ಮೈಸೂರು: ನೀರು, ಆಸ್ಪತ್ರೆ, ಬಡಜನರ ಉದ್ಯೋಗಕ್ಕಾಗಿ ಕೈಗಾರಿಕೆಸ್ಕೃಗಳ ಸ್ಥಾಪನೆ ಜೊತೆಗೆ ಪ್ರಜಾತಂತ್ರ ವ್ಯವಸ್ಥೆಗೆ ಅಂದೇ ನಾಂದಿ ಹಾಡಿದವರು ನಾಲ್ವಡಿ ಕೃಷ್ಣರಾಜ ಒಡೆಯರ್ ಎಂದು ಹಿರಿಯ ಸಂಸ್ಕೃತಿ ಚಿಂತಕ ರಘುರಾಂ ವಾಜಪೇಯಿ ಅಭಿಪ್ರಾಯಪಟ್ಟರು. ಮೈಸೂರು ಅರಮನೆ ದಕ್ಷಿಣ ದ್ವಾರ ದಲ್ಲಿ ವರಾಹಸ್ವಾಮಿ ದೇವಸ್ಥಾನದ ಬಳಿ ಕರ್ನಾಟಕ ಸೇನಾ ಪಡೆ ಆಯೋಜಿಸಿದ್ದ 135ನೇ ಜನ್ಮ ದಿನಾಚರಣೆ ಕಾರ್ಯಕ್ರಮ ದಲ್ಲಿ ಪಾಲ್ಗೊಂಡು ಮಾತನಾಡಿದರು. ಎಂಟು ವರ್ಷದ ಬಾಲಕನಾಗಿದ್ದಾಗಲೇ ಅಧಿಕಾರ ಸಿಕ್ಕಿದಾಗ, ಜನರಿಗಾಗಿ ಕೆರೆ- ಕಟ್ಟೆಗಳನ್ನು ಕಟ್ಟುವಂತೆ ತಾಯಿಯ ಸೂಚನೆ ಯಂತೆ ಕೆರೆ…
ಬಿಲ್ಡರ್ಸ್ ಅಸೋಸಿಯೇಷನ್‍ನಿಂದ ಪರಿಸರ ಮಾಸಾಚರಣೆ
June 4, 2019ಮ್ಯಾರಥಾನ್, ಮಕ್ಕಳಿಗೆ ಚಿತ್ರರಚನೆ, ಗೃಹಿಣಿಯರಿಗೆ ಅಡುಗೆ ಸ್ಪರ್ಧೆ, ಚಾರಣ ಕಾರ್ಯಕ್ರಮ ಮೈಸೂರು: ಬಿಲ್ಡರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಮೈಸೂರು ಘಟಕವು ಜೂನ್ ತಿಂಗಳನ್ನು ಪರಿಸರ ಮಾಸವನ್ನಾಗಿ ಆಚರಿಸುತ್ತಿದ್ದು, ಈ ಸಂಬಂಧ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದು ಮೈಸೂರು ಘಟಕದ ಅಧ್ಯಕ್ಷ ಜೆವಿಆರ್ ನೈಧ್ರುವ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಜೂ.5ರಂದು ಸಂಜೆ 6.30 ಗಂಟೆಗೆ ಮೈಸೂರಿನ ವಿಶ್ವೇಶ್ವರನಗರದ ಮೈಸೂರು ಬಿಲ್ಡರ್ಸ್ ಚಾರಿಟಬಲ್ ಟ್ರಸ್ಟ್ ಸಭಾಂಗಣದಲ್ಲಿ, ಬೆಂಗಳೂರಿ ನಲ್ಲಿ ಕೆರೆ ಪುನರುಜ್ಜೀವನಗೊಳಿಸಿ…
ಗೋ ರಕ್ಷಕ ಶಿವು ಉಪ್ಪಾರ್ ಹತ್ಯೆ ಖಂಡಿಸಿ ಪ್ರತಿಭಟನೆ
