Tag: Mysore

ಸಿದ್ದರಾಮಯ್ಯ ನನ್ನ ಟಾರ್ಗೆಟ್ ಮಾಡಿಲ್ಲ, ನಾನೂ ಅವರನ್ನು ಟಾರ್ಗೆಟ್ ಮಾಡಲ್ಲ
ಮೈಸೂರು

ಸಿದ್ದರಾಮಯ್ಯ ನನ್ನ ಟಾರ್ಗೆಟ್ ಮಾಡಿಲ್ಲ, ನಾನೂ ಅವರನ್ನು ಟಾರ್ಗೆಟ್ ಮಾಡಲ್ಲ

June 6, 2019

ಮೈಸೂರು: ರಾಜ್ಯದಲ್ಲಿ ಉತ್ತಮ ಆಡಳಿತ ನೀಡಿರುವ ಮಾಜಿ ಮುಖ್ಯಮಂತ್ರಿ ಸಿದ್ದ ರಾಮಯ್ಯ ಇಂದಿಗೂ ಜನರ ವಿಶ್ವಾಸ ಉಳಿಸಿಕೊಂಡಿ ರುವ ನಾಯಕರಾಗಿದ್ದಾರೆ. ನಾನು ಅವರನ್ನು ಎಂದಿಗೂ ಟಾರ್ಗೆಟ್ ಮಾಡುವುದಿಲ್ಲ. ಅವರೂ ನನ್ನನ್ನು ಟಾರ್ಗೆಟ್ ಮಾಡಿಲ್ಲ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಸ್ಪಷ್ಟಪಡಿಸಿದ್ದಾರೆ. ಮೈಸೂರಿನಲ್ಲಿ ಬುಧವಾರ ಪತ್ರಕರ್ತರೊಂದಿಗೆ ಮಾತ ನಾಡಿದ ಅವರು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜಿ.ಟಿ.ದೇವೇಗೌಡರನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ವರದಿ ಪ್ರಕಟವಾಗಿದೆ. ಅದು ವಾಸ್ತವ್ಯಕ್ಕೆ ದೂರವಾದ ಸಂಗತಿ. ಸಿದ್ದರಾಮಯ್ಯ ರಾಜ್ಯಕ್ಕೆ 5 ವರ್ಷ ಒಳ್ಳೆಯ…

ರಾಷ್ಟ್ರೀಯ ಕಬಡ್ಡಿ ಚಾಂಪಿಯನ್‍ಶಿಪ್‍ಗೆ ಮೈಸೂರಿನ ವಿದ್ಯಾರ್ಥಿಗಳು
ಮೈಸೂರು

ರಾಷ್ಟ್ರೀಯ ಕಬಡ್ಡಿ ಚಾಂಪಿಯನ್‍ಶಿಪ್‍ಗೆ ಮೈಸೂರಿನ ವಿದ್ಯಾರ್ಥಿಗಳು

June 6, 2019

ಮೈಸೂರು: ಹರಿ ಯಾಣದ ಪಾಣಿಪತ್‍ನಲ್ಲಿ ಜೂ.9ರಿಂದ 12ರವರೆಗೆ ನಡೆಯಲಿರುವ ನ್ಯಾಷನಲ್ ಗೇಮ್ಸ್ ಚಾಂಪಿಯನ್‍ಷಿಪ್‍ನಲ್ಲಿ 12 ಹಾಗೂ 17 ವರ್ಷದೊಳಗಿನವರ ವಿಭಾಗದ ಕಬಡ್ಡಿ ಪಂದ್ಯಾವಳಿಯಲ್ಲಿ ಕರ್ನಾಟಕವನ್ನು ಪ್ರತಿನಿಧಿ ಸಲಿರುವ ಮೈಸೂರಿನ 19 ಬಾಲಕ-ಬಾಲಕಿ ಯರಿಗೆ ಮೈಸೂರಿನ ಹೆಲ್ಪಿಂಗ್ ಹ್ಯಾಂಡ್ಸ್ ಜೈನ್ ಯೂತ್ ಆರ್ಗನೈಜೇಷನ್ ನೆರವಾಗಿದೆ. ಸಂಸ್ಥೆಯು ತನ್ನ ವಿದ್ಯಾ ಪ್ರೋತ್ಸಾಹ ಯೋಜನೆಯಡಿ 19 ಮಂದಿ ಬಾಲಕ-ಬಾಲಕಿಯರಿಗೆ ಪಾಣಿಪತ್ ಕಬಡ್ಡಿ ಪಂದ್ಯಾ ವಳಿಗೆ ಹೋಗಿ ಬರುವ ರೈಲ್ವೆ ಟಿಕೆಟ್ ವ್ಯವಸ್ಥೆ ಕಲ್ಪಿಸಿದ್ದು, ಒಂದಷ್ಟು ಆಹಾರ ಪದಾರ್ಥಗಳನ್ನು ನೀಡಿದೆ. ಬುಧವಾರ ಬೆಳಿಗ್ಗೆ…

