ಚಿತ್ರಕಲಾ ಸ್ಪರ್ಧೆಯಲ್ಲಿ ಪರಿಸರ ಕಾಳಜಿ ಪ್ರದರ್ಶಿಸಿದ ವಿದ್ಯಾರ್ಥಿಗಳು
ಮೈಸೂರು

ಚಿತ್ರಕಲಾ ಸ್ಪರ್ಧೆಯಲ್ಲಿ ಪರಿಸರ ಕಾಳಜಿ ಪ್ರದರ್ಶಿಸಿದ ವಿದ್ಯಾರ್ಥಿಗಳು

June 4, 2019

ಮೈಸೂರು: ವಿಶ್ವ ಪರಿಸರ ದಿನಾಚರಣೆ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಮೈಸೂರಿನ ರಾಮಕೃಷ್ಣನಗರ ದಲ್ಲಿರುವ ಲಿಂಗಾಂಬುಧಿ ಕೆರೆ ಉದ್ಯಾನವನ ದಲ್ಲಿ ಆಯೋಜಿಸಿದ್ದ ಚಿತ್ರಕಲಾ ಸ್ಪರ್ಧೆ ಯಲ್ಲಿ ವಿವಿಧ ಶಾಲೆಗಳ 250ಕ್ಕೂ ವಿದ್ಯಾರ್ಥಿ ಗಳು ಪಾಲ್ಗೊಂಡು, ಮುಂದಿನ ದಿನಗಳಲ್ಲಿ ಪರಿಸರ ಸಂಕ್ಷಣೆಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತಂತೆ ಕುಂಚದ ಮೂಲಕ ಚಿತ್ತಾರ ಮೂಡಿಸಿ ಗಮನ ಸೆಳೆದರು.

ಕರ್ನಾಟಕ ಅರಣ್ಯ ಇಲಾಖೆ ಮೈಸೂರು ವಿಭಾಗ, ಮ್ಯಾಥ್ ಜ್ಯೂನಿಯರ್ ಸಂಸ್ಥೆ `ವಾಯುಮಾಲಿನ್ಯ’ ಶೀರ್ಷಿಕೆಯಡಿ ಆಯೋಜಿಸಿದ್ದ ಚಿತ್ರಕಲಾ ಸ್ಪರ್ಧೆಯಲ್ಲಿ 5-15 ವರ್ಷದೊಳಗಿನ ಮಕ್ಕಳು ತಮ್ಮ ಕಲ್ಪನೆಯಲ್ಲಿ ಮೂಡಿಬಂದ ಚಿತ್ರ ಬರೆದರು. ಅಲ್ಲದೆ ಕಾರ್ಯಕ್ರಮದ ಸ್ಮರಣಾರ್ಥ ಉದ್ಯಾ ನವನದಲ್ಲಿ ಗಿಡ ನೆಟ್ಟು ಸಂಭ್ರಮಿಸಿದರು.
ವಾಯುಮಾಲಿನ್ಯದ ಸ್ವರೂಪ, ಅದ ರಿಂದಾಗುವ ಪರಿಣಾಮ, ಓಝೋನ್ ಪದರದ ಹಾನಿ, ವಿಷ ಗಾಳಿ, ದೆಹಲಿಯಲ್ಲಿ ಉದ್ಭವಿಸಿರುವ ವಾಯುಮಾಲಿನ್ಯ, ಪರಿ ಸರ ಸಮತೋಲನ ತಪ್ಪುತ್ತಿರುವುದು ಸೇರಿ ದಂತೆ ವಿವಿಧ ವಿಷಯಗಳ ಬಗ್ಗೆ ಬೆಳಕು ಚೆಲ್ಲುವ ಚಿತ್ರ ಬರೆದರು. ಸ್ಪರ್ಧೆಯಲ್ಲಿ 170 ಮಕ್ಕಳು ನೋಂದಾಯಿಸಿಕೊಂಡಿದ್ದ ರಾದರೂ 250ಕ್ಕೂ ಹೆಚ್ಚು ಮಕ್ಕಳು ಆಗಮಿ ಸಿದ್ದರು. ಎಲ್ಲರಿಗೂ ಚಿತ್ರ ಬರೆಯಲು ಅವಕಾಶ ಮಾಡಿಕೊಡಲಾಯಿತು.