June 4, 2019ಮೈಸೂರು: ಗೋಕಾಕ್‍ನ ಗೋ ರಕ್ಷಕ ಶಿವು ಉಪ್ಪಾರ್ ಅವರ ಹತ್ಯೆಯನ್ನು ಖಂಡಿಸಿ ಗಂಧದ ಗುಡಿ ಫೌಂಡೇಷನ್‍ನ ಕಾರ್ಯಕರ್ತರು ಸೋಮವಾರ ಮೈಸೂರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಬೆಳಗಾವಿ ಜಿಲ್ಲೆಯ ಬಾಗೇವಾಡಿ ಬಸ್ ನಿಲ್ದಾಣದಲ್ಲಿ ಗೋ ರಕ್ಷಕ ಶಿವು ಉಪ್ಪಾರ್ ಅವರನ್ನು ಕಿಡಿಗೇಡಿಗಳು ಹತ್ಯೆ ಮಾಡಿ ದ್ದಾರೆ. ಹತ್ಯೆ ನಡೆದು ಇಷ್ಟು ದಿನವಾಗಿದ್ದರೂ ಪೊಲೀಸರು ಆರೋಪಿಗಳನ್ನು ಬಂಧಿಸಿಲ್ಲ ಎಂದು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಸರ್ಕಾರ ಕೂಡಲೇ ಆರೋಪಿಗಳನ್ನು ಪತ್ತೆ ಹೆಚ್ಚಿ, ಬಂಧಿಸಬೇಕು. ಅವರ…
ಚಿತ್ರಕಲಾ ಸ್ಪರ್ಧೆಯಲ್ಲಿ ಪರಿಸರ ಕಾಳಜಿ ಪ್ರದರ್ಶಿಸಿದ ವಿದ್ಯಾರ್ಥಿಗಳು
June 4, 2019ಮೈಸೂರು: ವಿಶ್ವ ಪರಿಸರ ದಿನಾಚರಣೆ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಮೈಸೂರಿನ ರಾಮಕೃಷ್ಣನಗರ ದಲ್ಲಿರುವ ಲಿಂಗಾಂಬುಧಿ ಕೆರೆ ಉದ್ಯಾನವನ ದಲ್ಲಿ ಆಯೋಜಿಸಿದ್ದ ಚಿತ್ರಕಲಾ ಸ್ಪರ್ಧೆ ಯಲ್ಲಿ ವಿವಿಧ ಶಾಲೆಗಳ 250ಕ್ಕೂ ವಿದ್ಯಾರ್ಥಿ ಗಳು ಪಾಲ್ಗೊಂಡು, ಮುಂದಿನ ದಿನಗಳಲ್ಲಿ ಪರಿಸರ ಸಂಕ್ಷಣೆಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತಂತೆ ಕುಂಚದ ಮೂಲಕ ಚಿತ್ತಾರ ಮೂಡಿಸಿ ಗಮನ ಸೆಳೆದರು. ಕರ್ನಾಟಕ ಅರಣ್ಯ ಇಲಾಖೆ ಮೈಸೂರು ವಿಭಾಗ, ಮ್ಯಾಥ್ ಜ್ಯೂನಿಯರ್ ಸಂಸ್ಥೆ `ವಾಯುಮಾಲಿನ್ಯ’ ಶೀರ್ಷಿಕೆಯಡಿ ಆಯೋಜಿಸಿದ್ದ ಚಿತ್ರಕಲಾ ಸ್ಪರ್ಧೆಯಲ್ಲಿ 5-15 ವರ್ಷದೊಳಗಿನ ಮಕ್ಕಳು ತಮ್ಮ ಕಲ್ಪನೆಯಲ್ಲಿ…