ಚಿತ್ರಕಲೆಯಲ್ಲಿ ವಾಯುಮಾಲಿನ್ಯ ಕಣ್ಣಿಗೆ ಕಟ್ಟಿದ ಚಿಣ್ಣರು
ಮೈಸೂರು

ಚಿತ್ರಕಲೆಯಲ್ಲಿ ವಾಯುಮಾಲಿನ್ಯ ಕಣ್ಣಿಗೆ ಕಟ್ಟಿದ ಚಿಣ್ಣರು

June 6, 2019

ಮೈಸೂರು: ವಾಯು ಮಾಲಿನ್ಯದ ದುಷ್ಪರಿಣಾಮಗಳನ್ನು ಕಣ್ಣಿಗೆ ಕಟ್ಟುವಂತೆ ಚಿಣ್ಣರು ತಮ್ಮ ಕುಂಚದಲ್ಲಿ ಮೂಡಿಸಿ, ಪರಿಸರ ಸಂರಕ್ಷಣೆಯ ಮಹತ್ವ ಸಾರಿದರು. ಮೈಸೂರಿನ ಸಿದ್ಧಾರ್ಥನಗರ ದಲ್ಲಿರುವ ಪ್ರಾದೇಶಿಕ ಪ್ರಾಕೃತಿಕ ವಿಜ್ಞಾನ ವಸ್ತು ಸಂಗ್ರಹಾಲಯದ ವತಿಯಿಂದ `ವಾಯುಮಾಲಿನ್ಯ’ ಕುರಿತಂತೆ ಬುಧವಾರ ಸಂಸ್ಥೆ ಆವರಣದಲ್ಲಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಚಿತ್ರಕಲಾ ಸ್ಪರ್ಧೆಯಲ್ಲಿ ಚಿಣ್ಣರು ವಾಯು ಮಾಲಿನ್ಯದ ಕರಾಳ ಮುಖಗಳನ್ನು ತಮ್ಮ ಚಿತ್ರಕಲೆಯಲ್ಲಿ ಅನಾವರಣಗೊಳಿಸಿದರು. ವಿಶ್ವ ಪರಿಸರ ದಿನದ ಅಂಗವಾಗಿ ನಡೆದ ಚಿತ್ರ ಬರೆಯುವ ಸ್ಪರ್ಧೆಗೆ ಉಚಿತ ಪ್ರವೇ ಶಾವಕಾಶ ಕಲ್ಪಿಸಲಾಗಿತ್ತು….

ವಿಶ್ವ ಪರಿಸರ ದಿನಾಚರಣೆ: ವಿವಿಧ ಸಂಘ ಸಂಸ್ಥೆಗಳಿಂದ ಗಿಡ ನೆಡುವ ಕಾರ್ಯಕ್ರಮ
ಮೈಸೂರು

ವಿಶ್ವ ಪರಿಸರ ದಿನಾಚರಣೆ: ವಿವಿಧ ಸಂಘ ಸಂಸ್ಥೆಗಳಿಂದ ಗಿಡ ನೆಡುವ ಕಾರ್ಯಕ್ರಮ

June 6, 2019

ಮೈಸೂರು: ವಿಶ್ವ ಪರಿಸರ ದಿನದ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಬುಧವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಸೈಕಲ್ ಜಾಥಾ ಆಯೋ ಜಿಸಿದ್ದರೆ, ವಿವಿಧ ಸಂಘ-ಸಂಸ್ಥೆಗಳು ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಂಡು ಪರಿಸರ ಕಾಳಜಿ ಪ್ರದರ್ಶಿಸಿದವು. ಸೈಕಲ್ ಜಾಥಾ: ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಎನ್‍ಸಿಸಿ, ಎನ್‍ಎಸ್‍ಎಸ್, ಐಪಿಎಂಓ ಹಾಗೂ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸಹಯೋಗದೊಂದಿಗೆ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಮೈಸೂರಲ್ಲಿ ಸೈಕಲ್ ಜಾಥಾ ಆಯೋಜಿಸಿತ್ತು. ಜಿಲ್ಲಾಧಿಕಾರಿ ಕಚೇರಿ ಬಳಿ ಹಿರಿಯ ಸಿವಿಲ್…