ಸ್ಪರ್ಧೆಯನ್ನು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಹುಲಿ ಯೋಜನೆ) ಜಗತ್ ರಾವ್ ಚಾಲನೆ ನೀಡಿ ಮಾತನಾಡಿ, ವಾಯುಮಾಲಿನ್ಯದಿಂದಾಗುವ ಪರಿಸರ ಮಾಲಿನ್ಯದ ಬಗ್ಗೆ ಎಲ್ಲರೂ ಎಚ್ಚೆತ್ತುಕೊಳ್ಳ ಬೇಕಿದೆ. ಪ್ರತ್ಯೇಕವಾಗಿ ಹಾಗೂ ಸಾಮೂ ಹಿಕವಾಗಿ ಕೈಗಾರಿಕೋದ್ಯಮಗಳಿಂದಾಗುವ ವಾಯುಮಾಲಿನ್ಯವು ಅಪಾಯಕಾರಿ ಯಾಗಿದೆ. ಈ ನಿಟ್ಟಿನಲ್ಲಿ ವಾಯುಮಾಲಿ ನ್ಯದ ಕುರಿತು ಚಿತ್ರಕಲಾ ಸ್ಪರ್ಧೆ ಆಯೋಜಿ ಸಿರುವುದು ಉತ್ತಮ ಕಾರ್ಯ ಎಂದರು.

ಡಿಸಿಎಫ್ ಡಾ.ಕೆ.ಸಿ.ಪ್ರಶಾಂತ್ ಕುಮಾರ್ ಮಾತನಾಡಿ, `ವಾಯುಮಾಲಿನ್ಯ’ ಈ ಬಾರಿ ಪರಿಸರ ದಿನಾಚರಣೆಯ ಧ್ಯೇಯವಾಗಿದೆ. ಅರಣ್ಯ ನಾಶದಿಂದಾಗಿ ಪರಿಸರ ಮಾಲಿನ್ಯ ಹೆಚ್ಚಾಗುತ್ತಿದೆ. ಇನ್ನಾದರೂ ಎಚ್ಚೆತ್ತುಕೊಂಡು ಅರಣ್ಯ ಸಂರಕ್ಷಣೆಗೆ ಎಲ್ಲರೂ ಕೈಜೋಡಿ ಸಲೇಬೇಕಾಗಿದೆ. ಈ ಹಿನ್ನೆಲೆಯಲ್ಲಿ ಮಕ್ಕಳಲ್ಲಿ ಪರಿಸರ ಜಾಗೃತಿ ಮೂಡಿಸಲು ಚಿತ್ರಕಲಾ ಸ್ಪರ್ಧೆ ಆಯೋಜಿಸಲಾಗಿದೆ. ಶಾಲೆಗಳಲ್ಲಿ ಚಿತ್ರಕಲೆ ಏರ್ಪಡಿಸಿದ್ದರೆ ಟೇಬಲ್ ಮತ್ತು ಕುರ್ಚಿ ಮೇಲೆ ಕುಳಿತು ಚಿತ್ರ ಬರೆಯುತ್ತಾರೆ. ಆದರೆ ಇಲ್ಲಿ ಸ್ವತಂತ್ರವಾಗಿ ಬಿಡಲಾಗಿದೆ. ಸುಂದರವಾದ ಸ್ವಚ್ಛಂದ ಪರಿಸರದಲ್ಲಿ ಕುಳಿತು ಪರಿಸರ ಸಂರಕ್ಷಣೆಯ ಕುರಿತು ಚಿತ್ರ ಬರೆ ಯುತ್ತಿರುವುದು ಅವರಲ್ಲಿ ಪರಿಸರ ಬಗ್ಗೆ ಹೆಚ್ಚು ಆಸಕ್ತಿ ಮೂಡಿಸಲಿದೆ. ಮಕ್ಕಳು ಹಾಗೂ ಯುವ ಜನರು ಪರಿಸರ ಸಂರಕ್ಷಣೆಯ ಮಹತ್ವ ಅರಿತರೆ, ಪರಿಣಾಮಕಾರಿಯಾಗಿ ಪರಸರ ಸಂರಕ್ಷಿಸಬಹುದು ಎಂದು ಅಭಿ ಪ್ರಾಯಪಟ್ಟರು. ಕಾರ್ಯಕ್ರಮದಲ್ಲಿ ಎಸಿಎಫ್ ಕೃಪಾನಿಧಿ, ಆರ್‍ಎಫ್‍ಓಗಳಾದ ಗೋವಿಂದ ರಾಜು, ದೇವರಾಜು, ಡಿಆರ್‍ಎಫ್‍ಓ ಗಳಾದ ವಿಜಯ್‍ಕುಮಾರ್, ಮಲ್ಲೇಶ್, ಮಲ್ಲಯ್ಯ ಇನ್ನಿತರರು ಉಪಸ್ಥಿತರಿದ್ದರು.

Translate »