ಕಾವೇರಿ ಪ್ರಾಧಿಕಾರ ರಚನೆ ವಿರೋಧಿಸಿ ವಾಟಾಳ್ ಕಪ್ಪುಬಟ್ಟೆ ಧರಿಸಿ ಪ್ರತಿಭಟನೆ
June 4, 2019ಮೈಸೂರು: ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ರಚನೆ ಮಾಡಿರುವುದನ್ನು ವಿರೋಧಿಸಿ ಮಾಜಿ ಶಾಸಕ, ಹಿರಿಯ ಕನ್ನಡ ಚಳವಳಿ ನಾಯಕ ವಾಟಾಳ್ ನಾಗರಾಜ್ ಅವರು ಸೋಮವಾರ ಮೈಸೂರು ರೈಲ್ವೆ ನಿಲ್ದಾಣದ ಬಳಿ ಕಪ್ಪು ಬಟ್ಟೆ ಧರಿಸಿ ಪ್ರತಿಭಟನೆ ನಡೆಸಿದರು. ಪ್ರಾಧಿಕಾರ ರಚನೆಯಿಂದ ಕರ್ನಾಟಕಕ್ಕೆ ನಿರಂತರ ವಾಗಿ ಅನ್ಯಾಯವಾಗಲಿದೆ. ಈ ವಿಚಾರದಲ್ಲಿ ರಾಜ್ಯ ಸರ್ಕಾರ ಮೌನವಾಗಿರುವುದು ಸರಿಯಲ್ಲ ಎಂದು ರಾಜ್ಯ ಸರ್ಕಾರದ ಧೋರಣೆಯನ್ನು ಖಂಡಿಸಿದರು. ರಾಜ್ಯ ಸರ್ಕಾರ ಕೂಡಲೇ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿ ಪ್ರಾಧಿಕಾರ ರಚನೆಗೆ ತೀವ್ರ…
ಕಾರಿಗೆ ಗೂಡ್ಸ್ ವಾಹನ ಡಿಕ್ಕಿ: ಮೂವರ ಸಾವು
June 3, 2019ಮಳವಳ್ಳಿ: ಬೊಲೆರೋ ಗೂಡ್ಸ್ ಟೆಂಪೋ ಹಾಗೂ ಈಟಿಯೋಸ್ ಕಾರಿನ ನಡುವೆ ನಡೆದ ಭೀಕರ ಅಪಘಾತದಲ್ಲಿ ಮೂವರು ಮೃತ ಪಟ್ಟು, ಇಬ್ಬರು ತೀವ್ರ ಗಾಯಗೊಂಡಿರುವ ಘಟನೆ ತಾಲೂಕಿನ ತಳಗವಾದಿ ಗೇಟ್ ಬಳಿ ಭಾನುವಾರ ರಾತ್ರಿ ನಡೆದಿದೆ. ತಳಗವಾದಿ ಗ್ರಾಮದ ನಿವಾಸಿ ಜಾನಕಿ (53), ಅಶೋಕ(35) ಹಾಗೂ ದೇವಿಪುರದ ಸೌಭಾಗ್ಯ(46) ಮೃತಪಟ್ಟವರು. ಜಯಶೀಲ (55), ನಾಗರಾಜು(25) ತೀವ್ರ ಗಾಯಗೊಂಡು ಮಂಡ್ಯ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ವಿವರ: ಬಾಳೆಎಲೆ ತುಂಬಿಕೊಂಡು ಮಳವಳ್ಳಿಯಿಂದ ಬೆಂಗಳೂರು ಕಡೆಗೆ ಹೋಗು ತ್ತಿದ್ದ ಬೊಲೆರೋ ಗೂಡ್ಸ್…