ಮೈಸೂರು ಆಸ್ಪತ್ರೆಗಳಿಗೆ 5 ತಿಂಗಳಾದರೂ ಬಿಲ್ ಹಣ ಪಾವತಿಸದ ಸರ್ಕಾರ
ಮೈಸೂರು

ಮೈಸೂರು ಆಸ್ಪತ್ರೆಗಳಿಗೆ 5 ತಿಂಗಳಾದರೂ ಬಿಲ್ ಹಣ ಪಾವತಿಸದ ಸರ್ಕಾರ

June 6, 2019

ಮೈಸೂರು: ಸುಳವಾಡಿ ಮಾರಮ್ಮ ದೇವಸ್ಥಾನ ಪ್ರಸಾದದಲ್ಲಿ ವಿಷ ಪ್ರಾಶನ ಪ್ರಕರಣದಲ್ಲಿ ಅಸ್ವಸ್ಥರಾಗಿದ್ದವರಿಗೆ ನೀಡಿದ ಚಿಕಿತ್ಸಾ ಬಿಲ್ ಹಣವನ್ನು ಮೈಸೂರಿನ ಖಾಸಗಿ ಆಸ್ಪತ್ರೆಗಳಿಗೆ 5 ತಿಂಗಳಾದರೂ ಸರ್ಕಾರ ಬಿಡುಗಡೆ ಮಾಡಿಲ್ಲ. 2018ರ ಡಿಸೆಂಬರ್ 14ರಂದು ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಕಿಚುಗುತ್ ಸುಳವಾಡಿ ಮಾರಮ್ಮ ದೇವಸ್ಥಾನದಲ್ಲಿ ವಿಷ ಬೆರೆಸಿದ ಪ್ರಸಾದ ಸೇವಿಸಿ 17 ಮಂದಿ ಸಾವನ್ನಪ್ಪಿ, 120ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿ ದ್ದರು. ಚಾಮರಾಜನಗರದಲ್ಲಿ ಸರಿಯಾದ ವೈದ್ಯಕೀಯ ಸೌಲಭ್ಯ ಇಲ್ಲದ ಕಾರಣ ಹಲವರನ್ನು ಮೈಸೂರಿನ ಕೆಲ ಖಾಸಗಿ ಆಸ್ಪತ್ರೆಗಳಲ್ಲಿ…

ಪೌರಕಾರ್ಮಿಕರ ನಿಯೋಜನೆ ಹಾಜರಾತಿ ಸಂಬಂಧ ಆಯುಕ್ತರ ಅಸಮಾಧಾನ
ಮೈಸೂರು

ಪೌರಕಾರ್ಮಿಕರ ನಿಯೋಜನೆ ಹಾಜರಾತಿ ಸಂಬಂಧ ಆಯುಕ್ತರ ಅಸಮಾಧಾನ

June 6, 2019

ಮೈಸೂರು: ಪೌರಕಾರ್ಮಿಕರ ನಿಯೋಜನೆ, ಹಾಜರಾತಿ ಸಂಬಂಧ ವಾರದಲ್ಲಿ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರೂ ನಿರ್ಲಕ್ಷ್ಯ ವಹಿಸಿದ್ದಾರೆಂದು ನಗರಪಾಲಿಕೆ ಆಯುಕ್ತೆ ಶಿಲ್ಪಾನಾಗ್ ಬೇಸರ ಹೊರಹಾಕಿದ್ದಾರೆ. ಜೂ.7ರಂದು ಕೌನ್ಸಿಲ್ ಸಭೆ ನಡೆಯ ಲಿರುವ ಹಿನ್ನೆಲೆಯಲ್ಲಿ ಪಾಲಿಕೆ ನವೀಕೃತ ಹಳೇ ಕೌನ್ಸಿಲ್ ಸಭಾಂಗಣದಲ್ಲಿ ಮೇಯರ್ ಪುಷ್ಪಲತಾ ಜಗನ್ನಾಥ್ ಅಧ್ಯಕ್ಷತೆಯಲ್ಲಿ ನಡೆದ ಕಲಾಪ ಸಲಹಾ ಸಮಿತಿ ಸಭೆಯಲ್ಲಿ, ಸದ ಸ್ಯರ ದೂರಿಗೆ ಪ್ರತಿಕ್ರಿಯಿಸಿದ ಅವರು, ಪ್ರತಿ ವಾರ್ಡ್‍ಗೆ ನಿಯೋಜಿಸುವ ಪೌರಕಾರ್ಮಿ ಕರ ಸಂಖ್ಯೆ ಹಾಗೂ ಅವರ ಹಾಜರಾತಿ ಯನ್ನು ಸಲ್ಲಿಸುವಂತೆ ಸೂಚಿಸಿದ್ದರೂ ಸಂಬಂಧ…

