ತಂದೆ ಮಗನ ಜಗಳದಲ್ಲಿ ಚೂರಿ ಇರಿತಕ್ಕೆ ಬಲಿಯಾದ ತಂದೆ
ಮೈಸೂರು

ತಂದೆ ಮಗನ ಜಗಳದಲ್ಲಿ ಚೂರಿ ಇರಿತಕ್ಕೆ ಬಲಿಯಾದ ತಂದೆ

June 2, 2019

ಕಿಕ್ಕೇರಿ: ಮಗನ ಜೊತೆ ನಡೆದ ಜಗಳದಲ್ಲಿ ಚೂರಿ ಇರಿತದಿಂದ ತಂದೆ ಸಾವನ್ನಪ್ಪಿರುವ ಘಟನೆ ಇಲ್ಲಿನ ಮಾದಾ ಪುರಕೊಪ್ಪಲು ಗ್ರಾಮದಲ್ಲಿ ಶುಕ್ರವಾರ ಮಧ್ಯಾಹ್ನ ನಡೆದಿದ್ದು, ಪೊಲೀಸರು ಮಗನ ವಿರುದ್ಧ ಉದ್ದೇಶವಲ್ಲದ ಕೊಲೆ (ಐಪಿಸಿ 304) ಪ್ರಕರಣ ದಾಖಲಿಸಿದ್ದಾರೆ.

ಗ್ರಾಮದ ನಿವಾಸಿ ನಂಜೇಗೌಡ(59) ತನ್ನ ಮಗ ಮಂಜು ಅಲಿಯಾಸ್ ಮಂಜೇ ಗೌಡ(29) ಜೊತೆ ನಡೆದ ಜಗಳದಲ್ಲಿ ಚೂರಿ ಇರಿತಕ್ಕೆ ಬಲಿಯಾದವರು.

ಘಟನೆ ವಿವರ: ಕ್ಲುಲ್ಲಕ ಕಾರಣಕ್ಕೆ ನಂಜೇಗೌಡ ಮತ್ತು ಆತನ ಮಗ ಮಂಜೇ ಗೌಡ ನಡುವೆ ಜಗಳ ಆರಂಭವಾಗಿದೆ. ಈ ವೇಳೆ ನಂಜೇಗೌಡ ಮಗನಿಗೆ ನೀನು ಏನೂ ಕೆಲಸ ಮಾಡುವುದಿಲ್ಲ ನಿನ್ನನ್ನು ಕೊಂದು ಹಾಕುತ್ತೇನೆ ಎಂದು ಮನೆ ಯಲ್ಲಿದ್ದ ಚೂರಿ ಹಿಡಿದು ಮಗನನ್ನು ಹೆದರಿಸಲು ಹೋದÀ ವೇಳೆ ಮಂಜೇ ಗೌಡ ತಂದೆ ತನಗೆ ಎಲ್ಲಿ ಚೂರಿಯಿಂದ ಚುಚ್ಚಿ ಬಿಡುತ್ತಾರೋ ಎಂದು ಹೆದರಿ ತಪ್ಪಿಸಿಕೊಳ್ಳಲು ತಂದೆಯನ್ನೇ ತಬ್ಬಿಕೊಂಡು ಪಾರಾಗಲು ಯತ್ನಿಸುತ್ತಿದ್ದ ವೇಳೆ ಆಕಸ್ಮಿಕ ವಾಗಿ ಚೂರಿ ತಂದೆ ನಂಜೇಗೌಡರ ಹೊಟ್ಟೆಯ ಭಾಗಕ್ಕೆ ಚುಚ್ಚಿಕೊಂಡಿದೆ. ಇದ ರಿಂದ ತೀವ್ರ ರಕ್ತಸ್ರಾವವಾಗುತ್ತಿದ್ದುದನ್ನು ಕಂಡು ಪತ್ನಿ ಯಶೋಧಮ್ಮ ಅವರು ಗಾಯಾಳು ನಂಜೇಗೌಡರನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಮಾರ್ಗದ ಮಧ್ಯೆ ಅವರು ಮೃತ ಪಟ್ಟಿದ್ದಾರೆ ಎಂದು ಮೃತರ ಪತ್ನಿ ಯಶೋಧÀಮ್ಮ ಕಿಕ್ಕೇರಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಘಟನೆ ನಂತರ ಮಗ ಮಂಜೇಗೌಡ ಗ್ರಾಮದಿಂದ ಪರಾರಿಯಾಗಿದ್ದಾನೆ.

ಘಟನೆ ಸಂಬಂಧ ಕಿಕ್ಕೇರಿ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 304 ರೀತ್ಯಾ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ನಾಗಮಂಗಲ ಡಿವೈಎಸ್‍ಪಿ ಬಿ.ಎಸ್.ಮೋಹನ್ ಕುಮಾರ್, ವೃತ್ತ ನಿರೀಕ್ಷಕ ಕೆ.ಎನ್.ಸುಧಾ ಕರ್ ಹಾಗೂ ಕಿಕ್ಕೇರಿ ಠಾಣೆ ಎಸ್‍ಐ ಎಂ.ಹೆಚ್. ರೇಖಾಬಾಯಿ ಪರಿಶೀಲನೆ ನಡೆಸಿದರು.

Translate »