ಕೆಆರ್‍ಎಸ್, ಕೆ.ಆರ್.ಆಸ್ಪತ್ರೆ, ಮುಡಾದಲ್ಲಿ ನಾಲ್ವಡಿಗೆ ನಮನ
ಮೈಸೂರು

ಕೆಆರ್‍ಎಸ್, ಕೆ.ಆರ್.ಆಸ್ಪತ್ರೆ, ಮುಡಾದಲ್ಲಿ ನಾಲ್ವಡಿಗೆ ನಮನ

June 5, 2019

ಮೈಸೂರು: ಮೈಸೂರಿನ ಕೆ.ಆರ್.ಆಸ್ಪತ್ರೆ, ಮುಡಾ ಕಚೇರಿ ಹಾಗೂ ಕೆಆರ್‍ಎಸ್‍ನ ಬೃಂದಾವನದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ 135ನೇ ಜಯಂತಿಯನ್ನು ಆಚರಿಸಲಾಯಿತು.

ಕೆ.ಆರ್.ಆಸ್ಪತ್ರೆಯಲ್ಲಿರುವ ನಾಲ್ವಡಿ ಕೃಷ್ಣರಾಜ ಒಡೆಯರ್ ಭಾವಚಿತ್ರಕ್ಕೆ ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಡೀನ್ ಡಾ. ಸಿ.ಪಿ. ನಂಜರಾಜ್, ಕೆ.ಆರ್.ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ. ನಂಜುಂಡಸ್ವಾಮಿ ಹಾಗೂ ಸ್ಥಾನಿಕ ವೈದ್ಯಾಧಿಕಾರಿ ಡಾ. ರಾಜೇಶ್ ಕುಮಾರ್ ಮಾಲಾರ್ಪಣೆ ಮಾಡಿದರು.

ಈ ಸಂದರ್ಭ ಡಾ.ಮಂಜುನಾಥ, ಡಾ.ಬಂಗಾರು, ಮಹದೇವು, ಮಹದೇವ ಸ್ವಾಮಿ, ಮಂಗಳಮ್ಮ, ಕುಮಾರ್, ನರ್ಸಿಂಗ್ ಸಿಬ್ಬಂದಿ ಉಪಸ್ಥಿತರಿದ್ದರು.

ಮುಡಾ: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದ ಕಚೇರಿ ಆವರಣ ದಲ್ಲಿರುವ ನಾಲ್ವಡಿ ಕೃಷ್ಣರಾಜ ಒಡೆಯರ್ ಪುತ್ಥಳಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಮುಡಾ ಅಧ್ಯಕ್ಷ ಹೆಚ್.ಎನ್.ವಿಜಯ್ ಅವರು ನಾಲ್ವಡಿ ಜನ್ಮ ದಿನ ಆಚರಿಸಿದರು.

ಮೈಸೂರು ವಿಶ್ವವಿದ್ಯಾನಿಲಯ, ಕೆ.ಆರ್.ಆಸ್ಪತ್ರೆ, ಕೃಷ್ಣರಾಜಸಾಗರ ಅಣೆಕಟ್ಟೆ ಸೇರಿದಂತೆ ಮೈಸೂರು ಹಾಗೂ ರಾಜ್ಯ ದಲ್ಲಿ ಕೈಗಾರಿಕೆ, ಆರೋಗ್ಯ, ಶಿಕ್ಷಣ, ಕೃಷಿ, ಗ್ರಾಮೀಣಾಭಿವೃದ್ಧಿ, ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ನೀಡಿದ ಕೊಡುಗೆಗಳನ್ನು ಸ್ಮರಿಸಿದ ಅವರು, ಮುಡಾ ಸ್ಥಾಪಿಸಿ ನಗರದ ಅಭಿ ವೃದ್ಧಿಗೆ ಅವರ ದೂರದೃಷ್ಟಿ ಯೋಜನೆ ಗಳನ್ನು ನಾವು ಮುಂದುವರೆಸಬೇಕೆಂದರು.

ಮುಡಾ ಆಯುಕ್ತ ಪಿ.ಎಸ್.ಕಾಂತ ರಾಜು, ಸೂಪರಿಂಟೆಂಡಿಂಗ್ ಇಂಜಿನಿ ಯರ್ ಬಿ.ಕೆ.ಸುರೇಶ್ ಬಾಬು, ನಗರ ಯೋಜಕ ಸದಸ್ಯ ಬಿ.ಎನ್.ಗಿರೀಶ ಸೇರಿ ದಂತೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಈ ಸಂದರ್ಭ ಪಾಲ್ಗೊಂಡಿದ್ದರು.

ಕೆಆರ್‍ಎಸ್: ಬೃಂದಾವನದಲ್ಲಿರುವ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪುತ್ಥಳಿಗೆ ಇಂದು ಕಾವೇರಿ ನೀರಾವರಿ ನಿಗಮದ ಸೂಪರಿಂಟೆಂಡಿಂಗ್ ಇಂಜಿನಿಯರ್ ರಮೇಂದ್ರ, ಎಗ್ಸಿಕ್ಯೂಟಿವ್ ಇಂಜಿನಿಯರ್ ರಾಮಕೃಷ್ಣ, ಅಸಿಸ್ಟಂಟ್ ಎಗ್ಸಿಕ್ಯೂಟಿವ್ ಇಂಜಿನಿಯರ್ ವಾಸುದೇವ ಹಾಗೂ ಇತರರು ಮಾಲಾರ್ಪಣೆ ಮಾಡಿ ನಾಲ್ವಡಿ ಜಯಂತಿಯನ್ನು ಆಚರಿಸಿದರು.

Translate »