ಕೆಆರ್‍ಎಸ್, ಕೆ.ಆರ್.ಆಸ್ಪತ್ರೆ, ಮುಡಾದಲ್ಲಿ ನಾಲ್ವಡಿಗೆ ನಮನ
ಮೈಸೂರು

ಕೆಆರ್‍ಎಸ್, ಕೆ.ಆರ್.ಆಸ್ಪತ್ರೆ, ಮುಡಾದಲ್ಲಿ ನಾಲ್ವಡಿಗೆ ನಮನ

June 5, 2019

ಮೈಸೂರು: ಮೈಸೂರಿನ ಕೆ.ಆರ್.ಆಸ್ಪತ್ರೆ, ಮುಡಾ ಕಚೇರಿ ಹಾಗೂ ಕೆಆರ್‍ಎಸ್‍ನ ಬೃಂದಾವನದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ 135ನೇ ಜಯಂತಿಯನ್ನು ಆಚರಿಸಲಾಯಿತು. ಕೆ.ಆರ್.ಆಸ್ಪತ್ರೆಯಲ್ಲಿರುವ ನಾಲ್ವಡಿ ಕೃಷ್ಣರಾಜ ಒಡೆಯರ್ ಭಾವಚಿತ್ರಕ್ಕೆ ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಡೀನ್ ಡಾ. ಸಿ.ಪಿ. ನಂಜರಾಜ್, ಕೆ.ಆರ್.ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ. ನಂಜುಂಡಸ್ವಾಮಿ ಹಾಗೂ ಸ್ಥಾನಿಕ ವೈದ್ಯಾಧಿಕಾರಿ ಡಾ. ರಾಜೇಶ್ ಕುಮಾರ್ ಮಾಲಾರ್ಪಣೆ ಮಾಡಿದರು. ಈ ಸಂದರ್ಭ ಡಾ.ಮಂಜುನಾಥ, ಡಾ.ಬಂಗಾರು, ಮಹದೇವು, ಮಹದೇವ ಸ್ವಾಮಿ, ಮಂಗಳಮ್ಮ, ಕುಮಾರ್, ನರ್ಸಿಂಗ್ ಸಿಬ್ಬಂದಿ ಉಪಸ್ಥಿತರಿದ್ದರು….

ಅರಸು ಬಳಗಗಳ ವತಿಯಿಂದ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ
ಮೈಸೂರು

ಅರಸು ಬಳಗಗಳ ವತಿಯಿಂದ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ

June 5, 2019

ಮೈಸೂರು: ರಾಜರ್ಷಿ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಜಯಂತಿಯನ್ನು ಮಂಗಳವಾರ ಅರಸು ಬಳಗಗಳು ಹಾಗೂ ವಿವಿಧ ಸಂಘ-ಸಂಸ್ಥೆಗಳಿಂದ ಆಚರಿಸಲಾಯಿತು. ಮೈಸೂರಿನ ತ್ಯಾಗರಾಜ ರಸ್ತೆಯ ಅರಸು ಮಂಡಳಿ ಸಂಘದಲ್ಲಿ ಹಮ್ಮಿಕೊಂಡಿದ್ದ ಜಯಂತಿ ಕಾರ್ಯಕ್ರಮ ದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಚಿತ್ರಪಟಕ್ಕೆ ಪುಷ್ಪಾ ರ್ಚನೆ ಸಲ್ಲಿಸುವ ಮೂಲಕ ಮಾಜಿ ಸಚಿವರೂ ಆದ ಶಾಸಕ ಎಸ್.ಎ.ರಾಮದಾಸ್ ಉದ್ಘಾಟನೆ ನೆರವೇರಿಸಿ ದರು. ಅಲ್ಲದೆ, ಈ ಆವರಣದಿಂದ ಹಮ್ಮಿಕೊಂಡಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಚಿತ್ರಪಟದ ಮೆರವಣಿಗೆಗೂ ಎಸ್.ಎ.ರಾಮದಾಸ್ ಚಾಲನೆ ನೀಡಿದರು. ನಾಲ್ವಡಿ ಕೃಷ್ಣರಾಜ…