ಅಂತಾರಾಷ್ಟ್ರೀಯ ಯೋಗ ದಿನೋತ್ಸವದಲ್ಲಿ 1.5 ಲಕ್ಷ ಯೋಗ ಪಟುಗಳು ದಾಖಲೆ ನಿರ್ಮಿಸುವ ಗುರಿ
June 3, 2019ಮೈಸೂರು: ಅಂತಾರಾಷ್ಟ್ರೀಯ ಯೋಗ ದಿನೋತ್ಸವ ಹಿನ್ನೆಲೆಯಲ್ಲಿ 1.5 ಲಕ್ಷ ಯೋಗಪಟುಗಳು ದಾಖಲೆ ನಿರ್ಮಿಸುವ ಗುರಿಯೊಂದಿಗೆ ಮೈಸೂರಿನಲ್ಲಿ ಭಾನುವಾರ ನೂರಾರು ಯೊಗಪಟುಗಳು ಯೋಗ ತಾಲೀಮು ನಡೆಸಿದರು. 2017ರಲ್ಲಿ ಯೋಗ ಗಿನ್ನಿಸ್ ದಾಖಲೆ ನಿರ್ಮಿಸಿ, ಕಳೆದ ವರ್ಷ ಕೈತಪ್ಪಿ ಹೋಗಿದ್ದ ಗಿನ್ನಿಸ್ ದಾಖಲೆಯನ್ನು ಈ ಬಾರಿ ಶತಾಯ ಗತಾಯ ಗಳಿಸಲೇಬೇಕು ಎಂಬ ಸಂಕಲ್ಪದೊಂದಿಗೆ ಜಿಲ್ಲಾಡಳಿ ತದ ಆಶ್ರಯದಲ್ಲಿ ಮೈಸೂರಿನ ಎಲ್ಲಾ ಯೋಗ ಸಂಸ್ಥೆಗಳೂ ಒಗ್ಗೂಡಿ ಮೈಸೂರು ಯೋಗ ಒಕ್ಕೂಟದ ಅಡಿಯಲ್ಲಿ ಸಿದ್ಧತೆ ಯಲ್ಲಿ ತೊಡಗಿವೆ. ಇದಕ್ಕಾಗಿ ಕಳೆದ 3 ವಾರಗಳಿಂದ…
ಕಾವ್ಯದ ಮೂಲಕ ಅಮಾನವೀಯತೆ ವಿರುದ್ಧ ಹೋರಾಡಿದ ಮುಳ್ಳೂರು ನಾಗರಾಜ
June 3, 2019ಮೈಸೂರು: ಸಾಹಿತಿ ಮುಳ್ಳೂರು ನಾಗರಾಜ ಅವರು ಅಪಮಾನ, ಹಸಿವು, ಅಭದ್ರತೆ, ಅಮಾನವೀಯತೆ ವಿರುದ್ಧ ಕಾವ್ಯದ ಮೂಲಕ ದನಿ ಎತ್ತಿ ಹೋರಾಡಿದ ಹೋರಾಟಗಾರ ಎಂದು ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷ ಡಾ. ಬಂಜಗೆರೆ ಜಯಪ್ರಕಾಶ್ ಅಭಿಪ್ರಾಯಪಟ್ಟರು. ಮೈಸೂರಿನ ಕಲಾಮಂದಿರ ಕಿರುರಂಗ ಮಂದಿರದಲ್ಲಿ ರಂಗವಾಹಿನಿ, ನೆಲೆ ಹಿನ್ನೆಲೆ, ರಾಮಮನೋಹರ ಲೋಹಿಯಾ ಟ್ರಸ್ಟ್ ವತಿಯಿಂದ ಭಾನುವಾರ ಏರ್ಪಡಿಸಿದ್ದ ಮುಳ್ಳೂರು ನಾಗರಾಜ ರಾಜ್ಯಮಟ್ಟದ 9ನೇ ಕಾವ್ಯ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಮುಳ್ಳೂರು ನಾಗರಾಜ ಬಹು ದೊಡ್ಡ ಪ್ರಭಾವಶಾಲಿ ಲೇಖಕರಾಗಿರಲಿಲ್ಲ. ಅಂದಂ…
