೇಳಿದರು.

2024ರ ವೇಳೆಗೆ ಮೈಸೂರು ಮೆಡಿ ಕಲ್ ಕಾಲೇಜು ನೂರು ವರ್ಷ ಪೂರೈ ಸಲಿದ್ದು, ಲಕ್ಷಾಂತರ ವಿದ್ಯಾರ್ಥಿಗಳು ಇಲ್ಲಿ ಶಿಕ್ಷಣ ಪಡೆದಿದ್ದಾರೆ. ಕಾಲೇಜಿನಲ್ಲಿರುವ ಮೂಲಭೂತ ಸಮಸ್ಯೆಗಳ ಬಗ್ಗೆ ಅರಿ ವಿದ್ದು, ಎಲ್ಲಾ ಸಮಸ್ಯೆಗಳನ್ನು ಬಗೆಹರಿಸ ಲಾಗುವುದು. ಉತ್ತಮ ಆರೋಗ್ಯವನ್ನು ಒದ ಗಿಸುವ ದೃಷ್ಟಿಯಿಂದ ಆಸ್ಪತ್ರೆಗಳ ಗುಣ ಮಟ್ಟವನ್ನು ಹೆಚ್ಚಿಸಲು ಎಲ್ಲರೂ ಕೈಜೋಡಿ ಸಬೇಕು. ವೈದ್ಯರ ಬೇಡಿಕೆಗಳನ್ನು ಪರಿ ಶೀಲಿಸಿ ಸೂಕ್ತವಾಗಿ ಸ್ಪಂದಿಸಲಾಗುವುದು. ಅಲ್ಲದೆ ನರ್ಸಿಂಗ್ ಕಾಲೇಜು ವಿದ್ಯಾರ್ಥಿ ನಿಯರ ವಸತಿ ನಿಲಯದಲ್ಲಿ ಅಗತ್ಯ ಸೌಲಭ್ಯ ಗಳನ್ನು ಪೂರೈಸಲಾಗುವುದು ಎಂದರು.

ವೈದ್ಯಕೀಯ ಕ್ಷೇತ್ರದಲ್ಲಿ ನಿರುದ್ಯೋಗ ಎಂಬುದಿಲ್ಲ. ವಿದ್ಯಾರ್ಥಿಗಳಿಗೆ ಉದ್ಯೋಗ ದೊರಕುವ ಶಿಕ್ಷಣ ಪಡೆಯಲು ಮಾರ್ಗ ದರ್ಶನ ನೀಡಬೇಕು. ಮೈಸೂರು ಮೆಡಿ ಕಲ್ ಕಾಲೇಜು ಆವರಣದಲ್ಲಿ ಕಟ್ಟಡಗಳು ಹೆಚ್ಚಾಗಿ ಪ್ರತ್ಯೇಕವಾಗಿವೆ. ಮುಂದಿನ ದಿನ ಗಳಲ್ಲಿ ಸ್ಥಳವಿದ್ದರೇ ಅಥವಾ ಯಾವುದಾ ದರೂ ಸಂಪೂರ್ಣ ಶಿಥಿಲಗೊಂಡಿರುವ ಕಟ್ಟಡ ವನ್ನು ತೆರವುಗೊಳಿಸಿ ಎಲ್ಲಾ ಸೇವೆಯೂ ಒಂದೇ ಸ್ಥಳದಲ್ಲಿ ಲಭ್ಯವಾಗುವಂತೆ ಮಾಡಲು ಚಿಂತಿಸಲಾಗಿದೆ. ಇದರಿಂದ ನಿರ್ವಹಣೆ ಸುಲಭವಾಗುತ್ತದೆ ಎಂದು ತಿಳಿಸಿದರು.

ಶಾಸಕ ಎಲ್.ನಾಗೇಂದ್ರ ಮಾತನಾಡಿ, ಕೆ.ಆರ್.ಆಸ್ಪತ್ರೆ ಹಾಗೂ ಮೆಡಿಕಲ್ ಕಾಲೇಜು ಮತ್ತು ವಿದ್ಯಾರ್ಥಿ ವಸತಿನಿಲಯಗಳ ಸಂಪೂರ್ಣ ಅಭಿವೃದ್ಧಿಗೆ ಅಂದಾಜು 397 ಕೋಟಿ ರೂ. ಅಗತ್ಯವಿದೆ ಎಂದು ಹಿಂದಿದ್ದ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಅದರ ಹಿನ್ನೆಲೆಯಲ್ಲಿ ಇಂದು ಕಟ್ಟಡ ಕಾಮಗಾರಿ ಶಂಕುಸ್ಥಾಪನೆ ನಡೆಯುತ್ತಿದೆ ಎಂದರು.

ಸುಳ್ವಾಡಿ ವಿಷ ಪ್ರಸಾದ ಘಟನೆಯ ಸಂದರ್ಭದಲ್ಲಿ ರೋಗಿಗಳಿಗೆ ಕೆ.ಆರ್. ಆಸ್ಪತ್ರೆ ಸೂಕ್ತ ಚಿಕಿತ್ಸೆಯನ್ನು ನೀಡಲು ಬೇಕಾದ ಯಂತ್ರೋಪಕರಣಗಳು ಇಲ್ಲದೆ ತೊಂದರೆ ಉಂಟಾಗಿತ್ತು. ಅಲ್ಲದೆ ಸಾಕಷ್ಟು ಸಮಸ್ಯೆ ಗಳಿವೆ. ಮೈಸೂರು ಮಹಾರಾಜರು ನೀಡಿದ ಕೊಡುಗೆಯನ್ನು ಉಳಿಸಿಕೊಳ್ಳಬೇಕಾಗಿದೆ. ಕೆ.ಆರ್.ಆಸ್ಪತ್ರೆಗೆ ಮೈಸೂರಿನಿಂದಷ್ಟೆ ಅಲ್ಲದೆ ಸುತ್ತಲಿನ 4 ಜಿಲ್ಲೆಗಳಿಂದ ರೋಗಿಗಳು ಬರು ತ್ತಾರೆ. ಆದ್ದರಿಂದ ಸಚಿವರು ಕೂಡಲೇ ಇದನ್ನು ಪರಿಶೀಲಿಸಿ ಪೂರ್ಣವಾಗಿ ಸರಿಪಡಿಸಬೇಕು ಎಂದು ಮನವಿ ಮಾಡಿದರು. ಇದೇ ವೇಳೆ ವೈದ್ಯಕೀಯ ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಂಘದ ವತಿಯಿಂದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಉಪಮುಖ್ಯ ಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

ಕಾರ್ಯಕ್ರಮದಲ್ಲಿ ಮೇಯರ್ ಪುಷ್ಪ ಲತಾ ಜಗನ್ನಾಥ್, ಮೈಸೂರು ವಿವಿ ಕುಲ ಪತಿ ಪ್ರೊ.ಜಿ.ಹೇಮಂತ್‍ಕುಮಾರ್, ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ನಿರ್ದೇಶಕ ಡಾ. ಸಿ.ಪಿ.ನಂಜರಾಜ್, ಪ್ರಾಂಶುಪಾಲೆ ದಾಕ್ಷಾ ಯಿಣಿ, ನಗರಪಾಲಿಕೆ ಸದಸ್ಯ ಸಿ.ರಮೇಶ್ ಮತ್ತಿತರರು ಉಪಸ್ಥಿತರಿದ್ದರು.

Translate »