ಆಧುನಿಕ ಮೈಸೂರು ನಿರ್ಮಾತೃ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ ಅದ್ಧೂರಿ ಆಚರಣೆ
ಮೈಸೂರು

ಆಧುನಿಕ ಮೈಸೂರು ನಿರ್ಮಾತೃ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ ಅದ್ಧೂರಿ ಆಚರಣೆ

June 5, 2019

ಮೈಸೂರು: ಆಧುನಿಕ ಮೈಸೂರು ನಿರ್ಮಾತೃ ರಾಜರ್ಷಿ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಜಯಂತಿ ಮಂಗಳವಾರ ಮೈಸೂರಿನಲ್ಲಿ ಜಿಲ್ಲಾಡಳಿತದ ಆಶ್ರಯದಲ್ಲಿ ಅದ್ಧೂರಿ ಯಾಗಿ ನೆರವೇರಿತು. ಜೊತೆಗೆ ವಿವಿಧ ಸಂಘ- ಸಂಸ್ಥೆಗಳು ನಾಲ್ವಡಿಯವರ ಜಯಂತಿ ಆಚ ರಿಸಿ ಅವರ ಕೊಡುಗೆಗಳನ್ನು ಸ್ಮರಿಸಿದವು. ಮೈಸೂರು ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಮಹಾನಗರ ಪಾಲಿಕೆ, ರಾಜರ್ಷಿ ಶ್ರೀ ನಾಲ್ವಡಿ ಕೃಷ್ಣರಾಜ ಒಡೆ ಯರ್ ಜಯಂತ್ಯೋತ್ಸವ ಸಮಿತಿ ಹಾಗೂ ಅರಸು ಬಳಗಗಳ ಒಕ್ಕೂಟದ ಸಂಯು ಕ್ತಾಶ್ರಯದಲ್ಲಿ ಮೆರವಣಿಗೆ ಹಾಗೂ ಸಭಾ ಕಾರ್ಯಕ್ರಮ…

75 ಸಾವಿರ ಹುದ್ದೆ ಭರ್ತಿಗೆ ಮುಂದಾದ ಮೋದಿ ಸರ್ಕಾರ
ಮೈಸೂರು

75 ಸಾವಿರ ಹುದ್ದೆ ಭರ್ತಿಗೆ ಮುಂದಾದ ಮೋದಿ ಸರ್ಕಾರ

June 4, 2019

ನವದೆಹಲಿ: ಕಳೆದ 45 ವರ್ಷಗಳಲ್ಲಿಯೇ ಅತಿ ನಿರುದ್ಯೋಗದ ಸಮಸ್ಯೆ ಎದುರಿಸುತ್ತಿರುವ ದೇಶದಲ್ಲಿ ಹೊಸ ಉದ್ಯೋಗಾವಕಾಶಗಳನ್ನು ತೆರೆಯಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಮುಂದಾಗಿದೆ. ಸರ್ಕಾರಿ ಇಲಾಖೆಗಳಲ್ಲಿನ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವುದು ಮೋದಿ ಸರ್ಕಾರದ ಪ್ರಮುಖ ಆದ್ಯತೆಗಳಲ್ಲಿ ಒಂದಾಗಲಿದೆ. ಕೇಂದ್ರದ ಎಲ್ಲ ಸಚಿವಾಲಯಗಳಲ್ಲಿ ಮತ್ತು ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ ಬಗ್ಗೆ ಮಾಹಿತಿ ಕಲೆಹಾಕುತ್ತಿರುವ ಸರ್ಕಾರ, ಮುಂದಿನ ಕೆಲವು ತಿಂಗಳಿನಲ್ಲಿ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಲಿದೆ. ದೇಶದಲ್ಲಿ ನಿರುದ್ಯೋಗದ ಸಮಸ್ಯೆ ಹೆಚ್ಚಿದ್ದು, ಭರವಸೆ ನೀಡಿದಂತೆ…

1 289 290 291 292 293 330
Translate »