ಬಿಲ್ಡರ್ಸ್ ಅಸೋಸಿಯೇಷನ್‍ನಿಂದ ಪರಿಸರ ಮಾಸಾಚರಣೆ
ಮೈಸೂರು

ಬಿಲ್ಡರ್ಸ್ ಅಸೋಸಿಯೇಷನ್‍ನಿಂದ ಪರಿಸರ ಮಾಸಾಚರಣೆ

June 4, 2019

ಮ್ಯಾರಥಾನ್, ಮಕ್ಕಳಿಗೆ ಚಿತ್ರರಚನೆ, ಗೃಹಿಣಿಯರಿಗೆ ಅಡುಗೆ ಸ್ಪರ್ಧೆ, ಚಾರಣ ಕಾರ್ಯಕ್ರಮ
ಮೈಸೂರು: ಬಿಲ್ಡರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಮೈಸೂರು ಘಟಕವು ಜೂನ್ ತಿಂಗಳನ್ನು ಪರಿಸರ ಮಾಸವನ್ನಾಗಿ ಆಚರಿಸುತ್ತಿದ್ದು, ಈ ಸಂಬಂಧ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದು ಮೈಸೂರು ಘಟಕದ ಅಧ್ಯಕ್ಷ ಜೆವಿಆರ್ ನೈಧ್ರುವ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಜೂ.5ರಂದು ಸಂಜೆ 6.30 ಗಂಟೆಗೆ ಮೈಸೂರಿನ ವಿಶ್ವೇಶ್ವರನಗರದ ಮೈಸೂರು ಬಿಲ್ಡರ್ಸ್ ಚಾರಿಟಬಲ್ ಟ್ರಸ್ಟ್ ಸಭಾಂಗಣದಲ್ಲಿ, ಬೆಂಗಳೂರಿ ನಲ್ಲಿ ಕೆರೆ ಪುನರುಜ್ಜೀವನಗೊಳಿಸಿ ತರಣ ಟೆಕ್ಕಿ ಆನಂದ್ ಮಲ್ಲಿಗಾವಡ್ ಅವರು ಪರಿಸರ ಮಾಸಾಚರಣೆಗೆ ಚಾಲನೆ ನೀಡಲಿದ್ದಾರೆ. ಜೂ.9ರಂದು ಬೆಳಿಗ್ಗೆ 6ಕ್ಕೆ ಮೈಸೂರು ವಿವಿ ಬಯಲು ರಂಗಮಂದಿರದಲ್ಲಿ ಬಿಎಐ ಬ್ಲ್ಯೂ ಸ್ಯಾಂಡ್ ಗ್ರೀನ್ ಮ್ಯಾರಥಾನ್‍ಗೆ ನಗರಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ ಚಾಲನೆ ನೀಡಲಿದ್ದಾರೆ ಎಂದರು.

ಜೂ.12ರಂದು ಮೈಸೂರಿನ ಹಲವು ಬಡಾವಣೆಗಳಲ್ಲಿ ಬೃಹತ್ ಗಿಡ ನೆಡುವ ಕಾರ್ಯ ಕ್ರಮ, 16ರಂದು ಬೆಳಿಗ್ಗೆ 10 ಗಂಟೆಗೆ ಶಾಲಾ ಮಕ್ಕಳಿಗೆ ಪರಿಸರ ಸಂರಕ್ಷಣೆ ಬಗ್ಗೆ ಚಿತ್ರ ಬಿಡಿಸುವ ಹಾಗೂ ಬಣ್ಣ ಹಚ್ಚುವ ಸ್ಪರ್ಧೆ, 19ರಂದು ಬೆಳಿಗ್ಗೆ 10 ಗಂಟೆಗೆ ಗೃಹಿಣಿಯರಿಗೆ ಅಡುಗೆ ಮನೆ ಹಾಗೂ ಮನೆಯಲ್ಲಿ ಪರಿಸರ ಸ್ನೇಹಿ ಗೃಹ ಬಳಕೆ ಸಾಮಗ್ರಿಗಳ ಉಪಯೋಗದ ಬಗ್ಗೆ ಮಾಹಿತಿ ಕಾರ್ಯಾಗಾರ ಏರ್ಪಡಿಸಿದೆ. 23ರಂದು ಬೆಳಿಗ್ಗೆ 7 ಗಂಟೆಗೆ ಹಸಿರು ಸಂಪತ್ತು ಅನ್ವೇಷಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಜೂ.30ರಂದು ಮಡಿಕೇರಿಯಲ್ಲಿ ಕೋಟೆಬೆಟ್ಟ ಎಂಬಲ್ಲಿ ಚಾರಣ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದರು. ಗೋಷ್ಠಿಯಲ್ಲಿ ಪದಾಧಿಕಾರಿಗಳಾದ ದಿನೇಶ್, ಎಂ.ರತ್ನರಾಜು, ಆರ್.ರಘುನಾಥ್, ಸಿ.ಡಿ.ಕೃಷ್ಣ ಇದ್ದರು.

Translate »