ಯುಪಿಎಸ್‍ಸಿ ಪರೀಕ್ಷೆಗೆ 3487 ಮಂದಿ ಹಾಜರು
June 3, 2019ಮೈಸೂರು: ಭಾನುವಾರ ನಡೆದ ಯುಪಿಎಸ್‍ಸಿ ಪರೀಕ್ಷೆಯಲ್ಲಿ ಮೈಸೂರಿನ 16 ಪರೀಕ್ಷಾ ಕೇಂದ್ರಗಳಲ್ಲಿ 3487 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾದರು. ಯುಪಿಎಸ್‍ಸಿ ಸಂಸ್ಥೆಯು ಐಎಎಸ್, ಐಪಿಎಸ್, ಐಎಫ್‍ಎಸ್, ಐಆರ್‍ಎಸ್ ಸೇರಿ ದಂತೆ ಇನ್ನಿತರ ನಾಗರಿಕ ಸೇವಾ ಇಲಾಖೆ ಗಳಲ್ಲಿ ಖಾಲಿ ಇರುವ 896 ಹುದ್ದೆಗಳಿಗೆ ಮೈಸೂರು ಸೇರಿದಂತೆ ದೇಶದ 72 ನಗರ ಗಳಲ್ಲಿ ಇಂದು ಏಕಕಾಲಕ್ಕೆ ಪೂರ್ವಭಾವಿ ಪರೀಕ್ಷೆಯನ್ನು ಆಯೋಜಿಸಿತ್ತು. ಮೈಸೂರು ಜಿಲ್ಲೆಯಲ್ಲಿ 6238 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲು ನೋಂದಣಿ ಮಾಡಿಕೊಂಡಿದ್ದರು. ಇದಕ್ಕಾಗಿ ಮೈಸೂರಿನ ಮಹಾರಾಜ ಪದವಿ ಪೂರ್ವ ಕಾಲೇಜು,…
ತಂದೆ ಮಗನ ಜಗಳದಲ್ಲಿ ಚೂರಿ ಇರಿತಕ್ಕೆ ಬಲಿಯಾದ ತಂದೆ
June 2, 2019ಕಿಕ್ಕೇರಿ: ಮಗನ ಜೊತೆ ನಡೆದ ಜಗಳದಲ್ಲಿ ಚೂರಿ ಇರಿತದಿಂದ ತಂದೆ ಸಾವನ್ನಪ್ಪಿರುವ ಘಟನೆ ಇಲ್ಲಿನ ಮಾದಾ ಪುರಕೊಪ್ಪಲು ಗ್ರಾಮದಲ್ಲಿ ಶುಕ್ರವಾರ ಮಧ್ಯಾಹ್ನ ನಡೆದಿದ್ದು, ಪೊಲೀಸರು ಮಗನ ವಿರುದ್ಧ ಉದ್ದೇಶವಲ್ಲದ ಕೊಲೆ (ಐಪಿಸಿ 304) ಪ್ರಕರಣ ದಾಖಲಿಸಿದ್ದಾರೆ. ಗ್ರಾಮದ ನಿವಾಸಿ ನಂಜೇಗೌಡ(59) ತನ್ನ ಮಗ ಮಂಜು ಅಲಿಯಾಸ್ ಮಂಜೇ ಗೌಡ(29) ಜೊತೆ ನಡೆದ ಜಗಳದಲ್ಲಿ ಚೂರಿ ಇರಿತಕ್ಕೆ ಬಲಿಯಾದವರು. ಘಟನೆ ವಿವರ: ಕ್ಲುಲ್ಲಕ ಕಾರಣಕ್ಕೆ ನಂಜೇಗೌಡ ಮತ್ತು ಆತನ ಮಗ ಮಂಜೇ ಗೌಡ ನಡುವೆ ಜಗಳ ಆರಂಭವಾಗಿದೆ. ಈ…










